Home Entertainment ಯಶ್ ಪ್ರಾಣ ಸ್ನೇಹಿತ ಆಗಿದ್ರೂ ಕೂಡ ನಟ ಜೈದೇವ್ ಯಶ್ ಇಂದ ದೂರ ಉಳಿದಿದ್ದಾರೆ ಯಾಕೆ ಗೊತ್ತ.? ಸಂದರ್ಶನದಲ್ಲಿ ಯಾರಿಗೂ ತಿಳಿಯದ ನೋವಿನ ಕಥೆ ಹೇಳಿಕೊಂಡ ಜೈದೇವ್

ಯಶ್ ಪ್ರಾಣ ಸ್ನೇಹಿತ ಆಗಿದ್ರೂ ಕೂಡ ನಟ ಜೈದೇವ್ ಯಶ್ ಇಂದ ದೂರ ಉಳಿದಿದ್ದಾರೆ ಯಾಕೆ ಗೊತ್ತ.? ಸಂದರ್ಶನದಲ್ಲಿ ಯಾರಿಗೂ ತಿಳಿಯದ ನೋವಿನ ಕಥೆ ಹೇಳಿಕೊಂಡ ಜೈದೇವ್

0
ಯಶ್ ಪ್ರಾಣ ಸ್ನೇಹಿತ ಆಗಿದ್ರೂ ಕೂಡ ನಟ ಜೈದೇವ್ ಯಶ್ ಇಂದ ದೂರ ಉಳಿದಿದ್ದಾರೆ ಯಾಕೆ ಗೊತ್ತ.? ಸಂದರ್ಶನದಲ್ಲಿ ಯಾರಿಗೂ ತಿಳಿಯದ ನೋವಿನ ಕಥೆ ಹೇಳಿಕೊಂಡ ಜೈದೇವ್

ಯಶ್ ಜೈದೇವ್ ಮೋಹನ್ ಸ್ನೇಹ

ಯಶ್ ಒಬ್ಬ ಮಹಾನ್ ಸಾಧಕ ಕಂಡ ಕನಸನ್ನು ಸಾಕಾರ ಗೊಳಿಸಿಕೊಂಡು ಈಗ ಇಡೀ ಕರ್ನಾಟಕ ಮಾತ್ರವಲ್ಲದೇ ಇಡೀ ಇಂಡಿಯಾ ಪೂರ್ತಿ ರಾಕಿಂಗ್ ಸ್ಟಾರ್, ರಾಕಿ ಬಾಯ್ ಎಂದು ಕರೆಸಿಕೊಳ್ಳುತ್ತಿರುವ ಸಾಧಕ. ಈ ಹಂತಕ್ಕೆ ಬೆಳೆಯಲು ಯಶ್ ಸವಿಸಿರುವ ಹಾದಿ ಹೂವಿನದ್ದಲ್ಲ, ಕಲ್ಲು ಮುಳ್ಳಿನ ಕಷ್ಟನಷ್ಟದ ಹಾದಿಯಲ್ಲಿ ತುಳಿದು ಸಾಮಾನ್ಯನಾಗಿದ್ದ ಈತ ಇಂದು ಅಸಾಮಾನ್ಯ ಪ್ರತಿಭಾವಂತನಾಗಿ ತಲೆಯೆತ್ತಿರುವುದು.

