ನಟಿ ವೈಷ್ಣವಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇವರನ್ನು ವೈಷ್ಣವಿ ಅನ್ನುವುದಕ್ಕಿಂತಲೂ ಕೂಡ ಸನ್ನಿಧಿ ಎಂದು ಕರೆದರೆ ಎಲ್ಲರೂ ಕೂಡ ಬೇಗ ಗುರುತು ಹಿಡಿಯುತ್ತಾರೆ. ಏಕೆಂದರೆ ಜಿ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಅಗ್ನಿಸಾಕ್ಷಿ ಎಂಬ ಧಾರವಾಹಿಯಲ್ಲಿ ಇವರು ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ಈ ಒಂದು ದಾರವಾಹಿಯ ಮುಖಾಂತರ ಕರ್ನಾಟಕದ ಅತ್ಯಂತ ಮನೆಮಾದರು ಅಷ್ಟೇ ಅಲ್ಲದೆ ಎಲ್ಲಾ ಕಡೆಯಲ್ಲೂ ಕೂಡ ಚಿರಪರಿಚಿತರಾಗಿ ಗುರುತಿಸಿಕೊಂಡರು. ಸುಮಾರು ನಾಲ್ಕು ವರ್ಷಗಳ ಕಾಲ ಜೀ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುವುದರ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದರು. ಇನ್ನು ವೈಷ್ಣವಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ. ಈ ಕಾರಣಕ್ಕಾಗಿಯೇ ಇವರನ್ನು ವೈಷ್ಣವಿ ಎಂಬ ಹೆಸರಿನಿಂದ ಕರೆಯೋದಕ್ಕಿಂತ ಸನ್ನಿಧಿ ಎಂಬ ಹೆಸರಿನಲ್ಲಿ ಕರೆದರೆ ಹೆಚ್ಚು ಜನ ಗುರುತಿ ಹಿಡಿಯುತ್ತಾರೆ.
ಅಗ್ನಿಸಾಕ್ಷಿ ಧಾರಾವಾಹಿ ಮುಕ್ತಾಯವಾದ ನಂತರ ಇವರು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಆಯ್ಕೆಯಾಗುತ್ತಾರೆ ಸುಮಾರು 100 ದಿನಗಳ ಕಾಲ ಈ ಮನೆಯಲ್ಲಿ ಪೂರೈಸುತ್ತಾರೆ. ಎಲ್ಲಿಯೂ ಕೂಡ ಚಿಕ್ಕದೊಂದು ಕಾಂಟ್ರವರ್ಸಿಯನ್ನು ಕೂಡ ನಟಿ ಸನ್ನಿಧಿಯವರು ಮಾಡಿಕೊಳ್ಳುವುದಿಲ್ಲ ಬಿಗ್ ಬಾಸ್ ಮನೆಯಿಂದ ಒಳ್ಳೆಯ ಅನುಭವ ಪಡೆಯುತ್ತಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ತಮ್ಮ ಕನಸಿನ ಮನೆಯನ್ನು ಕಟ್ಟಿ ಅದನ್ನು ತಮ್ಮ ತಂದೆ-ತಾಯಿಗೆ ಉಡುಗೊರೆಯಾಗಿ ನೀಡುತ್ತಾರೆ. ನಟಿ ಸನ್ನಿಧಿ ಕೇವಲ ಆಕ್ಟರ್ ಮಾತ್ರವಲ್ಲದೆ ಅದ್ಭುತ ನೃತ್ಯಗತಿಯೂ ಕೂಡ ಹೌದು ಬೆಲ್ಲಿ ಡ್ಯಾನ್ಸ್ ಮಾಡುವುದರಲ್ಲಿ ನಿಸ್ಸಿಮತೆಯನ್ನು ಪಡೆದುಕೊಂಡಿದ್ದಾರೆ.
