ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಶೇಷ ವ್ಯಕ್ತಿತ್ವದ ವ್ಯಕ್ತಿ. ಸಿನಿಮಾ ಹೊರತುಪಡಿಸಿ ಬೇರೆ ವಿಷಯಗಳ ಬಗ್ಗೆಯೂ ಅವರಿಗೆ ಇರುವ ಆಸಕ್ತಿ ಗಮನಿಸಿದರೆ ಅವರೆಷ್ಟು ಸ್ಪೆಷಲ್ ಎನ್ನುವುದು ತಿಳಿಯುತ್ತದೆ. ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಸದಾ ಸುದ್ದಿಯಲ್ಲಿರುವ ಸ್ಟಾರ್ ಎಂದರೆ ಅದು ದರ್ಶನ್ ಅವರು. ದರ್ಶನ್ ಅವರ ವಿವಾದಗಳು, ಸಿನಿಮಾ ಅಪ್ಡೇಟ್ಗಳು ಜೊತೆಗೆ ಅವರು ಭಾಗವಹಿಸುವ ಕಾರ್ಯಕ್ರಮಗಳು ಸೇರಿದಂತೆ.
ಯಾವುದೇ ಸಣ್ಣಪುಟ್ಟ ವಿಚಾರ ಆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಹಳ ಬೇಗ ವೈರಲ್ ಆಗಿಬಿಡುತ್ತದೆ. ಯಾಕೆಂದರೆ ಕರ್ನಾಟಕದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಕೋಟಿಗಟ್ಟಲೆ ಜನರಲ್ಲಿ ಇದೆ ಹೀಗಾಗಿ ಅವರ ಕುರಿತ ಸಣ್ಣ ವಿಷಯ ಬಹುಬೇಗ ಸುದ್ದಿ ಆಗಿಬಿಡುತ್ತದೆ. ಹೀಗೆ ದರ್ಶನ್ ಬಗ್ಗೆ ಮತ್ತೊಂದು ಪ್ರಮುಖ ಸುದ್ದಿಯ ವಿಡಿಯೋ ಒಂದು ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ.
ಅದೇನೆಂದರೆ ಯಾವುದೋ ಕಾರ್ಯಕ್ರಮಕ್ಕೆ ತೆರಳಲು ದರ್ಶನ್ ಅವರು ತಮ್ಮ ಸ್ನೇಹಿತರನ್ನು ಕೂರಿಸಿಕೊಂಡು ಹೆಲಿಕ್ಯಾಪ್ಟರ್ ಅಲ್ಲಿ ಹೋಗುತ್ತಿದ್ದಾರೆ. ಇದನ್ನು ನೋಡಿದ ನೆಟ್ಟಿದರು ದರ್ಶನ್ ಅವರು ಹೆಲಿಕ್ಯಾಪ್ಟರ್ ಖರೀದಿಸಿದ್ದಾರ ಎನ್ನುವ ಗೊಂದಲದಲ್ಲಿ ಇದ್ದಾರೆ. ಯಾಕೆಂದರೆ ದರ್ಶನ್ ಅವರಿಗೆ ದುಬಾರಿ ಬೆಲೆಯ ವಾಹನಗಳನ್ನು ಖರೀದಿಸುವ ಕ್ರೇಜ್ ಇದೆ ಈಗಾಗಲೇ ಅವರಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವ ಹೀರೋ ಬಳಿ ಕೂಡ ಇರದಷ್ಟು ಬಹುದೊಡ್ಡ ಮೌಲ್ಯದ ಕಾರುಗಳು ಇವೆ.
