Friday, June 9, 2023
HomeEntertainmentಒಂದೊಳ್ಳೆ ಪಾತ್ರ ಇದೆ ಆಕ್ಟ್ ಮಾಡ್ತೀಯಾ ಅಂತ ಆಫೀಸ್ ಗೆ ಕರೆಸಿಕೊಂಡ್ರು ಕೊನೆಗೆ ಮಾಡಿದ್ದೇನು ಗೊತ್ತಾ.?...

ಒಂದೊಳ್ಳೆ ಪಾತ್ರ ಇದೆ ಆಕ್ಟ್ ಮಾಡ್ತೀಯಾ ಅಂತ ಆಫೀಸ್ ಗೆ ಕರೆಸಿಕೊಂಡ್ರು ಕೊನೆಗೆ ಮಾಡಿದ್ದೇನು ಗೊತ್ತಾ.? ಶರಣ್ & ತರುಣ್ ಅಸಲಿ ಮುಖ ಬಯಲು ಮಾಡಿದ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್

ಗುರುಶಿಷ್ಯರು ಸಿನಿಮಾ

ನಟ ಬುಲೆಟ್ ಪ್ರಕಾಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಬುಲೆಟ್ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಒಂದು ಬುಲೆಟ್ ಸಿನಿಮಾದಲ್ಲಿ ನಟನೆ ಮಾಡಿದ ಕಾರಣವೇ ಇವರ ಹೆಸರಿನ ಮುಂದೆ ಬುಲೆಟ್ ಎಂಬುದನ್ನು ಸೇರಿಸಲಾಯಿತು. ತದನಂತರ ಇವರನ್ನು ಎಲ್ಲರೂ ಕೂಡ ಬುಲೆಟ್ ಪ್ರಕಾಶ್ ಎಂದೆ ಗುರುತಿಸಲಾಯಿತು ಈ ಸಿನಿಮಾದ ಸಕ್ಸಸ್ ನಂತರ ಬುಲೆಟ್ ಪ್ರಕಾಶ್ ಅವರು ಸಾಕಷ್ಟು ಸಿನಿಮಾದಲ್ಲಿ ಹಾಸ್ಯ ಪ್ರಧಾನ ಪಾತ್ರದಲ್ಲಿ ಪೋಷಕ ಪ್ರಧಾನ ಪಾತ್ರದಲ್ಲಿ ಹಾಗೂ ಸಹೋದರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ‌.

ಹೆಚ್ಚಾಗಿ ಎಲ್ಲರಿಗೂ ಮನರಂಜನೆ ನೀಡಿದ್ದು ಹಾಸ್ಯ ಪ್ರಧಾನ ಪಾತ್ರಗಳ ಮೂಲಕವೇ ಆದರೆ ಕಳೆದ ಎರಡು ವರ್ಷಗಳ ಹಿಂದೆ ಬುಲೆಟ್ ಪ್ರಕಾಶ್ ಅವರು ಅನಾರೋಗ್ಯ ಕಾರಣದಿಂದ ವಿ.ಧಿ.ವ.ಶ.ರಾದ ವಿಚಾರ ನಿಮಗೆ ತಿಳಿದಿದೆ‌. ಇನ್ನು ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಕೂಡ ಇತ್ತೀಚಿನ ದಿನದಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಎಷ್ಟೇ ತೆರೆಕಂಡ ಗುರು ಶಿಷ್ಯರು ಎಂಬ ಸಿನಿಮಾದಲ್ಲಿ ಪ್ರಮುಖ ರೋಲ್ ನಲ್ಲಿ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅವರು ಕಾಣಿಸಿಕೊಂಡಿದ್ದಾರೆ.

