Sunday, May 28, 2023
HomeEntertainmentಕೇವಲ ಒಂದೇ ನಿಮಿಷದಲ್ಲಿ ದರ್ಶನ್, ಸುದೀಪ್, ಯಶ್, ದಾಖಲೆ ಮುರಿದ ಧ್ರುವ ಸರ್ಜಾ, ಕೆ ಡಿ...

ಕೇವಲ ಒಂದೇ ನಿಮಿಷದಲ್ಲಿ ದರ್ಶನ್, ಸುದೀಪ್, ಯಶ್, ದಾಖಲೆ ಮುರಿದ ಧ್ರುವ ಸರ್ಜಾ, ಕೆ ಡಿ ಸಿನಿಮಾದ ಟೀಸರ್ ಮಾಡಿದ ದಾಖಲೆ ಹೊಸ ನಿರೀಕ್ಷೆ ಹುಟ್ಟು ಹಾಕಿದೆ.

ಕನ್ನಡ ಸಿನಿಮಾವನ್ನು ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಕೆಜಿಎಫ್ ಸಿನಿಮಾ ಮಾಡಿದ್ದು ಈ ಕೆಜಿಎಫ್ ಸಿನಿಮಾದ ನಂತರ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾಅಗಿ ತೆರೆ ಕಂಡಿತು. ಈ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ಸು ಮತ್ತು ಕೀರ್ತಿ ಲಭಿಸಿತು ಇದಾದ ನಂತರ ಕಾಂತರಾ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಬಿಡುಗಡೆಯಾದ 15 ದಿನಗಳಿಂದಲೂ ಕೂಡ ಸಾಕಷ್ಟು ಸುದ್ದಿಯಲ್ಲಿದೆ ಕನ್ನಡದಲ್ಲಿ ಬಿಡುಗಡೆಯಾದ ಈ ಸಿನಿಮಾ ಇದೀಗ ಸುಮಾರು ಐದು ಭಾಷೆಯಲ್ಲಿ ಡಬ್ ಆಗುವ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ಸೇರ್ಪಡೆಯಾಗಿದೆ. ಸಿನಿಮಾ ಅಂದರೆ ಹೀಗಿರಬೇಕು ಎಂದು ಎಲ್ಲಾ ಸೆಲೆಬ್ರಿಟಿಗಳು ಹಾಡಿ ಹೋಗಳುತ್ತಿದ್ದಾರೆ ಅದರಲ್ಲಿಯೂ ಕೂಡ ಬಾಲಿವುಡ್ ನ ಸಾಕಷ್ಟು ನಟ ನಟಿಯರು ಕಾಂತರಾ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

ಇನ್ನು ನಟ ಉಪೇಂದ್ರ ಅವರ ಕಬ್ಜಾ ಸಿನಿಮಾವು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರ ಹೊಮ್ಮಿದೆ ಈ ಸಿನಿಮಾದ ನಿರ್ದೇಶಕ ಆರ್ ಚಂದ್ರು ಅವರು ಸುಮಾರು ಏಳು ಭಾಷೆಯಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಅಂತ ಅಂದುಕೊಂಡಿದ್ದಾರೆ. ಒಟ್ಟಾರೆಯಾಗಿ ಕನ್ನಡದಲ್ಲಿ ಮೂಡಿ ಬರುತ್ತಿರುವ ಎಲ್ಲಾ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ. ಒಂದು ಕಾಲದಲ್ಲಿ ಕನ್ನಡ ಸಿನಿಮಾವನ್ನು ಕೀಳಾಗಿ ನೋಡುತ್ತಿದ್ದರು ಆದರೆ ಇದೀಗ ಅವರೇ ನಮ್ಮ ಭಾಷೆಯಲ್ಲೂ ಕೂಡ ನಿಮ್ಮ ಸಿನಿಮಾವನ್ನು ರಿಲೀಸ್ ಮಾಡಿ ಅಂತ ಹೇಳುತ್ತಿದ್ದಾರೆ ಅಷ್ಟರ ಮಟ್ಟಿಗೆ ಇದೀಗ ಕನ್ನಡ ಸಿನಿಮಾ ಬೆಳೆಯುತ್ತಿದೆ. ಇವೆಲ್ಲ ಒಂದು ಕಡೆಯಾದರೆ ಇದೀಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹೊಸ ಸಿನಿಮಾ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವುದನ್ನು ನಾವು ಕಾಣಬಹುದಾಗಿದೆ.

ನಿರ್ದೇಶಕ ಪ್ರೇಮ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಕಾಂಬಿನೇಷನ್ ನಲ್ಲಿ ಕೆಡಿ ಸಿನಿಮಾ ನಿರ್ಮಾಣವಾಗುತ್ತಿದೆ ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಈಗಾಗಲೇ ಈ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ ಬಿಡುಗಡೆಯಾದ ಕೇವಲ ಒಂದೇ ನಿಮಿಷದಲ್ಲಿ ಯಶ್, ಸುದೀಪ್, ದರ್ಶನ್ ಇಲ್ಲಿಯವರೆಗೂ ಮಾಡಿದ ಎಲ್ಲ ದಿಗ್ಗಜರ ದಾಖಲೆಯನ್ನು ಈ ಟೀಸರ್ ಮುರಿದಿದೆ. ಕೆ.ಡಿ ಸಿನಿಮಾದ ಟೀಸರ್ ಅನ್ನು ಕೆ.ವಿ.ಎನ್ ಪ್ರೊಡಕ್ಷನ್ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ ಕೇವಲ ಒಂದು ನಿಮಿಷದಲ್ಲಿ ನಾಲ್ಕು ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ ಅಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು ಕೆವಿಎಂ ಪ್ರೊಡಕ್ಷನ್ಸ್ ನಲ್ಲಿ ಕೆಡಿ 4ನೆ ಸಿನಿಮಾವಾಗಿದ್ದು ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ ಇನ್ನು ಇದೇ ಮೊದಲ ಬಾರಿಗೆ ಪ್ರೇಮ್ ಹಾಗೂ ಧ್ರುವ ಸರ್ಜಾ ಇಬ್ಬರು ಒಂದಾಗಿ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಪ್ರೇಮ್ ಅವರ ಸಿನಿಮಾ ಕರಿಯರ್ ನಲ್ಲಿಯೇ ಬಹಳ ದೊಡ್ಡ ಸಿನಿಮಾವಾಗಿದ್ದು ಟೈಟಲ್ ಟೇಸರ್ ಬಹಳ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಮೂಲಕ ಬೆಂಗಳೂರಿನ ಮರು ಸೃಷ್ಟಿ ಮಾಡಲಿದ್ದಾರೆ ಪ್ರೇಮ್ ಹೌದು ಟೀಸರ್ ನೋಡಿದ್ರೆ ನಿಮಗೆ ಗೊತ್ತಾಗುತ್ತೆ.

ಕೆಡಿ ಸಿನಿಮಾ ರೆಟ್ರೋ ಸಮಯವನ್ನು ನೆನಪಿಸುವಂಥದ್ದು ಇದರಲ್ಲಿ ಡೈಲಾಗ್ ಮೂಲಕ ಅಬ್ಬರಿಸಿದ ಧ್ರುವ ಸರ್ಜಾ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು 1970ರ ದಶಕದ ಕೆಲವು ನೈಜ ಕಥೆಯನ್ನು ಹೇಳುವತ್ತ ಪ್ರೇಮ್ ಕೆಡಿ ಸಿನಿಮಾದ ಕಥೆಯನ್ನು ಹೆಣೆದಿದ್ದಾರೆ ಕನ್ನಡದಲ್ಲಿ ಅದ್ದೂರಿ, ಭರ್ಜರಿ, ಪೊಗರು, ಬಹದ್ದೂರ್, ಈ ರೀತಿಯ ಆಕ್ಷನ್ ಸಿನಿಮಾಗಳಲ್ಲಿಯೇ ಅಭಿನಯಿಸಿ ಅಭಿಮಾನಿಗಳ ಮನ ಗೆದ್ದ ಧ್ರುವ ಸರ್ಜಾ ಈಗ ಮತ್ತೊಂದು ರೌಡಿ ಸಿನಿಮಾದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾರೆ ಇನ್ನು ಈ ಮಾಸ್ ಸಿನಿಮಾ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿಯೂ ಕೂಡ ತೆರೆ ಕಾಣಲಿದೆ. ಒಟ್ಟಾರೆಯಾಗಿ ಕೆಡಿ-ದ ಡೆವಿಲ್ ಸಿನಿಮಾ ಚಿತ್ರೀಕರಣಕ್ಕೂ ಮುಂಚೆಯೇ ಸಿನಿ ಪ್ರಿಯರಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.