ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್(Darshan) ಹೀಗೆ ನಾನಾ ಟೈಟಲ್ಗಳ ಜೊತೆ ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ಸ್ಟಾರ್ ಹೀರೋ ಎನ್ನುವ ಗರಿಮೆ ಹೊಂದಿರುವ ನಟ ದರ್ಶನ್(D Bos ಅವರಿಗೆ ಕರ್ನಾಟಕದಲ್ಲಿ ಕೋಟಿಗಟ್ಟಲೆ ಹುಚ್ಚು ಅಭಿಮಾನಿಗಳು ಇದ್ದಾರೆ. ತಮ್ಮ ಅಭಿಮಾನಿಗಳನ್ನು ಸಹ ದರ್ಶನವರು ಅಷ್ಟೇ ಪ್ರೀತಿಸುತ್ತಾರೆ ಹಾಗೂ ಅವರನ್ನೇ ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ.
ಹೀಗೆ ದರ್ಶನ್(Challenging Star Darshan) ಅವರ ಮತ್ತು ಅವರ ಅಭಿಮಾನಿಗಳ ನಡುವೆ ಇರುವ ಬಾಂಧವ್ಯ ಎಂತದ್ದು ಎಂದು ಬರಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ದರ್ಶನ್ ಅವರನ್ನು ಹೀರೋ ಎನ್ನುವುದಕ್ಕಿಂತ ಅವರು ನೇರ ನುಡಿ, ನೇರ ವ್ಯಕ್ತಿತ್ವದ ವ್ಯಕ್ತಿದವರು ಎನ್ನುವುದಕ್ಕೆ ಹೆಚ್ಚು ಜನ ಇಷ್ಟ ಪಡುತ್ತಾರೆ. ಅಂಬರೀಶ್ ಅವರನ್ನು ಬಿಟ್ಟರೆ ಈ ರೀತಿ ಹೀರೋಗಳಲ್ಲಿ ಇದ್ದದ್ದನ್ನು ಇದ್ದಂತೆ ಹಾಗೆ ಹೇಳುವ ಗಟ್ಸ್ ಇರುವುದು ದರ್ಶನ್ ಅವರಿಗೆ ಮಾತ್ರ.
ಯಾರಿಗೂ ಕೇರ್ ಮಾಡದ ಅಟಿಟ್ಯೂಡ್ ಇರುವ ಇವರು ಈಗಾಗಲೇ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಇದರ ನಡುವೆ ಕ್ರಾಂತಿ ಸಿನಿಮಾ ಆಡಿಯೋ ಲಾಂಚ್ ಅಲ್ಲಿ ಆದ ಘಟನೆ ಅವರ ಅಭಿಮಾನಿಗಳನ್ನು ತೀರಾ ಕೆಣಕಿದೆ. ಕ್ರಾಂತಿ(Kranti) ಸಿನಿಮಾ ಸದ್ಯಕ್ಕೆ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ. ಇದರ ಆಡಿಯೋ ರಿಲೀಸ್ ಅನ್ನು ಸ್ವಲ್ಪ ವಿಭಿನ್ನವಾಗಿ ಮಾಡಲು ರಾಜ್ಯದ ಪ್ರಮುಖ ನಗರಗಳಲ್ಲಿ ಒಂದೊಂದು ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತು.
ಇದೇ ರೀತಿ ಹೊಸಪೇಟೆಯಲ್ಲಿ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೋದಾಗ ಕಿಡಿಗೇಡಿ ಒಬ್ಬರು ದರ್ಶನ ಅವರ ಮೇಲೆ ಚಪ್ಪಲಿ ಎಸೆದಿದ್ದರು. ಈ ಘಟನೆ ಆದ ಬಳಿಕ ದರ್ಶನ್ ಅವರ ಅಭಿಮಾನಿಗಳು ಇದಕ್ಕೆ ಸಾಕಷ್ಟು ವಿರೋಧ ಮಾಡಿ ದೊಡ್ಡ ಗಲಾಟೆಯನ್ನೇ ಮಾಡಿದರು. ದರ್ಶನ್ ಅವರು ಅದಾದ ಮೇಲೆ ಹಲವು ವೇದಿಕೆಗಳಲ್ಲಿ ನೇರವಾಗಿ ಘಟನೆ ವಿಷಯ ತೆಗೆದುಕೊಳ್ಳದೆ ಹೋದರು ಪರೋಕ್ಷವಾಗಿ ಅಭಿಮಾನಿಗಳನ್ನು ಸಮಾಧಾನಪಡಿಸಿದ್ದರು.
