ಟ್ಯಾಟೋದಲ್ಲೂ ಶುರು ಆಯ್ತು ಫ್ಯಾನ್ ವಾರ್ ಅಪ್ಪು ಹಾಕುಸ್ಕೋಬೇಕು ಅಂತಿದ್ದ ಹಚ್ಚೆನಾ ದರ್ಶನ್ ಹಾಕಿಸಿಕೊಂಡಿದ್ದಾರೆ ಅಂತಿದ್ದಾರೆ ಫ್ಯಾನ್ಸ್‌.

 

 

ಅಪ್ಪು “ಅಭಿಮಾನಿಗಳೇ ನಮ್ಮನೇ ದೇವ್ರು” ಅಂತ ಟ್ಯಾಟೋ ಹಾಕಿಸಿಕೊಳ್ಳಬೇಕು ಅಂತ ಹೇಳಿದ್ರು. ಅವ್ರು ಹೇಳಿದ್ನ ಕೇಳಿ ಈಗ ದರ್ಶನ್ ಟ್ಯಾಟೋ ಹಾಕಿಸಿಕೊಂಡಿದ್ದರೆ ಅಂತಿದ್ದಾರೆ ಫ್ಯಾನ್ಸ್. ದರ್ಶನ್ ಎದೆ ಮೇಲೆ ಅಭಿಮಾನಿಗಳ ಟ್ಯಾಟೂ, ಇದೇ ರೀತಿ ಟ್ಯಾಟು ಹಾಕಿಸಿಕೊಳ್ಳಬೇಕು ಎಂದು ಈ ಹಿಂದೆ ಹೇಳಿಕೊಂಡಿದ್ದರು ಅಪ್ಪು ನೆನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ಅಭಿಮಾನಿಗಳಿಗಾಗಿ ಸರ್ಪ್ರೈಸ್ ಮಾಡಿದ್ದಾರೆ ಎದೆ ಮೇಲೆ ನನ್ನ ಸೆಲೆಬ್ರೆಟೀಸ್ ಎಂದು ಹಚ್ಚೆ (Tatoo) ಹಾಕಿಸಿಕೊಳ್ಳುವ ಮೂಲಕ ಪ್ರತಿ ಸಲ ತನ್ನನ್ನು ಕೈ ಹಿಡಿಯುತ್ತಿರುವ ಅಭಿಮಾನಿಗಳಿಗೆ ಅಭಿಮಾನದ ಟ್ರಿಬ್ಯೂಟ್ ಸಲ್ಲಿಸಿದ್ದಾರೆ.

ಮೊದಲಿಗೆ ಇದನ್ನು ಸಿನಿಮಾ ಶೂಟಿಂಗ್ ಗಾಗಿ ಹಾಕಿರುವ ತಾತ್ಕಾಲಿಕ ಟ್ಯಾಟು ಅಥವಾ ಎಡಿಟ್ ಮಾಡಿರುವ ಫೋಟೋ ಎಂದು ಭಾವಿಸಲಾಗಿತ್ತು ಸ್ವತಃ. ದರ್ಶನ್ ಅವರೇ ತಮ್ಮ ಅಧಿಕೃತ ಖಾತೆಯ ಮೂಲಕ ಇದನ್ನು ಕನ್ಫರ್ಮ್ ಮಾಡುವ ಮೂಲಕ ಇದು ಶಾಶ್ವತವಾಗಿ ಅವರ ಎದೆ ಮೇಲೆ ಇರಬೇಕು ಎಂದು ಅಭಿಮಾನಿಗಳಿಗೋಸ್ಕರ ಹಾಕಿಸಿಕೊಂಡಿರುವ ಹಚ್ಚೆ ಎಂದು ಖಚಿತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಡಿ ಬಾಸ್ ಅಭಿಮಾನಿಗಳೆಲ್ಲಾ ದಿಲ್ ಖುಷ್ ಆಗಿದ್ದಾರೆ.

