ಅಭಿಮಾನಿಗಳಿಗೋಸ್ಕರ ಎದೆಯ ಮೇಲೆ “ನನ್ನ ಸೆಲೆಬ್ರಿಟಿಸ್” ಎಂದು ಟ್ಯಾಟೋ ಹಾಕಿಸಿಕೊಂಡ ದರ್ಶನ್. ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದಾ ಕಾಲ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಎಂಬ ಹೆಸರಿನಿಂದ ಕರೆಯುವುದನ್ನು ನೀವು ನೋಡೇ ಇರುತ್ತೀರ. ಇನ್ನು ಡಿ ಬಾಸ್ ತಮ್ಮ ಕುಟುಂಬದವರಿಗಿಂತಲೂ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಹೆಚ್ಚು ಪ್ರೀತಿಸುತ್ತಾರೆ ಎಂಬ ವಿಚಾರ ನಿಮಗೆ ತಿಳಿದೇ ಇದೆ. ಈ ವಿಚಾರವನ್ನು ಸಾಕಷ್ಟು ಬಾರಿ ದರ್ಶನ್ ಅವರು ಕೂಡ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ನನಗೆ ನನ್ನ ಸೆಲೆಬ್ರಿಟಿಗಳೆ ಮುಖ್ಯ ಕುಟುಂಬ ಎರಡನೆಯ ಆಯ್ಕೆ ಅಂತ ಹೇಳಿದ್ದಾರೆ ಈ ಕಾರಣಕ್ಕಾಗಿಯೇ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇರುವುದು.

ನಟ ದರ್ಶನ್ ಅವರ ಸಂಕಷ್ಟದ ಕಾಲದಲ್ಲಿ ಅವರ ಕೈ ಹಿಡಿದಿರುವುದು ಕೂಡ ಈ ಸೆಲೆಬ್ರೇಟಿಗಳೆ ಈ ಕಾರಣಕ್ಕಾಗಿ ದರ್ಶನ್ ಅವರು ತಮ್ಮ ಅಭಿಮಾನಿಗಳಿಗಾಗಿ ಒಂದು ಸರ್ಪ್ರೈಸ್ ಅನ್ನು ಕೊಟ್ಟಿದ್ದಾರೆ. ಹೌದು ಇಂದು ದರ್ಶನ್ ಅವರು ತಮ್ಮ ಎದೆಯ ಮೇಲೆ ನನ್ನ ಪ್ರೀತಿಯ ಸೆಲೆಬ್ರಿಟಿ ಎಂದು ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಸ್ವತಃ ದರ್ಶನ್ ಅವರೇ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ವಿಡಿಯೋ ನೋಡುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಹರ್ಷವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ದರ್ಶನ್ ಮೇಲೆ ಇನ್ನಷ್ಟು ಹೆಚ್ಚಿನ ಗೌರವ ಹಾಗೂ ಪ್ರೀತಿಯನ್ನು ತೋರಿಸಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ಅಭಿಮಾನಿಗಳು ಎಲ್ಲಾ ನಟ ನಟಿಯರ ಹೆಸರನ್ನು ಹಾಗೂ ಅವರ ಭಾವಚಿತ್ರವನ್ನು ತಮ್ಮ ಕೈಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಆದರೆ ಇದೇ ಮೊದಲ ಬಾರಿಗೆ ಈ ಪ್ರಪಂಚದಲ್ಲಿ ಒಬ್ಬ ನಟ ತನ್ನ ಅಭಿಮಾನಿಗಳಿಗೋಸ್ಕರ ಹಚ್ಚೆ ಹಾಕಿಸಿಕೊಂಡಿರುವುದು.

ಈ ಕಾರಣದಿಂದಲೇ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ನಾವು ನೋಡಬಹುದಾಗಿದೆ. ದರ್ಶನ್ ಹಾಗೂ ಅಭಿಮಾನಿಗಳ ನಡುವೆ ಎಷ್ಟು ಅವಿನಾಭವನ ಸಂಬಂಧ ಇದೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ. ನಿಜಕ್ಕೂ ಇಲ್ಲಿ ನಾವು ದರ್ಶನ್ ಅವರನ್ನು ಮೆಚ್ಚಲೇಬೇಕು ಏಕೆಂದರೆ ತಮ್ಮ ಅಭಿಮಾನಿಗಳಿಗಾಗಿ ಇಂಥದ್ದೊಂದು ಸತ್ಕಾರ್ಯವನ್ನು ಮಾಡಿರುವುದಕ್ಕಾಗಿ. ದರ್ಶನ್ ಕಷ್ಟದ ಕಾಲದಲ್ಲಿ ಇರುವಾಗ ಇವರ ಕೈ ಹಿಡಿದಿದ್ದು ಅಭಿಮಾನಿಗಳು ಆ ಕಾರಣಕ್ಕಾಗಿ ಅವರ ಋಣ ತೀರಿಸುವುದಕ್ಕಾಗಿ ಈ ಪರಿಯಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ.

ಸಾರಥಿ ಸಿನಿಮಾ ಬಿಡುಗಡೆಯಾದಾಗ ದರ್ಶನ್ ಜೈ.ಲಿ.ನಲ್ಲಿದ್ದರು ಆಗಿದ್ದರು ಕೂಡ ಈ ಸಿನಿಮಾ ನೂರು ದಿನಗಳ ಕಾಲ ಪೂರೈಸಿತ್ತು ದರ್ಶನ್ ಅವರಿಗೆ ಸಾತ್ ಕೊಟ್ಟಿತು. ಇದಾದ ನಂತರ ಕ್ರಾಂತಿ ಸಿನಿಮಾ ಬಿಡುಗಡೆಯಾದ ಸಮಯದಲ್ಲಿಯೂ ಮೀಡಿಯಾ ಬ್ಯಾನ್ ಮಾಡಿತ್ತು ಹಾಗಾಗಿ ಈ ಸಿನಿಮಾ ಸೋಲುತ್ತದೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ದರ್ಶನ್ ಅಭಿಮಾನಿಗಳು ಮಾತ್ರ ಇವರನ್ನು ಕೈ ಬಿಡಲಿಲ್ಲ ಬಿಡುಗಡೆಯಾದ ಒಂದೇ ವಾರಕ್ಕೆ ಸುಮಾರು 110 ಕೋಟಿ ಕಲೆಕ್ಷನ್ ಮಾಡಿತು.

ಇದೆಲ್ಲವನ್ನು ನೋಡಿದಂತಹ ದರ್ಶನ್ ತನ್ನ ಪ್ರೀತಿಯ ಅಭಿಮಾನಿಗಳಿಗಾಗಿ ನಾನು ಇಷ್ಟಾದರೂ ಮಾಡಲೇಬೇಕು ಅವರ ಋಣವನ್ನು ನಾನು ಯಾವ ಪ್ರೀತಿ ತೀರಿಸಬೇಕು ತಿಳಿದಿಲ್ಲ ಹಾಗಾಗಿ ಇದೊಂದು ಪ್ರೀತಿಯ ಕಾಣಿಕೆಯ ಮೂಲಕ ನಾನು ಅವರ ಋಣ ತೀರಿಸುತ್ತೇನೆ ಅಂತ ಹೇಳಿ ದರ್ಶನ್ ತಮ್ಮ ಎದೆಯ ಮೇಲೆ ನನ್ನ ಸೆಲೆಬ್ರಿಟಿ ಅಂತ ಹಚ್ಚೆ ಹಾಕಿಸಿಕೊಂಡಿದ್ದಾರೆ. ಸದ್ಯಕ್ಕೆ ದರ್ಶನ್ ಅವರ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

Leave a Comment