Sunday, June 4, 2023
HomeViral Newsನಟಿ ರಂಭ ಆ-ತ್ಮ-ಹ-ತ್ಯೆ ಯತ್ನ ದುರಂತದಲ್ಲಿ ಅಂತ್ಯವಾಯಿತಾ ಕನ್ನಡ ಸ್ಟಾರ್ ನಟಿ ಬದುಕು.?

ನಟಿ ರಂಭ ಆ-ತ್ಮ-ಹ-ತ್ಯೆ ಯತ್ನ ದುರಂತದಲ್ಲಿ ಅಂತ್ಯವಾಯಿತಾ ಕನ್ನಡ ಸ್ಟಾರ್ ನಟಿ ಬದುಕು.?

 

ಕನ್ನಡದ ಸಾಹುಕಾರ (Sahukara) ಎನ್ನುವ ಸೂಪರ್ ಹಿಟ್ ಸಿನಿಮಾದ ರಂಗನಾಯಕಿ (Ranganayaki) ಪಾತ್ರವನ್ನು ಯಾರು ತಾನೆ ಮರೆಯಲು ಸಾಧ್ಯ. ಯುವರಾಣಿ, ಮಹಾರಾಣಿ ಎಂದರೆ ಹೇಗಿರುತ್ತಾರೆ ಎಂದು ಇದ್ದ ಕಲ್ಪನೆಗೆ ಅಚ್ಚು ಹಾಕಿ ಇಳಿಸಿದ ಹಾಗೆ ಇದ್ದರು ರಂಭಾ (Rambha) . ರಂಭಾ ಅವರ ಸಾಹುಕಾರ ಸಿನಿಮಾದ ಪಾತ್ರ ಮತ್ತು ಅಭಿನಯ ಆ ಸಿನಿಮಾದಲ್ಲೂ ಕೂಡ ನಾಟಕಗಳಲ್ಲಿ ಪಾರ್ಟ್ ಮಾಡುವ ಹುಡುಗಿಯ ಪಾತ್ರದಲ್ಲಿ ರಂಭ ಅವರು ಕಾಣಿಸಿಕೊಂಡಿದ್ದರು.

ಸಿನಿಮಾದ ಬಹುತೇಕ ಅರ್ಧಭಾಗ ಯುವರಾಣಿಯ ಕಾಸ್ಟ್ಯೂಮ್ ಅಲ್ಲಿಯೇ ಕಂಗೊಳಿಸುತ್ತಿದ್ದರು. ಹೆಸರಿಗೆ ತಕ್ಕ ಹಾಗೆ ರಂಭ ಅವರು ನಿಜವಾಗಿಯೂ ಅಪ್ಸರೆಯಂತಹ ಸ್ಫುರದ್ರೂಪಿ ಚೆಲುವೆ. ಆ ಚೆಲುವಿಗೆ ತಕ್ಕ ಹಾಗೆ ಅಭಿನಯದ ಚಾತುರ್ಯತೆ. ಈ ಕಾರಣಗಳಿಂದ ಆ ಸಮಯದ ಸ್ಟಾರ್ ಕಲಾವಿದರೊಂದಿಗೆ ನಾಯಕಿಯಾಗಿ ಅಭಿನಯಿಸುವ ಅದೃಷ್ಟ ಪಡೆದುಕೊಂಡಿದ್ದರು. ಕನ್ನಡದವರು ಅಲ್ಲದಿದ್ದರೂ ಕನ್ನಡದವರೇ ಎನ್ನುವ ರೀತಿ ಕನ್ನಡಿಗ ಕಲಾ ಪ್ರೇಮಿಗಳಿಗೆ ಹತ್ತಿರವಾಗಿದ್ದರು ರಂಭಾ ಅವರು.

1975ರ ಜೂನ್ 5ರಂದು ಆಂಧ್ರಪ್ರದೇಶದ (Andraparadesh) ವಿಜಯವಾಡದಲ್ಲಿ ಜನಿಸಿದ ಇವರ ಮೂಲ ಹೆಸರು ವಿಜಯಲಕ್ಷ್ಮಿ ರಂಭಾ (Vijayalakshmi Rambha) . ಚಿತ್ರರಂಗಕ್ಕೆ ಬಂದ ಕಡಿಮೆ ಸಮಯದಲ್ಲಿಯೇ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಪಂಚಭಾಷಾ ತಾರೆ ಎನಿಸಿಕೊಂಡರು. ಅದರಲ್ಲೂ ಎಲ್ಲಾ ಚಿತ್ರರಂಗದಲ್ಲೂ ಕೂಡ ಮೇರ ನಟರೊಂದಿಗೆ ನಟಿಸಿದ ಖ್ಯಾತಿ ಇವರದ್ದು.