ಆದರೆ ಕೆಲವರು ಇದರಲ್ಲೂ ಸಹ ಕೊಂಕು ತೆಗೆದು ಮಾತನಾಡಿದ್ದಾರೆ ಅದೇನೆಂದರೆ ಕಳೆದ ಹಲವು ತಿಂಗಳಿಂದ ದರ್ಶನ್ ಮತ್ತು ಅಪ್ಪು ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ (Fan’s war) ನಡೆಯುತ್ತಿದೆ ಅದು ತೀರ ಯಾವ ಹಂತಕ್ಕೆ ತಲುಪಿತ್ತು ಎಂದು ಎಲ್ಲರಿಗೂ ತಿಳಿದೇ ಇದೆ. ಈಗ ದರ್ಶನ್ ಅವರ ಪ್ರತಿ ಹೆಜ್ಜೆಯನ್ನು ಕೂಡ ಅಪ್ಪು (Apuu) ಜೊತೆ ಹೋಲಿಕೆ ಮಾಡುತ್ತಿರುವ ಅಪ್ಪು ಅಭಿಮಾನಿಗಳು ಇದು ಕೂಡ ಅಪ್ಪು ಅವರ ಆಸೆಯೇ ಆಗಿತ್ತು ಎಂದು ಪೋಸ್ಟ್ ಹಾಕುತ್ತಿದ್ದಾರೆ.

ಜೇಮ್ಸ್ (James producer) ಸಿನಿಮಾ ನಿರ್ದೇಶಕರಾದ ಕಿಶೋರ್ ಪತಿಕೊಂಡ (Kishor Pathikonda) ಅವರಳು ಒಂದು ಸಂದರ್ಶನದಲ್ಲಿ ಅಪ್ಪು ಜೇಮ್ಸ್ ಚಿತ್ರ ಮುಗಿದ ಮೇಲೆ ಅಭಿಮಾನಿ ದೇವರುಗಳು ಎಂದು ಎದೆ ಮೇಲೆ ಟ್ಯಾಟು ಹಾಕಿಸಿಕೊಳ್ಳಬೇಕು ಎಂದು ಕೊಂಡಿದ್ದರು ಎನ್ನುವ ವಿಚಾರವನ್ನು ಹೇಳಿಕೊಂಡಿದ್ದರು. ಈಗ ಆ ವಿಡಿಯೋವನ್ನು ಹಂಚಿಕೊಂಡಿರುವ ಪುನೀತ್ ರಾಜಕುಮಾರ್ ಅಭಿಮಾನಿಗಳು ಅಪ್ಪು ಅವರಿಗೆ ಒಂದು ದೊಡ್ಡ ಆಸೆ ಇತ್ತು‌.

“ಅಭಿಮಾನಿಗಳೇ ನಮ್ಮನೆ ದೇವರು” ಎಂದು ಅವರ ಎದೆ ಮೇಲೆ ಟ್ಯಾಟು ಹಾಕಿಸಿಕೊಳ್ಳಬೇಕು ಎಂದು ಇದನ್ನು ಯಾವನೋ ಒಬ್ಬ ಕೇಳಿಸಿಕೊಂಡು ನನ್ನ ಸೆಲೆಬ್ರಿಟಿಸ್ ಎಂದು ಹಾಕಿಸಿಕೊಂಡು ಮೆರೆಯುತ್ತಿದ್ದಾನೆ. ಮೊದಲಿನಿಂದ ಇದೆ ಆಯ್ತು ಎಲ್ಲಾ ವಿಷಯದಲ್ಲೂ ಅಪ್ಪು ಅನ್ನು ಫಾಲೋ ಮಾಡುವುದೇ ಆಯಿತು ಸ್ವಂತಿಕೆ ಅನ್ನೋದು ಇಲ್ಲವೇ ಇಲ್ಲ ಎಂದು ದರ್ಶನ್ ಬಗ್ಗೆ ಕೊಂಕವಾಡಿದ್ದಾರೆ.