ಇತ್ತೀಚೆಗಷ್ಟೇ ಲೇಟೆಸ್ಟ್ ಡಿಸೈನ್ ಲ್ಯಾಂಬೋರ್ಗಿನಿ ಕಾರನ್ನು ಕೂಡ ಖರೀದಿಸಿದ್ದರು. ಅದರ ಮೌಲ್ಯವೇ ಹತ್ತರಿಂದ ಹನ್ನೆರಡು ಕೋಟಿ ಇತ್ತು. ಇದಕ್ಕೂ ಮುನ್ನ ಮತ್ತೆರಡು ಬೇರೆ ಡಿಸೈನ್ ಲ್ಯಾಂಬೋರ್ಗಿನಿ ಕಾರುಗಳ ಒಡೆಯರು ಕೂಡ ಆಗಿದ್ದಾರೆ. ಲ್ಯಾಂಬೋರ್ಗಿನಿ ಮಾತ್ರವಲ್ಲದೆ ಇನ್ನು ಪ್ರತಿಷ್ಠಿತ ಕಂಪನಿಗಳ ಕಾರುಗಳಿಗೆ ದ್ವಿಚಕ್ರ ವಾಹನಗಳಿಗೆ ಮಾಲೀಕರಾಗಿದ್ದರೆ ಡಿ ಬಾಸ್.
ಪ್ರತಿ ವರ್ಷ ಆಯುಧ ಪೂಜೆಯ ದಿನದಂದು ಅವರು ವಾಹನಗಳಿಗೆ ಪೂಜೆ ಮಾಡಿಸಿ ನಿಲ್ಲಿಸಿರುವ ಸಾಲನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಷ್ಟು ವಿಭಿನ್ನ ಬಗೆಯ ಡಿಸೈನ್ಗಳ ಕಲೆಕ್ಷನ್ ಗಳು ದರ್ಶನ್ ಬಳಿ ಇದೆ. ಹೀಗಾಗಿ ದರ್ಶನ್ ಅವರು ಈಗ ಕಾರ್ ಜೊತೆ ಹೆಲಿಕ್ಯಾಪ್ಟರ್ ಅನ್ನು ಕೂಡ ಖರೀದಿಸಿದ್ದಾರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿದೆ.
ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಆದರೆ ಕೆಲವೊಂದು ಗಾಳಿ ಸುದ್ದಿಗಳ ಪ್ರಕಾರ ದರ್ಶನ್ ಅವರು ತಮ್ಮ ಆತ್ಮೀಯರೊಬ್ಬರ ಹೆಲಿಕ್ಯಾಪ್ಟರ್ ಅನ್ನು ಯಾವುದೋ ಕಾರ್ಯಕ್ರಮಕ್ಕೆ ಹೋಗಲು ಬಾಡಿಗೆಗೆ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಹೆಲಿಕ್ಯಾಪ್ಟರ್ ನ ಒಟ್ಟು ಮೌಲ್ಯ 80 ಕೋಟಿ ರೂ ಆಗಿದ್ದು ಅವರು ಒಂದು ದಿನದ ಬಾಡಿಗೆಯಾಗಿ 2 ಲಕ್ಷ ರೂ ಕೊಟ್ಟು ಈ ಹೆಲಿಕ್ಯಾಪ್ಟರ್ ಅಲ್ಲಿ ಸುತ್ತಾಡಿ ಬಂದಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.
ದರ್ಶನ್ ಅವರು ಮನಸ್ಸು ಮಾಡಿದರೆ ಹೆಲಿಕ್ಯಾಪ್ಟರ್ ಕೂಡ ಅವರ ಮನೆ ಬಂದೆ ಬಂದಿಳಿದು ಬಿಡುತ್ತದೆ ಅಷ್ಟರ ಬಗ್ಗೆ ಇವರು ವಾಹನಗಳ ಬಗ್ಗೆ ಕ್ರೇಝ್ ಹೊಂದಿದ್ದಾರೆ. ವಾಹನಗಳು ಮಾತ್ರವಲ್ಲದೆ ಸಾಕು ಪ್ರಾಣಿಗಳ ಬಗ್ಗೆಯೂ ಕೂಡ ವಿಶೇಷ ಒಲವು ಹೊಂದಿರುವ ಇವರು ಮೈಸೂರಿನ ಬಳಿ ಒಂದು ಸ್ವಂತ ಫಾರಂ ಮಾಡಿ ಅಲ್ಲಿ ಅನೇಕ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಗುತ್ತಿದ್ದಾರೆ. ದರ್ಶನ್ ಅವರಿಗೆ ಕುದುರೆ ಹಸು ಸೇರಿದಂತೆ ಎಲ್ಲಾ ಪ್ರಾಣಿಗಳ ಮೇಲು ಬಹಳ ಪ್ರೀತಿ ಮತ್ತು ದಯೆ ಇದೆ.