ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಉಳಿದ ಎಲ್ಲಾ ಸ್ಟಾರ್ ಗಳಿಗಿಂತಲೂ ಹೆಚ್ಚಿಗೆ ಅಭಿಮಾನಿಗಳನ್ನು ಹೊಂದಿದ್ದಾರೆ. ದಚ್ಚು ಬಗ್ಗೆ ವಿವಾದಗಳು ಎಷ್ಟೇ ಇದ್ದರೂ ಕೂಡ ಅಭಿಮಾನಿಗಳು ಮಾತ್ರ ಕಿಂಚಿತ್ತು ಅವರ ಮೇಲಿರುವ ಪ್ರೀತಿಯನ್ನು ಕಡಿಮೆ ಮಾಡಿಕೊಂಡಿಲ್ಲ. ದರ್ಶನ್ ಅವರು ಸಹ ಅಭಿಮಾನಿಗಳನ್ನು ಹೆಚ್ಚು ನಂಬಿದ್ದು, ಅವರನ್ನೇ ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ.
ಸಿನಿಮಾ ವಿಚಾರವಾಗಿ ಹೇಳುವುದಾದರೆ ದರ್ಶನ್ ಅವರ ಯಾವ ಸಿನಿಮಾ ಕೂಡ ಈ ವರ್ಷ ಬಿಡುಗಡೆ ಆಗಿಲ್ಲ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ರಾಬರ್ಟ್ ಸಿನಿಮಾ ನಂತರ ದರ್ಶನ್ ಅವರ ಯಾವ ಸಿನಿಮಾಗಳ ಸುದ್ದಿಯೂ ಇಲ್ಲ. ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ಒಂದರಂದು ಬಿಡುಗಡೆ ಆಗುತ್ತದೆ ಎಂದು ಅನೌನ್ಸ್ ಆಗಿತ್ತು.
ಆದರೆ ಚಿತ್ರೀಕರಣದ ವಿಳಂಬವಾದ ಕಾರಣ ಆ ದಿನ ಮುಂದಕ್ಕೆ ಹೋಗಿದೆ. ಜನವರಿ 26, 2023 ರಂದು ಗಣರಾಜ್ಯೋತ್ಸವ ದಿನದ ಪ್ರಯುಕ್ತ ಸಾಮಾಜಿಕ ಸಂದೇಶ ಹೊಂದಿರುವ ಶಿಕ್ಷಣದ ವಿಷಯವಾಗಿ ಕ್ರಾಂತಿ ಮಾಡುವ ಸಿನಿಮಾ ಒಂದು ತೆರೆ ಕಾಣುತ್ತಿತ್ತು ದರ್ಶನ್ ಅಭಿಮಾನಿಗಳ ಪಾಲಿಗೆ ಆ ದಿನ ಹಬ್ಬವಾಗಲಿದೆ. ಈಗಾಗಲೇ ಸಾಲು ಸಾಲು ಸಾಕಷ್ಟು ಸಿನಿಮಾಗಳನ್ನು ನೀಡಿರುವ ದರ್ಶನ್ ಅವರು ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ.
ಇದೇ ಸಮಯದಲ್ಲಿ ಅವರ ಕ್ರಾಂತಿ ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು ಇವೆರಡರ ಪ್ರಯುಕ್ತವಾಗಿ ಬೆಂಗಳೂರು ಟೈಮ್ಸ್ ನಡೆಸಿದ ಇಂಟರ್ವ್ಯೂ ಅಲ್ಲಿ ಭಾಗಿಯಾಗಿದ್ದಾರೆ. ವಿಶೇಷವಾದ ಸಂದರ್ಶನ ಇದಾಗಿದ್ದು ಈ ಸಂದರ್ಶನದಲ್ಲಿ ದರ್ಶನ್ ಅವರ ವೃತ್ತಿ ಜೀವನದ ಕುರಿತು ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ. ಮೊದಲಿನಿಂದಲೂ ನೇರನುಡಿಗೆ ಹೆಸರಾಗಿರುವ ದರ್ಶನ್ ಅವರು ಕೂಡ ಅದೇ ರೀತಿ ನಿರೀಕ್ಷಿತ ಉತ್ತರಗಳನ್ನು ನೀಡಿದ್ದಾರೆ.
