Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಕೊನೆಗೆ ದರ್ಶನ್ ಅವರದ್ದು ಏನು ತಪ್ಪಿಲ್ಲ ಎಂದು ತಪ್ಪು ಒಪ್ಪಿಕೊಂಡ ಅಪ್ಪು ಅಭಿಮಾನಿಗಳು.

ಕೊನೆಗೆ ದರ್ಶನ್ ಅವರದ್ದು ಏನು ತಪ್ಪಿಲ್ಲ ಎಂದು ತಪ್ಪು ಒಪ್ಪಿಕೊಂಡ ಅಪ್ಪು ಅಭಿಮಾನಿಗಳು.

ಕಳೆದ ವಾರದಿಂದಲೂ ಕೂಡ ಎಲ್ಲೇ ನೋಡಿದರೂ ದರ್ಶನ್ ಅಭಿಮಾನಿಗಳು ಮತ್ತು ಅಪ್ಪು ಅಭಿಮಾನಿಗಳು ಇಬ್ಬರೂ ಕೂಡ ಫ್ಯಾನ್ ವಾರ್ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಂದರೆ ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯಕ್ಕಾಗಿ ಯುಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನ ನೀಡಿದರು. ಈ ಸಮಯದಲ್ಲಿ ಕ್ರಾಂತಿ ಸಿನಿಮಾಗೆ ಯಾವುದೇ ರೀತಿಯಾದಂತಹ ಮಾಧ್ಯಮಗಳು ಪ್ರಚಾರ ಮಾಡಿಲ್ಲ ಈ ಸಮಯದಲ್ಲಿ ನನ್ನ ಸೆಲೆಬ್ರಿಟಿಗಳೆ ನನ್ನ ಸಿನಿಮಾಗಾಗಿ ಸಾಕಷ್ಟು ಕ್ಯಾನ್ವಾಸ್ ಮಾಡಿದ್ದಾರೆ ಹಾಗೂ ಪ್ರಚಾರ ಕಾರ್ಯಕ್ರಮವನ್ನು ಕೈಗೊಂಡಿದ್ದಾರೆ ಇದನ್ನೆಲ್ಲ ನೋಡಿದಂತಹ ನನಗೆ ಬಹಳನೇ ಸಂತೋಷವಾಗಿದೆ. ಅಷ್ಟೇ ಅಲ್ಲದೆ ಸಾಮಾನ್ಯವಾಗಿ ಸಮಾಜದಲ್ಲಿ ಯಾವುದಾದರೂ ವ್ಯಕ್ತಿ ಇಹಲೋಕವನ್ನು ತ್ಯಜಿಸಿದ ನಂತರ ಹೆಚ್ಚಿನ ಪ್ರೀತಿ ಮತ್ತು ವಿಶ್ವಾಸವನ್ನು ತೋರಿಸುತ್ತಾರೆ ಈ ವಿಚಾರವನ್ನು ನಾವು ಅಪ್ಪು ಅವರು ಅಗಲಿದ ಸಮಯದಲ್ಲೇ ಕಂಡಿದ್ದೇವೆ.

ಆದರೆ ನನ್ನ ಅಭಿಮಾನಿಗಳು ನನ್ನ ಸೆಲೆಬ್ರಿಟಿಗಳ ನಾನು ಬದುಕಿದ್ದಾಗಲೇ ಇಷ್ಟು ಪ್ರೀತಿಯನ್ನು ನೀಡಿದ್ದಾರೆ ಎಂಬ ಮಾತನ್ನು ಹೇಳುತ್ತಾರೆ ಈ ಮಾತುಗಳನ್ನು ಕೆಲವು ಕಿಡಿಗೇಡಿಗಳು ಅರ್ಧಕ್ಕೆ ಕಟ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದಂತಹ ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ದರ್ಶನ್ ಅವರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಹಾಗಾಗಿ ಯಾವುದೇ ಕಾರಣಕ್ಕೂ ಕೂಡ ದರ್ಶನ್ ಅವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಅವರು ಅಪ್ಪು ಅಭಿಮಾನಿಗಳಿಗೆ ಕ್ಷಮೆ ಕೇಳಬೇಕು ಹಾಗೂ ನಾನು ಹೇಳಿದ್ದು ತಪ್ಪಾಯಿತು ಅಂತ ಎಲ್ಲರ ಮುಂದೆ ತಪ್ಪು ಒಪ್ಪಿಕೊಳ್ಳಬೇಕು ಅಂತ ಆಗ್ರಹಿಸುತ್ತಾರೆ. ಅಷ್ಟೇ ಅಲ್ಲದೆ ಒಂದು ವೇಳೆ ದರ್ಶನ್ ಕ್ಷಮೆ ಕೇಳದೇ ಇದ್ದರೆ ಕ್ರಾಂತಿ ಸಿನಿಮಾ ಬಿಡುಗಡೆಯಾಗುವುದಕ್ಕೆ ನಾವು ಯಾವುದೇ ಕಾರಣಕ್ಕೂ ಕೂಡ ನಾವು ಬಿಡುವುದಿಲ್ಲ ಅಂತ ಹೋರಾಟ ನಡೆಸುತ್ತಾರೆ.

