ಯುಗಾದಿ ಹಬ್ಬ ಕಳೆದು ಏಪ್ರಿಲ್ ಗಳು ಬಂತೆಂದರೆ ಭಾರತದಲ್ಲಿ ಮತ್ತೊಂದು ಹಬ್ಬ ಶುರುವಾಗುತ್ತದೆ. ಅದು ಒಂದೆರಡು ದಿನಗಳ ಅಲ್ಲ ಸುಧೀರ್ಘವಾಗಿ ನಡೆಯುವ ಹಬ್ಬ. ಈ ಹಬ್ಬ ಯುವಕರ ಪಾಲಿಗಂತೂ ಹುಚ್ಚು ಎಂದೇ ಹೇಳಬಹುದು. IPL ಹಬ್ಬ ಎಂದೇ ಕರೆಯಬಹುದಾದ ಈ ಹಬ್ಬವನ್ನು ವರ್ಷಕೊಮ್ಮೆ ಬರಮಾಡಿಕೊಳ್ಳುವ ಸಡಗರ ಸಂಭ್ರಮವೇ ಸುಂದರ.
ಸದ್ಯಕ್ಕೆ ಈಗ ರಾಜ್ಯದಲ್ಲೂ ಕೂಡ ರಾಜ್ಯದ ತಂಡವಾದ ಆರ್‌ಸಿಬಿ ಅನ್ನು ಬೆಂಬಲಿಸುತ್ತಾ ಈ ಸಲವಾದರೂ ಕಪ್ ನಮ್ಮದೇ ಆಗಲಿ ಎಂದು ಕನ್ನಡಿಗರು ಬೇಡಿಕೊಳ್ಳುತ್ತಿದ್ದಾರೆ. ದೇಶದ ಎಲ್ಲಾ IPL ಟೂರ್ನಿ ತಂಡಗಳು ಕೂಡ ಗೆಲುವಿನ ಹೋರಾಟದಲ್ಲಿ ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಿವೆ. ಇನ್ನೊಂದೆಡೆ ಜೊತೆ ಮಾಜಿ ಆಟಗಾರರ ಇಂಟರ್ವ್ಯೂಗಳು ಕೂಡ ನಡೆಯುತ್ತಿದೆ.
ಡ್ಯಾನ್ ಸೇಠ್ ನಡೆಸಿಕೊಡುವ ಕಾರ್ಯಕ್ರಮ ಒಂದರಲ್ಲಿ RCB ಮಾಜಿ ಆಟಗಾರ ಕ್ರಿಸ್ ಗೇಲ್ ಅವರು ಭಾಗಿಯಾಗಿದ್ದಾರೆ. ಈ ವೇಳೆ ಅವರು ಕರ್ನಾಟಕದ ಬಗ್ಗೆ ಮತ್ತು ಕರ್ನಾಟಕದ ಜನರ ಆರಾಧ್ಯ ದೈವ ಪುನೀತ್ ರಾಜಕುಮಾರ್ ಅವರ ಬಗ್ಗೆ ಮತ್ತು ಕಲಬುರ್ಗಿ ಊರು ಹಾಗೂ ರೊಟ್ಟಿ ಚಟ್ನಿ ಬಗ್ಗೆ ಕೂಡ ಮಾತನಾಡಿದ್ದಾರೆ. ನಿರೂಪಕರು ಮಾತಿನ ನಡುವೆ ಕೇಳಿದ ಪ್ರಶ್ನೆಗೆ ಕರ್ನಾಟಕಕ್ಕೆ ಇಬ್ಬರೇ ಬಾಸ್ ಗಳು ಎಂದು ಮಾತು ಶುರು ಮಾಡಿದ ಕ್ರಿಸ್ ಗೇಲ್ ಅವರು ಒಬ್ಬರು ಯೂನಿವರ್ಸಲ್ ಬಾಸ್ ಅಪ್ಪು ಬಾಸ್ ಮತ್ತೊಬ್ಬರು ರಿಯಲ್ ಅಪ್ಪು ಬಾಸ್ ಅಷ್ಟೇ ಎಂದು ಹೇಳಿದ್ದಾರೆ.
