ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆ (Vidhanasabha Election) ಕಾಳಗಕ್ಕೆ ರಣರಂಗ ಸಜ್ಜಾಗುತ್ತಿದೆ. ಪ್ರಮುಖ ಕ್ಷೇತ್ರಗಳಲ್ಲಿ ನಾಡಿನ ಜನಪ್ರಿಯ ಮಂದಿಯನ್ನು ಅಖಾಡಕ್ಕೆ ಇಳಿಸಿ ಸ್ನಾನಗಿಟ್ಟಿಸಿಕೊಳ್ಳಲು ಈಗಿನಿಂದಲೇ ತೆರೆ ಹಿಂದಿನ ತಯಾರಿ ಜೋರಾಗಿದೆ. ಇದರ ನಡುವೆ ಕಾಂಗ್ರೆಸ್ (Congress party) ಪಾಳಯದ ನಡೆ ಕುರಿತ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ಆಗುತ್ತಿದೆ, ಅದೇನೆಂದರೆ ಈ ಬಾರಿ ಎಲೆಕ್ಷನ್ ಗೆ ನಟ ಸುದೀಪ್ (Actor Sudeep) ಅವರು ನಿಲ್ಲಲಿದ್ದಾರೆ ಸದ್ಯದಲ್ಲೇ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎನ್ನುವುದು.
ಮೊದಲಿಗೆ ರಮ್ಯಾ ಅವರಿಂದ ಸುದೀಪ ಅವರನ್ನು ಬಲೆಗೆ ಬೀಳಿಸುವುದಕ್ಕೆ ಗಾಳ ಹಾಕಿಸಲಾಗುತ್ತಿದೆ ಎನ್ನುವ ಗಾಸಿಪ್ ಹರಿದಾಡಿದ್ದರು ನಂತರ ಆದ ಡಿಕೆಶಿ (D.K.Shivakumar meet) ಭೇಟಿಯು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿ ಖುಲ್ಲಂ ಖುಲ್ಲಾ ಈ ರೀತಿ ಒಂದು ಯೋಚನೆ ಅವರಲ್ಲಿ ಇದೆ ಎನ್ನುವುದನ್ನು ಸ್ಪಷ್ಟಪಡಿಸಿತು. ಈಗ ಕೆಸಿಸಿ ಕ್ರಿಕೆಟ್ ಲೀಗ್ (KCC Cricket league) ಗೆಲ್ಲಲು ತಾಲೀಮು ಮಾಡುತ್ತಿರುವ ಕಿಚ್ಚ ಸುದೀಪ್ ಅವರನ್ನು ಯೂಟ್ಯೂಬ್ ಚಾನೆಲ್ ನಿರೂಪಕರೊಬ್ಬರು ಇದರ ಕುರಿತು ಪ್ರಶ್ನೆ ಮಾಡಿದರು.
ಆಗ ಸುದೀಪ್ ಅವರು ಒಪ್ಪಿಕೊಂಡು ಈ ವಿಚಾರದಲ್ಲಿ ನಾನು ಇದನ್ನೆಲ್ಲ ಸುಳ್ಳು ಎಂದು ಹೇಳಿ ತೇಲಿಸಲು ಆಗುವುದಿಲ್ಲ. ನೇರವಾಗಿ ಹೇಳುತ್ತಿದ್ದೇನೆ ಅವರು ನನ್ನನ್ನು ಭೇಟಿ ಆಗಲು ಬಂದಿದ್ದು ಕೂಡ ನಿಜ, ಜೊತೆಗೆ ಈ ರೀತಿಯ ಒಂದು ಆಫರ್ ಮಾಡಿರುವುದು ನಿಜ. ಸದ್ಯಕ್ಕೆ ಆ ಬಗ್ಗೆ ನಾನಿನ್ನು ಯಾವ ನಿರ್ಧಾರವನ್ನು ಫೈನಲ್ ಮಾಡಿಲ್ಲ. ನನಗೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಪಕ್ಷಗಳಲ್ಲೂ ಕೂಡ ಸ್ನೇಹಿತರಿದ್ದಾರೆ ಬಸವರಾಜ ಬೊಮ್ಮಾಯಿ ಸುಧಾಕರ್, ರಮ್ಯಾ ಎಲ್ಲರೂ ನನ್ನ ಆತ್ಮೀಯರೇ ಹೀಗಿರುವಾಗ ಯಾವ ಕಡೆ ಹೋಗಬೇಕು ಎನ್ನುವುದೇ ಗೊಂದಲ.