ಇನ್ನು ಈ ಒಂದು ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್ ಆದಂತಹ ಸಿನಿಮಾಗಳ ಲಿಸ್ಟ್ ಗೆ ಸೇರ್ಪಡೆಯಾಗಿದೆ. ರಕ್ಷಕ್ ಅವರನ್ನು ಸಂದರ್ಶನ ಮಾಡುವಂತಹ ಸಂದರ್ಭದಲ್ಲಿ ಈ ಸಿನಿಮಾಗೆ ನೀವು ಆಯ್ಕೆಯಾಗಿದ್ದು ಹೇಗೆ ಈ ಸಿನಿಮಾದಲ್ಲಿ ಪಾತ್ರವನ್ನು ಹೇಗೆ ನಿಭಾಯಿಸಿದರು ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಆ ಸಮಯದಲ್ಲಿ ಶರಣ್ ಹಾಗೂ ತರುಣ್ ಅವರ ಬಗೆಗಿನ ಕೆಲವೊಂದಷ್ಟು ಮಾಹಿತಿಯನ್ನು ರಕ್ಷಕ್ ಹೇಳಿಕೊಂಡಿದ್ದಾರೆ.

ಹೌದು ಮೊದಲಿನಿಂದಲೂ ಚಿತ್ರರಂಗದಲ್ಲಿ ರಕ್ಷಕ್ ಅವರಿಗೆ ಆಸಕ್ತಿ ಇತ್ತು, ಅಷ್ಟೇ ಅಲ್ಲದೆ ಬುಲೆಟ್ ಪ್ರಕಾಶ್ ಅವರಿಗೂ ಕೂಡ ತಮ್ಮ ಮಗನನ್ನು ನಾಯಕ ನಟನಾಗಿ ಮಾಡಬೇಕು ಎಂಬ ಆಸೆ ಮತ್ತು ಕನಸು ಇತ್ತಂತೆ. ಆದರೆ ಇದಕ್ಕೂ ಮುಂಚೆ ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದು ನಿಜಕ್ಕೂ ಕೂಡ ವಿಷಾದವೇ. ತಂದೆಯ ಆಸೆ ಕನಸನ್ನು ಹೇಗಾದರೂ ಮಾಡಿ ನನಸು ಮಾಡಬೇಕು ಎಂಬುದು ರಕ್ಷಕ್ ಗುರಿಯಾಗಿದೆ ಈ ಕಾರಣಕ್ಕಾಗಿಯೇ ವಿದ್ಯಾಭ್ಯಾಸದ ಜೊತೆಗೆ ಸಿನಿಮಾ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಳ್ಳುವುದಕ್ಕೆ ಸಾಕಷ್ಟು ಕಷ್ಟ ಪಡುತ್ತಿದ್ದಾರೆ.

ಚಿಕ್ಕ ಪುಟ್ಟ ಪಾತ್ರವಿದ್ದರು ಸರಿಯೇ ಅದನ್ನು ಮಾಡಬೇಕು ಎಂಬ ಹಂಬಲತೆಯನ್ನು ತೋರುತ್ತಿದ್ದಾರೆ ಅವಕಾಶಕ್ಕಾಗಿ ಎಲ್ಲೆಡೆ ಅಲೆಯುತ್ತಿದ್ದಾರೆ. ಈ ಸಮಯದಲ್ಲಿ ತರುಣ್ ಅವರ ಆಫೀಸ್ ನಿಂದ ರಕ್ಷಕ್ ಅವರಿಗೆ ಒಂದು ಕರೆ ಬರುತ್ತದೆ ಒಂದೊಳ್ಳೆ ಸಿನಿಮಾದಲ್ಲಿ ನಟನೆ ಮಾಡುವಂತಹ ಅವಕಾಶವಿದೆ ನಟನೆ ಮಾಡುವುದಕ್ಕೆ ನಿನಗೆ ಆಸಕ್ತಿ ಇದೆಯಾ ಅಂತ ಕೇಳುತ್ತಾರೆ. ಈ ವಿಚಾರ ಕೇಳುತ್ತಿದ್ದ ಹಾಗೆ ಖುಷಿಗೊಂಡ ರಕ್ಷಕ್ ಹೌದು ನಾನು ಅಭಿನಯಿಸುತ್ತೇನೆ ಎಂದು ಹೇಳುತ್ತಾರೆ ತದನಂತರ ಆಫೀಸ್ ಗೆ ಬರುವುದಕ್ಕೆ ಹೇಳುತ್ತಾರಂತೆ.