ಇದರ ಜೊತೆಗೆ ಕ್ಲಾಸಿಕಲ್ ಡ್ಯಾನ್ಸರ್ ಕೂಡ ಹೌದು ತಮ್ಮ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಕ್ಲಾಸಿಕಲ್ ಡ್ಯಾನ್ಸ್ ಮತ್ತು ಬೆಲ್ಲಿ ಡ್ಯಾನ್ಸ್ ಹೇಳಿಕೊಡುವಂತಹ ಕೆಲಸವನ್ನು ಮಾಡುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ನಟಿ ಸನ್ನಿಧಿಯವರು ಸದ್ಯಕ್ಕೆ ಯಾವುದೇ ಕಿರುತೆರೆಯ ಧಾರವಾಹಿಯಲ್ಲಿ ನಟನೆ ಮಾಡಿದೆ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇದ್ದಾರೆ. ಉತ್ತಮ ಅವಕಾಶಕ್ಕಾಗಿ ನಟಿ ಸನ್ನಿಧಿಯವರು ಕಾಯುತ್ತಿದ್ದಾರೆ ಹಾಗಾಗಿಯೇ ಕೆಲವು ಧಾರಾವಾಹಿ ಆಫರ್ ಬಂದರೂ ಕೂಡ ಅದನ್ನು ಸ್ವೀಕಾರ ಮಾಡುತ್ತಿಲ್ಲ ತಮಗೆ ಹೊಂದಾಣಿಕೆಯಾಗುವಂತಹ ಮತ್ತು ಸೂಕ್ತವಾಗುವಂತಹ ಕಥೆಗಾಗಿ ನಟಿ ಸನ್ನಿಧಿಯವರು ಕಾದು ಕುಳಿತಿದ್ದಾರೆ.
ಇನ್ನು ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ನಟಿ ಸನ್ನಿಧಿಯವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಮಾಡಲಿಂಗ್ ಕ್ಷೇತ್ರದಲ್ಲಿಯೂ ಕೂಡ ಕೆಲಸ ಮಾಡುತ್ತಾರೆ. ವೈಷ್ಣವಿ ಅವರು ಸದ್ಯಕ್ಕೆ ಯಾವುದೇ ಶೂಟಿಂಗ್ ನಲ್ಲಿ ಪಾಲ್ಗೊಳ್ಳದೆ ಇರುವ ಕಾರಣ ತಮ್ಮ ದಿನದ ಬಹುತೇಕ ಸಮಯವನ್ನು ತಮ್ಮ instagram ಖಾತೆಯಲ್ಲಿ ಕಳೆಯುತ್ತಾರೆ. ವಿಭಿನ್ನ ರೀತಿಯಾದಂತಹ ವಿಡಿಯೋ ಮಾಡುವುದರ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ಏಕ ಪಾತ್ರಭಿನಯ ಹಾಗೂ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಫ್ಯಾನ್ ಫಾಲೋವರ್ಸ್ ಗಳಿಗೆ ಹಾಗಾಗ ಮನರಂಜನೆ ನೀಡುತ್ತಾರೆ.
ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ವಿಡಿಯೋ ನೋಡಿದರೆ ನಿಜಕ್ಕೂ ಆಶ್ಚರ್ಯ ಅನಿಸುತ್ತದೆ. ಏಕೆಂದರೆ ಚಿಟಿಕೆ ಹೊಡೆಯುವುದರಲ್ಲಿ ವಿಭಿನ್ನ ರೀತಿಯಾಗಿ ಸೀರೆಗಳನ್ನು ಉಟ್ಟು ತೋರಿಸುತ್ತಾರೆ ಹೆಣ್ಣು ಮಕ್ಕಳಿಗೆ ಸೀರೆಯ ಮೇಲೆ ಒಲವು ಹೆಚ್ಚು ಇರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಹಾಗಾಗಿ ಹಿಂದಿನ ಕಾಲಕ್ಕೆ ತಕ್ಕಂತೆ ಫ್ಯಾಷನ್ಬಲಾಗಿ ಯಾವ ರೀತಿ ಸೀರೆಯನ್ನು ಧರಿಸಬಹುದು ಎಂಬುದನ್ನು ನಟಿ ವೈಷ್ಣವಿಯವರು ತೋರಿಸಿಕೊಂಡಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಹೆಣ್ಣು ಮಕ್ಕಳು ಮತ್ತು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.