ಅವಮಾನ ಹೊಸದೇನಲ್ಲ
ನಟ ದರ್ಶನ್ ಸದಾಕಾಲ ಯಾವುದಾದರೂ ಒಂದು ಕಾಂಟ್ರವರ್ಸಿಯಲ್ಲಿ ಇರುವ ನಟ ಇದ್ದದನ್ನು ಇದ್ದ ಹಾಗೆ ಹೇಳಿ ಬಿಡುತ್ತಾರೆ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶವನ್ನು ತುಂಬಿಕೊಳ್ಳುವುದಿಲ್ಲ. ಎದುರಿಗೆ ಇರುವಂತಹ ವ್ಯಕ್ತಿ ಸಾಮಾನ್ಯನಾಗಿರಲಿ ಅಥವಾ ಸೆಲೆಬ್ರಿಟಿ ಆಗಿರಲಿ ಇರುವ ವಿಚಾರವನ್ನು ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಡುತ್ತಿದ್ದಾರೆ. ಈ ನಿಷ್ಠುರವಾದಿತನದಿಂದಲೇ ಇಂದು ದರ್ಶನ ಅವರು ಮೀಡಿಯಾದಿಂದ ಬ್ಯಾನ್ ಆಗಿದ್ದಾರೆ.
ಆದರೂ ಕೂಡ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಬಿಜಿ ಆಗಿರುವಂತಹ ನಟ ದರ್ಶನ್ ಅವರು ಕಳೆದ ವಾರ ಕೆಆರ್ ಪೇಟೆಯಲ್ಲಿ ಧರಣಿ ಎಂಬ ಥೀಮ್ ಹಾಡನ್ನು ಬಿಡುಗಡೆ ಮಾಡಿದರು. ಅಭಿಮಾನಿಗಳಿಂದಲೇ ಈ ಹಾಡನ್ನು ಬಿಡುಗಡೆ ಮಾಡಿಸಿದ್ದು ನಿಜಕ್ಕೂ ವಿಶೇಷ ಅಂತ ಹೇಳಬಹುದು ಏಕೆಂದರೆ ಇಲ್ಲಿಯವರೆಗೂ ಕನ್ನಡದ ಎಲ್ಲಾ ಸಿನಿಮಾದ ಹಾಡುಗಳನ್ನು ಸೆಲೆಬ್ರಿಟಿಗಳ ಮೂಲಕವೇ ಬಿಡುಗಡೆ ಮಾಡಲಾಗಿತ್ತು.
ಆದರೆ ಮೊದಲ ಬಾರಿಗೆ ನನ್ನ ಸೆಲೆಬ್ರಿಟಿಗಳ ಕೈನಲ್ಲೇ ಈ ಹಾಡನ್ನು ಬಿಡುಗಡೆ ಮಾಡಬೇಕು ಎಂದು ಕ್ರಾಂತಿ ಸಿನಿಮಾದ ಮೊದಲ ಹಾಡನ್ನು ಕೆ.ಆರ್ ಪೇಟೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಸ್ವತಃ ದರ್ಶನವರು ನಟನಾಗಿ ಅಲ್ಲದೆ ಒಬ್ಬ ನೀವೇ ರೂಪಕನಾಗಿ ಕಾರ್ಯಕ್ರಮವನ್ನು ನಡೆಸಿ ಹಾಡನ್ನು ಬಿಡುಗಡೆ ಮಾಡಿದರು. ತದನಂತರ ಎರಡನೇ ಹಾಡನ್ನು ಬಳ್ಳಾರಿಯ ಹೊಸಪೇಟೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದರು.
ಅದರಂತೆ ನೆನ್ನೆ ಸಂಜೆ 7:00ಗೆ ಹೊಸಪೇಟೆಯ ಸರ್ಕಲ್ ಬಳಿಯಲ್ಲಿ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ಎಂಬ ರೋಮ್ಯಾಂಟಿಕ್ ಹಾಡನ್ನು ಅಭಿಮಾನಿಗಳ ಕೈನಲ್ಲಿ ಬಿಡುಗಡೆ ಮಾಡುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಅದರಂತೆ ಅಭಿಮಾನಿಯೊಬ್ಬರ ಕೈನಿಂದ ಈ ಹಾಡನ್ನು ಬಿಡುಗಡೆ ಕೂಡ ಮಾಡಿಸುತ್ತಾರೆ. ಆದರೆ, ಜನ ಸಮೋಹದಲ್ಲಿ ಇದ್ದಂತಹ ಮಹಿಳೆಯೊಬ್ಬಳು ದರ್ಶನ್ ಅವರ ಮೇಲೆ ಚಪ್ಪಲಿಯನ್ನು ಎಸೆದು ವಿಕೃತಿಯನ್ನು ಮೆರೆದಿದ್ದಾರೆ.
