Friday, June 9, 2023
HomeEntertainmentದೀಪಿಕಾ ದಾಸ್ & ಶೈನ್ ಶೆಟ್ಟಿ ನಡುವಿನ ಸಂಬಂಧದ ಬಗ್ಗೆ ಮೊದಲ ಬಾರಿ ಪಬ್ಲಿಕ್ ನಲ್ಲಿಯೇ...

ದೀಪಿಕಾ ದಾಸ್ & ಶೈನ್ ಶೆಟ್ಟಿ ನಡುವಿನ ಸಂಬಂಧದ ಬಗ್ಗೆ ಮೊದಲ ಬಾರಿ ಪಬ್ಲಿಕ್ ನಲ್ಲಿಯೇ ಹೇಳಿಕೆ ಕೊಟ್ಟ ದೀಪಿಕಾ ದಾಸ್ ತಾಯಿ ಏನದು ಗೊತ್ತಾ ನಿಜಕ್ಕೂ ಆಶ್ಚರ್ಯ ಆಗುತ್ತೆ ಇವರ ಮಾತು ಕೇಳಿದ್ರೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಜೋಡಿಗಳ ಪೈಕಿ ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ ಅವರು ಕೂಡ ಒಬ್ಬರು. ಹೌದು ಬಿಗ್ ಬಾಸ್ ಸೀಸನ್ ಏಳರ ಸ್ಪರ್ಧಿಯಾಗಿ ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ ಇಬ್ಬರು ಕೂಡ ಮನೆಯೊಳಗೆ ಎಂಟ್ರಿ ಪಡೆದಿದ್ದರು. ಮೊದಲ ದಿನದಲ್ಲಿ ಇಬ್ಬರಿಗೂ ಕೂಡ ಒಬ್ಬರಿಗೊಬ್ಬರು ಪರಿಚಯನೇ ಇಲ್ಲ ಎನ್ನುವ ಮಾದರಿಯಲ್ಲಿ ನಡೆದುಕೊಳ್ಳುತ್ತಿದ್ದರು. ಆದರೆ ದಿನ ಕಳೆದಂತೆ ಇವರಿಬ್ಬರ ನಡುವೆ ಆತ್ಮೀಯವಾದ ಸಂಬಂಧ ಎಂಬುದು ಏರ್ಪಡುತ್ತದೆ ಇನ್ನು ನಟ ಶೈನ್ ಶೆಟ್ಟಿ ಅವರು ಕೂಡ ದೀಪಿಕಾ ದಾಸ್ ಅವರನ್ನು ಪ್ರೀತಿಸುವುದಾಗಿ ಪರೋಕ್ಷವಾಗಿ ಹೇಳಿಕೊಳ್ಳುತ್ತಿದ್ದರು.

ಈ ವಿಚಾರ ಮನೆಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಹಾಸ್ಯಾಸ್ಪದವಾಗಿ ಕಂಡರೂ ಕೂಡ ಮನೆಯಿಂದ ಹೊರಗೆ ಇದ್ದಂತಹ ಪ್ರೇಕ್ಷಕರಿಗೆ ಇಬ್ಬರೂ ಕೂಡ ಪ್ರೇಮಿಗಳಂತೆ ಕಾಣಿಸುವುದಂತು ಸತ್ಯವಾಗಿತ್ತು. ಈ ವಿಚಾರಕ್ಕಾಗಿಯೇ ಒಮ್ಮೆ ದೀಪಿಕಾ ದಾಸ್ ಅವರ ತಾಯಿ ಮಗಳನ್ನು ನೋಡುವುದಕ್ಕೆ ಬಿಗ್ ಬಾಸ್ ಮನೆಗೆ ಬಂದ ಸಂದರ್ಭದಲ್ಲಿ ಮಗಳ ಬಗ್ಗೆ ಕೋಪ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಹೊರಗೆ ನಿನ್ನನ್ನು ಯಾವ ರೀತಿ ನೋಡುತ್ತಿದ್ದಾರೆ ಗೊತ್ತಾ ಎಂದು ಹೇಳಿದರು ಇದಿಷ್ಟು ಮಾತ್ರವಲ್ಲದೆ ದೀಪಿಕ ದಾಸ್ ತಾಯಿ ಬಿಗ್ ಬಾಸ್ ಮನೆಗೆ ಬಂದಾಗ ಎಲ್ಲಾ ಸ್ಪರ್ಧಿಗಳನ್ನು ಮಾತನಾಡಿಸಿದರೂ ಆದರೆ ಶೈನ್ ಶೆಟ್ಟಿ ಅವರನ್ನು ಮಾತನಾಡಿಸಲಿಲ್ಲ ಸ್ವತಹ ಶೈನ್ ಶೆಟ್ಟಿ ಅವರೇ ಮುಂದೆ ಬಂದರೂ ಕೂಡ ಮುಖ ತಿರುಗಿಸಿಕೊಂಡು ಹೋದರು.