ಈ ಸಮಯದಲ್ಲಿ ಶರಣ್ ಕೂಡ ಅಲ್ಲೇ ಇರುತರಂತೆ ಗುರು ಶಿಷ್ಯರು ಎಂಬ ಹೊಸ ಸಿನಿಮಾವನ್ನು ತೆಗೆಯುತ್ತಿದ್ದೇವೆ ಇದೊಂದು ಕ್ರೀಡೆಗೆ ಸಂಬಂಧಪಟ್ಟಂತಹ ಸಿನಿಮವಾಗಿದೆ ಈ ಸಿನಿಮಾದಲ್ಲಿ ನೀನು ಬಾಷಾ ಎಂಬ ಪಾತ್ರವನ್ನು ಮಾಡಬೇಕಾಗುತ್ತದೆ ಎಂದು ಕಥೆಯನ್ನು ಹೇಳುತ್ತಾರಂತೆ ಕಥೆಯನ್ನು ಕೇಳುತ್ತಿದ್ದ ಹಾಗೆ ರಕ್ಷಕ್ ತುಂಬಾನೇ ಇಷ್ಟ ಪಡುತ್ತಾರಂತೆ. ಈ ಸಿನಿಮಾದಲ್ಲಿ ನಾನು ಹೇಗಾದರೂ ಆಕ್ಟ್ ಮಾಡಬೇಕು ಎಂಬ ಛಲ ಪಡೆಯುತ್ತಾರಂತೆ ತದನಂತರ ಈ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡು ಅದ್ಭುತವಾಗಿ ನಟಿಸಿದ್ದಾರೆ.

ಇನ್ನು ಗುರು ಶಿಷ್ಯರು ಸಿನಿಮಾದಲ್ಲಿ 12 ಜನ ಹುಡುಗರಿದ್ದಾರೆ ಈ 12 ಜನರಲ್ಲಿ ಆರು ಜನರು ಸೆಲಬ್ರೆಟಿಗಳ ಮಕ್ಕಳೇ ಆಗಿದ್ದಾರೆ ಇನ್ನುಳಿದ ಆರು ಜನ ಸಾಮಾನ್ಯರಾಗಿದ್ದಾರೆ. ಮೊದಮೊದಲು ಈ ಸಿನಿಮಾಗೆ ಸಾರ್ವಜನಿಕರಿಗೆ ಅವಕಾಶ ನೀಡಬೇಕು ಎಂದು ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಈ ಸಮಯದಲ್ಲಿ ಸುಮಾರು 1500 ಅರ್ಜಿಗಳು ಬಂದಿದ್ದವಂತೆ ಅದರಲ್ಲಿ 600 ಜನರನ್ನು ಆಯ್ಕೆ ಮಾಡಿಕೊಂಡು ಶಾರ್ಟ್ ಲಿಸ್ಟ್ ತಯಾರಿಸುತ್ತಾರಂತೆ ತದನಂತರ ಶರಣ್ ಹಾಗೂ ತರುಣ್ ಇಬ್ಬರು ಯೋಚನೆ ಮಾಡಿ. ನಟನೆಯಲ್ಲಿ ಆಸಕ್ತಿ ಇರುವಂತಹ ಆಯ್ಕೆ ಮಾಡಿಕೊಂಡರೆ ಅವರಿಗೂ ಕೂಡ ಭವಿಷ್ಯದಲ್ಲಿ ಉಪಯೋಗ ಬರುತ್ತದೆ ಎಂದು ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅರಿಗೆ ಚಾನ್ಸ್ ಕೊಟ್ಟರಂತೆ ಈ ವಿಚಾರವನ್ನು ರಕ್ಷಕ್ ಹೇಳಿಕೊಂಡು ಸಂತಸವನ್ನು ವ್ಯಕ್ತಪಡಿಸಿದ್ದಾರೆ.