ಸೋಶಿಯಲ್ ಮೀಡಿಯೋದಲ್ಲಿ ಇದು ಬಾರಿ ಚರ್ಚೆ ಕೂಡ ಆಗುತ್ತಿದೆ ಇದಕ್ಕೆ ಸೆಡ್ಡು ಹೊಡೆದಿರುವ ದಚ್ಚು ಅಭಿಮಾನಿಗಳು ಬರಿ ಬಾಯಿ ಮಾತಿಗೆ ಹಚ್ಚೆ ಹಾಕಿಸಿಕೊಳ್ಳಬೇಕು ಎಂದು ಯಾರು ಬೇಕಾದರೂ ಹೇಳುತ್ತಾರೆ, ಆದರೆ ನಿಜವಾಗಿಯೂ ಎದೆ ಮೇಲೆ ಹಚ್ಚೆ ಹಾಕಿಸಿಕೊಳ್ಳಲು ದಮ್ ಬೇಕು ಎಂದಿದ್ದಾರೆ. ಜೊತೆಗೆ ಅಣ್ಣ ಅಣ್ಣ ಎಂದುಕೊಂಡೆ ಜೇಮ್ಸ್ ಚಿತ್ರದ ನಿರ್ಮಾಪಕ ಅಣ್ಣನ ಸಾ.ವಿ.ನ ಸುದ್ದಿಯಲ್ಲಿ ಬಿಸಿನೆಸ್ ಮಾಡಿಕೊಂಡ ಎಂದು ತಾವು ಸಹ ತಿರಿಗೇಟು ನೀಡುತ್ತಿದ್ದಾರೆ.

ಆದರೆ ದರ್ಶನ್ ಅವರು ಪ್ರತಿ ಬಾರಿ ಬಿದ್ದಾಗಲೂ ಅವರ ಅಭಿಮಾನಿಗಳು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಎಷ್ಟೋ ವಿವಾದಗಳು ಆಗಿದ್ದರೂ ದರ್ಶನ್ ಅವರ ಮೇಲೆ ಮಾತ್ರ ಅಭಿಮಾನಿಗಳಿಗೆ ಇರುವ ಪ್ರತಿ ಕೊಂಚವೂ ಕಡಿಮೆ ಆಗಿಲ್ಲ. ಈಗ ಕ್ರಾಂತಿ ಸಿನಿಮಾ ಕೂಡ ಅತ್ಯಂತ ದೊಡ್ಡ ಹೋರಾಟವಾಗಿತ್ತು ಮಾಧ್ಯಮದವರನ್ನು ಎದುರು ಹಾಕಿಕೊಂಡು ಮಾಧ್ಯಮದ ಪ್ರಚಾರ ಇಲ್ಲದೆ ಅಭಿಮಾನಿಗಳೇ ಪ್ರಚಾರ ಮಾಡಿ ಗೆಲ್ಲಿಸಿದ ಕ್ರಾಂತಿ (Kranthi) ಚಿತ್ರ ನೂರು ಕೋಟಿ ಕ್ಲಬ್ ದಾಟಿದ ದಾಖಲೆ ಮಾಡಿದೆ.

ತನ್ನನ್ನು ಇಷ್ಟು ಪ್ರೀತಿಯಿಂದ ಕಾಣುತ್ತಿರುವ ಅಭಿಮಾನಿಗಳಿಗಾಗಿ ಏನಾದರೂ ಮಾಡಲೇಬೇಕು ಆ ಪ್ರೀತಿಗೆ ಎಷ್ಟು ಮಾಡಿದರೂ ಕಡಿಮೆಯೇ, ಹಾಗಾಗಿ ಇದು ಶಾಶ್ವತವಾಗಿ ನನ್ನ ಜೊತೆ ಇರಬೇಕು ಎಂದು ಹೇಳಿಕೊಂಡೆ ದರ್ಶನವರು ಈ ರೀತಿ ಟ್ಯಾಟು ಹಾಕಿಸಿಕೊಂಡಿದ್ದಾರೆ. ದರ್ಶನ್ ಟ್ಯಾಟೋ ಹಾಕಿಸಿಕೊಂಡಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.

Leave a Comment