ಧನುರ್ (ಧನಸ್ಸು) ರಾಶಿಯು ರಾಶಿ ಚಕ್ರದ 9ನೇ ಜ್ಯೋತಿಷ್ಯ ರಾಶಿಯಾಗಿದ್ದು, ಅಗ್ನಿ ತತ್ವದ ರಾಶಿಯಾಗಿದೆ. ಮೂಲಾ ನಕ್ಷತ್ರದ ನಾಲ್ಕು ಪಾದಗಳಲ್ಲಿ ಜನಿಸಿದ ಜನರು, ಪೂರ್ವಾಷಾಧ ನಕ್ಷತ್ರದ ನಾಲ್ಕು ಪಾದಗಳಲ್ಲಿ ಜನಿಸಿದವರು ಮತ್ತು ಉತ್ತರಾಷಾಧ ನಕ್ಷತ್ರದ ಮೊದಲನೇ ಪಾದದಲ್ಲಿ ಜನಿಸಿದವರು ಧನುರ್ ರಾಶಿಯಲ್ಲಿ ಬರುತ್ತಾರೆ.
ಈ ರಾಶಿಯ ರಾಶಿ ಅಧಿಪತಿ ಗುರು ಗ್ರಹ. ಈ ರಾಶಿಯ ಸಂಕೇತವು ಧನಸ್ಸು ಅಂದರೆ ಬಿಲ್ಲು ಆಗಿರುತ್ತದೆ. ಇದು ನೇರವಾಗಿ ರಾಜ,,ರಾಜಕೀಯ, ಯುದ್ಧ, ಮಿಲಿಟರಿ, ರಕ್ಷಣೆ ಪ್ರಜಾಸೌಖ್ಯ ಇಂತಹದ್ದನ್ನು ಪ್ರತಿನಿಧಿಸುತ್ತದೆ ಎಂದು ಸ್ಪಷ್ಟವಾಗಿ ಕಾಣಬಹುದು. ಇದಕ್ಕೆ ತರಬೇತಿ ನೀಡಿ ಸೂಕ್ತ ಮಾರ್ಗದರ್ಶನದೊಂದಿಗೆ ಸನ್ನದ್ಧಗೊಳಿಸುವುದು ಒಬ್ಬ ಗುರು.
ಇದರೊಂದಿಗೆ ಸೂರ್ಯ ಹಾಗೂ ಶುಕ್ರ ಗ್ರಹಗಳು ಪರಸ್ಪರ ವಿರುದ್ಧವಾಗಿದ್ದರೂ ಕೂಡ ಈ ಎರಡು ಗ್ರಹಗಳ ಸಂಯೋಜನೆಗಳೊಂದಿಗೆ ಧನಸ್ಸು ರಾಶಿಯಾಗಿದೆ. ಇದೆಲ್ಲದರ ಒಟ್ಟಾರೆ ಫಲ ಈ ರಾಶಿಯಲ್ಲಿ ಜನಿಸಿದವರ ಜೀವನದ ಮೇಲೆ ಬೀರುತ್ತದೆ.
ಈ ಸುದ್ದಿ ಓದಿ :- ಆಂಜನೇಯ ಸ್ವಾಮಿಗೆ ಇಷ್ಟ ಈ 8 ವಸ್ತು ಅರ್ಪಿಸಿ ಸಾಕು.! ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ ಖಂಡಿತ ಒಲಿಯುತ್ತಾನೆ ಮಾರುತಿ.!
ಧನಸ್ಸು ರಾಶಿಯವರ ಜೀವಿತಾವಧಿಯಲ್ಲಿ ಒಟ್ಟಾರೆಯಾಗಿ ಅವರ ಭವಿಷ್ಯ ಯಾವ ರೀತಿ ಇರುತ್ತದೆ ಎಂದು ಹೇಳುವುದಾದರೆ ಇವರು ಸೂರ್ಯಗ್ರಹದ ಅನುಗ್ರಹದಿಂದ ಬಹಳ ಬುದ್ಧಿವಂತರಾಗಿರುತ್ತಾರೆ ಮತ್ತು ಶುಕ್ರ ಗ್ರಹದ ಅನುಗ್ರಹದಿಂದ ಇವರ ಗುಣ ಸ್ವಭಾವಗಳು ಆಕರ್ಷಣೀಯ ರೀತಿಯಲ್ಲಿ ಇರುತ್ತವೆ ಹಾಗೂ ಆದಷ್ಟು ಜೀವನದಲ್ಲಿ ಸೌಖ್ಯದಿಂದಲೇ ಇರುತ್ತಾರೆ.
ಆದರೂ ಗುರು ಗ್ರಹದ ಸ್ವಭಾವ ಎನ್ನುವಂತೆ ಇವರೊಳಗೆ ಒಂದು ಆಧ್ಯಾತ್ಮದ ಸೆಲೆ ಇದ್ದೇ ಇರುತ್ತದೆ. ಜೀವದಲ್ಲಿ ಎಲ್ಲವೂ ಸರಿ ಇದ್ದರೂ ಕೂಡ ಒಂದು ಏನೋ ಕೊರಗು ಇವರನ್ನು ಕಾಡುತ್ತದೆ. ಇದಕ್ಕೆ ಕಾರಣವೇನೆಂದರೆ ದಾಕ್ಷಿಣ್ಯಗಳಿಗೆ ಕಟ್ಟು ಬೀಳಬೇಕಾದ ಸಂದರ್ಭಗಳು ಇವರಿಗೆ ಎದುರು ಬರುತ್ತವೆ ಮತ್ತು ಅದಕ್ಕೆ ಒಳಗಾಗಿ ತಮ್ಮ ಜೀವನದ ದಿಕ್ಕು ದಿಸೇ ಬದಲಾಯಿಸಿ ಕೊಂಡು ಬಿಡುತ್ತಾರೆ ಪರಿಣಾಮ ಇಚ್ಛೆಗೆ ವಿರುದ್ಧವಾಗಿ ಬದುಕು ಬೇರೆ ತಿರುವು ತೆಗೆದುಕೊಂಡು ಬಿಡುತ್ತದೆ.
