ನಿಮ್ಮೆಲ್ಲರಿಗೂ ತಿಳಿದಿರುವಂತೆ ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮವನ್ನು ಪುನೀತಪರ್ವ ಎಂಬ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಈ ಕಾರಣಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಮತ್ತು ಬೃಹದಾಕಾರದ ಸೆಟ್ ಅನ್ನು ಹಾಕಿ ಈ ಒಂದು ಕಾರ್ಯಕ್ರಮಕ್ಕೆ ತೆಲಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಸಿನಿ ರಂಗದವರನ್ನು ಆಹ್ವಾನ ನೀಡಲಾಗಿತ್ತು. ಈ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಸೆಲೆಬ್ರಿಟಿಗಳು ಆಗಮಿಸಿದರು ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ಕೂಡ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಹ ಅವಕಾಶವನ್ನು ಕಲ್ಪಿಸಲಾಗಿತ್ತು.
ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339
ಇನ್ನು ಚಿತ್ರರಂಗಕ್ಕೆ ಸಂಬಂಧಪಟ್ಟ ಹಾಗೆ ಎಲ್ಲಾ ನಟ ನಟಿಯರು ಕೂಡ ಪಾಲ್ಗೊಂಡಿದ್ದರು. ಪುನೀತಪರ್ವ ಕಾರ್ಯಕ್ರಮಕ್ಕೆ ಎಲ್ಲರೂ ಕೂಡ ಹಾಜರಾಗಬೇಕು ಎಂಬ ಮನೋ ದೃಷ್ಟಿಯಿಂದ ಡಾಕ್ಟರ್ ರಾಜಕುಮಾರ್ ಕುಟುಂಬದವರು ಪ್ರತಿಯೊಬ್ಬರ ಮನೆಗೂ ತೆರಳಿ ಪುನೀತಪರ್ವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನೀಡಿ ಅಪ್ಪು ಅವರ ಚಿಕ್ಕ ಪ್ರತಿಮೆಯ ಪುತ್ತಳಿಯನ್ನು ಉಡುಗೊರೆಯಾಗಿ ನೀಡಿ ಬಂದಿದ್ದರು. ಹಾಗಾಗಿ ಸ್ಯಾಂಡಲ್ ವುಡ್ ನಾ ಎಲ್ಲಾ ನಟ ನಟಿಯರು ಈ ಒಂದು ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ ಎಂದು ಬಹಳಷ್ಟು ಜನ ನಿರೀಕ್ಷೆ ಇಟ್ಟುಕೊಂಡಿದ್ದರು.
ಅದರಲ್ಲಿಯೂ ಕೂಡ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಈ ಒಂದು ಕಾರ್ಯಕ್ರಮಕ್ಕೆ ದರ್ಶನ್ ಮತ್ತು ಸುದೀಪ್ ಬರುತ್ತಾರೆ ಪುನೀತ ಪರ್ವ ಕಾರ್ಯಕ್ರಮದಲ್ಲಾದರೂ ಕೂಡ ಇವರಿಬ್ಬರು ಒಂದಾಗುತ್ತಾರೆ ಎಂದು ಅಂದುಕೊಂಡಿದ್ದರು. ಆದರೆ ಅಭಿಮಾನಿಗಳ ಆಸೆ ಇದೀಗ ನಿರಾಸೆಯಾಗಿದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ವರ್ಷಗಳಿಂದ ದರ್ಶನ್ ಅವರು ಪಾಲ್ಗೊಳ್ಳುವಂತಹ ಕಾರ್ಯಕ್ರಮದಲ್ಲಿ ಸುದೀಪ್ ಅವರು ಪಾಲ್ಗೊಳ್ಳುವುದಿಲ್ಲ. ಹಾಗೂ ಸುದೀಪ್ ಅವರು ಇರುವಂತಹ ಕಾರ್ಯಕ್ರಮಕ್ಕೆ ದರ್ಶನ್ ಅವರು ಹೋಗುವುದಿಲ್ಲ ಈ ಒಂದು ಇರಿಸುವ ಮುರಿಸುವ ಕಳೆದ ಕೆಲವು ದಿನಗಳಿಂದ ನಡೆಯುತ್ತಲೇ ಬಂದಿದೆ.
