Sunday, June 4, 2023
HomeEntertainmentಬಿಗ್ ಬಾಸ್ ಫಿನಾಲೆಗೆ ಇಬ್ಬರು ಫೈನಾಲಿಸ್ಟ್ ಹೆಸರುಗಳನ್ನು ಘೋಷಣೆ ಮಾಡಿದ ಕಿಚ್ಚ ಸುದೀಪ್. ಆ ಅದೃಷ್ಟವಂತ...

ಬಿಗ್ ಬಾಸ್ ಫಿನಾಲೆಗೆ ಇಬ್ಬರು ಫೈನಾಲಿಸ್ಟ್ ಹೆಸರುಗಳನ್ನು ಘೋಷಣೆ ಮಾಡಿದ ಕಿಚ್ಚ ಸುದೀಪ್. ಆ ಅದೃಷ್ಟವಂತ ಇಬ್ಬರು ವ್ಯಕ್ತಿ ಯಾರು ಗೊತ್ತ.?

ಬಿಗ್ ಬಾಸ್ ಫೈನಲಿಸ್ಟ್

ಬಿಗ್ ಬಾಸ್ ಪ್ರಾರಂಭವಾಗಿ ಈಗಾಗಲೇ ಎರಡು ವಾರೆ ತಿಂಗಳು ಕಳೆದೆ ಹೋಗಿದೆ ಇನ್ನೂ ಒಂದು ವಾರ ಮಾತ್ರ ಬಿಗ್ ಬಾಸ್ ಫಿನಾಲೆಗೆ ಬಾಕಿ ಉಳಿದಿದೆ. ಕಳೆದ ವಾರ ಅನುಪಮಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದರು ಈ ವಾರ ಡಬಲ್ ಎಲಿಮಿನೇಷನ್ ಹೌದು. ನೆನ್ನೆ ಅಮೂಲ್ಯ ಗೌಡ ಅವರು ಎಲಿಮಿನೇಷನ್ ಆಗಿದ್ದಾರೆ ಇವರ ಜೊತೆಗೆ ಅರುಣ್ ಸಾಗರ್ ಅವರು ಕೂಡ ಎಲಿಮಿನೇಷನ್ ಆಗುವುದರ ಮೂಲಕ ಎಲ್ಲರಲ್ಲೂ ಕೂಡ ಅಚ್ಚರಿ ಮೂಡಿಸಿದ್ದಾರೆ.

ಏಕೆಂದರೆ ಅರುಣ್ ಸಾಗರ್ ಕೊನೆಯವರೆಗೂ ಇರುತ್ತಾರೆ ಅಂತ ಸಾಕಷ್ಟು ಜನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮೊದಲ ಸೀಸನ್ ಗೆಲ್ಲಬಹುದು ಎಂಬುದು ಊಹೆಯಾಗಿತ್ತು, ಆದರೆ ಇದೀಗ ಎಲ್ಲರ ಊಹೆಗೆ ಕಂಗತ್ತರಿ ಬಿದ್ದಿದೆ. ಹೌದು ಯಾರು ನಿರೀಕ್ಷೆ ಮಾಡಿರದಂತಹ ಎಲಿಮಿನೇಷನ್ ನೆನ್ನೆ ನಡೆದಿದೆ ಅಮೂಲ್ಯ ಹಾಗೂ ಅರುಣ್ ಸಾಗರ್ ಇಬ್ಬರೂ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಇದೀಗ ಬಿಗ್ ಬಾಸ್ ಮನೆಯಲ್ಲಿ ಆರು ಜನ ಸ್ಪರ್ಧಿಗಳು ಮಾತ್ರ ಬಾಕಿ ಉಳಿದಿದ್ದಾರೆ.

