ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಖಡಕ್ ಪೊಲೀಸ್ ಪಾತ್ರಕ್ಕೂ ಸೈ, ರೈತನ ಪಾತ್ರಕ್ಕೂ ಜೈ. ಆರಡಿ ಹೈಟು ಕಟ್ಟು ಮಸ್ತಾದ ದೇಹ ಅದಕ್ಕೆ ತಕ್ಕನಾದ ಧ್ವನಿ ಮತ್ತು ಆಟಿಟ್ಯೂಡ್. ಇಂತಹ ಒಂದು ವಿಶೇಷ ಹಾಗೂ ಅಪರೂಪದ ಬಾಡಿ ಹೊಂದಿದ್ದ ಕಾರಣವೇ ಅವರಿಗೆ ಕುರುಕ್ಷೇತ್ರದ ದುರ್ಯೋಧನನ ಪಾತ್ರ ಮತ್ತು ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡುವಂತಹ ಭಾಗ್ಯ ದೊರಕಿತು.
ದರ್ಶನ್ ಅವರ ಕ್ರಾಂತಿ (Kranthi) ಸಿನಿಮಾದಲ್ಲಿ ಅವರ ಸಿಕ್ಸ್ ಪ್ಯಾಕ್ ಅನ್ನು ಓಪನ್ ಶರ್ಟ್ ಅಲ್ಲಿ ತೋರಿಸಲಾಗಿದೆ ಇದೇ ರೀತಿ ಹಿಂದೆ ಐರಾವತ ಸಿನಿಮಾದಲ್ಲಿ ಕೂಡ ತೋರಿಸಲಾಗಿತ್ತು. ಆಗ ಎಲ್ಲರೂ ಅದನ್ನು ಗ್ರಾಫಿಕ್ ಎಂದು ಅನುಮಾನಿಸಿದ್ದರು, ಈಗ ಆ ಪ್ರಶ್ನೆಗೆ ಡಿ ಬಾಸ್ ನೇರವಾಗಿ ಉತ್ತರಿಸಿ ಆಡಿಕೊಳ್ಳುವವರ ಬಾಯಿ ಮುಚ್ಚಿಸಿದ್ದಾರೆ. ಫ್ರಾಂಕ್ ಕಾಲ್ ಮಾಡುತ್ತಾ ಎಲ್ಲರನ್ನೂ ನಗಿಸುವ ಕಲರ್ ಕಾಗೆ ಆರ್ ಜೆ ಸುನಿಲ್ (R.J Suneel) ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಸಂದರ್ಶನ ನೀಡಿದ ದರ್ಶನ್ ಅವರು ಈ ಕುರಿತು ಮಾತನಾಡಿದ್ದಾರೆ.
ಸುನಿಲ್ ಅವರು ಜಿಮ್ ಬಗ್ಗೆ ಪ್ರಶ್ನಿಸಿ ಈಗಿನ ಕಾಲದಲ್ಲಿ ಎಲ್ಲರೂ ಬಾಡಿ ಬಿಲ್ಡ್ ಮಾಡಲು ಆಸೆ ಪಡುತ್ತಾರೆ ಆದರೆ ಹೆಚ್ಚು ವರ್ಕೌಟ್ ಮಾಡುವುದರಿಂದ ಸಮಸ್ಯೆ ಆಗುತ್ತದೆ ಎಂದು ಆ ಬಗ್ಗೆ ಭಯ ಬೀಳುತ್ತಾರೆ. ಇದರ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ ಎಂದು ಪ್ರಶ್ನೆ ಕೇಳಿದಾಗ ದರ್ಶನ್ ಅವರ ಹಿಂದಿನ ಘಟನೆಯನ್ನು ವಿವರಿಸಿ ಅದಕ್ಕೆ ಉತ್ತರ ನೀಡಿದ್ದಾರೆ ನಾನು ಕ್ರಾಂತಿ ಸಿನಿಮಾದಲ್ಲೂ ಕೂಡ ಸಿಕ್ಸ್ ಪ್ಯಾಕ್ ತೋರಿಸಿದ್ದೇನೆ.
