ಮಗನ ಶಿಕ್ಷಣದ ಬಗ್ಗೆ ಮನಬಿಚ್ಚಿ ಮಾತನಾಡಿದ ಡಿ-ಬಾಸ್
ದರ್ಶನ್ ಅವರ ಕ್ರಾಂತಿ ಸಿನಿಮಾವು ಇಡೀ ಕರ್ನಾಟಕವೇ ಬಿಡುಗಡೆಗಾಗಿ ಕಾಯುತ್ತಿರುವ ಸಿನಿಮಾ ಆಗಿದ್ದು ಜನವರಿ 26ರಂದು ಗಣರಾಜ್ಯೋತ್ಸವ ದಿನದ ಪ್ರಯುಕ್ತ ಬಿಡುಗಡೆ ಆಗಲಿದೆ. ಇದರ ನಿಮಿತ್ತವಾಗಿ ಚಿತ್ರತಂಡ ಹಾಗೂ ನಾಯಕ ನಟನಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.
ಮಾಧ್ಯಮಗಳು ದರ್ಶನ್ ಅವರ ಸಿನಿಮಾ ಪ್ರಚಾರ ಮಾಡದೆ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ದರ್ಶನ್ ಅವರ ಇಂಟರ್ವ್ಯೂ ಪಡೆಯಲು ಎಲ್ಲಾ ಯುಟ್ಯೂಬ್ ಚಾನೆಲ್ ಗಳು ಕಾಯುತ್ತಿವೆ. ಹೀಗಾಗಿ ದಿನ ಪೂರ್ತಿ ದರ್ಶನ್ ಅವರು ಸದ್ಯಕ್ಕೆ ಸಂದರ್ಶನದ ಕೊಡುವುದರಲ್ಲಿ ಬ್ಯುಸಿ ಆಗಿದ್ದಾರೆ ಎನ್ನಬಹುದು.
ಯಾವಾಗಲೂ ನೇರ ನುಡಿಗೆ ಹೆಸರುವಾಸಿ ಆಗಿರುವ ಪ್ರೇಕ್ಷಕರ ಪ್ರೀತಿಯ ದಚ್ಚು ಕ್ರಾಂತಿ ಸಿನಿಮಾದ ಸಬ್ಜೆಕ್ಟ್ ಕುರಿತು ಸಿನಿಮಾ ಸಂದೇಶದ ಕುರಿತು ಹಾಗೂ ಅದಕ್ಕೆ ಸಂಬಂಧಿತ ತಮ್ಮ ಜೀವನದ ಘಟನೆಗಳನ್ನು ಸೇರಿಸಿ ಸಂದರ್ಶನದಲ್ಲಿ ಮಾತನಾಡುತ್ತಿದ್ದಾರೆ. ಈ ವೇಳೆ ಸಂದರ್ಶನ ಕಾರರೊಬ್ಬರು ದರ್ಶನ್ ಅವರಿಗೆ ಕ್ರಾಂತಿ ಸಿನಿಮಾ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ವ್ಯತ್ಯಾಸ ಮತ್ತು ಮಹತ್ವ ತಿಳಿಸುವ ಸಂದೇಶ ಇದೆ ಅಂತ ಎಂದು ಹೇಳುತ್ತಿದ್ದೀರಿ.
ವರ್ಷದಿಂದ ಈ ಸಿನಿಮಾ ಪ್ರಾಜೆಕ್ಟ್ ನಲ್ಲಿ ತೊಡಗಿಕೊಂಡಿದ್ದೀರಿ. ಈಗ ನಿಮ್ಮ ಮನಸ್ಸಿಗೆ ಬಂದಿದೆಯಾ? ಮುಂದೆ ನಿಮ್ಮ ಮಗನನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸಬೇಕೆಂದು ಅನಿಸಿದೆಯಾ ಎಂದು ಕೇಳಿದ್ದಾರೆ ಇದಕ್ಕೆ ಉತ್ತರಿಸಿದ ದರ್ಶನ್ ಅವರು ಇದರಲ್ಲಿ ನನ್ನದೇನು ಇಲ್ಲ ನನಗೆ ಆ ಬಗ್ಗೆ ಯೋಚನೆ ಇಲ್ಲ.
ಯಾಕೆಂದರೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಈ ರೀತಿ ಮಾಡುತ್ತಿದ್ದಾರೆ, ನನ್ನ ಹೆಂಡತಿಗೆ ಇಂಗ್ಲಿಷ್ ಶಾಲೆಯಲ್ಲಿ ಓದಿಸುವ ಶೋಕಿ ಇರುವುದು ಹಾಗಾಗಿ ಅವರಿಗಾಗಿ ಸುಮ್ಮನಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ. ಆದರೆ ನಾನು ನನ್ನ ಮಗನಿಗೆ ಬದುಕುವುದು ಹಾಗೂ ದುಡಿಯುವುದನ್ನು ಕಲಿಸುತ್ತಿದ್ದೆನೆ ಅಷ್ಟೇ.