ಹೌದು ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯ ಉರುಡುಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ಮಾತ್ರ ಇದೀಗ ಬಿಗ್ ಬಾಸ್ ಮನೆಯಲ್ಲಿ ಉಳಿದಿದ್ದಾರೆ. ಹೊಸ ವರ್ಷದ ದಿನ ಅಥವಾ ಡಿಸೆಂಬರ್ 31 ನೇ ತಾರೀಕು ಬಿಗ್ ಬಾಸ್ ಗ್ರಾಂಡ್ ಫಿನಾಲೆ ನಡೆಯಲಿದೆ ಬಿಗ್ ಬಾಸ್ ಮನೆಯಲ್ಲಿ ಈಗ ಆರು ಜನ ಸದಸ್ಯರಿದ್ದು. ಈ ವಾರದಲ್ಲಿ ಮಿಡ್ ನೈಟ್ ಎಲಿಮಿನೇಷನ್ ನಡೆಯುತ್ತದೆ ಅಂದರೆ ಆರು ಜನ ಸ್ಪರ್ಧಿಯಲ್ಲಿ ಒಬ್ಬ ಸ್ಪರ್ಧಿ ಮಿಡ್ ನೈಟ್ ಎಲಿಮಿನೇಷನ್ ಆಗುತ್ತಾರೆ. ಅಂದರೆ ಇವರು ಬಿಗ್ ಬಾಸ್ ವೇದಿಕೆಗೆ ಹೋಗುವುದಿಲ್ಲ ಬದಲಾಗಿ ನೇರವಾಗಿ ತಮ್ಮ ಮನೆಗೆ ಹೋಗುತ್ತಾರೆ. ಫಿನಾಲೆ ದಿನ ಕಿಚ್ಚ ಸುದೀಪ್ ಅವರ ಜೊತೆ ಮಾತನಾಡಲಿದ್ದಾರೆ ಹಾಗಾಗಿ ಈ ವಾರ ಹೈ ವೋಲ್ಟೇಜ್ ಶೋ ಇರೋದಂತು ಖಚಿತ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಇಲ್ಲಿಯವರೆಗೂ ಸ್ಪರ್ಧಿಸಿದಂತಹ 17 ಜನರ ಪೈಕಿ ಬಾಕಿ ಉಳಿದಿರುವಂತಹ ಆರು ಜನರಲ್ಲಿ ಇಬ್ಬರೂ ಫೈನಲ್ ಲಿಸ್ಟ್ ಹೆಸರುಗಳನ್ನು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ. ಅಂದರೆ ಈ ವಾರ ನಡೆಯುವಂತಹ ಮಿಡ್ ನೈಟ್ ಎಲಿಮಿನೇಷನ್ ನಿಂದ ಇಬ್ಬರು ಸ್ಪರ್ಧಿಗಳು ಬಚವಾಗುತ್ತಾರೆ. ಇವರು ನೇರವಾಗಿ ಹಂತಕ್ಕೆ ತಲುಪುತ್ತಾರೆ ಅಷ್ಟಕ್ಕೂ ಇಬ್ಬರು ಅದೃಷ್ಟವಂತ ಸ್ಪರ್ಧಿಗಳು ಯಾರು ಎಂಬುದನ್ನು ನೋಡುವುದಾದರೆ. ಬಿಗ್ ಬಾಸ್ ಸೀಸನ್ ೯ ಪ್ರಾರಂಭವಾಗುವುದಕ್ಕಿಂತ ಮುಂಚೆ ಮಿನಿ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಬಂದಂತಹ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಇವರಿಬ್ಬರನ್ನು ಕೂಡ ಟಾಪ್ ಫೈನಲ್ ಲಿಸ್ಟ್ ಐದರಲ್ಲಿ ಆಯ್ಕೆ ಮಾಡಲಾಗಿದೆ.

ಈಗಾಗಲೇ ಫೈನಲ್ ಲಿಸ್ಟ್ ಗಳಲ್ಲಿ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಹೆಸರು ಇರುವುದರಿಂದ ಇನ್ನೂ ಮೂರು ಜನ ಮಾತ್ರ ಈ ಫಿನಾಲೆ ಹಂತಕ್ಕೆ ಬರಲಿದ್ದಾರೆ. ಹಾಗಾಗಿ ಬಾಕಿ ಉಳಿದಿರುವಂತಹ ಆರ್ಯವರ್ಧನ್ ಗುರೂಜಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ದಿವ್ಯ ಉರುಡುಗ ಈ ನಾಲ್ಕು ಜನರಲ್ಲಿ ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕೆಲವು ಮಾಹಿತಿಗಳ ಪ್ರಕಾರ ಈ ಬಾರಿಯ ಬಿಗ್ ಬಾಸ್ ವಿನ್ನರ್ ರಾಕೇಶ್ ಅಡಿಗ ಆಗಬಹುದು ಅಂತ ಹೇಳುತ್ತಿದ್ದಾರೆ. ಆದರೆ ಬಿಗ್ ಬಾಸ್ ಯಾವ ಸಮಯದಲ್ಲಿ ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಯಾರಿಂದಲೂ ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ ಫಿನಾಲೆವರೆಗೂ ಕಾಯಲೇಬೇಕು. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ಅನ್ನು ಯಾರು ಗೆಲ್ಲಬೇಕು ಎಂಬುದನ್ನು ತಪ್ಪದೇ ಕಮೆಂಟ್ ಮಾಡಿ.