Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಡಿ-ವೋ-ರ್ಸ್ ಪಡೆದು ಏಕಾಂಗಿಯಾಗಿ ಜೀವನ ನಡೆಸಲು ನಿಜವಾದ ಕಾರಣವೇನು ಎಂಬ ವಿಚಾರವನ್ನು ವಿವರಿಸಿದ ನಟಿ ಸೋನು ಗೌಡ. ಇಂಥ ಪರಿಸ್ಥಿತಿ ಯಾವ ನಟಿಗೂ ಬರದಿರಲಿ

Posted on January 26, 2023 By Kannada Trend News No Comments on ಡಿ-ವೋ-ರ್ಸ್ ಪಡೆದು ಏಕಾಂಗಿಯಾಗಿ ಜೀವನ ನಡೆಸಲು ನಿಜವಾದ ಕಾರಣವೇನು ಎಂಬ ವಿಚಾರವನ್ನು ವಿವರಿಸಿದ ನಟಿ ಸೋನು ಗೌಡ. ಇಂಥ ಪರಿಸ್ಥಿತಿ ಯಾವ ನಟಿಗೂ ಬರದಿರಲಿ

ಇಂತಿ ನಿಮ್ಮ ಪ್ರೀತಿಯ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಲಾಂಚ್ ಆಗಿ ಆ ಚಿತ್ರದ ಪ್ರಾರ್ಥನಾ ಪಾತ್ರವಾಗಿ ಎಲ್ಲರ ಗಮನ ಸೆಳೆದಿದ್ದ ನಟಿ ಸೋನು ಗೌಡ ಅವರು ಈಗಲೂ ಸಹ ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಬಹಳ ಬ್ಯುಸಿ ಇರುವ ನಟಿ. ಇವರ ತಂದೆ ರಾಮಕೃಷ್ಣ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಫೇಮಸ್ ಮೇಕಪ್ ಆರ್ಟಿಸ್ಟ್ ಬಣ್ಣ ಹಚ್ಚುವ ಹುಚ್ಚು ಅಪ್ಪನನ್ನು ನೋಡುತ್ತಲೇ ಈಕೆಗೂ ಹತ್ತಿತ್ತು ಹಾಗಾಗಿ ಇವರು ಸಹ ನಟನೆಯ ಕಡೆಯೇ ಗಮನಕೊಟ್ಟರು.

ಹೆಚ್ಚಾಗಿಯೇ ಅತಿ ಪಾತ್ರಗಳಲ್ಲಿ ಹಾಗೂ ಎರಡನೇ ನಾಯಕಿ ಆಗಿ ನಟಿಸಿರುವ ಇವರು ಬಣ್ಣದ ಲೋಕಕ್ಕೆ ಬಂದ ದಿನದಿಂದಲೂ ಕೂಡ ಒಂದಲ್ಲ ಒಂದು ಪ್ರಾಜೆಕ್ಟ್ಗಳಲ್ಲಿ ನಿರತರಾಗಿದ್ದಾರೆ. ಕೆರಿಯರಲ್ಲಿ ಒಂದು ಮಟ್ಟಕ್ಕೆ ಉತ್ತಮ ಹೆಸರನ್ನು ಮಾಡಿರುವ ಸೋನು ಗೌಡ ಅವರ ವೈಯಕ್ತಿಕ ಬದುಕು ಮಾತ್ರ ವಿವಾದದಿಂದ ಕೂಡಿದೆ. ಇಂತಿ ನಿನ್ನ ಪ್ರೀತಿಯ ಸಿನಿಮಾ ಆದ ತಕ್ಷಣವೇ ಸೋನು ಅವರಿಗೆ ವಿವಾಹವಾಗಿತ್ತು.

ಆಗಷ್ಟೇ ನಟಿ ಆಗಿ ಗುರುತಿಸಿಕೊಳ್ಳುತ್ತಿದ್ದ ಇವರು ಮದುವೆ ವಿಷಯ ಹೊರ ಬಿದ್ದರೆ ಚಾನ್ಸ್ ಸಿಗೋದಿಲ್ಲ ಎನ್ನುವ ಕಾರಣಕ್ಕೆ ಅದನ್ನು ಬಹಿರಂಗ ಪಡಿಸಲಿಲ್ಲ. ಹೆಚ್ಚಿನ ಜನಕ್ಕೆ ಸೋನು ಗೌಡ ಅವರಿಗೆ ಮದುವೆ ಆಗಿರುವ ವಿಷಯವೇ ಗೊತ್ತಿರಲಿಲ್ಲ ಯಾಕೆಂದರೆ ಇವರು ಮದುವೆಯನ್ನು ತುಂಬಾ ಸರಳವಾಗಿ ಮಾಡಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಸ್ನೇಹಿತರಷ್ಟೇ ಅವರ ಮದುವೆಗೆ ಹಾಜರಿದ್ದರು ಎಷ್ಟು ತರಾತುರಿಯಲ್ಲಿ ಮದುವೆಯಾದರು ಅಷ್ಟೇ ಬೇಗ ಅವರ ವೈವಾಹಿಕ ಜೀವನ ಕೂಡ ಮುಗಿದು ಹೋಯಿತು.