ಆತನ ಕಥೆಯನ್ನೇ ಒಂದು ಸೂಪರ್ ಹಿಟ್ ಸಿನಿಮಾ ಮಾಡಬಹುದು ಈ ರೀತಿ ಆದರ್ಶ ಪೂರ್ವಕವಾಗಿ ಬೆಳೆದಿದ್ದಾರೆ ಯಶ್. ಯುತ್ ಐಕಾನ್ ಆಗಿ ಬೆಳೆಯುತ್ತಿರುವ ಯಶ್ ಅವರು ಸಾಮಾಜಿಕ ಕಳಕಳಿ ಕೂಡ ಹೊಂದಿದ್ದು ಸಮಾಜ ಮುಖಿ ಕೆಲಸಗಳಲ್ಲೂ ತೊಡಕಿಕೊಂಡಿದ್ದಾರೆ. ಈಗ ಯಶ್ ಬಗ್ಗೆ ಆಪ್ತ ಸ್ನೇಹಿತನಾದ ಚೈತನ್ ಮೋಹನ್ ಅವರು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಅದೇನೆಂದರೆ ಜೈದೇವ್ ಮೋಹನ್ ಪ್ರತಿಭಾವಂತ ಆದರೆ ಸಿನಿಮಾಗಳನ್ನು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಯಾಕೆ? ಯಶ್ ಅವರಿಗೆ ಆಪ್ತ ಸ್ನೇಹಿತ ಆಗಿರುವುದರಿಂದ ಯಶ್ ಕಡೆಯಿಂದ ಬೆಂಬಲ ಸಿಗುತ್ತಿಲ್ಲವಾ ನಿಮ್ಮ ಪ್ರಶ್ನೆಗಳಿಗೆ ಈತನ ಮಾತುಗಳು ಈ ರೀತಿ ಇದ್ದವು. ನನ್ನ ಮತ್ತು ಯಶ್ ಸಂಬಂಧ ಹದಿಮೂರು ಹದಿನಾಲ್ಕು ವರ್ಷದ ಹಿಂದಿನದು.

ಆ ದಿನಗಳಲ್ಲಿ ಬಹಳ ಆತ್ಮೀಯರಾಗಿದ್ದೆವು. ಆನಂತರ ತಿಪ್ ರೈಟಿಂಗ್ ಡೈರೆಕ್ಷನ್ ಎಂದು ಈ ರೀತಿಯೆಲ್ಲ ಹುಚ್ಚು ಇಟ್ಟುಕೊಂಡು ಇಡೀ ಪ್ರಪಂಚದ ಸಂಬಂಧವೇ ಕಳೆದುಕೊಂಡು ನಾನಾಯಿತು ನನ್ನ ಕೆಲಸ ಆಯ್ತು ಎಂದು ಕೆಲ ಕಾಲ ಕಣ್ಮರೆಯಾದೆ ನಾನು. ಯಶ್ ಸಹಾ ಒಂದೇ ಒಂದು ನಿಖರ ಗುರಿ ಇಟ್ಟುಕೊಂಡು ಈ ರೀತಿ ಬೆಳೆದಿದ್ದಾನೆ. ಅವನ ಸಕ್ಸಸ್ ನೋಡುತ್ತಿದ್ದರೆ ಹಳೆಯನ್ನಾಗಿ ಬಹಳ ಹೆಮ್ಮೆ ಇದೆ.

ಆದರೆ ಈಗ ನಾವು ಅದೇ ರೀತಿ ಇರಲು ಸಾಧ್ಯವಿಲ್ಲ. 13 14 ವರ್ಷದಿಂದ ಅವನ ಸರ್ಕಲ್ ಇನ್ನಷ್ಟು ಬೆಳೆದಿದೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕೂಡ ನನ್ನನ್ನು ಆಹ್ವಾನಿಸಲಾಗಿತ್ತು ಆ ಸಮಯದಲ್ಲಿ ಯಶ್ ಹೇಳಿದ್ದನು ಆತ ಸಿಕ್ಕ ಸಿಕ್ಕ ಚಾನ್ಸಲಾ ಒಪ್ಪಿಕೊಂಡಿದ್ದರೆ ಇಂದು ಬಹಳ ಬ್ಯುಸಿ ಇರುತ್ತಿದ್ದ ಆದರೆ ಆತನಿಗೆ ಅವನ ಪಾತ್ರದ ಮೇಲೆ ಹಾಗೂ ಕಂಟೆಂಟ್ ಮೇಲೆ ಬಹಳ ನಿರೀಕ್ಷೆ ಇದೆ.