ಅದರಲ್ಲೂ ಮೂಲ ನಕ್ಷತ್ರದಲ್ಲಿ ಜನಿಸಿದವರಿಗೆ ಇದರ ಪ್ರಭಾವಗಳು ಹೆಚ್ಚು, ಈ ಬಗ್ಗೆ ಜನಸಾಮಾನ್ಯರು ಮಾತನಾಡಿರುವುದನ್ನು ಕೂಡ ನಾವು ಕೇಳಿರುತ್ತೇವೆ. ಮದುವೆ ವಿಚಾರದಲ್ಲಿ ಕೆಲ ಅಡೆತಡೆಗಳು ಎದುರಾಗಿ ನಂತರ ಪರಿಹಾರ ಮಾಡಿಕೊಂಡ ಮೇಲೆ ಜೀವನ ಸರಾಗವಾಗಿರುವ ಅಥವಾ ಅದರ ಪರಿಣಾಮವನ್ನು ಎದುರಿಸಬೇಕಾದ ಸಂದರ್ಭ ಬಂದಿರುವುದನ್ನು ಕೂಡ ಉದಾಹರಣೆಯಾಗಿ ನೋಡಿದ್ದೇವೆ.
ಈ ಸುದ್ದಿ ಓದಿ :- ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!
ಈ ರಾಶಿಯವರಿಗೆ ನೀಡಬಹುದಾದ ಒಂದು ಸಲಹೆ ಏನೆಂದರೆ ಇವರಿಗೆ ಶುಕ್ರ ಗ್ರಹದ ಪ್ರಭಾವದಿಂದ ವಿಶೇಷ ಹೊಳಪಿದ್ದರು ಸೂರ್ಯನ ಬೆಳಕಿನ ಎದುರು ಯಾವುದು ಪ್ರಕಾಶಮಾನವಾಗುವುದಿಲ್ಲ. ಆದ್ದರಿಂದ ಇದೆಲ್ಲದರ ನಡುವೆ ತನ್ನ ಸಾಮರ್ಥ್ಯ ಶಕ್ತಿ ವಿಶೇಷತೆಗಳಿಂದ ಹೊರಬರುವ ಪ್ರಯತ್ನವನ್ನು ಇವರೇ ಮಾಡಬೇಕು.
ಇವರಿಗೆ ಇರುವ ಒಂದೇ ಒಂದು ಆಯುಧ ಎಂದರೆ ಅದು ಇವರ ಜ್ಞಾನ ಇವರಿಗೆ ಸಂಗೀತ ಸಾಹಿತ್ಯ ಅಧ್ಯಯನ ಈ ರೀತಿ ಕಲೆಗಳಲ್ಲಿ ಅಪಾರಜ್ಞಾನ ಇರುತ್ತದೆ. ಆ ಕ್ಷೇತ್ರದಲ್ಲಿ ಮುಂದುವರೆದರೆ ಸಾಧಕರಾಗುವ ಸಾಧ್ಯತೆ ಇರುತ್ತದೆ. ಇದನ್ನು ಹೊರತುಪಡಿಸಿ ರಾಶಿಯೇ ಸೂಚಿಸುವಂತೆ ಇವರು ರಾಜಕೀಯ ವ್ಯಕ್ತಿಗಳಾದರೂ ಕೂಡ ಉಜ್ವಲ ಭವಿಷ್ಯವಿದೆ ಮತ್ತು ದೇಶವನ್ನು ಕಾಯುವಂತಹ ಸೈನಿಕರು ಕೂಡ ಆಗುವ ಧೈರ್ಯ ಆಸಕ್ತಿ ಇವರಿಗೆ ಹುಟ್ಟಿನಿಂದ ಇರುತ್ತದೆ.
ಈ ಸುದ್ದಿ ಓದಿ :- ಎಷ್ಟೇ ವರ್ಷಗಳಿಂದ ಥೈರಾಯ್ಡ್ ಇರಲಿ, ಈ ಶಂಖ ಮುದ್ರೆ ಮಾಡಿದ್ರೆ ಥೈರಾಯ್ಡ್ ಸಂಪೂರ್ಣ ಗುಣಮುಖವಾಗುತ್ತೆ.!
ಇವರು ಬಹಳ ಪ್ರಾಮಾಣಿಕರು ಹಾಗೂ ಮನಸ್ಸಿನಲ್ಲಿ ಬಹಳ ಮೃದು ಆದರೆ ಜೀವನದಲ್ಲಿ ಇದರ ದುರುಪಯೋಗವನ್ನು ಯಾರು ಪಡೆದುಕೊಳ್ಳಬಾರದು ಎನ್ನುವುದಾದರೆ ಹೂವಿನಂತ ಮೃದು ಹೃದಯ ಒಳಗಿದ್ದರೂ ವಜ್ರದಷ್ಟು ನಿರ್ಧಾರಗಳಲ್ಲಿ ಕಠಿಣರಾಗಿರಬೇಕು. ಎದುರಿಗಿರುವ ಎಲ್ಲರನ್ನು ನಂಬುವ ಮೊದಲು ನಿಧಾನವಾಗಿ ಸತ್ಯಾನು ಸತ್ಯತೆ ತಿಳಿದು ಮುಂದಾಲೋಚನೆ ಮಾಡಿ ನಿರ್ಧಾರಗಳನ್ನು ಕೈಗೊಳ್ಳುವುದು ಸೂಕ್ತ.