ನಂತರ ಅವರ ಖಾಸಗಿ ಫೋಟೋಗಳು ವೈರಲ್ ಆದ ಬಗ್ಗೆ ವಿವಾದ ಕೂಡ ಎದ್ದಿತ್ತು. ಸದ್ಯಕ್ಕೆ ಈಗ ಕಹಿ ಘಟನೆಗಳಿಂದ ನಟಿ ಸೋನು ಗೌಡ ಚೇತರಿಸಿಕೊಂಡು ಮತ್ತೆ ಕೆರಿಯರ್ ಕಡೆ ಗಮನ ಕೊಡುತ್ತಿದ್ದಾರೆ. ಆದರೆ ಇದಾಗಿ ವರ್ಷಗಳೇ ಕಳೆದರು ನಟಿಯನ್ನು ಮತ್ತೆ ಕಂಡವರೆಲ್ಲ ಮದುವೆ ಬಗ್ಗೆ ಪ್ರಶ್ನಿಸುತ್ತಾರೆ ಅಥವಾ ಮರು ಮದುವೆ ಯಾವಾಗ ಆಗುತ್ತೀರಾ ಎಂದೇ ಕೇಳುತ್ತಾರೆ. ಇದುವರೆಗೆ ಪ್ರಶ್ನೆಗಳನ್ನು ನಿರ್ಲಕ್ಷಿಸುತ್ತಿದ್ದ ಅವರು ಇದೀಗ ಅದಕ್ಕೆ ಉತ್ತರ ಕೊಡಲು ಶುರು ಮಾಡಿದ್ದಾರೆ.

ಹೀಗೆ ಸಂದರ್ಶನ ಒಂದರಲ್ಲಿ ಮಾತಿಗೆ ಸಿಕ್ಕ ಸೋನು ಗೌಡ ಅವರು ತಮ್ಮ ಮದುವೆ ವಿಚಾರವನ್ನು ಈ ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಹೌದು, ನನಗೆ ಈ ಹಿಂದೆ ಒಂದು ಮದುವೆ ಆಗಿತ್ತು, ಆದರೆ ಆ ಮದುವೆ ಹೆಚ್ಚಿನ ದಿನ ಇರಲಿಲ್ಲ. ಈಗ ನಾನು ವಿ.ಚ್ಛೇ.ದ.ನ ಪಡೆದು ಆ ಸಂಬಂಧದಿಂದ ಹೊರ ಬಂದು ಚೆನ್ನಾಗಿದ್ದೇನೆ. ಮತ್ತೊಂದು ಮದುವೆ ಬಗ್ಗೆ ಎಲ್ಲರೂ ಪ್ರಶ್ನೆ ಮಾಡುತ್ತಾರೆ.

ಆದರೆ ಅದಕ್ಕೆ ನನಗೆ ಸಮಯ ಬೇಕು. ನಾನು ಹೀಗೆಯೇ ಚೆನ್ನಾಗಿದ್ದೇನೆ. ಮಕ್ಕಳು ಚೆನ್ನಾಗಿದ್ದರೆ ನಮ್ಮ ತಂದೆ ತಾಯಿ ಕೂಡ ನಮ್ಮನ್ನು ನೋಡಿಕೊಂಡು ಸಂತೋಷವಾಗಿರುತ್ತಾರೆ. ಜೀವನದಲ್ಲಿ ಏನೇ ಆದರೂ ಸಂತೋಷವಾಗಿರಬೇಕು. ಈಗ ನಾನು ಏಕಾಂಗಿ ಆಗಿಯೇ ಲೈಫ್ ಅನ್ನು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದೇನೆ. ಜೊತೆಗೆ ಕೆರಿಯರ್ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದೇನೆ ಸದ್ಯಕ್ಕಂತೂ ಮದುವೆ ಮಾತು ಇಲ್ಲ ಎಂದಿದ್ದಾರೆ.

ಇತ್ತೀಚೆಗೆ ಸೋನು ಗೌಡ ಅವರು ಕಿರುತೆರೆ ಲೋಕದಲ್ಲೂ ಮಿಂಚಿದ್ದಾರೆ ಝೀ ಕನ್ನಡ ವಾಹಿನಿಯ ನಂಬರ್ ಒನ್ ಸೀರಿಯಲ್ ಆದ ಜೊತೆಯಲ್ಲಿ ಧಾರಾವಾಹಿಯಲ್ಲಿ ರಾಜನಂದಿನಿ ಆಗಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಪ್ರೀತಿ ಗಳಿಸಿದ್ದಾರೆ.

Entertainment Tags:Sonu gowda
WhatsApp Group Join Now
Telegram Group Join Now

Post navigation

Previous Post: ನಮಾಜ್ ಮಾಡಿ ಕ್ರಾಂತಿ ಸಿನಿಮಾ ಬಿಡುಗಡೆಗೆ ಯಾವುದೇ ತೊಂದರೆ ಬರದಿರಲಿ ಎಂದು ಬೇಡಿಕೊಂಡ ಕುರುಕ್ಷೇತ್ರ ಸಿನಿಮಾದ ಭೀಮಾ ಪಾತ್ರದಾರಿಯ ಬಾಲಿವುಡ್ ನಟ ಡ್ಯಾನೀಶ್ ಅಕ್ತರ್ ಸೈಫಿ
Next Post: ದಿನೇ ದಿನೇ ವಿರೂಪವಾಗುತ್ತಿರುವ ದರ್ಶನ್ ಮುಖ, ಒಂದು ಕಾಲದಲ್ಲಿ ಸುರದೃಪಿ ಆಗಿದಂತಹ ದರ್ಶನ್ ಮುಖ ಇದ್ದಕ್ಕಿದ್ದ ಹಾಗೇ ಹದಗೆಡಲು ಕಾರಣವೇನು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore