2023-24 ನೇ ಸಾಲಿನಲ್ಲಿ ರಾಜ್ಯದ ರೈತರಿಗೆ (Farmers) ಕೃಷಿ ಸಂಪೂರ್ಣ ನೆಲಕಚ್ಚಿದೆ. ಮುಂಗಾರಿನ ವೈಫಲ್ಯದಿಂದಾಗಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಬರಗಾಲದ ಪರಿಸ್ಥಿತಿ (drought) ಏರ್ಪಟ್ಟಿದ್ದು ಕೆಲವು ಕಡೆ ಕೃಷಿ ಮಾಡಲಾಗದ ಪರಿಸ್ಥಿತಿ ಇದ್ದರೆ ಕೆಲವು ಕಡೆ ಬಿದ್ದ ಮಳೆ ನಂಬಿ ಬಿತ್ತನೆ ಮಾಡಿದ್ದರೂ ಫಸಲು ಬರದೇ ಹಾನಿಯಾಗಿದೆ.
ಈ ರೀತಿ ಕೈ ಸುಟ್ಟುಕೊಂಡಿರುವ ರೈತನಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ನೀಡುವ ಭರವಸೆ ನೀಡಿವೆ. ಕೇಂದ್ರ ಸರ್ಕಾರದ ಕಡೆಯಿಂದ ರಾಜ್ಯದಲ್ಲಿ ಬರಗಾಲದ ಅಧ್ಯಯನ ಕೂಡ ನಡೆದಿದ್ದು 225 ತಾಲ್ಲೂಕುಗಳು ಬರಪೀಡಿತ ತಾಲೂಕುಗಳು ಎಂದು ಘೋಷಣೆಯಾಗಿವೆ. ಈ ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಬಾರದಂತೆ ಕುಡಿಯುವ ನೀರಿನ ಸಮಸ್ಯೆ ಬರದಂತೆ ಕ್ರಮ ಕೈಗೊಳ್ಳುವ ಹೊಣೆಯು ರಾಜ್ಯ ಸರ್ಕಾರಕ್ಕೆ ಸೇರಿದೆ.
ಹಲವು ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡಗಳು ರಚನೆಯಾಗಿ ಇದಕ್ಕಾಗಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ರೈತರ ಕಷ್ಟವನ್ನು ಕೂಡ ನೋಡಿ ಯಾವುದೇ ಬೆಳೆ ಸಾಲ ನೀಡಿರುವಂತಹ ಹಣಕಾಸು ಸಂಸ್ಥೆಗಳಾಗಲಿ, ಬ್ಯಾಂಕ್ ಗಳಾಗಲಿ, ಲೇವಾದೇವಿ ವ್ಯವಹಾರದಾರರೇ ಆಗಲಿ ಈ ವರ್ಷ ರೈತರಿಗೆ ಹಣ ಹಿಂತಿರುಗಿಸುವಂತೆ ತೊಂದರೆ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿ:- ಹಣಕಾಸು ಉಳಿತಾಯಕ್ಕೆ ನಿಮ್ಮ ಮನೆ ವಾಸ್ತು ಕಾರಣವಾಗುತ್ತಾ ನೀವೇ ತಿಳಿದುಕೊಳ್ಳಿ.
ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಪಡೆದುಕೊಂಡಿದ್ದ ಮಧ್ಯಮಾವಧಿ ಸಾಲಗಳಿಗೆ ಕಂಡಿಷನ್ ಮೇರೆಗೆ ಬಡ್ಡಿ ಮನ್ನ ಕೂಡ ಘೋಷಿಸಿದ್ದಾರೆ. ಇದರ ಜೊತೆಗೆ SDRF ಹಾಗೂ NDRF ಮಾರ್ಗಸೂಚಿಯಂತೆ ರಾಜ್ಯದ ರೈತರ ಖಾತೆಗೆ ಬರ ಪರಿಹಾರದ ಹಣ ಕೂಡ ಜಮೆಯಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಬರ ಪರಿಹಾರದ ಹಣ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿ ಮತ್ತು ಶೀಘ್ರವೇ ಪರಿಹಾರದ ಹಣ ಬಿಡುಗಡೆ ಮಾಡಿ ನೆರವಾಗಬೇಕೆಂದು ಆಗ್ರಹಿಸಿದೆ.
ಕಾರಣಾಂತರಗಳಿಂದ ಕೇಂದ್ರದಿಂದ ಬರ ಪರಿಹಾರದ ಹಣ ತಲುಪುವುದು ವಿಳಂಬವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ರೈತರ ಕಷ್ಟವನ್ನು ಅರಿತು ಕೇಂದ್ರದಿಂದ ಹಣ ಬರುವ ಮೊದಲೇ ಮೊದಲ ಕಂತಿನ ಹಣವನ್ನು ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ DBT ಮೂಲಕ ವರ್ಗಾವಣೆ ಮಾಡಿದೆ.
ಈ ಹಣ ಜಮೆ ಮಾಡುವ ಮುನ್ನವೂ ಕೂಡ ಈ ಬೆಳೆ ಪರಿಹಾರದ ಹಣ ಪಡೆಯಲು ರೈತರ ಕಡ್ಡಾಯವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ (FRUITS) ತಮ್ಮ ಎಲ್ಲಾ ಸರ್ವೇ ನಂಬರ್ ಜೋಡಿಸಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆ ಇತ್ಯಾದಿ ದಾಖಲೆಗಳನ್ನು ನೀಡಿ ಪಡೆಯಬೇಕು ಎಂದು ಪ್ರಕಟಣೆ ಹೊರಡಿಸಿತ್ತು.
ಈ ಸುದ್ದಿ ಓದಿ:- ಈ ಐದು ಲಕ್ಷಣಗಳು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವುದನ್ನು ತಿಳಿಸುತ್ತವೆ.!
ಈ ಪ್ರಕಾರವಾಗಿ ನಡೆದುಕೊಂಡಿರುವ ರೈತರ ಖಾತೆಗಳಿಗೆ ಮೊದಲೇ ಕಂತಿನ ಬರ ಪರಿಹಾರದ ಹಣ ಬಿಡುಗಡೆ ಆಗಿದೆ ಮತ್ತು ಇಂದು ರಾಜ್ಯ ಸರ್ಕಾರ ಕಡೆಯಿಂದ ಎರಡನೇ ಕಂತಿನಲ್ಲಿ ಬೆಳೆ ಪರಿಹಾರದ ಹಣ ಜಮೆ ಆಗುತ್ತಿದೆ. ಯಾವ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಾಯಿಸಿಕೊಂಡು FID ಪಡೆದಿದ್ದಾರೆ ಆ ರೈತರ ಖಾತೆಗೆ ಮಾತ್ರ ಎರಡನೇ ಕಂತಿನ ಹಣ ಬಿಡುಗಡೆ ಆಗುತ್ತದೆ.
ನೀವು ರೈತರಾಗಿದ್ದು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದೀರಿಯೇ ಎನ್ನುವುದನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
* https://fruitspmk.karnataka.gov.in ವೆಬ್ಸೈಟ್ ಗೆ ಭೇಟಿ ನೀಡಿ
* ರೈತನ ಆಧಾರ್ ನಂಬರ್ ಕೇಳಲಾಗುತ್ತದೆ ಆಧಾರ್ ನಂಬರ್ ಹಾಕಿ ಸರ್ಚ್ ಕ್ಲಿಕ್ ಮಾಡಿದರೆ details ಬರುತ್ತದೆ
* ಒಂದು ವೇಳೆ ರೈತರ ಆಧಾರ್ ಸಂಖ್ಯೆ ಮತ್ತು ಪಹಣಿ ಸಂಖ್ಯೆ ಫ್ರೂಟ್ ತಂತ್ರಾಂಶದಲ್ಲಿ ನೋಂದಣಿಯಾಗಿಲ್ಲ ಎಂದರೆ ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಕೇಳುವ ದಾಖಲೆಗಳನ್ನು ಸಲ್ಲಿಸಿ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ.