ದರ್ಶನ್ ವಿವಾದಾತ್ಮಕ ಹೇಳಿಕೆ
ನಟ ದರ್ಶನ್ ಅವರು ಇತ್ತೀಚಿಗಷ್ಟೇ ನಡೆದ ಸಂದರ್ಶನ ಒಂದರಲ್ಲಿ ಹೇಳಿದ ಮಾತು ಇದೀಗ ಸಿಕ್ಕಾಪಟ್ಟೆ ವೈರಲಾಗಿದೆ ಈ ಮಾತುಗಳನ್ನು ಕೇಳಿ ಸ್ವತಹ ದರ್ಶನ್ ಅಭಿಮಾನಿಗಳೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ ಅಷ್ಟಕ್ಕೂ ಡಿ ಬಾಸ್ ಹೇಳಿದ್ದು ಏನು ಎಂಬುದನ್ನು ನೋಡುವುದಾದರೆ.
“ಅದೃಷ್ಟ ದೇವತೆ ಯಾವಾಗಲೋ ಒಮ್ಮೆ ಬಂದು ಬಾಗಿಲು ಬಡಿಯುತ್ತಾಳೆ, ಅವಳು ಬಾಗಿಲನ್ನು ಬಡಿಯುತ್ತಿದ್ದ ವೇಳೆ ಮನೆ ಒಳಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿ ಬೆಡ್ರೂಮ್ ನಲ್ಲಿ ಆಕೆಯನ್ನು ಕೂರಿಸಿಕೊಳ್ಳಬೇಕು, ಬಟ್ಟೆ ಕೊಟ್ಟರೆ ತಾನೇ ಅವಳು ಇನ್ನೊಬ್ಬರ ಮನೆಗೆ ಹೋಗುವುದಕ್ಕೆ ಸಾಧ್ಯ ಎನ್ನುವ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ”.
ಸಂದರ್ಶನ ಒಂದರಲ್ಲಿ ನಟ ದರ್ಶನ್ ಅವರು ಮಾತನಾಡಿದಂತಹ ಪರಿ ಇದು ಈ ವಿಚಾರ ಇದೀಗ ಹಿಗ್ಗಾಮುಗ್ಗ ಟ್ರೋಲ್ ಗೆ ಒಳಗಾಗಿದೆ ಜನರು ಕೂಡ ಇವರ ಮಾತಿಗೆ ತೀ.ವ್ರವಾದಂತಹ ಆಕ್ಷೇಪವನ್ನು ಹೊರ ಹಾಕುತ್ತಿದ್ದಾರೆ ಜನರ ಮಾತು ಏನಪ್ಪ ಎಂದರೆ. ಅದೃಷ್ಟ ದೇವತೆಯನ್ನು ನಾವು ಲಕ್ಷ್ಮಿ ಎಂದು ಕರೆಯುತ್ತೇವೆ ಅವಳನ್ನು ನಾವು ಪೂಜಿಸುತ್ತೇವೆ ಆರಾಧಿಸುತ್ತೇವೆ ನಮ್ಮ ಸಂಪ್ರದಾಯದ ಪ್ರಕಾರ ಲಕ್ಷ್ಮಿ ಎಂದ ತಕ್ಷಣ ಆಕೆಗೆ ಬೇರೆಯಾದಂತಹ ಸ್ಥಾನಮಾನ ಇದೆ.
ಆದರೆ ಅದೇ ಲಕ್ಷ್ಮಿಯನ್ನು ಬಟ್ಟೆ ಬಿಚ್ಚುತ್ತೇನೆ ಬೆಡ್ರೂಮ್ ನಲ್ಲಿ ಕೂರಿಸುತ್ತೇನೆ ಅಂತ ಹೇಳಿಕೆಯನ್ನು ಕೊಡುವುದು ಎಷ್ಟರ ಮಟ್ಟಿಗೆ ಸರಿ ಅದು ಕೂಡ ಓರ್ವ ಸ್ಟಾರ್ ನಟ ಈ ರೀತಿ ಹೇಳುವುದು ತಪ್ಪು ಎಂದು ಜನ ತೀವ್ರವಾದಂತಹ ಆ.ಕ್ರೋ.ಶ.ವನ್ನು ಹೊರ ಹಾಕುತ್ತಿದ್ದಾರೆ. ಆದರೆ ಪ್ರತಿಯೊಬ್ಬರೂ ಕೂಡ ದರ್ಶನ್ ಅವರು ಯಾವ ಕಾರಣಕ್ಕಾಗಿ ಈ ರೀತಿಯಾದಂತಹ ಮಾತನ್ನು ಹೇಳಿದರು ಎಂದು ನೋಡುವುದಾದರೆ.