ಈಗ ಮಗನಿಗೆ 14 ವರ್ಷ ಇನ್ನೂ ಒಂದು ವರ್ಷ ಸಮಯ ಕೊಟ್ಟಿದ್ದೇನೆ. ನಂತರ ಅವನು ವಿದ್ಯಾಭ್ಯಾಸದಲ್ಲಿ ಮುಂದುವರಿಯಬೇಕಾ ಅಥವಾ ಬೇರೆ ಯಾವುದಾದರೂ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕಾ ಎಂದು ಅವನೇ ನಿರ್ಧರಿಸಬೇಕು. ಅದಕ್ಕೆ ತಕ್ಕ ಹಾಗೆ ಅವನನ್ನು ರೂಪಿಸುವುದು ನನ್ನ ಜವಾಬ್ದಾರಿ, ಆಯ್ಕೆ ಮಾತ್ರ ಅವನಿಗೆ ಬಿಟ್ಟಿದ್ದೇನೆ.
ಈಗಿನ ಪ್ರಪಂಚದಲ್ಲಿ ಕಾಂಪಿಟೇಶನ್ ಬಹಳ ಇದೆ ಇ ನ್ನು ಸ್ವಲ್ಪ ದಿನ ಹೋದರೆ ಮನುಷ್ಯನೇ ಮನುಷ್ಯನನ್ನು ಬಗೆದು ತಿನ್ನುತ್ತಾನೆ. ಹಾಗಾಗಿ ಎಲ್ಲರೂ ಸಹ ಮಕ್ಕಳಿಗೆ ಬದುಕುವುದನ್ನು ಕಲಿಸಿ ಎಂದು ಹೇಳಿದ್ದಾರೆ. ಮತ್ತು ಮುಂದುವರೆದು ಸಹ ಸಂದರ್ಶನ ಕಾರರಯ ನೀವು ಎಂದಾದರೂ ಮಗನ ಜೊತೆ ಕುಳಿತುಕೊಂಡು ಹೋಂ ವರ್ಕ್ ಮಾಡಿಸಿದ್ದೀರಾ ಎಂದು ಕೇಳಿದ್ದಾರೆ.
ಅದಕ್ಕೆ ಉತ್ತರಿಸಿದ ದರ್ಶನ್ ಅವರು ನಾನೇ 10ನೇ ತರಗತಿ ಕಷ್ಟಪಟ್ಟು ಜಸ್ಟ್ ಪಾಸ್ ಆಗಿದ್ದೇನೆ ಇನ್ನೇನು ಹೋಂವರ್ಕ್ ಮಾಡಿಸಲಿ. ನನ್ನ ತಂದೆ ಎಂದು ನಮ್ಮ ಕೈ ಹಿಡಿದು ಬರೆಸಿದವರಲ್ಲ, ನಮ್ಮ ಮನೆಯಲ್ಲಿ ಇರುವ ಹೆಂಗಸರು ಆ ಕೆಲಸ ನೋಡಿಕೊಳ್ಳುತ್ತಾರೆ. ಮಗನಿಗೆ ಹೋಂವರ್ಕ್ ಮಾಡಲು ಶಾಲೆಯಲ್ಲಿ ಕೊಟ್ಟರೆ, ನನ್ನ ಹೆಂಡತಿಗೆ ಅದು ಹೋಂ ವರ್ಕ್ ರೀತಿ ಆಗಿರುತ್ತದೆ.
ಯಾಕೆಂದರೆ ನನ್ನ ಹೆಂಡತಿ ಶಾಲೆಯಲ್ಲಿ ಕೊಡುವ ಹೋಂವರ್ಕನ್ನು ಗೂಗಲ್ ಮಾಡಿ ಅರ್ಥ ತಿಳಿದುಕೊಂಡು ಬರೆಸುತ್ತಾಳೆ. ಅವಳು ಓದಿರುವುದು ನೋಡಿದರೆ ಇಂಜಿನಿಯರಿಂಗ್ ಗೂಗಲ್ ನಲ್ಲಿ ಹುಡುಕಿ ಮಾಡುವುದಾದರೆ ಇಂಜಿನಿಯರಿಂಗ್ ಓದಿ ಪ್ರಯೋಜನವೇನು ಬಂತು ಎಂದು ಲೈಟಾಗಿ ಪತ್ನಿಯ ಕಾಲೆಳೆದು ಮಾತನಾಡಿದ್ದಾರೆ.