Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಚಪ್ಪಲಿ ಎಸೆದವನಿಗೆ ಕಲಾರ್ ಮೇಲೆ ಎತ್ತಿ ಡಿ ಬಾಸ್ ಕೊಟ್ಟ ಖಡಕ್ ಎಚ್ಚರಿಕೆ ಏನು ಗೊತ್ತ.?...

ಚಪ್ಪಲಿ ಎಸೆದವನಿಗೆ ಕಲಾರ್ ಮೇಲೆ ಎತ್ತಿ ಡಿ ಬಾಸ್ ಕೊಟ್ಟ ಖಡಕ್ ಎಚ್ಚರಿಕೆ ಏನು ಗೊತ್ತ.? ಹೊಸಪೇಟೆಲಿ ನೆಡೆದ ಘಟನೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ. ಡಿ ಬಾಸ್ ಮಾತು ಕೇಳಿ ನಲುಗಿದ ಇಂಡಸ್ಟ್ರಿ

ಚಪ್ಪಲಿ ಎಸೆದವನಿಗೆ ಡಿ ಬಾಸ್ ಹುಬ್ಬಳ್ಳಿಯಲ್ಲಿ ತಮ್ಮದೇ ಸ್ಟೈಲ್ ನಲ್ಲಿ ಹೇಗೆ ಟಾಂಗ್ ಕೊಟ್ರು ಗೊತ್ತಾ.?

ಕಳೆದ ವಾರ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಪ್ರಚಾರಕ್ಕೆಂದು ಹೋಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಊರಿಗೆ ಚಪ್ಪಲಿ ಎಸೆದು ಅವಮಾನ ಮಾಡಿದ ಘಟನೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಕಳೆದೊಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ ಆಗುತ್ತಿರುವ ಮತ್ತು ನಾನಾ ರೂಪ ಪಡೆದುಕೊಂಡು ಸ್ಟಾರ್ ವಾರ್ ಮತ್ತೊಮ್ಮೆ ಶುರು ಆಗಿ ಫ್ಯಾನ್ಸ್ ಕೆಸರೆರಚಾಟ ಕೂಡ ಬಲು ಜೋರಾಗಿ ನಡೆಯುತ್ತಿದೆ. ಈ ಘಟನೆ ಬಗ್ಗೆ ದರ್ಶನ್ ಅವರು ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ್ದಾರೆ. ಜನವರಿ 26ರಂದು ರಾಜ್ಯದಾದ್ಯಂತ ತೆರೆ ಕಾಣುತ್ತಿರುವ ಕ್ರಾಂತಿ ಸಿನಿಮಾದ ಎರಡನೇ ಹಾಡು ಪುಷ್ಪವತಿಯನ್ನು ರಿಲೀಸ್ ಮಾಡಲು ಹುಬ್ಬಳ್ಳಿ ಸಿಟಿಗೆ ಇಡೀ ಕ್ರಾಂತಿ ಚಿತ್ರ ತಂಡ ಹೋಗಿತ್ತು.

ಈ ಸಮಯದಲ್ಲಿ ವೇದಿಕೆ ಮೇಲೆ ಮಾತನಾಡಲು ಶುರು ಮಾಡಿದ ದರ್ಶನ್ ಅವರು ಹಿಂದಿನ ಘಟನೆಯ ಬಗ್ಗೆ ಮ ಕೂಡ ಮಾತನಾಡಿ ಫ್ಯಾನ್ಸ್ ಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ. ದರ್ಶನ್ ಅವರ ಮೇಲಾದ ಈ ಹ.ಲ್ಲೆ.ಯ ಕಾರಣದಿಂದ ದರ್ಶನ್ ಅವರಷ್ಟೇ ಅವರ ಅಭಿಮಾನಿಗಳು ಸಹ ನೊಂದು ಕೊಂಡಿದ್ದಾರೆ. ಅದಕ್ಕಾಗಿ ಘಟನೆ ಕುರಿತು ಮಾತನಾಡಿದ ದರ್ಶನ್ ಅವರು ಒಬ್ಬರನ್ನು ಹಾಳು ಮಾಡಬೇಕು ಎಂದು ನೂರು ಜನ ಇದ್ದರೆ ಕಾಪಾಡಲು ಅಭಿಮಾನಿಗಳ ರೀತಿ ನಿಮ್ಮಂತ ಲಕ್ಷಾಂತರ ಜನರು ಇರುತ್ತಾರೆ. ಅಷ್ಟೇ ಸಾಕು ಏನೇ ಬಂದರು ನೋಡಿಕೊಳ್ಳೋಣ ಇದುವರೆಗೂ ಕೂಡ ಈ ಘಟನೆ ಬಗ್ಗೆ ಮಾತನಾಡಿ ಪ್ರೋವಾಕ್ ಮಾಡಬಾರದು ಎಂದುಕೊಂಡಿದ್ದೆ.