ಇದಕ್ಕಿಂತ ಮುಖ್ಯವಾದ ಮತ್ತೊಂದು ಪಕ್ಷ ನನ್ನ ಅಭಿಮಾನಿಗಳು ಅವರು ಸದ್ಯಕ್ಕೆ ನಾನು ರಾಜಕೀಯಕ್ಕೆ ಬರುವುದೇ ಬೇಡ ಎನ್ನುವ ಸಲಹೆಗಳನ್ನು ಕೊಡುತ್ತಿದ್ದಾರೆ ಎಲ್ಲವನ್ನು ಕುಲಂಕುಶವಾಗಿ ಯೋಚಿಸಿ ಒಳ್ಳೆ ನಿರ್ಧಾರಕ್ಕೆ ಖಂಡಿತ ಬರುತ್ತೇನೆ. ಇನ್ ಫ್ಯಾಕ್ಟ್ ಒಳ್ಳೇದು ಮಾಡುವುದಕ್ಕೆ ಪವರ್ ಬೇಕು ಎನ್ನುವ ನಿಯಮವೇ ಇಲ್ಲ ಅಲ್ಲವೇ ಎಂದು ಹೇಳಿ ಓಪನ್ ಎಂಡಿಂಗ್ ಕೊಟ್ಟಿದ್ದರು. ಈಗ ಮತ್ತೆ ಅದೇ ಪ್ರಶ್ನೆ ಸುದೀಪ್ ಅವರನ್ನು ಭೇಟಿಯಾಗಲು ಹೋಗಿದ್ದ ಡಿಕೆಶಿ ಅವರಿಗೂ ಎದುರಾಗಿದೆ.
ಮಾಧ್ಯಮದವರೊಬ್ಬರು ಡಿಕೆ ಶಿವಕುಮಾರ್ ಅವರನ್ನು ಸುದೀಪ್ ಅವರ ಭೇಟಿಯ ವಿಷಯದ ಕುರಿತು ಪ್ರಶ್ನೆ ಮಾಡಿದ್ದಾರೆ ಅದಕ್ಕೆ ಡಿಕೆ ಶಿವಕುಮಾರ್ ಅವರು ಕೊಟ್ಟ ಸಮಾಜಾಯಿಷಿ ಈ ರೀತಿ ಇತ್ತು. ಹೌದು ಭೇಟಿ ಆಗಿದ್ದು ನಿಜ ಈಗಾಗಲೇ ಸುದೀಪ್ ಅವರೇ ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ. ಹಾಗಾಗಿ ನಮ್ಮ ಕಡೆಯಿಂದ ಒಂದು ಇನ್ವಿಟೇಶನ್ ಕೊಟ್ಟಿದ್ದೇವೆ.
ರಾಜಕೀಯದಲ್ಲಿ ಅವರಿನ್ನೂ ತೊಡಗಿಸಿಕೊಂಡಿಲ್ಲ ಹಾಗಾಗಿ ನಮ್ಮ ಪಕ್ಷಕ್ಕೆ ಬರಲಿ ಎಂದು ಆದರೆ ಈ ಬಗ್ಗೆ ಯಾವುದೇ ಬಲವಂತ ಇಲ್ಲ. ಅವರು ಕೆಲವೊಂದು ಪ್ರಶ್ನೆಗಳನ್ನು ರಾಜಕೀಯದ ಕುರಿತು ನನಗೂ ಕೇಳಿದರು, ಇಷ್ಟು ವರ್ಷದ ರಾಜಕೀಯ ಅನುಭವದ ಮನದಲ್ಲಿಟ್ಟುಕೊಂಡು ನಾನು ಅವನ್ನೆಲ್ಲಾ ಉತ್ತರಿಸುವ ಪ್ರಯತ್ನ ಮಾಡಿದೆ. ಇನ್ನು ಸಹ ಅವರು ಅಂತಿಮವಾಗಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ನಾವು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಈಗ ಸುದೀಪ್ ಅವರ ಮುಂದಿನ ನಡೆ ಏನು ಎನ್ನುವ ಕುತೂಹಲ ಜನರಿಗೆ ಇದೆ. ಆದರೆ ಇತ್ತೀಚೆಗೆ ಮೋದಿ ಅವರ ಔತಣ ಕೂಟಕ್ಕೆ ಆಹ್ವಾನ ಬಂದಿದ್ದರೂ ಅನಾರೋಗ್ಯದ ನೆಪ ಹೇಳಿ ಸುದೀಪ್ ತಪ್ಪಿಸಿಕೊಂಡಿರುವುದರಿಂದ ಬಹುತೇಕ ಇವರು ಕಾಂಗ್ರೆಸ್ ಕಡೆಗೆ ವಾಲುತ್ತಾರೆ ಎಂದು ಊಹೆಯೂ ಜೋರಾಗಿದೆ ಎಲ್ಲದಕ್ಕೂ ಕಾದು ನೋಡೋಣ. ನಿಮ್ಮ ಪ್ರಕಾರ ಕಿಚ್ಚ ಸುದೀಪ್ ರಾಜಕೀಯಕ್ಕೆ ಬರುವುದು ಒಳ್ಳೆಯದ ಅಥವಾ ಬೇಡವ ತಪ್ಪದೆ ಕಮೆಂಟ್ ಮಾಡಿ.