ಆದರೆ ನಿಜ ಹೇಳಬೇಕು ಅಂದರೆ ದರ್ಶನ್ ಯಾವುದೇ ರೀತಿಯಾದಂತಹ ಕೆಟ್ಟ ಉದ್ದೇಶವನ್ನು ಇಟ್ಟುಕೊಂಡು ಈ ಮಾತನ್ನು ಹೇಳುವುದಿಲ್ಲ ಬದಲಾಗಿ ಅಪ್ಪು ಅವರ ಮೇಲೆ ಇರುವಂತಹ ಪ್ರೀತಿ ಗೌರವದಿಂದ ಅವರನ್ನು ಉದಾಹರಣೆಗೆ ತೆಗೆದುಕೊಂಡು ಈ ಮಾತನ್ನು ಹೇಳಿದ್ದಾರೆ. ದರ್ಶನ್ ಅವರ ಪೂರ್ತಿ ಸಂಪೂರ್ಣ ಸಂದರ್ಶನದ ವಿಡಿಯೋ ನೋಡಿದರೆ ಎಲ್ಲರಿಗೂ ತಿಳಿಯುತ್ತದೆ ದರ್ಶನ್ ಅವರು ಅಪ್ಪು ಅವರ ಮೇಲೆ ಎಷ್ಟು ಪ್ರೀತಿ-ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ ಅಂತ. ಆದರೆ ಕೆಲವು ಕಿಡಿಗೇಡಿಗಳು ಮಾತ್ರ ದರ್ಶನವರು ಮಾತನಾಡಿದಂತಹ ಕೆಲವೇ ಕೆಲವು ಮಾತುಗಳನ್ನು ಮಾತ್ರ ಕಟ್ ಮಾಡಿ ಅದನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿದರೆ ಎಂತವರಿಗಾದರೂ ಕೂಡ ದರ್ಶನ್ ಹೀಗೆ ಮಾತನಾಡಿದ್ದಾರೆ ಎಂಬ ಅನುಮಾನ ಬರುವುದು ಖಚಿತ ಯಾರಿಗೂ ತಿಳಿಯದ ಇನ್ನೊಂದು ವಿಚಾರವನ್ನು ಕೂಡ ದರ್ಶನ್ ಅವರು ಈ ಸಂದರ್ಶನದ ವೇಳೆ ತಿಳಿಸಿದ್ದಾರೆ.