ಕನ್ನಡದಲ್ಲಿ ಸಹ ರವಿಚಂದ್ರನ್ ಅವರೊಂದಿಗೆ ಓ ಪ್ರೇಮವೇ ಸಾಹುಕಾರ ಮತ್ತು ಪಾಂಡುರಂಗ ವಿಠಲ, ಶಿವರಾಜ್ ಕುಮಾರ್ ಅವರೊಂದಿಗೆ ಬಾವ ಬಾಮೈದ ಮತ್ತು ಗಂಡುಗಲಿ ರಾಮ, ದರ್ಶನ್ ಅವರೊಂದಿಗೆ ಅನಾಥರು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದ ಇವರು ಸಿನಿಮಾ ರಂಗದಿಂದ ದೂರವಾಗಿಯೇ 11 ವರ್ಷಗಳು ಕಳೆದವು. ಕೊನೆಯ ಬಾರಿಗೆ 11 ವರ್ಷಗಳ ಹಿಂದೆ ತಮಿಳು ಸಿನಿಮಾದಲ್ಲಿ ನಟಿಸಿ ಸಿನಿ ನಂಟನ್ನು ಕಡಿದುಕೊಂಡ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕೆನಡಾ (Canada) ಮೂಲದ ಉದ್ಯಮಿ ಒಬ್ಬರನ್ನು ವಿವಾಹವಾದ ಇವರು ಅಲ್ಲೇ ಹೋಗಿ ಸೆಟಲ್ ಆಗಿದ್ದಾರೆ. ಮುದ್ದಾದ ಮೂರು ಮಕ್ಕಳಿಗೂ ತಾಯಿಯಾಗಿದ್ದಾರೆ ಆದರೆ ಕಳೆದ ಕೆಲವು ವರ್ಷಗಳ ಹಿಂದೆ ನಟಿ ರಂಭಾ ಬದುಕಲ್ಲಿ ಬಿರುಗಾಳಿ ಎದ್ದಿದೆ, ಅವರ ಪತಿ ಅವರಿಗೆ ಮೋಸ ಮಾಡಿದ್ದಾರೆ ಎನ್ನುವ ಕುರಿತು ಪತ್ರಿಕೆಗಳಲ್ಲಿ ಹಾಗೂ ಟಿವಿ ಮಾಧ್ಯಮದಲ್ಲೂ ವರದಿ ಆಗಿತ್ತು. ರಂಭಾ ಅವರ ಜೊತೆ ವಿವಾಹವಾಗುವ ಮೊದಲೇ ಒಂದು ಮದುವೆ ಇವರಿಗೆ ಆಗಿತ್ತಂತೆ.

ಆದರೂ ಕೂಡ ಆ ವಿಚಾರ ಮುಚ್ಚಿಟ್ಟು ರಂಭಾ ಅವರಿಗೆ ಮೋಸ ಮಾಡಿ ಮದುವೆ ಆಗಿದ್ದಾರಂತೆ. ಈ ಮೋಸದ ಜೊತೆಯಲ್ಲಿ ರಂಭಾ ಅವರಿಗೆ ನಾನಾ ರೀತಿಯ ಕಿ.ರು.ಕು.ಳ ಹಾಗೂ ಹಿಂ.ಸೆಯನ್ನು ಕೂಡ ಕೊಡುತ್ತಿದ್ದರಂತೆ. ಬಳಿಕ ಇವರಿಬ್ಬರಿಗೂ ವಿ.ಚ್ಛೇ.ದ.ನ ಆಗಿದೆ ಹಾಗೂ ರಂಭಾ ಪತಿ ಅವರನ್ನು ಮೋಸ ಮಾಡಿ ವಿದೇಶದಲ್ಲಿ ಒಂಟಿಯಾಗಿ ಬಿಟ್ಟಿದ್ದಾರೆ ಹೀಗೆಲ್ಲ ಗಾಳಿ ಸುದ್ದಿಗಳು ಹರಡಿದ್ದವು.

2018 ರಲ್ಲಿ ರಂಭಾ ಅವರು ಆ.ತ್ಮ.ಹ.ತ್ಯೆ (Succide) ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯು ಕೂಡ ವರದಿ ಆಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಂತರ ಕೊಟ್ಟ ಸ್ಪಷ್ಟನೆಯಲ್ಲಿ ಆ ದಿನ ಅವರ ಮನೆಯಲ್ಲಿ ಲಕ್ಷ್ಮಿ ಪೂಜೆ ಇದ್ದ ಕಾರಣ ದಿನಪೂರ್ತಿ ಉಪವಾಸ ಇದ್ದಿದ್ದರಿಂದ ಆ ರೀತಿ ಪ್ರಜ್ಞೆ ತಪ್ಪಿದ್ದಾಗಿ ಹೇಳಿಕೆ ಕೊಟ್ಟಿದ್ದರು. ಆದರೆ ಈಗಲೂ ಅಭಿಮಾನಿಗಳು ಅವರಿಂದ ಬಲವಂತವಾಗಿ ಆ ರೀತಿ ಹೇಳಿಸಲಾಗಿದೆ ಎಂದೇ ಅನುಮಾನ ಪಡುತ್ತಿದ್ದಾರೆ.