ಇದರಿಂದ ಚಿತ್ರರಂಗದಲ್ಲಿ ಇರುವಂತಹ ಕೆಲವು ವ್ಯಕ್ತಿಗಳಿಗೆ ತೀವ್ರ ಮುಜುಗರ ಉಂಟಾಗುವುದಂತು ಸತ್ಯ ಏಕೆಂದರೆ ಒಬ್ಬರನ್ನು ಕರೆದರೆ ಮತ್ತೊಬ್ಬರಿಗೆ ನಿಷ್ಟುರ ಎಂಬ ಮನೋಭಾವನೆಯನ್ನು ತಲೆಯಲ್ಲಿ ಇಟ್ಟುಕೊಂಡಿದ್ದರು. ಹಾಗಾಗಿ ಹೇಗಾದರೂ ಮಾಡಿ ಈ ಇಬ್ಬರು ನಟರನ್ನು ಒಂದು ಮಾಡಬೇಕು ಅಂತ ಚಿತ್ರರಂಗದಲ್ಲಿ ಇರುವಂತಹ ಸಾಕಷ್ಟು ಜನರು ಪ್ರಯತ್ನ ಪಟ್ಟಿದ್ದಾರೆ. ಆದರೆ ಈ ಪ್ರಯತ್ನ ಇಂದಿನವರೆಗೂ ಕೂಡ ಫಲಿಸಲೇ ಇಲ್ಲ ಹಾಗಾಗಿ ಅಭಿಮಾನಿಗಳು ಮತ್ತು ಚಿತ್ರರಂಗದವರು ಪುನೀತ ಪರ್ವ ಕಾರ್ಯಕ್ರಮದಲ್ಲಾದರೂ ದರ್ಶನ್ ಮತ್ತು ಸುದೀಪ್ ಒಂದಾಗುತ್ತಾರೆ ಎಂದು ತುಂಬಾನೇ ನಿರೀಕ್ಷೆ ಇಟ್ಟುಕೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಇವರಿಬ್ಬರು ಹಾಜರಾಗುತ್ತಾರೆ ಅಪ್ಪು ಅವರ ಕಾರಣದಿಂದಲಾದರೂ ಕೂಡ ಇವರಿಬ್ಬರು ತಮ್ಮ ಮನಸ್ಸಿನಲ್ಲಿ ಇದ್ದಂತಹ ವೈಮನಸ್ಸನ್ನು ಬಿಟ್ಟು ಮೊದಲಿನಂತಾಗುತ್ತಾರೆ ಎಂದು ಅಂದುಕೊಂಡಿದ್ದರು. ಇಂದು ಇರುವ ಮನುಷ್ಯ ನಾಳೆ ಇರುವುದಿಲ್ಲ ಹಾಗಾಗಿ ಈ ದ್ವೇಷ ಸಾಧಿಸುವ ಗುಣ ಹಗೆತನ ಯಾಕೆ ಎಲ್ಲಿಯವರೆಗೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಪುನೀತ ಪರ್ವ ಕಾರ್ಯಕ್ರಮವನ್ನು ಆಯೋಜಿಸಿದಂತಹ ವ್ಯಕ್ತಿಗಳು ಕೂಡ ಈ ಕಾರ್ಯಕ್ರಮಕ್ಕೆ ದರ್ಶನ್ ಮತ್ತು ಸುದೀಪ್ ಆಗಮಿಸುತ್ತಾರೆ. ಪುನೀತ ಪರ್ವ ವೇದಿಕೆಯ ಮೇಲೆ ಇವರಿಬ್ಬರನ್ನು ಒಂದು ಮಾಡಬೇಕು ಎಂಬ ಯೋಜನೆಯನ್ನು ಮಾಡಿಕೊಂಡಿದ್ದರು.
ಆದರೆ ದರ್ಶನ್ ಸುದೀಪ್ ಇಬ್ಬರೂ ಕೂಡ ಈ ಕಾರ್ಯಕ್ರಮಕ್ಕೆ ಬರಲೇ ಇಲ್ಲ ಇದು ನಿಜಕ್ಕೂ ಕೂಡ ತೀವ್ರ ಬೇಸರವನ್ನು ಉಂಟುಮಾಡಿದೆ ಇವರಿಬ್ಬರ ಸಮ್ಮಿಲನಕ್ಕೆ ಇಡೀ ಚಿತ್ರರಂಗವೇ ಹಾಗೂ ಇಡೀ ಕರುನಾಡ ಜನತೆಗೆ ಕಾದು ಕುಳಿತಿದ್ದರು. ಆದರೆ ಅಭಿಮಾನಿಗಳಿಗೆ ಮತ್ತೊಮ್ಮೆ ಈ ಇಬ್ಬರು ನಟರು ಕೂಡ ಮೋಸ ಮಾಡಿದ್ದರೆ ಹೌದು ದರ್ಶನ್ ಅವರು ಕೆಲವು ಕಾರಣಾಂತರಗಳಿಂದ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಇನ್ನು ಸುದೀಪ ಅವರು ತಮ್ಮ ಪತ್ನಿಯ ಜೊತೆ ಆಸ್ಟ್ರೇಲಿಯ ಪ್ರವಾಸ ತೆರಳಿದ್ದಾರೆ ಹಾಗಾಗಿ ಇವರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿಲ್ಲ.
ಈ ಕಾರಣಗಳು ಮೇಲ್ನೋಟಕ್ಕೆ ಚೆನ್ನಾಗಿಯೇ ಕಂಡರೂ ಕೂಡ ಒಳ ಅರ್ಥ ಇವರಿಬ್ಬರೂ ಕೂಡ ಒಬ್ಬರನ್ನು ಒಬ್ಬರು ಭೇಟಿಯಾಗುವುದು ಇಷ್ಟ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ. ಹಾಗಾಗಿ ಸಾಕಷ್ಟು ಅಭಿಮಾನಿಗಳು ಇನ್ನು ಮುಂದೆ ನಾವು ಯಾವುದೇ ಕಾರಣಕ್ಕೂ ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ನಾವು ಇಟ್ಟುಕೊಂಡ ನಿರೀಕ್ಷೆ ಇಒ ದಿನ ಹುಸಿಯಾಗಿದೆ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.