ಅದಕ್ಕಾಗಿ ಲಾಕ್ಡೌನ್ ಇಂದ ಈ ತನಕ ಬರೋಬ್ಬರಿ 45 ರಿಂದ 48 ಕೆಜಿ ಇಳಿಸಿ ಕೊಂಡಿದ್ದೇನೆ, ಅದು ಪಾತ್ರದ ಕಾರಣ. ಆದರೆ ಇದನ್ನು ಕೆಲವರು ಸುಲಭವಾಗಿ ಗ್ರಾಫಿಕ್ಸ್ (Graphics) ಎಂದು ಹೇಳಿ ಬಿಡುತ್ತಾರೆ. ಹೌದು ಟೆಕ್ನಾಲಜಿ ಬೆಳದಿದೆ ಗ್ರಾಫಿಕ್ ಮೂಲಕ ಸಿಕ್ಸ್ ಏನು 8 ಪ್ಯಾಕ್ 10 ಪ್ಯಾಕ್ ಬೇಕಾದರೂ ತೋರಿಸಬಹುದು. ಆದರೆ ಸಿನಿಮಾದ ಪೋಸ್ಟರ್ ಹಾಗೂ ಟ್ರೈಲರ್ ಗಳಲ್ಲಿ ಜನರು ನೋಡಿರುತ್ತಾರೆ ಸಿನಿಮಾ ಆದ ಮೇಲೆ ಪ್ರಚಾರಕ್ಕೆ ಹೋದಾಗ ಜನ ನೇರವಾಗಿ ನೋಡುತ್ತಾರೆ.
ಆಗ ಅವರು ಫೇಕ್ ಎಂದು ಮಾತನಾಡಿ ಕೊಳ್ಳುವುದಿಲ್ಲವಾ? ಆ ಪಾತ್ರಕ್ಕೆ ತಕ್ಕ ಹಾಗೆ ಡೆಡಿಕೇಶನ್ ಬೇಕು ಹಾಗಾಗಿ ಆ ಸಮಯ ಬಂದಾಗ ಹಾಗೆ ತಯಾರಾಗುತ್ತೇನೆ. ಆ ಬಗ್ಗೆ ಭಯ ಏನೂ ಇಲ್ಲ. ಉಂಡುಕೊಂಡು ತಿಂದುಕೊಂಡು ಚೆನ್ನಾಗಿ ಇದ್ದವರೆ ಸಂಜೆ ವೇಳೆಗೆ ಹೋಗಿ ಬಿಟ್ಟಿರುತ್ತಾರೆ ಎಂದು ನಾವು ಕೇಳಿಲ್ವಾ? ಬೆಳಗ್ಗೆ ಚೆನ್ನಾಗಿ ಇರುತ್ತಾರೆ, ಮಧ್ಯಾಹ್ನದ ವೇಳೆಗೆ ಸ್ವಲ್ಪ ಹೆಚ್ಚು ಕಮ್ಮಿ, ಸಾಯಂಕಾಲ ಹೊರಟೆ ಹೋದ ಎಂದು ಸುದ್ದಿ ಬಂದಿರುತ್ತದೆ.
ಹಾಗಾಗಿ ದೇವರು ಎಲ್ಲರಿಗೂ ಒಂದು ಟೈಮ್ ಫಿಕ್ಸ್ ಮಾಡಿರುತ್ತಾರೆ ಅಲ್ಲಿಯವರೆಗೂ ಏನು ಆಗುವುದಿಲ್ಲ ಅದನ್ನು ಮೈಂಡಲ್ಲಿ ಇಟ್ಟುಕೊಂಡು ಅಲ್ಲಿಯವರೆಗೂ. ನಾವು ಆರಾಮಾಗಿ ಇರಬೇಕು. ಸುಮ್ಮನೆ ಎಲ್ಲಾದಕ್ಕೂ ಟೆನ್ಶನ್ ಮಾಡಿಕೊಳ್ಳಬಾರದು ಕುಡುಕರು ಕೂಡ ಎಷ್ಟೋ ವರ್ಷಗಳ ಕಾಲ ಆರೋಗ್ಯವಾಗಿ ಬದುಕಿರೋ ಉದಾಹರಣೆ ಇಲ್ಲವೇ ಎಂದು ದರ್ಶನ್ ಮರು ಪ್ರಶ್ನಿಸಿದ್ದಾರೆ.
ದರ್ಶನ್ ಅವರು ಮೊದಲೇ ನಾನ್ ವೆಜ್ ಪ್ರಿಯರು ಹಾಗೂ ಅವರಿಗೆ ಸ್ವಲ್ಪ ಮಧ್ಯದ ಚಟವೂ ಇದೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿ ಎಂದು ಸಹ ದರ್ಶನ್ ಅವೆರಡನ್ನು ಬಿಟ್ಟು ಇರಲಾರರು. ಆದರೆ ಸಿನಿಮಾ ಎಂದು ಬಂದಾಗ ಆ ಪಾತ್ರಕ್ಕೆ ಅವಶ್ಯಕತೆ ಇರುವಾಗ ಅದಕ್ಕೆ ತಕ್ಕ ಹಾಗೆ ವರ್ಕ್ ಔಟ್ ಮಾಡಿ ದೇಹವನ್ನು ದಂಡಿಸಿಕೊಳ್ಳುವ ಕಲೆಯನ್ನು ಕೂಡ ಕರಗತ ಮಾಡಿಕೊಂಡಿದ್ದಾರೆ ಈ ಚಾಲೆಂಜಿಂಗ್ ಸ್ಟಾರ್. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.