ಮಾನ್ಯವಾಗಿ ಯಾರದ್ದೆ ಮನೆಯಲ್ಲಿ ಯಾರಾದರೂ ವ್ಯಕ್ತಿ ಇಹಲೋಕವನ್ನು ತ್ಯಜಿಸಿದಾಗ 11 ದಿನದವರೆಗೂ ಕೂಡ ಸೂತಕದ ವಾತಾವರಣ ಇರುತ್ತದೆ. ಹಾಗಾಗಿ ದರ್ಶನ್ ಅಪ್ಪು ಮೇಲೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದ ಕಾರಣ ಪುನೀತ್ ಅವರ 11ನೇ ದಿನದ ಕಾರ್ಯ ಮುಕ್ತಾಯವಾಗುವವರೆಗೂ ಕೂಡ ನಾವು ಯಾವುದೇ ಸಿನಿಮಾದ ಕೆಲಸವನ್ನು ಕೈಗೊಳ್ಳುವುದು ಬೇಡ ಕ್ರಾಂತಿ ಸಿನಿಮಾದ ಶೂಟಿಂಗನ್ನು ಅರ್ಧಕ್ಕೆ ನಿಲ್ಲಿಸಿ ಅಂತ ಹೇಳಿ ಆ ಕಾರ್ಯಕ್ರಮವನ್ನು ಸ್ಥಗಿತಗೊಳಿಸುತ್ತಾರೆ. ಒಂದು ವೇಳೆ ದರ್ಶನ್ ಮನಸ್ಸಿನಲ್ಲಿ ಅಪ್ಪು ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಇದ್ದಿದ್ದರೆ ಅಪ್ಪು ಅವರು ಇದ್ದಾರೆಷ್ಟು ಹೋದರೆ ಎಷ್ಟು ನಮಗೇನು ನಾವು ನಮ್ಮ ಸಿನಿಮಾವನ್ನು ಮುಂದೆವರಿಸೋಣ ಅಂತ ಹೇಳುತ್ತಿದ್ದರು ಇದರಲ್ಲೆ ನಾವು ಅರ್ಥ ಮಾಡಿಕೊಳ್ಳಬೇಕು ದರ್ಶನ್ ಅವರು ಅಪ್ಪು ಅವರಿಗೋಸ್ಕರ ಎಷ್ಟು ಗೌರವವನ್ನು ನೀಡಿದರು ಹಾಗೂ ಅವರು ಸಾ.ವಿ.ನಿಂದಾಗಿ ಎಷ್ಟು ನೋವನ್ನು ಅನುಭವಿಸಿದ್ದರು ಅಂತ. ವಿನೋದ್ ಪ್ರಭಾಕರ್ ಅವರು ಕೂಡ ದರ್ಶನ್ ಅವರು ಅಪ್ಪು ಬಗ್ಗೆ ಇಟ್ಟುಕೊಂಡಿದ್ದಂತಹ ಗೌರವ ಒಂದನ್ನು ವಿಡಿಯೋ ಮಾಡುವುದರ ಮೂಲಕ ವ್ಯಕ್ತಪಡಿಸಿದ್ದಾರೆ. ಅಪ್ಪು ಅವರು ಇಹಲೋಕ ತ್ಯಜಿಸಿದಾಗ ದರ್ಶನ್ ಅವರು ತುಂಬಾನೇ ದುಃಖ ಪಟ್ಟು ಮನೆಯಲ್ಲಿ ಕುಳಿತುಕೊಂಡು ಅಳುತ್ತಿದ್ದರಂತೆ ಆದರೆ ಅಭಿಮಾನಿಗಳಿಗೆ ಮಾತ್ರ ಇದು ಕಾಣುತ್ತಿಲ್ಲ.

ಅಪ್ಪು ಅಭಿಮಾನಿಗಳು ಇಷ್ಟು ದಿನದವರೆಗೂ ತಪ್ಪು ತಿಳಿದುಕೊಂಡಿದ್ದರು ಆದರೆ ಯಾವಾಗ ದರ್ಶನ್ ಅವರ ಪೂರ್ತಿ ಪ್ರಮಾಣದ ಸಂದರ್ಶನ ವಿಡಿಯೋ ನೋಡಿದರೋ ಅವಾಗ ತಿಳಿಯುತ್ತದೆ. ದರ್ಶನ್ ಅವರು ಅಪ್ಪು ಅವರ ಬಗ್ಗೆ ಯಾವುದೇ ರೀತಿಯಾಗಿ ಕೆಟ್ಟದಾಗಿ ಮಾತನಾಡಿಲ್ಲ ಬದಲಾಗಿ ಅವರಿಗೆ ಗೌರವವನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬರುತ್ತದೆ. ತದನಂತರ ಅಪ್ಪು ಅಭಿಮಾನಿಗಳು ನಾವು ಇಷ್ಟು ದಿನಗಳ ಕಾಲ ನಡೆದುಕೊಂಡಿದ್ದು ತಪ್ಪು ಅಂತ ದರ್ಶನ್ ಗೆ ಹಾಗೂ ದರ್ಶನ್ ಅಭಿಮಾನಿಗಳಿಗೆ ಕ್ಷಮೆಯನ್ನು ಹೇಳುವುದಾದರೆ ಈಗ ದರ್ಶನ್ ಮತ್ತು ಅಪ್ಪು ಅಭಿಮಾನಿಗಳ ನಡುವೆ ಇದ್ದಂತಹ ವೈ ಮನಸು ದೂರಾಗಿದೆ ಸ್ಟಾರ್ ವಾರ್ ನಿಂತು ಇದೀಗ ಸಹ ಬಾಳ್ವೆಯನ್ನು ಸಾಗಿಸುವುದಕ್ಕೆ ಮುಂದಾಗಿದ್ದರೆ‌. ನಿಜಕ್ಕೂ ಕೂಡ ನಿಲುಮೆಯನ್ನು ನಾವು ಗೌರವಿಸಲೇಬೇಕು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.