ಆದರೆ ಇದೇ ಮೊದಲ ಬಾರಿಗೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ದರ್ಶನ್ ಅವರು ಈ ಘಟನೆ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ರಾಗ ರಾಮ್ ಸ್ಟೋರಿ ಬಾಕ್ಸ್ ಎನ್ನುವ ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ಕೊಟ್ಟಿದ್ದಾರೆ. ಇದರಲ್ಲಿ ನಿರೂಪಕ ಮಯೂರ್ ಎನ್ನುವವರು ದರ್ಶನ್ ಅವರನ್ನು ಅಂದಿನ ಆ ಘಟನೆ ಕುರಿತು ಪ್ರಶ್ನೆ ಕೇಳಿದ್ದಾರೆ ಮತ್ತು ಫ್ಯಾನ್ಸ್ ವಾರ್ ಬಗ್ಗೆ ಕೂಡ ಕೇಳಿದ್ದಾರೆ ದರ್ಶನ್ ಅವರು ಕೊಟ್ಟಿರುವ ಉತ್ತರ ಮನ ಮುಟ್ಟುವಂತಿತ್ತು. ಈಗಾಗಲೇ ಆ ವಿಡಿಯೋದ ಪ್ರೋಮೋ ಬಹಳ ಸದ್ದು ಮಾಡುತ್ತಿದ್ದು ಆ ಇಂಟರ್ವ್ಯೂ ಅನ್ನು ನೋಡಲು ಅಭಿಮಾನಿಗಳು ಕಾತುರ ವ್ಯಕ್ತಪಡಿಸುತ್ತಿದ್ದಾರೆ.
ಈ ಪ್ರೋಮೊದಲ್ಲಿ ದರ್ಶನ್ ಹಾಡಿರುವ ಮಾತುಗಳು ಈ ರೀತಿ ಇವೆ ಚಪ್ಪಲಿಯಲ್ಲಿ ಹೊಡಿಸಿಕೊಳ್ಳುವ ಅಂತಹ ತಪ್ಪು ನಾನೇನು ಮಾಡಿದ್ದೆ.? ಚಿಟಿಕೆ ಸದ್ದು ಚೆನ್ನಾಗಿದೆ ಚಪ್ಪಾಳೆ ಸದ್ದು ಚೆನ್ನಾಗಿದೆ ಆದರೆ ಒಂದು ಕಡೆಯಿಂದ ಚಪ್ಪಾಳೆ ಹೊಡೆಯಲು ಸಾಧ್ಯ ಇಲ್ಲ ಅಲ್ಲವಾ. ನಾನು ಹಾರವನ್ನು ಯಾವ ರೀತಿ ಹಾಕಿಸಿಕೊಳ್ಳುತ್ತಿದ್ದೇನೋ ಇದನ್ನು ಸಹ ಅಷ್ಟೇ ಪ್ರೈಡ್ ಯಿಂದ ತೆಗೆದುಕೊಂಡಿದ್ದೇನೆ. ಇದುವರೆಗೂ ನಾನು ಚಾಲೆಂಜಿಂಗ್ ಸ್ಟಾರ್ ಆಗಿ ಹಾಗೂ ದರ್ಶನ್ ಆಗಿ ಯಾರಿಗೂ ಮೋಸ ಮಾಡಿಲ್ಲ. ನಾನು ನೆನ್ನೆ ಮೊನ್ನೆ ಬಂದು ಸ್ಟಾರ್ ಆದವನಲ್ಲ ಈ ಸಾಮ್ರಾಜ್ಯ ಕಟ್ಟಲು ನನಗೆ 25 ವರ್ಷದ ಶ್ರಮ ಇದೆ ಎಂದು ಹೇಳಿದ್ದಾರೆ. ಈ ಮಾತುಗಳಿಂದ ಅವರ ಇಂಟರ್ವ್ಯೂ ನೋಡುವ ಕಾತುರ ಇನ್ನೂ ಹೆಚ್ಚಾಗುತ್ತಿದೆ.