ಈಗ ನಿಮ್ಮೆಲ್ಲರ ಪ್ರೀತಿ ಅಭಿಮಾನ ನೋಡಿ ಮಾತನಾಡಬೇಕು ಅನಿಸುತ್ತಿದೆ. ಮೊನ್ನೆ ಆ ರೀತಿ ಚಪ್ಪಲಿ ಎಸೆದಿದ್ದರೆ ಏನಾಯ್ತು ಇಂದು ನನ್ನ ಅಭಿಮಾನಿಗಳೆಲ್ಲ ಹೂವಿನಲ್ಲಿ ಮುಳುಗಿಸಿದ್ದಾರೆ ಇದಕ್ಕಿಂತ ಇನ್ನೇನು ಬೇಕು ಅದೇ ನನಗೆ ಸಾಕು ಎಂದಿದ್ದಾರೆ. ಈ ರೀತಿ ಮಾಡುವುದರಿಂದ ನಾನು ಬೇಜಾರು ಮಾಡಿಕೊಳ್ಳುವುದಿಲ್ಲ, ನೊಂದುಕೊಳ್ಳುವುದಿಲ್ಲ, ನನ್ನನ್ನು ಯಾರು ಕುಗ್ಗಿಸಲು ಸಾಧ್ಯವಿಲ್ಲ ನಾವು ಸಹ ಉರಿಸಬೇಕು ಎಂದು ನಿಂತರೆ ಯಾವ ಲೆವೆಲ್ ಗೆ ಬೇಕಾದರೂ ಹೋಗುತ್ತೇವೆ ಆದರೆ ನಾವು ಹೀಗೆಲ್ಲ ಮಾಡಬಾರದು ನಮ್ಮ ಕೆಲಸ ಮಾತಾಡಬೇಕು ಕೆಲಸದಿಂದ ಅಂತವರಿಗೆಲ್ಲ ಉತ್ತರ ಕೊಡಬೇಕು ಎಂದು ಅಭಿಮಾನಿಗಳಿಗೆಲ್ಲಾ ಹೇಳಿದ್ದಾರೆ.

ಜೊತೆಗೆ ಕಾರ್ಯಕ್ರಮದಲ್ಲಿ ಪುಷ್ಪವತಿ ಹಾಡನ್ನು ವಿಶೇಷವಾಗಿ ರಿಲೀಸ್ ಮಾಡಿಸಿದ್ದಾರೆ ದಚ್ಚು. ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ನಡೆದ ದಿನ ಮದುವೆಯೊಂದು ನಡೆದಿತ್ತು. ಮದುವೆಯಾದ ನವ ದಂಪತಿಗಳಿಬ್ಬರೂ ಸಹ ದರ್ಶನ್ ಅವರ ಅತಿ ದೊಡ್ಡ ಅಭಿಮಾನಿಗಳಾಗಿದ್ದು ಮದುವೆ ಮನೆಯಿಂದ ಸೀದಾ ಕಾರ್ಯಕ್ರಮ ನೋಡಲು ಬಂದಿದ್ದರು. ಇದು ತಿಳಿದ ತಕ್ಷಣ ದರ್ಶನ್ ಅವರು ಅವರಿಬ್ಬರನ್ನು ವೇದಿಕೆಯ ಮೇಲೆ ಕರೆಸಿ ಶುಭ ಹಾರೈಸಿ ಅವರಿಂದಲೇ ಪುಷ್ಪವತಿ ಹಾಡನ್ನು ರಿಲೀಸ್ ಮಾಡಿಸಿದ್ದಾರೆ.

ಮಧು ಮಕ್ಕಳಿಬ್ಬರು ಸಹ ಮಾತನಾಡಿ ಈಗಾಗಲೇ ಡಿ ಬಾಸ್ ಬಾಕ್ಸಾಫೀಸ್ ಸುಲ್ತಾನ ಎಂದು ಹೆಸರಾಗಿದ್ದಾರೆ, ಕ್ರಾಂತಿ ಸಿನಿಮಾ ಕೂಡ ಅದಕ್ಕಿಂತ ಹೆಚ್ಚಿನ ಹೆಸರನ್ನು ಗಳಿಸಲಿ ಕಲೆಕ್ಷನ್ ಮಾಡಲಿ ಎಂದು ಹರಸಿದ್ದಾರೆ. ಮತ್ತು ನಾವಿಬ್ಬರು ದರ್ಶನ್ ಅವರ ಹುಚ್ಚು ಅಭಿಮಾನಿಗಳು ನಮ್ಮ ಮದುವೆಗೆ ಇಂತಹ ದೊಡ್ಡ ಗಿಫ್ಟ್ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಸಂತಸಪಟ್ಟಿದ್ದಾರೆ. ದರ್ಶನ್ ಅವರ ವೈಯಕ್ತಿಕ ವಿಚಾರಗಳು ಏನೇ ಇದ್ದರೂ ಸಹ ಅವರು ಕನ್ನಡದ ಒಬ್ಬ ಸ್ಟಾರ್ ನಟ. ಇನ್ನೆಂದು ಅವರಿಗೆ ಈ ರೀತಿ ಬಹಿರಂಗವಾಗಿ ಅವಮಾನ ಆಗದೇ ಇರಲಿ ಮತ್ತು ಅವರ ಕ್ರಾಂತಿ ಸಿನಿಮಾಗೆ ಇನ್ನಷ್ಟು ಒಳಿತಾಗಲಿ ಎಂದು ಹರಸೋಣ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.