ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟಿಯರಾಗಿ ಫೇಮಸ್ ಆಗಿರುವ ಕೆಲ ನಟಿಯರು ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಸೈಡ್ ಡ್ಯಾನ್ಸರ್ ಗಳಾಗಿ ಕೆಲಸ ಮಾಡಿದ್ದು ಇಂದು ಸ್ಟಾರ್ ನಟಿಯರಾಗಿ ಫೇಮಸ್ ಆಗಿದ್ದಾರೆ. ಅಂತಹ ಸೈಡ್ ಡಾನ್ಸರ್ ಆಗಿ ಸಿನಿಮಾ ಇಂಡಸ್ಟ್ರಿಗೆ ಬಂದು ನಂತರ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದಂತಹ ಹೀರೋಯಿನ್ ಗಳ ಬಗ್ಗೆ ತಿಳಿಸುತ್ತಿದ್ದೇವೆ. ಶೃತಿ ಹರಿಹರನ್ ಸೌತ್ ಆಕ್ಟ್ರೆಸ್ಸ್ ಶ್ರುತಿ ಹರಿಹರನ್ ಅವರು ಲೂಸಿಯ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದು ಮೊದಲ ಸಿನಿಮಾದಲ್ಲಿಯೇ ಒಳ್ಳೆಯ ಫೇಮ್ ಗಳಿಸಿದರು ನಂತರ ತಾರಕ್, ಬ್ಯೂಟಿಫುಲ್ ಮನಸುಗಳು, ಜೈ ಮಾರುತಿ 800 ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಇವರು ಸಿನಿಮಾ ಇಂಡಸ್ಟ್ರಿಗೆ ಬರುವ ಮೊದಲು ಫೇಮಸ್ ಡ್ಯಾನ್ಸರ್ ಇಮ್ರಾನ್ ಸರ್ದಾರ್ಯ ಅವರ ಹತ್ತಿರ ಡಾನ್ಸ್ ಗ್ರೂಪ್ನಲ್ಲಿ ಕೆಲಸ ಮಾಡುತ್ತಿದ್ದು ಕಳ್ಳ ಮಳ್ಳ ಸುಳ್ಳ ಸಿನಿಮಾದಲ್ಲಿ ಬ್ಯಾಗ್ರೌಂಡ್ ಡ್ರಾನ್ಸರ್ ಆಗಿ ಶ್ರುತಿ ಹರಿಹರನ್ ಅವರು ಕಾಣಿಸಿಕೊಂಡಿದ್ದಾರೆ.
ಐಂದ್ರಿತಾ ರೇ ಸ್ಯಾಂಡಲ್ವುಡ್ ಬೆಡಗಿ ಐಂದ್ರಿತಾ ರೇ ಅವರು ಮನಸಾರೆ ಸಿನಿಮಾದ ಮೂಲಕ ಕರಿಯರನ್ನು ಪ್ರಾರಂಭಿಸಿದ್ದು ಮೊದಲ ಸಿನಿಮಾದಲ್ಲಿ ಒಳ್ಳೆಯ ಫೇಮ್ ಗಳಿಸಿದರು ನಂತರ ಕನ್ನಡ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ನಾಗಿ ಫೇಮಸ್ ಆದರು, ಇವರು ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ಸಿನಿಮಾ ಕರಿಯರ್ ಪರಂಭಿಸುವ ಮೊದಲು ಜಾಕ್ಪಾಟ್ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ಬ್ಯಾಗ್ರೌಂಡ್ ಡಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಡೈಸಿ ಶಾ ಸೌತ್ ಮತ್ತು ಬಾಲಿವುಡ್ ಆಕ್ಟ್ರೆಸ್ಸ್ ಡೈಸಿ ಶಾ ಅವರು ಕನ್ನಡದಲ್ಲಿ ಭದ್ರ, ಅಂಗರಕ್ಷಕ, ಆಕ್ರಮಣ ಈ ಸಿನಿಮಾಗಳಲ್ಲಿ ನಟಿಸಿದ್ದು ಇವರು ಸಿನಿಮಾ ಕರಿಯರ್ ಸ್ಟಾರ್ಟ್ ಮಾಡುವ ಮೊದಲು ಡ್ಯಾನ್ಸ್ ಕೋರಿಯೋಗ್ರಾಫರ್ ಆಗಿದ್ದರು.
