Sunday, June 4, 2023
HomeEntertainmentಲೈವ್ ನಲ್ಲಿಯೇ ಸೀರೆ ಉಡಿಸಿಕೊಂಡ ನಟ ಡೈಸಿ ಬೋಪಣ್ಣ, ಈ ವೈರಲ್ ವಿಡಿಯೋ ನೋಡಿ ನೆಟ್ಟಿಗರು...

ಲೈವ್ ನಲ್ಲಿಯೇ ಸೀರೆ ಉಡಿಸಿಕೊಂಡ ನಟ ಡೈಸಿ ಬೋಪಣ್ಣ, ಈ ವೈರಲ್ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತ.?

 

ಪ್ರೇಮಿಗಳ ದಿನಕ್ಕೆ ಪತಿಯಿಂದ ವಿಶೇಷ ರೀತಿಯ ಉಡುಗೊರೆ ಪಡೆದುಕೊಂಡ ಡೈಸಿ ಬೋಪಣ್ಣ, ವೈರಲ್ ಆಗಿರುವ ವಿಡಿಯೋ ನೋಡಿ ಜನ ಏನೆನ್ನುತ್ತಿದ್ದಾರೆ ಗೊತ್ತಾ.? ಕನ್ನಡದ ನಟಿ ಡೈಸಿ ಬೋಪಣ್ಣ (Actress Daisy Bopanna) ಮುದ್ದು ಮಖದ ಸೌಮ್ಯ ಸ್ವಭಾವದ ನಟಿ. ಇನ್ನೋಸೆಂಟ್ ನಾಯಕಿಯ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಈ ಕೊಡಗಿನ ಚೆಲುವೆ ಕನ್ನಡದಲ್ಲಿ ಅನೇಕ ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.

ತವರಿನ ಸಿರಿ, ಭಗವಾನ್, ಐಶ್ವರ್ಯ, ಗಾಳಿಪಟ, ರಾಮ ಶಾಮ ಭಾಮ ಇನ್ನು ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಈ ನಟಿಮಣಿ ಬಾಲಿವುಡ್ ಅಲ್ಲಿ ಅಕ್ಷಯ್ ಕುಮಾರ್ ಜೊತೆ ಹಾಗೂ ಕಾಲಿವುಡ್ ಕಮಲ್ ಹಾಸನ್ ಜೊತೆಗೆ ನಟಿಸಿ ಕಮಲ್ ಮಾಡಿದ್ದಾರೆ. 2011ರಲ್ಲಿ ಉದ್ಯಮಿ ಅಮಿತ್ ಜಾಜು (Amith Jaju) ಅವರನ್ನು ವಿವಾಹವಾಗಿ (marriage) ಸಿನಿಮಾ ರಂಗದಿಂದ ದೂರ ಉಳಿದಿದ್ದ ಡೈಸಿ ಸದ್ಯಕ್ಕೆ ಮುಂಬೈ ಅಲ್ಲಿ ನೆಲೆ ಕಂಡುಕೊಂಡಿದ್ದಾರೆ.

ಮಾಡಲಿಂಗ್ ಅಲ್ಲಿ ಮುಂಚೆಯಿಂದಲೂ ಆಸಕ್ತಿ ಇದ್ದ ಈಕೆ ಈಗ ಹೆಸರಾಂತ ಮಾಡೆಲ್ ಗಳಿಗೆ ಡ್ರೆಸ್ ಡಿಸೈನ್ ಮಾಡುವುದು, ಅವರ ಫೋಟೋಗ್ರಾಫಿ ಮತ್ತು ಮೇಕಪ್ ಕೆಲಸವನ್ನೇ ಉದ್ಯಮವಾಗಿಸಿಕೊಂಡು ಸಕ್ಸಸ್ ಪಡೆದಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಇವರು ಆಗಾಗ ಕೆಲ ಬ್ರಾಂಡ್ ಗಳಿಗೆ ಅಂಬಾಸಿಡರ್ ಆಗಿ ಕೂಡ ಕಾಣಿಸಿಕೊಳ್ಳುತ್ತಾರೆ.

ಅಮಿತ್ ಜಾಜು ಅವರೊಂದಿಗೆ ಸಂತೋಷಭರಿತವಾದ ಜೀವನ ಆನಂದಿಸುತ್ತಿರುವ ಡೈಸಿ ಬೋಪಣ್ಣ ಅವರು ಪ್ರೇಮಿಗಳ ದಿನದ ವಿಶೇಷವಾಗಿ (valentine day special) ತಮ್ಮ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಅಲ್ಲಿ 60,000ಕ್ಕೂ ಹೆಚ್ಚು ಫಾಲ್ಲೋರ್ಸ್ ಹೊಂದಿರುವ ಇವರು ಈವರೆಗೆ 213 ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ, ಈವರೆಗಿನ ಎಲ್ಲ ವಿಡಿಯೋಗಿಂತಲೂ ಈಗ ಹಾಕಿರುವ ಈ ವಿಡಿಯೋ ಬಹಳ ವಿಶೇಷ ಎನಿಸಿದ್ದು ಇವರ ಈ ವಿಡಿಯೋ ಬಗ್ಗೆ ಅಭಿಮಾನಿ ವಲಯದಲ್ಲಿ ಚರ್ಚೆ ಶುರು ಆಗಿದೆ.