ದರ್ಶನ್ ಅವರಿಗೆ ಈ ಸಂದರ್ಶನದಲ್ಲಿ ಚಿತ್ರರಂಗಕ್ಕೆ ಬರಲು ಸ್ಪೂರ್ತಿ ಏನು, ಯಾವಾಗ ನಟ ಆಗಬೇಕು ಎಂದು ನಿರ್ಧಾರ ಮಾಡಿದಿರಿ, ಸಿನಿಮಾ ಕಥೆಗಳ ಆಯ್ಕೆ ಯಾವ ರೀತಿ ಮಾಡುತ್ತೀರಿ ಮತ್ತು ಅದರಿಂದ ಗೆದ್ದಾಗ ಆ ಸಕ್ಸಸ್ ಅನ್ನು ಹೇಗೆ ಹ್ಯಾಂಡಲ್ ಮಾಡುತ್ತೀರಿ ಇನ್ನು ಮುಂತಾದ ಅನೇಕ ಪ್ರಶ್ನೆಗಳನ್ನು ಕೇಳಿ ಕೊನೆಯಲ್ಲಿ ಚಿತ್ರರಂಗದಿಂದ ನಿವೃತ್ತಿ ಹೊಂದುವ ಯೋಚನೆ ಯಾವಾಗಲಾದರೂ ಮಾಡಿದ್ದೀರಾ ಎಂದು ಕೇಳಿದ್ದಾರೆ.
ಇದಕ್ಕೆಲ್ಲಕ್ಕೂ ಉತ್ತರಿಸಿದ ದರ್ಶನ್ ಅವರ ಉತ್ತರಗಳು ಈ ರೀತಿ ಇತ್ತು. ನಾನು ಮೊದಲಿಗೆ ಹೀರೋ ಆಗಬೇಕು ಎಂದು ಆಸೆ ಪಟ್ಟವನಲ್ಲ ಆದರೆ ನನ್ನ ತಂದೆ ನಿಧನವಾದ ದಿನ ನನ್ನ ಮನೆ ಮುಂದೆ ನೆರೆದಿದ್ದ ಜನಸಾಗರ ನೋಡಿ ನಾನು ಸತ್ತಾಗಲೂ ಕೂಡ ಇದೇ ರೀತಿ ಜನ ಸೇರಬೇಕು ಹಾಗಾಗಿ ನಾನು ಹೀರೋ ಆಗಬೇಕು ಎಂದು ನಿರ್ಧಾರ ಮಾಡಿದೆ.
ಅಂದಿನಿಂದ ಇಲ್ಲಿಯ ತನಕ ಅದಕ್ಕಾಗಿ ನಾನು ಪಟ್ಟ ಶ್ರಮ ಅಷ್ಟಿಷ್ಪಲ್ಲ. ಇದ್ಯಾವುದು ನನ್ನ ಅದೃಷ್ಟದಿಂದ ದೊರಕಿಲ್ಲ ಕಠಿಣ ಪರಿಶ್ರಮದಿಂದ ಮೆಜೆಸ್ಟಿಕ್ ಸಿನಿಮಾದಿಂದ ಇಲ್ಲಿಯ ತನಕ ನಾನು ಹೆಸರು ಮಾಡಿದ್ದೇನೆ. ಮತ್ತು ಸಿನಿಮಾ ರಂಗದಿಂದ ನಿವೃತ್ತಿ ಹೊಂದುವ ಮಾತೇ ಇಲ್ಲ ಇಲ್ಲಿಗೆ ಅಷ್ಟು ಸುಲಭವಾಗಿ ಬಂದಿಲ್ಲ ಹಾಗಾಗಿ ಇಷ್ಟು ಕಷ್ಟಪಟ್ಟು ಬೆಳೆದದ್ದನ್ನು ಬಿಟ್ಟು ಕೊಡುವ ಮಾತೇ ಇಲ್ಲ.
ನಾನು ಬಣ್ಣ ಹಚ್ಚಿ ನಟಿಸುತ್ತಿರುವಾಗಲೇ ನನ್ನ ಪ್ರಾಣ ಹೋಗಬೇಕು, ನಾನು ಇರುವ ಕೊನೆಯ ದಿನದವರೆಗೂ ಕೂಡ ಅಭಿನಯಿಸುತ್ತಲೇ ಇರಬೇಕು ಎನ್ನುವುದಷ್ಟೇ ನನ್ನ ಆಸೆ ಹಾಗಾಗಿ ನಾನು ಸಾಯುವ ತನಕ ನಿವೃತ್ತಿ ಹೊಂದುವುದೇ ಇಲ್ಲ ಎಂದು ಹೇಳಿದ್ದಾರೆ.