ಸ್ಯಾಂಡಲ್ ವುಡ್ ನಾ ಕ್ವೀನ್ ಹಾಗೂ ಈಗಲೂ ಕೂಡ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ ಅಂದರೆ ಅದು ರಮ್ಯ 2002ರಲ್ಲಿ ತೆರೆಕಂಡಂತಹ ಅಭಿ ಎಂಬ ಸಿನಿಮಾದ ಮೂಲಕ ಇವರು ಸ್ಯಾಂಡಲ್ವುಡ್ ಗೆ ಪಾದರಪಣೆ ಮಾಡಿದರು. ಈ ಸಿನಿಮಾದ ನಂತರ ಇವರು ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದರು ಇಲ್ಲಿಯವರೆಗೂ ಕೂಡ ಕನ್ನಡದ ಬಹುತೇಕ ಎಲ್ಲಾ ನಟರ ಜೊತೆಯೂ ಕೂಡ ತೆರೆಯನ್ನು ಹಂಚಿಕೊಂಡಿದ್ದಾರೆ. ಇನ್ನು ರಮ್ಯಾ ಮಾಡಿರುವಂತಹ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಡೂಪರ್ ಹಿಟ್ ಆಗಿವೆ ರಮ್ಯಾ ಅವರು ಮಾಡಿದಂತಹ ಸಿನಿಮಾಗಳು ಸೋತ ಇತಿಹಾಸವೇ ಇಲ್ಲ. ಸ್ಯಾಂಡಲ್ವುಡ್ ಗೆ ಇವರು ಪಾದರ್ಪಣೆ ಮಾಡಿ ಎರಡು ದಶಕಗಳೇ ಕಳೆದು ಹೋಗಿದೆ ಆದರೂ ಕೂಡ ನಟಿ ರಮ್ಯಾ ಅವರಿಗೆ ಇರುವಂತಹ ಬೇಡಿಕೆ ಇನ್ನೂ ಕೂಡ ಕಡಿಮೆಯಾಗಿಲ್ಲ.
ಆದರೆ ಕಳೆದ ನಾಲ್ಕೈದು ವರ್ಷಗಳಿಂದಲೂ ರಮ್ಯಾ ಅವರು ಯಾವುದೇ ಸಿನಿಮಾದಲ್ಲೂ ಕೂಡ ನಟನೆ ಮಾಡಿಲ್ಲ ಇದನ್ನು ನೋಡಿದಂತಹ ಅಭಿಮಾನಿಗಳಿಗೆ ಬೇಸರವಾಗಿದೆ. ಅಷ್ಟೇ ಅಲ್ಲದೆ ಇಷ್ಟು ಬೇಗ ನಟನೆಯಿಂದ ದೂರ ಉಳಿಯುವುದಕ್ಕೆ ಕಾರಣವಾದರೂ ಏನು ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. 2017ರಲ್ಲಿ ತೆರೆಕಂಡ ನಾಗರಹಾವು ಎಂಬ ಸಿನಿಮಾದಲ್ಲಿ ರಮ್ಯಾ ಅವರು ಕೊನೆಯ ಬಾರಿ ಘಟನೆ ಮಾಡಿದ್ದು. ಈ ಸಿನಿಮಾದ ನಂತರ ಅವರು ರಾಜಕೀಯ ಕ್ಷೇತ್ರದ ಕಡೆ ಒಲವನ್ನು ತೋರಿಸುತ್ತಾರೆ ಸಿನಿಮಾ ರಂಗದಿಂದ ಸಂಪೂರ್ಣ ದೂರ ಉಳಿಯುತ್ತಾರೆ. ಆದರೆ ಸದ್ಯಕ್ಕೆ ಯಾಕೋ ರಾಜಕೀಯದಿಂದಲೂ ಕೂಡ ದೂರ ಉಳಿದಿದ್ದು ಈಗ ಒಂಟಿ ಜೀವನವನ್ನು ಸಾಗಿಸುತ್ತಿದ್ದಾರೆ ಅಂತ ಹೇಳಬಹುದು. ಇನ್ನು ರಮ್ಯಾ ಅವರು ಯಾವಾಗ ಮತ್ತೆ ಸ್ಯಾಂಡಲ್ವುಡ್ ಗೆ ಕಮ್ ಬ್ಯಾಕ್ ಮಾಡುತ್ತಾರೆ ಅಂತ ಅವರ ಅಭಿಮಾನಿಗಳು ಪ್ರಶ್ನೆಯನ್ನು ಕೇಳಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿದಂತಹ ರಮ್ಯಾ ಅವರು ಖಂಡಿತವಾಗಿಯೂ ಕೂಡ ಉತ್ತಮ ಕಥೆಯೊಂದಿಗೆ ನಿಮ್ಮ ಮುಂದೆ ಬರುತ್ತೇನೆ ಅಂತ ಹೇಳಿಕೊಂಡಿದ್ದಾರೆ. ಇವೆಲ್ಲವೂ ಒಂದು ಕಡೆಯಾದರೆ ಮತ್ತೊಂದು ಕಡೆ ಆಗಾಗ ತಮ್ಮ ಫ್ಯಾನ್ಸ್ ಜೊತೆ instagram ಲೈವ್ ನಲ್ಲಿ ಬಂದು ಮಾತನಾಡುವಂತಹ ರಮ್ಯಾ ಅವರು ಅಭಿಮಾನಿಗಳು ಕೇಳುವಂತಹ ಪ್ರಶ್ನೆಗೆ ಉತ್ತರಿಸುವಂತಹ ಪ್ರಯತ್ನವನ್ನು ಮಾಡುತ್ತಾರೆ. ಈ ಬಾರಿ ಅಭಿಮಾನಿಗಳು ವಿಭಿನ್ನ ಪ್ರಶ್ನೆಯನ್ನು ಕೇಳಿದ್ದಾರೆ ಹೌದು ನಿಮ್ಮ ನೆಚ್ಚಿನ ನಟ ಯಾರು ಎಂಬ ಪ್ರಶ್ನೆಯನ್ನು ಕೇಳಿದರೆ ಇದಕ್ಕೆ ಉತ್ತರ ನೀಡಿದಂತಹ ರಮ್ಯಾ ಅವರು “ನನಗೆ ಎಲ್ಲರೂ ಇಷ್ಟ ಇನ್ಸ್ಟಾಗ್ರಾಮ್ ನಲ್ಲಿ ಬಹುತೇಕ ಎಲ್ಲಾ ನಟರನ್ನು ಫಾಲೋ ಮಾಡುತ್ತಿದ್ದೇನೆ ನಾವಿದ್ದಾಗ ನಾವು ಅಷ್ಟು ಕೇರ್ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಈಗ ಪ್ರತಿಯೊಂದು ಫೋಟೊ ನೋಡುತ್ತಿದ್ದರೆ ಪ್ರತಿಯೊಬ್ವರು ಕೂಡ ಸೋ ಗುಡ್ ಅನಿಸುತ್ತದೆ. ಅದುದರಿಂದ ನನಗೆ ಎಲ್ಲರು ಇಷ್ಟ ಎಂದಿದ್ದಾರೆ”.
ಇನ್ನು ಅಪ್ಪು ಅವರು ಇಹಲೋಕವನ್ನು ತ್ಯಜಿಸುವ ಒಂದು ವಾರದ ಹಿಂದೆಯಷ್ಟೇ ಅಪ್ಪು ಅವರಿಗೆ ಕರೆ ಮಾಡಿದಂತಹ ರಮ್ಯಾ ಅವರು ಮತ್ತೆ ನಾನು ಸ್ಯಾಂಡಲ್ವುಡ್ ಕಮ್ ಬ್ಯಾಕ್ ಮಾಡುವಂತಹ ನಿರ್ಧಾರವನ್ನು ಮಾಡಿದ್ದೇನೆ. ಒಂದು ವೇಳೆ ನಾನು ಸ್ಯಾಂಡಲ್ವುಡ್ ಗೆ ಮತ್ತೆ ರೀ ಎಂಟ್ರಿ ಆಗುವುದಾದರೆ ಅದು ನಿಮ್ಮ ಸಿನಿಮಾದಲ್ಲಿ ನಟನೆ ಮಾಡುವುದಾಗ ಮೂಲಕವೇ ಅಂತ ಹೇಳಿಕೊಂಡಿದ್ದರಂತೆ. ಈ ವಿಚಾರವನ್ನು ರಮ್ಯಾ ಅವರು ಅಪ್ಪು ಅವರು ಅಗಲಿದ ನಂತರ ಮಾಧ್ಯಮ ಒಂದರಲ್ಲಿ ಹೇಳಿಕೊಂಡಿದ್ದಾರೆ. ಇವೆಲ್ಲವನ್ನು ನೋಡುತ್ತಿದ್ದರೆ, ರಮ್ಯಾ ಅವರಿಗೆ ಎಲ್ಲಾ ನಟರು ಕೂಡ ಇಷ್ಟಾನೆ ಆದರೆ ಅಪ್ಪು ಅವರ ಮೇಲೆ ಸ್ವಲ್ಪ ಹೆಚ್ಚಿನ ಒಲವು ಇತ್ತು ಎಂಬುದು ತಿಳಿಯುತ್ತದೆ. ಏಕೆಂದರೆ ಅಪ್ಪು ಅವರ ಜೊತೆ ನಟನೆ ಮಾಡುವುದರ ಮೂಲಕ ಅವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
ಹಾಗಾಗಿ ದೀರ್ಘಕಾಲ ಬ್ರೇಕ್ ತೆಗೆದುಕೊಂಡ ನಂತರ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಆಗುವುದಾದರೆ ಅದು ಅಪ್ಪು ನಟನೆಯ ಸಿನಿಮಾದ ಮೂಲಕವೇ ಅಂತ ಹೇಳಿಕೊಂಡಿದ್ದಾರೆ. ವಿಧಿಯಾಟ ಹೇಗಿದೆ ನೋಡಿ ಇದೀಗ ಅಪ್ಪು ಅವರು ನಮ್ಮ ಜೊತೆ ಇಲ್ಲ ಹಾಗಾಗಿ ರಮ್ಯಾ ಅವರು ಯಾವ ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡುತ್ತಾರೆ ಯಾವ ನಟನ ಜೊತೆ ನಟನೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ ಹಾಗೂ ರಮ್ಯಾ ಅವರು ಯಾವ ನಟನ ಜೊತೆ ನಟನೆ ಮಾಡಿದರೆ ಚೆನ್ನಾಗಿರುತ್ತದೆ ಎಂಬುದನ್ನು ಹೇಳಿ. ರಚಿತಾ ರಾಮ್ ಮಾಡಿದ್ದೇನು ಗೊತ್ತ.? ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.