ಅಲ್ಲಿಗೆ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ಅವರಿಗೆ ಈ ವಿಚಾರ ಕನ್ಫರ್ಮ್ ಆಗುತ್ತದೆ ಹೊರಗಡೆ ನಾವಿಬ್ಬರೂ ಪ್ರೇಮಿಗಳಂತೆ ಕಾಣಿಸಿಕೊಳ್ಳುತ್ತಿದ್ದೇವೆ ಈ ಕಾರಣಕ್ಕಾಗಿಯೇ ನಮ್ಮ ತಾಯಿ ಕೋಪಗೊಂಡಿದ್ದಾರೆ ಅಂತ ಈ ವಿಚಾರ ನಡೆದ ನಂತರ ಶೈನ್ ಶೆಟ್ಟಿ ಅವರು ದೀಪಿಕಾ ದಾಸ್ ಅವರಿಂದ ಸ್ವಲ್ಪ ದೂರನೇ ಉಳಿಯುತ್ತಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಕೆಲವು ಖಾಸಗಿ ಕಾರ್ಯಕ್ರಮದಲ್ಲೂ ಕೂಡ ಶೈನ್ ಮತ್ತು ದೀಪಿಕಾ ದಾಸ್ ಅವರು ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಇದನ್ನು ನೋಡಿದಂತಹ ಅಭಿಮಾನಿಗಳು ಬಿಗ್ ಬಾಸ್ ಮನೆಯಲ್ಲಿ ಪ್ರಾರಂಭವಾದ ಇವರ ಪ್ರೀತಿ ಪ್ರೇಮ ಇಲ್ಲಿಯೂ ಕೂಡ ಮುಂದುವರೆಯುತ್ತಿದೆ ಅಂತ ಅಂದುಕೊಂಡಿದ್ದರು.

ಆದರೆ ಬಿಗ್ ಬಾಸ್ ಮನೆ ಒಳಗೆ ಇರುವಾಗ ದೀಪಿಕಾ ದಾಸ್ ಅವರ ತಾಯಿ ಈ ಪ್ರೀತಿಗೆ ಅಡ್ಡಿಯನ್ನು ವ್ಯಕ್ತಪಡಿಸಿದ್ದರು ಆದರೆ ಮನೆ ಹೊರಗೆ ಹೇಗೆ ಇವರನ್ನು ಒಪ್ಪಿಕೊಂಡಿದ್ದಾರೆ ಎಂದು ಪ್ರಶ್ನೆಯನ್ನು ಕೇಳಲು ಪ್ರಾರಂಭಿಸಿದರು. ಈ ಪ್ರಶ್ನೆಗೆ ಇದೀಗ ದೀಪಿಕಾ ದಾಸ್ ಅವರ ತಾಯಿ ನೇರವಾಗಿ ಉತ್ತರ ನೀಡಿದ್ದಾರೆ ಹೌದು ಇತ್ತೀಚಿಗಷ್ಟೇ ನಡೆದ ಯುಟ್ಯೂಬ್ ಚಾನೆಲ್ ಸಂದರ್ಶನ ಒಂದರಲ್ಲಿ ತಮ್ಮ ಮಗಳು ಹಾಗೂ ಶೈನ್ ಶೆಟ್ಟಿ ಅವರ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಎಂದನು ಹೊರ ಹಾಕಿದ್ದಾರೆ.

ದೀಪಿಕಾ ದಾಸ್ ಅವರ ತಾಯಿ ಹೇಳುವ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಇವರು ಆಟದ ದೃಷ್ಟಿಯಿಂದ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು ಅದನ್ನು ಹೊರತು ಪಡಿಸಿದರೆ ಇವರಿಬ್ಬರು ಒಳ್ಳೆಯ ಸ್ನೇಹಿತರು ಪ್ರೇಮಿಗಳಂತೂ ಅಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ಮನೆಯಿಂದ ಹೊರಬಂದ ನಂತರ ಶೈನ್ ಶೆಟ್ಟಿ ಅವರು ನನ್ನನ್ನು ಭೇಟಿ ಮಾಡಿ ಕ್ಷಮೆ ಕೇಳಿದ್ದಾರೆ ನನ್ನಿಂದ ನಿಮಗೆ ಏನಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ. ಅಷ್ಟೇ ಅಲ್ಲದೆ ನಾನು ಮತ್ತು ದೀಪಿಕಾ ಒಳ್ಳೆಯ ಸ್ನೇಹಿತರು ಕೊನೆಯವರೆಗೂ ನಾವು ಸ್ನೇಹಿತರಾಗಿಯೇ ಉಳಿಯುತ್ತೇವೆ ಎಂದು ಹೇಳಿದ್ದಾರೆ ಎಂದು ದೀಪಿಕಾ ದಾಸ್ ಅವರ ತಾಯಿ ಮಾತನಾಡಿದ್ದಾರೆ. ಆ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.