ಸಂದರ್ಶನ ಒಂದರಲ್ಲಿ ಸಂದರ್ಶಕರಿಂದ ಯಾವುದೋ ಒಂದು ಪ್ರಶ್ನೆ ಬರುತ್ತದೆ ಹಾಗೆ ಬೇರೆ ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಾರೆ. ಆಗ ದರ್ಶನ್ ಅವರು ನಮ್ಮ ತಂದೆ ಒಂದು ಮಾತನ್ನು ಹೇಳುತ್ತಾ ಇದ್ದರು ಎಂದು ಹೇಳಿ ಈ ಸ್ಟೇಟ್ಮೆಂಟ್ ಕೊಟ್ಟು ಅದಕ್ಕೂ ಕೂಡ ಒಂದು ಸಮರ್ಥನೆಯನ್ನು ಕೊಡುತ್ತಾ ಹೋಗುತ್ತಾರೆ.
ಪ್ರೊಡ್ಯೂಸರ್ಸ್ ಮನೆಗೆ ಬಂದಂತಹ ಸಂದರ್ಭದಲ್ಲಿ ಅವರಿಗೆ ಅಡ್ವಾನ್ಸ್ ಹಣವನ್ನು ಕೊಟ್ಟು ತಕ್ಷಣ ಅವರನ್ನು ಬುಕ್ ಮಾಡಿ ಕೊಳ್ಳಬೇಕು ಅಡ್ವಾನ್ಸ್ ಕೊಟ್ಟಾಗ ಅವರು ಬೇರೆ ಕಡೆ ಹೋಗುವುದಿಲ್ಲ. ನೀವು ಅಡ್ವಾನ್ಸ್ ಕೊಟ್ಟಿಲ್ಲ ಅವರನ್ನು ಬುಕ್ ಮಾಡಿಕೊಂಡಿಲ್ಲ ಎಂದಾಗ ಅವರು ಬೇರೆ ಕಡೆ ಹೋಗಿ ಬಿಡುತ್ತಾರೆ ಎನ್ನುವಂತಹ ಸಮರ್ಥನೆಯನ್ನು ಕೊಡುತ್ತಾರೆ.
ಈ ವಿಚಾರದಲ್ಲಿ ಅವರು ಅದಕ್ಕೆ ಅದೃಷ್ಟ ದೇವತೆಯನ್ನು ಹೋಲಿಕೆಯನ್ನು ಮಾಡುತ್ತಾರೆ ಅವರು ಪ್ರೊಡ್ಯೂಸರ್ಸ್ ಬಗ್ಗೆ ಹೇಳಿದ ಮಾತಿನಲ್ಲಿ ಯಾವುದೇ ರೀತಿಯಲ್ಲೂ ತಪ್ಪು ಇಲ್ಲ ಪ್ರೊಡ್ಯೂಸರ್ ಬಂದಾಗ ಅಡ್ವಾನ್ಸ್ ಹಣವನ್ನು ಕೊಡಬೇಕು ಎನ್ನುವುದು ಎಲ್ಲಾ ಸರಿ. ಆದರೆ ಅದೃಷ್ಟ ದೇವತೆಯ ಬಟ್ಟೆ ಬಿಚ್ಚುತ್ತೀನಿ ಬೆಡ್ ರೂಮ್ ನಲ್ಲಿ ಕೂರಿಸುತ್ತೇನೆ ಆಕೆಗೆ ನಾನು ಬಟ್ಟೆ ಕೊಡುವುದಿಲ್ಲ ಇಂತಹ ಪದ ಬಳಕೆ ಬಗ್ಗೆ ಜನ ದರ್ಶನ್ ಅವರ ಬಗ್ಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ಒಬ್ಬ ನಟ ಒಳ್ಳೆಯ ಕೆಲಸವನ್ನು ಮಾಡಿದಾಗ ಅವರನ್ನು ಹೊಗಳಬೇಕು ಜೊತೆಗೆ ಕೆಟ್ಟ ಕೆಲಸವನ್ನು ಮಾಡಿದಾಗ ಅವರನ್ನು ದೂಷಿಸಲುಬೇಕು ಆಗ ಮಾತ್ರ ಯಾವುದೇ ಒಬ್ಬ ವ್ಯಕ್ತಿ ತಪ್ಪು ಮಾಡಿದಂತಹ ವಿಷಯದ ಬಗ್ಗೆ ಅರಿವಾಗುತ್ತದೆ. ಬದಲಾಗಿ ಅವರು ಮಾಡಿದಂತಹ ಕೆಲಸ ಅವರು ಮಾತನಾಡಿದಂತಹ ರೀತಿ ಎಲ್ಲವನ್ನು ಸರಿ ಎಂದು ಹೇಳಿದರೆ ಅವರು ಯಾವುದೇ ಕಾರಣಕ್ಕೂ ಬುದ್ಧಿ ಕಲಿಯುವುದಿಲ್ಲ ಬದಲಾಗಿ ಯಾವ ಒಂದು ವಿಚಾರಕ್ಕೆ ಯಾವ ರೀತಿಯಾದಂತಹ ಪದ ಬಳಕೆ ಮಾಡುತ್ತೇವೆ ಯಾವ ರೀತಿ ಸ್ಪಷ್ಟೀಕರಿಸುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ. ತದನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ.