ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಸಾಕು ಕರ್ನಾಟಕದ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ದಚ್ಚು ಎನ್ನುವ ಈ ಹೆಸರು ಎಷ್ಟೋ ಅಭಿಮಾನಿಗಳ ಉಸಿರಾಗಿದೆ. ನಟ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಉಳಿದ ಎಲ್ಲಾ ನಟರಿಗಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ದರ್ಶನ್ ಅವರ ಮೇಲೆ ಅವರ ಅಭಿಮಾನಿಗಳಿಗೆ ಇರುವುದು ಎಷ್ಟು ಹುಚ್ಚು ಪ್ರೇಮ ಎಂದರೆ ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರು ಆಗಾಗ ವೈಯಕ್ತಿಕ ಬದುಕಿನಲ್ಲಿ ಏನಾದರೂ ಕಿರಿಕ್ ಮಾಡಿಕೊಂಡು ಸುದ್ದಿ ಆಗುತ್ತಾರೆ. ಇಂತಹ ಸಮಯದಲ್ಲಿ ಎಂತಹ ಅಭಿಮಾನಿಗಳ ಆದರೂ ಬೇಸರಪಟ್ಟುಕೊಳ್ಳುವುದು ಸಹಜ ಆದರೆ ಎಂತಹದೇ ಕಷ್ಟ ಸ್ಥಿತಿಯಲ್ಲೂ ಕೂಡ ದರ್ಶನ್ ಕೈ ಹಿಡಿದಿದ್ದಾರೆ ಅವರ ಅಭಿಮಾನಿಗಳು ಎನ್ನಬಹುದು. ಅಭಿಮಾನಿಗಳ ಪ್ರಕಾರ ಅವರು ಹೇಳುವುದು ಅವರ ವೈಯಕ್ತಿಕ ಬದುಕು ಏನೇ ಇರಲಿ ಒಬ್ಬ ಹೀರೋ ಆಗಿ ನಾವು ಅವರ ಅಭಿಮಾನಿಗಳು ಅಷ್ಟೇ ಎನ್ನುವುದು.
ದರ್ಶನ್ ಅವರಿಗೆ ಈ ಮಟ್ಟದ ಪ್ರೀತಿ ಕೊಡುವ ಅಭಿಮಾನಿಗಳು ಇರಲು ಕಾರಣ ಅವರ ನೇರನುಡಿ ಹಾಗೂ ಸಿನಿಮಾದಾಚೆಗೆ ಅವರು ಬದುಕುತ್ತಿರುವ ಬದುಕು ಎನ್ನಬಹುದು. ಅಭಿಮಾನಿಗಳನ್ನು ದರ್ಶನ್ ಅವರು ತುಂಬಾ ಪ್ರೀತಿಯಿಂದ ಕಾಣುತ್ತಾರೆ ಹಾಗೂ ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದ ದಿನ ಅವರ ದಿನಪೂರ್ತಿಯನ್ನು ಅಭಿಮಾನಿಗಳ ಜೊತೆ ಕಳೆಯುತ್ತಾರೆ ಹಾಗೂ ಅನಾಥಾಶ್ರಮ ವೃದ್ದಾಶ್ರಮ ಮುಂತಾದ ಕಡೆ ಸಹಾಯ ಮಾಡುವ ಮೂಲಕ ತಮ್ಮ ಅಭಿಮಾನಿಗಳು ಅದೇ ರೀತಿ ನನ್ನ ಹುಟ್ಟುಹಬ್ಬವನ್ನು ಆಚರಿಸಿ ಎಂದು ಕರೆ ಕೊಡುತ್ತಾರೆ. ಅವರ ಮೇಲಿನ ಅಭಿಮಾನದಿಂದ ನೋಡಲು ಹೋದವರಿಗೆ ಎಂದು ಬೇಸರ ಮಾಡವವರಲ್ಲ ದರ್ಶನ್. ಅದೇ ಸ್ನೇಹ ಎನ್ನುವ ಹೆಸರಿಗೆ ಪ್ರಾಣ ಕೊಡುವಷ್ಟು ನಿಯತ್ತಾಗಿರುವ ದರ್ಶನ್ ಅವರ ಈ ಗುಣ ಹೆಚ್ಚಿನ ಜನರು ಅವರನ್ನು ಇಷ್ಟಪಡಲು ಕಾರಣವಾಗಿದೆ.
ದರ್ಶನ್ ಅವರು ಪ್ರಾಣಿ ಪ್ರಿಯರು, ಝೂನಲ್ಲಿ ಅನೇಕ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಗುತ್ತಿದ್ದಾರೆ. ಅಲ್ಲದೆ ಮೈಸೂರಿನ ತಮ್ಮ ಸ್ವಂತ ಫಾರಂ ಹೌಸಿನಲ್ಲೂ ಕೂಡ ಹಲವಾರು ಪ್ರಾಣಿಗಳನ್ನು ಸಾಕಿ ಸಮಯ ಸಿಕ್ಕಾಗಲೆಲ್ಲಾ ಅವುಗಳ ಜೊತೆ ಸಮಯ ಕಳೆಯುತ್ತಾರೆ. ಈಗ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಹಾಗೂ ಈ ಸಿನಿಮಾವನ್ನು ಪ್ರಚಾರ ಮಾಡುವುದಿಲ್ಲ ಎಂದು ಮಾಧ್ಯಮಗಳು ಚಾಲೆಂಜ್ ಮಾಡಿದ್ದರೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಅವುಗಳಿಗೆ ಕೇರ್ ಮಾಡದೆ ನಾವೇ ನಮ್ಮ ಬಾಸ್ ಸಿನಿಮಾವನ್ನು ಪ್ರಚಾರ ಮಾಡಿಕೊಳ್ಳುತ್ತೇವೆ ಎಂದು ಆ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣದ ಚಾನೆಲ್ ಒಂದರ ನಿರೂಪಕರು ದರ್ಶನ್ ಅವರಿಗೆ ಒಂದು ಪ್ರಶ್ನೆ ಕೇಳುತ್ತಾರೆ. ಆ ಪ್ರಶ್ನೆ ಏನೆಂದರೆ ದರ್ಶನ್ ಅವರಿಗೆ ನಿರೂಪಕರು ನಿಮ್ಮ ಮಗನನ್ನು ಯಾವಾಗ ಸಿನಿಮಾಗೆ ಕರೆತರುತ್ತೀರಾ ಎಂದು ಕೇಳಿದ್ದಾರೆ ಅದಕ್ಕೆ ದರ್ಶನ್ ಕೊಟ್ಟ ಉತ್ತರ ಹೇಗಿತ್ತು ಕೇಳಿ.
ನಾನು ಕೂಡ ಸಿನಿಮಾ ರಂಗಕ್ಕೆ ಬಂದು ಅಷ್ಟು ಸುಲಭವಾಗಿ ಈ ಮಟ್ಟಕ್ಕೆ ಬೆಳೆದಿಲ್ಲ ನನ್ನ ತಂದೆ ಸಿನಿಮಾರಂಗದಲ್ಲಿ ಇದ್ದರೂ ಕೂಡ ನಾನು ಲೈಟ್ ಬಾಯ್ ಆಗಿ, ಸಹಾಯಕ ನಿರ್ದೇಶಕನಾಗಿ ಹೀಗೆ ಒಂದೊಂದು ಹಂತವನ್ನು ದಾಟಿ ತುಂಬಾ ಕಷ್ಟವನ್ನು ನೋಡಿಕೊಂಡು ಬೆಳೆದಿದ್ದೇನೆ. ನಾವು ಪಟ್ಟ ಕಷ್ಟ ನಮ್ಮ ಮಕ್ಕಳಿಗೆ ತಿಳಿಯಬಾರದು ಎಂದು ಬೆಳೆಸಿದರೆ ಅವರಿಗೆ ಮನುಷ್ಯರು ಹಾಗೂ ಹಣದ ಬೆಲೆ ಗೊತ್ತಾಗುವುದಿಲ್ಲ ಹೀಗಾಗಿ ಅವನು ಸಿನಿಮಾ ರಂಗದಲ್ಲಿ ಹೀರೋ ಆಗಬೇಕು ಎಂದು ಆಸೆ ಪಟ್ಟರೆ ಅದಕ್ಕಾಗಿ ಅವನು ಆರಂಭಿಕ ಹಂತದಿಂದ ಬರಬೇಕು. ನನ್ನಂತೆ ಎಲ್ಲ ಕಷ್ಟಗಳನ್ನು ನೋಡಿಕೊಂಡು ಬೆಳೆಯಲಿ ಎಂದು ಹೇಳಿದ್ದಾರೆ. ದರ್ಶನ್ ಅವರ ಈ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.