ಅಷ್ಟಕ್ಕೂ ಆ ವಿಡಿಯೋ ಅಲ್ಲಿ ಅಂತಹ ವಿಶೇಷತೆ ಏನಿತ್ತು ಎಂದು ನೋಡುವುದಾದರೆ ಇದು ಪ್ರೀತಿಯ ಪತಿ ಅಮಿತ್ ಅವರು ಡೈಸಿ ಅವರಿಗೆ ಸೀರೆ ಉಡಿಸಿರುವ ವಿಡಿಯೋ ಆಗಿದೆ. ಮೊದಲಿಗೆ ಫುಲ್ ಸ್ಲೀವ್ ಬ್ಲೌಸ್ ತೊಡಿಸಿ, ಕೆಂಪು ಬಣ್ಣದ ಗ್ರಾಂಡ್ ಫ್ಯಾನ್ಸಿ ಸೀರೆ ಅನ್ನು ಸುತ್ತಿ ನೆರಿಗೆ ಮಾಡಿ ಸೆರಗಿಗೂ ಪಿನ್ ಮಾಡಲು ಹೋಗಿ ಅಮಿತ್ ಪರದಾಡಿದ ವಿಡಿಯೋ ಇದಾಗಿದೆ.

ಅವರು ಸೀರೆ ಉಡಿಸಿ ಮುಗಿಸುವವರೆಗೂ ಡೈಸಿ ಅವರಿಗೆ ಏನೂ ಸಲಹೆ ಕೊಡದೆ ಗೊಂಬೆಯಂತೆ ನಿಂತಿರುತ್ತಾರೆ. ಸೀರೆ ಉಡಿಸಿದ ನಂತರ ಗ್ರಾಂಡ್ ಜ್ಯುವೆಲರಿ ತೊಡಿಸಿ ಮ್ಯಾಚಿಂಗ್ ಬಣ್ಣದ ಬ್ಯಾಂಗಲ್ಸ್ ಅನ್ನು ಕೂಡ ಹಾಕಿದ್ದಾರೆ. ಕೊನೆಗೆ ಚಿನ್ನದ ಬಣ್ಣದ ಚಪ್ಪಲಿಯನ್ನು ತೊಡಿಸಿ ಮುಖಕ್ಕೆ ಮೇಕಪ್ ಹಚ್ಚಿದ್ದಾರೆ. ಎಲ್ಲಾ ಮುಗಿದ ಮೇಲೆ ಡೈಸಿ ಬೋಪಣ್ಣ ಅವರು ನಗು ತಡೆಯಲಾಗದೆ ಜೋರಾಗಿ ನಕ್ಕಿಬಿಟ್ಟಿದ್ದಾರೆ.

ಜೊತೆಗೆ ಕ್ಯಾಮರಾ ಮುಂದೆ ಬಂದು ಮೇಕಪ್ ಅಲ್ಲಿ ಐ ಶಾಡೋ ಬಳಿ ಅವರು ಮಾಡಿರುವ ಮಿಸ್ಟೇಕ್ ಮತ್ತು ಸೆರಗು ಹಾಕುವಾಗ ಅವರು ಮಾಡಿಧ್ದ ತಪ್ಪನ್ನು ತೋರಿಸಿ, ಪತಿ ಮುಖವನ್ನು ನೋಡಿ ಮುಗ್ಧತೆಯಿಂದ ಅವರನ್ನು ಹಗ್ ಮಾಡಿಕೊಂಡಿದ್ದಾರೆ. ಇದೆ ಅವರ ವ್ಯಾಲೆಂಟೈನ್ ಗಿಫ್ಟ್ ಕೂಡ ಆಗಿದೆ.

ಅಮಿತ್ ಎಷ್ಟೇ ಬ್ಯುಸಿ ಇದ್ದರೂ ಸಮಯ ಮಾಡಿಕೊಂಡು ಸೀರೆ ಉಡಿಸುತ್ತಿರುವುದು ಡೈಸಿ ಅವರಿಗೆ ಬಹಳ ಖುಷಿ ತಂದಿದೆ. ಆದರೆ ಈ ವಿಡಿಯೋ ಬಗ್ಗೆ ಅಭಿಮಾನಿಗಳು ಇದನ್ನೆಲ್ಲ ಪೋಸ್ಟ್ ಮಾಡಬೇಡಿ ನಿಮ್ಮ ಜೋಡಿಗೆ ದೃಷ್ಟಿ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಕೆಲವರು ಇದೆಲ್ಲ ನಿಮ್ಮ ಖಾಸಗಿ ವಿಷಯಗಳು ಇಲ್ಲೆಲ್ಲ ಹಂಚಿಕೊಳ್ಳುವುದು ಬೇಡ ಎಂದು ಸಲಹೆ ಕೊಟ್ಟಿದ್ದರೆ ಮತ್ತೆ ಕೆಲವರು ಎಂತಹ ಜೋಡಿ ನಿಮ್ಮದು ಮೇಡ್ ಫಾರ್ ಈಚ್ ಅದರ್ ಹೀಗೆ ಸದಾ ಖುಷಿಯಾಗಿರಿ ಎಂದಿದ್ದಾರೆ.