
ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ (Kranthi) ನಾಳೆ ಬಿಡುಗಡೆ ಆಗುತ್ತಿದೆ. ಬಾಕ್ಸ್ ಆಫೀಸ್ (Box office) ಉಡೀಸ್ ಮಾಡಲು ಇಷ್ಟು ದಿನ ಅವರ ಅಭಿಮಾನಿಗಳೆಲ್ಲಾ ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಈ ಸಿನಿಮಾವು ಸಾಕಷ್ಟು ವಿವಾದಗಳು ಮತ್ತು ಬಂದ ಎಲ್ಲಾ ಅಡೆ ತಡೆಗಳೆಲ್ಲವನ್ನು ಮೀರಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.
ನಾಳೆಯಿಂದ ಕರ್ನಾಟಕದಲ್ಲಿ ಕ್ರಾಂತಿಯೋತ್ಸವ ಬಾರಿ ಜೋರಾಗಿ ನಡೆಯಲಿದ್ದು ದರ್ಶನ್ ಅಭಿಮಾನಿಗಳು ಇದಕ್ಕಾಗಿ ಈಗಾಗಲೇ ಸಜ್ಜಾಗಿದ್ದಾರೆ. ಒಂದು ಕಡೆ ಕ್ರಾಂತಿ ಸಿನಿಮಾಗೆ ದರ್ಶನ್ ಅಭಿಮಾನಿಗಳಿಂದ ಕ್ರಾಂತಿ ಸಿನಿಮಾ ಸೆಟ್ಟೇರಿದ ದಿನದಿಂದಲೂ ಕೂಡ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುವ ಕೆಲಸ ನಡೆಯುತ್ತಲೇ ಇದೆ. ಇನ್ನು ಬಿಡುಗಡೆ ದಿನ ಹತ್ತಿರ ಬರುತ್ತಿದ್ದ ಹಾಗೆ ಅದು ಇನ್ನು ಹೆಚ್ಚಾಗಿದ್ದು ಈಗ ಸಲೆಬ್ರೆಟಿಗಳು ಕೂಡ ದರ್ಶನ್ ಅಭಿಮಾನಿಗಳ ಜೊತೆ ಕ್ರಾಂತಿ ಸಿನಿಮಾದ ಪ್ರಚಾರಕ್ಕೆ ಇಳಿದಿದ್ದಾರೆ.
ದರ್ಶನ್ ಮತ್ತು ಕ್ರಾಂತಿ ಸಿನಿಮಾದ ಇಡೀ ತಂಡ ಈಗಾಗಲೇ ಎರಡು ತಿಂಗಳಿಂದ ಸತತವಾಗಿ ಸಂದರ್ಶನಗಳನ್ನು ಕೊಡುವ ಮೂಲಕ ಕ್ರಾಂತಿ ಸಿನಿಮಾದ ಕ್ರಾಂತಿಯ ವಿಚಾರ ವಿಷಯ ಮತ್ತಿತರ ವಿಷಯಗಳನ್ನೆಲ್ಲಾ ಹೇಳಿ ಯಾಕೆ ಈ ಸಿನಿಮಾ ನೋಡಬೇಕು ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದೆ. ಮತ್ತು ಸಿನಿಮಾದ ಟ್ರೈಲರ್ ಟೀಸರ್ ಮತ್ತು ಹಾಡುಗಳನ್ನು ಕೂಡ ಹಿಂದೆಂದಿಗಿಂತ ಈ ಬಾರಿ ತುಂಬಾ ವಿಶೇಷವಾಗಿ ಬಿಡುಗಡೆ ಮಾಡುವ ಮೂಲಕ ಅದರಿಂದಲೂ ಸಹ ಸಾಧ್ಯವಾದಷ್ಟು ಕ್ರಾಂತಿ ಸಿನಿಮಾಗೆ ಪ್ರಚಾರ ಮಾಡಲು ಪ್ರಯತ್ನ ಪಟ್ಟಿದೆ.
ಇಷ್ಟು ದಿನದ ಎಲ್ಲಾ ಶ್ರಮಕ್ಕೂ ಫಲಿತಾಂಶ ನಾಳೆಯೇ ಹೊರ ಬೀಳಲಿದ್ದು, ಸಿನಿಮಾ ಈವರೆಗಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುವ ಲಕ್ಷಣವನ್ನು ಈಗಾಗಲೇ ತೋರುತ್ತಿದೆ. ಬಲವಾದ ಮೂಲಗಳ ಪ್ರಕಾರ ಈಗಾಗಲೇ ಬಹುತೇಕ ಕಡೆ ಫಸ್ಟ್ ಶೋ ಟಿಕೆಟ್ ಎಲ್ಲಾ ಫುಲ್ ಆಗಿದ್ದು ಮುಂದಿನ ಶೋಗಳಿಗೂ ಈಗಾಗಲೇ ಬುಕ್ ಆಗಿವೆ. ಈಗ ಬೀಟ್ ಟೌನ್ ನಟರೊಬ್ಬರು (Bollywood actor) ದರ್ಶನ್ ಅವರ ಸಿನಿಮಾಗೆ ವಿಶೇಷ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ.