ಈ ಮೂಲಕ ಅವರ ಪ್ರಕಾರ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ಯೂನಿವರ್ಸಿಗೆ ಅಪ್ಪು ಮಾತ್ರ ಎನ್ನುವ ಮನದಾಳದ ಮಾತನ್ನು ಹೊರ ಹಾಕಿದ್ದಾರೆ. ಮುಂದುವರೆದ ಕ್ರಿಸ್ ಗೇಲ್ ಅವರಿಗೆ ಕಲ್ಬುರ್ಗಿಯಲ್ಲಿ ಯಾವ ಮ್ಯೂಸಿಕ್ ಪ್ಲೇ ಮಾಡುತ್ತೀರಾ ಎಂದು ಕೇಳಿದಾಗ ಕಲಬುರ್ಗಿ ಕರ್ನಾಟಕದಲ್ಲಿ ನನಗೆ ಇಷ್ಟವಾದ ಒಂದು ಪ್ಲೇಸ್, ಇಲ್ಲಿಯ ರೊಟ್ಟಿ ಹಾಗೂ ಶೇಂಗಾ ಚಟ್ನಿ ನನಗೆ ಬಹಳ ಇಷ್ಟ ಎಂದು ಹೇಳಿ ನಂತರ ಪುನೀತ್ ರಾಜಕುಮಾರ್ ಅವರ ದೊಡ್ಮನೆ ಸಿನಿಮಾದ ತ್ರಾಸ್ ಆಗ್ತೈತಿ ಹಾಡನ್ನು ಹಾಡಿದ್ದಾರೆ.
ಈ ಹಿಂದಿನಿಂದಲೂ ಕೂಡ ಕ್ರಿಕೆಟ್ ಆಟಗಾರರಿಗೂ ಮತ್ತು ಸಿನಿಮಾ ತಾರೆಗಳಿಗೂ ಅಭಿನಾಭಾವ ಸಂಬಂಧವಿದೆ ಕರ್ನಾಟಕದಲ್ಲಿ ಕೂಡ ಕ್ರಿಕೆಟರ್ಸ್ ಜೊತೆಗೆ ಸೆಲೆಬ್ರಿಟಿಗಳಿಗೆ ಒಂದು ಒಡನಾಟ ಇದೆ. IPL ಟೂರ್ನಿಗಳು ಶುರುವಾದ ಸಮಯದಲ್ಲಿ ಕರ್ನಾಟಕದ RCB ತಂಡವನ್ನು ಪುನೀತ್ ರಾಜಕುಮಾರ್ ರಮ್ಯಾ ಮತ್ತು ದೀಪಿಕಾ ಪಡುಕೋಣೆ ಅವರು ಬ್ರಾಂಡ್ ಅಂಬಾಸಿಡರ್ ಗಳು ಆಗಿ ಬೆಂಬಲಿಸಿದ್ದರು.
ಕ್ರಿಕೆಟ್ ಆಟದ ದಂತ ಕಥೆ IPLನ RCB ತಂಡದ ಬಲವಾಗಿರುವ ಎಬಿಡಿ ಕೂಡ ಡಾ. ರಾಜಕುಮಾರ್ ಅವರ ಬಗ್ಗೆ ಸಂದರ್ಶನದಲ್ದಿ ಮಾತನಾಡಿದರು. ಕಳೆದ ವರ್ಷ ಐಪಿಎಲ್ ಟೂರ್ನಿ ಆದಮೇಲೆ RCB ತಂಡದ ಎಲ್ಲಾ ಆಟಗಾರರು ಒಟ್ಟಿಗೆ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಟು ಸಿನಿಮಾ ವನ್ನು ಕೂಡ ನೋಡಿದ್ದರು ಇನ್ನು IPL ಮ್ಯಾಚ್ ಗಳು ಶುರುವಾದ ಮೇಲೆ.
ಕರ್ನಾಟಕದ ಎಲ್ಲಾ ತಾರೆಯರು ನಿರ್ಮಾಪಕರು ನಿರ್ದೇಶಕರು ಕೂಡ ಆರ್‌ಸಿಬಿಗೆ ತಮ್ಮ ನೈತಿಕ ಬೆಂಬಲವನ್ನು ವ್ಯಕ್ತಪಡಿಸುತ್ತಾರೆ. ಆರ್ಸಿಬಿ ಎಂದರೆ ಕರ್ನಾಟಕ ಕರ್ನಾಟಕ ಎಂದರೆ RCB ತಂಡ ಎನ್ನುವಷ್ಟರ ಮಟ್ಟಿಗೆ RCB ಯನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ಮತ್ತು ಕನ್ನಡದ ಜನತೆ ಇಷ್ಟಪಡುತ್ತಿದ್ದಾರೆ. ಎಲ್ಲರ ಇಚ್ಛೆಯಂತೆ ಈ ಬಾರಿ ಆದರೆ ಕಪ್ ನಮ್ಮದಾಗಲಿ ಎಂದು ಹಾರೈಸೋಣ.