ಸಲ್ಮಾನ್ ಖಾನ್ ಅವರ ನಟನೆಯ ತೇರಿ ನಾಮ್ ಸಿನಿಮಾದಲ್ಲಿ ಬ್ಯಾಗ್ರೌಂಡ್ ಡಾನ್ಸರ್ ಆಗಿ ಕಾಣಿಸಿಕೊಂಡಿದ್ದು ನಂತರ ಅನೇಕ ಸೌತ್ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿಶಾ ಮಿಲನ ರೌಡಿ ಬೇಬಿ ಎಂದೇ ಫೇಮ್ ಗಳಿಸಿರುವ ನಿಶಾ ಮಿಲನ ಅವರು ಗಟ್ಟಿಮೇಳ ಸೀರಿಯಲ್ ನ ಮೂಲಕ ಜನರ ಮನೆಗೆದ್ದಿದ್ದು ಇವರು ಕನ್ನಡ ಅಷ್ಟೇ ಅಲ್ಲದೆ ತೆಲುಗು ಸೀರಿಯಲ್ ಗಳಲ್ಲಿಯೂ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ನಿಶಾ ಅವರು ನಾಗತಿಹಳ್ಳಿ ಚಂದ್ರಶೇಖರ್ ಅವರ ಇಷ್ಟಕಾಮ್ಯ ಸಿನಿಮಾದಲ್ಲಿ ನೀ ನನಗೋಸ್ಕರ ಎಂಬ ಹಾಡಿನಲ್ಲಿ ಬ್ಯಾಗ್ರೌಂಡ್ ಡಾನ್ಸರ್ ಆಗಿ ಕಾಣಿಸಿಕೊಂಡಿದ್ದು ಈಗ ಪಂಚರ್ ಲೈಫ್ ಎಂಬ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ ಗೂ ಎಂಟ್ರಿ ಕೊಡುತ್ತಿದ್ದಾರೆ.
ಕಾಜಲ್ ಅಗರ್ವಾಲ್ ಸೌತ್ ಇಂಡಿಯನ್ ಫೇಮಸ್ ಆಕ್ಟ್ರೆಸ್ಸ್ ಕಾಜಲ್ ಅಗರ್ವಾಲ್ ಅವರು ಸ್ಟಾರ್ ನಟಿಯಾಗಿ ಮಿಂಚಿ, ದೇಶದೆಲ್ಲೆಡೆ ಫ್ಯಾನ್ ಫಾಲೋವರ್ಸ್ ಅನ್ನು ಹೊಂದಿದ್ದು ಇವರು ಸಿನಿಮಾ ಕರಿಯರ್ ಪ್ರಾರಂಭಿಸುವ ಮೊದಲು ಡ್ಯಾನ್ಸರ್ ಆಗಿದ್ದು ಇವರು ಮಿಸ್ ವರ್ಲ್ಡ್ ಐಶ್ವರ್ಯ ರೈ ಹಾಗು ಅಮಿತಾ ಬಚ್ಚನ್ ಅವರು ಅಭಿನಯಿಸಿರುವ ಒಂದು ಹಿಂದಿ ಸಿನಿಮಾದಲ್ಲಿ ಐಶ್ವರ್ಯ ರೈ ಅವರೊಂದಿಗೆ ಬ್ಯಾಗ್ರೌಂಡ್ ಡಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗೆ ಸಾಕಷ್ಟು ನಟಿಯರು ಸಿನಿಮಾಗೆ ಬರುವ ಮೊದಲೇ ಡ್ಯಾನ್ಸರ್ಸ್ ಆಗಿದ್ದರೂ ಆ ನಂತರದಲ್ಲಿ ಅವರಿಗೆ ಸಿನಿಮಾ ಆಫರ್ ಗಳು ಬಂದು ಉತ್ತಮ ನಟಿಯರಾಗಿ ಮಿಂಚುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.