ಹಾಗಾಗಿ ಇವತ್ತಲ್ಲ ನಾಳೆ ಅವನು ನಿಧಾನವಾಗಿ ಹೆಸರು ಮಾಡೇ ಮಾಡುತ್ತಾನೆ ಎನ್ನುವ ಮಾತುಗಳು ಅವನ ಬಾಯಿಂದಲೇ ಬಂದಿದೆ ಅಷ್ಟೊಂದು ದೊಡ್ಡ ವೇದಿಕೆ ಮೇಲೆ ಆ ರೀತಿ ಮಾತನಾಡಿದ್ದಾನೆಂದರೆ ಅವನ ಮನಸ್ಸಿನಲ್ಲೂ ಕೂಡ ನನ್ನ ಬಗ್ಗೆ ಒಂದು ಐಡಿಯಾ ಇದೆ ಎಂದರ್ಥ ಅವನು ಸಣ್ಣಪುಟ್ಟ ಪಾತ್ರ ಕೊಡಿಸುವುದು ಬೇಡ ಎಂದು ಕೊಂಡಿರಬಹುದು ಅಥವಾ ಇಂಥದ್ದೇ ಒಂದು ಪಾತ್ರ ಬಂದಾಗ ನನಗೆ ಕೊಡಬೇಕು ಎಂದು ಇನ್ನೂ ದೊಡ್ಡದಾಗಿ ಯೋಚನೆ ಮಾಡಿರಬಹುದು.

ನನಗೆ ಸಹಾಯ ಬೇಕು ಎಂದು ಎಂದಿಗೂ ನಿರೀಕ್ಷಿಸಲ್ಲ. ಆತನ ಬಳಿ ಕೇಳಿಯೂ ಇಲ್ಲ ಹೀಗಾಗಿ ಅವನಿಂದ ಅಪೇಕ್ಷಿಸುವುದು ಸರಿಯಲ್ಲ ಅದಲ್ಲದೆ ನನ್ನ ಸಿನಿಮಾ ರಿಲೀಸ್ ಆದಾಗ ನೋಡಿ ಅಪ್ರಿಷಿಯೇಟ್ ಮಾಡಿದ್ದಾನೆ. ಗಜಕೇಸರಿ ಶೂಟಿಂಗ್ ಅಲ್ಲಿ ಬ್ಯುಸಿ ಆಗಿದ್ದರು ದಂಡುಪಾಳ್ಯ ರಿಲೀಸ್ ಆದ ತಕ್ಷಣ ಸಿನಿಮಾ ನೋಡಿ ಕರೆ ಮಾಡಿ ನನಗೆ ವಿಶ್ ಮಾಡಿದ್ದ ಎಷ್ಟು ಸಾಕು.

ಇಂದು ನಮಗೆಲ್ಲ ಯಶ್ ಒಬ್ಬನೇ ಆದರೆ ಎಷ್ಟೇ ನಮ್ಮ ರೀತಿ ಸಾಕಷ್ಟು ಮಂದಿ ಇದ್ದಾರೆ ಇನ್ನೂ ನೆನಪಿಟ್ಟುಕೊಂಡು ಗುರುತಿಸಿ ಪ್ರೀತಿಯಿಂದ ಮಾತನಾಡಿಸುತ್ತಾನೆ ಎಂದರೆ ಅದೇ ತುಂಬಾ ದೊಡ್ಡದು. ಅವನು ಇನ್ನಷ್ಟು ಬೆಳೆಯಬೇಕು ಎಂದ ಮನ ಪೂರ್ತಿಯಾಗಿ ಹರಸಿದ್ದಾರೆ ಜಯದೇವ್ ಮೋಹನ್ ಅವರು.

LEAVE A REPLY

Please enter your comment!
Please enter your name here