ಕುರುಕ್ಷೇತ್ರ (Kurukshethra) ಸಿನಿಮಾದಲ್ಲಿ ದರ್ಶನ್ ಅವರಿಗೆ ಎದುರಾಳಿಯಾಗಿ ಭೀಮ ಪಾತ್ರದಲ್ಲಿ ನಟಿಸಿದ್ದ ಡ್ಯಾನೀಶ್ ಅಕ್ತರ್ ಸೈಫಿ (Danish Akthar saifi) ಎನ್ನುವ ನಟನು ತನ್ನ ನೆಚ್ಚಿನ ತಾರೆ ಡಿ ಬಾಸ್ ಗಾಗಿ ಕ್ರಾಂತಿ ಸಿನಿಮಾದ ಪ್ರಚಾರ ಮಾಡಿದ್ದಾರೆ. ನಮಾಜ್ ಮಾಡುತ್ತಾ ವಿಡಿಯೋ ಒಂದನ್ನು ಮಾಡಿ ಕ್ರಾಂತಿ ಸಿನಿಮಾವನ್ನು ಎಲ್ಲರೂ ನೋಡಿ ಜನವರಿ 26ರಂದು ಬಿಡುಗಡೆ ಆಗುತ್ತಿದೆ. ನಾನು ಕೂಡ ದರ್ಶನ್ ಅವರ ಒಬ್ಬ ಅಪ್ಪಟ ಅಭಿಮಾನಿ.
ಅಲ್ಲಾ ದೇವರು ದರ್ಶನ್ ಅವರಿಗೆ ಒಳ್ಳೆಯದು ಮಾಡಲಿ, ಬಾಕ್ಸ್ ಆಫೀಸ್ ಅಲ್ಲಿ ಕ್ರಾಂತಿ ಸಿನಿಮಾವು ಒಳ್ಳೆ ಕಲೆಕ್ಷನ್ ಮಾಡುತ್ತದೆ ಎನ್ನುವ ನಿರೀಕ್ಷೆ ಇದೆ ಅದರ ಮೇಲೂ ದೇವರ ಆಶೀರ್ವಾದ ಇರಲಿ ದರ್ಶನ್ ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದಾರೆ ಮತ್ತು ಅವರ ಟ್ವಿಟರ್ (Twitter) ಖಾತೆಗೆ ಕ್ರಾಂತಿ ಸಿನಿಮಾದ ಪೋಸ್ಟರ್ ಡಿಪಿ ಆಗಿ ಹಾಕಿಕೊಂಡಿದ್ದಾರೆ.
ದರ್ಶನ್ ಎಂದರೆ ಹಾಗೆ ದರ್ಶನ್ ಅವರ ಬಳಿ ಯಾರಾದರೂ ಒಮ್ಮೆ ಮಾತನಾಡಿದರೆ ಸಾಕು ಅವರ ಮಗು ಹೃದಯ ಎಂತಹದ್ದು ಎಂದು ಎಲ್ಲರಿಗೂ ತಿಳಿಯುತ್ತದೆ ಮತ್ತು ಈಗಾಗಲೇ ದರ್ಶನ್ ಅವರ ಜೊತೆ ಅಭಿನಯಿಸಿರುವ ಎಷ್ಟೋ ನಟರುಗಳು ಅವರ ಗುಣಕ್ಕೆ ಕರಗಿ ಆತ್ಮೀಯರಾಗಿದ್ದಾರೆ. ಇದೇ ಕಾರಣಕ್ಕಾಗಿ ದರ್ಶನ್ ಅವರನ್ನು ಡಿ ಬಾಸ್ ಎಂದು ಕರೆಯುವುದು ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಎಂದರೆ ಅದು ಅಭಿಮಾನಿಗಳ ಪ್ರೀತಿಯ ದಚ್ಚು. ಕ್ರಾಂತಿ ಸಿನಿಮಾ ಬಿಡುಗಡೆ ಆಗಿ ಎಲ್ಲರ ನಿರೀಕ್ಷೆಗೂ ಮೀರಿ ಸಕ್ಸಸ್ ಕಾಣಲಿ ಎಂದು ಕನ್ನಡಿಗರಾಗಿ ನಾವು ಹರಸೋಣ.
From Tomorrow #KrantiRevolutionFromJan26th #KrantiAdvanceBooking #DBoss𓃰 @dasadarshan All the Best Boss Insha Allah this will be Blockbuster Amazing Audience will Definitely love #kranti ❤️❤️❤️💪 https://t.co/es9sRl07s5
— BHEEMA (Danish Akhtar) (@DanishBheema) January 25, 2023