ನಿಜಕ್ಕೂ ಇದು ಚಿತ್ರರಂಗಕ್ಕೆ ಒಂದು ಕಪ್ಪು ಚುಕ್ಕೆ ಅಂತಾನೆ ಹೇಳಬಹುದು, ಮೊದಲಿನಿಂದಲೂ ಎಲ್ಲಾ ಸ್ಟಾರ್ ವಾರ್ ಎಂಬುದು ಇತ್ತು ಆದರೆ ನಟರು ಈ ಸ್ಟಾರ್ ವಾರರನ್ನು ನಿಲ್ಲಿಸೋಣ ಅಂತ ಹೇಳಿದ್ದರು. ಆದರೂ ಕೂಡ ಈ ಸ್ಟಾರ್ ವಾರ್ ಅನ್ನುವುದಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ ಮಹಿಳೆಯೊಬ್ಬಳು ದರ್ಶನ್ ಅವರ ಮೇಲೆ ಏಕಾಏಕಿ ಚಪ್ಪಲಿಯನ್ನು ಎಸೆದಿದ್ದಾಳೆ. ಚಪ್ಪಲಿ ಎಸೆದಿದ್ದರೂ ಕೂಡ ದರ್ಶನ್ “ಹೋಗಲಿ ಬಿಡು ಚಿನ್ನ ಇಂತಹ ಅವಮಾನಗಳನ್ನು ನಾನು ಸಾಕಷ್ಟು ಕಂಡಿದ್ದೇನೆ ಎಂದು ಕ್ಷಮಿಸಿ ದೊಡ್ಡವರಾಗಿದ್ದಾರೆ”.
ಈ ರೀತಿ ಕೆಲಸದ ಮಾಡಿದ ಮಹಿಳೆ ಡಿ ಬಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಮ್ಮ ಜನಕ್ಕೆ ಏನು ಹೇಳಬೇಕು ಏನೋ ತಿಳಿದಿಲ್ಲ ಇಂತಹ ವಿ-ಕೃ-ತಿಯನ್ನು ನಟರ ಮೇಲೆ ತೋರಿಸುವ ಬದಲು ರಾಜಕಾರಣಿಗಳ ಮೇಲೆ ತೋರಿಸಲಿ. ಸುಳ್ಳು ಹೇಳಿ ಆಶ್ವಾಸನೆಯನ್ನು ನೀಡಿ ವೋಟನ್ನು ಪಡೆಯುತ್ತಾರೆ ಇದನ್ನು ನಂಬಿ ಓಟ್ ಹಾಕುತ್ತಾರೆ ಆದರೂ ಕೂಡ ಅಂತ ರಾಜಕಾರಣಿಗಳ ಮೇಲೆ ಯಾವುದೇ ರೀತಿಯಾದಂತಹ ದರ್ಪ ದೌರ್ಜನ್ಯ ಅವಮಾನವನ್ನು ಎಸೆಗಿಸುವುದಿಲ್ಲ.
ಆದರೆ ನಮ್ಮನ್ನು ಮನರಂಜಿಸಲು ಬರುವಂತಹ ನಾಯಕ ನಟರ ಮೇಲೆ ಇಂತಹ ವಿ-ಕೃ-ತಿ ಮೆರೆದದ್ದು ಎಷ್ಟು ಸರಿ ಎಂಬುವುದನ್ನು ನೀವೇ ಊಹೆ ಮಾಡಿ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಹೊಸಪೇಟೆ ಜನರಿಗೂ ಮತ್ತು ಅಪ್ಪುಗೂ ಅವಿನಾಭವನ ಸಂಬಂಧ ಇದೆ, ಅಪ್ಪುವನ್ನು ಆರಾಧಿಸುವ ಜನರ ಹೊಸಪೇಟೆಯಲ್ಲಿ ಬಹಳಷ್ಟು ಜನ ಇದ್ದಾರೆ. ಆದರೂ ಕೂಡ ಅಪ್ಪು ಅಭಿಮಾನಿಗಳು ಇರುವಂತಹ ಹೊಸಪೇಟೆಯಲ್ಲಿ ಇಂತಹ ವಿಕೃತಿ ಮಾಡಿರುವುದು ನಿಜಕ್ಕೂ ಕೂಡ ಘನ ಘೋ.ರ ಅಂತ ಹೇಳಬಹುದು. ಒಂದು ವೇಳೆ ಅಪ್ಪು ಬದುಕಿದ್ದರೂ ಕೂಡ ಇದನ್ನು ಖಂಡಿಸುತ್ತಿದ್ದರು ಅಂತಾನೇ ಹೇಳಬಹುದು. ಇನ್ನಾದರೂ ಈ ಸ್ಟಾರ್ ವಾರರನ್ನು ನಿಲ್ಲಿಸೋಣ ಎಂಬುದೇ ನಮ್ಮ ಆಶಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ.