ಧ್ರುವ ಸರ್ಜಾ ಅವರು ಕರುನಾಡ ಸಂಭ್ರಮ ಎನ್ನುವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 10 11 12ರಂದು ನಡೆದಿದ್ದ ಈ ಕಾರ್ಯಕ್ರಮದ ವಿಡಿಯೋಗಳು ಜೀ ಕನ್ನಡ ವಾಹಿನಿಯಲ್ಲಿ ಕಳೆದ ವಾರಾಂತ್ಯದಲ್ಲಿ ಪ್ರಸಾರ ಆಗಿತ್ತು. ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ವತಿಯಿಂದ ಆಯೋಜನೆ ಆಗಿದ್ದ ಕರುನಾಡ ಸಂಭ್ರಮದ ಈ ವರ್ಷದ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಸರ್ಜಾ ಅವರಿಗೆ ಮ.ರ.ಣೋ.ತ್ತ.ರವಾಗಿ ಕನ್ನಡ ಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದನ್ನು ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಸಹೋದರನಾದ ಧ್ರುವ ಸರ್ಜಾ ಅವರ ಸ್ವೀಕರಿಸಿ ವೇದಿಕೆ ಮೇಲೆ ಅಣ್ಣನ ನೆನೆದು ಬಾವುಕರಾಗಿ ಹಲವು ನೆನಪುಗಳನ್ನು ಹಂಚಿಕೊಂಡರು. ಜೊತೆಗೆ ನೆರೆದಿದ್ದ ಎಲ್ಲರಿಗೂ ಕೂಡ ಸಂಬಂಧಗಳ ವಿಚಾರವಾಗಿ ಕೆಲ ಕಿವಿ ಮಾತುಗಳನ್ನು ಕೂಡ ಹೇಳಿದರು. ಸಂಬಂಧಗಳಿಗೆ ಬೆಲೆ ಕೊಡಿ ಸಂಬಂಧಿಕರಲ್ಲಿ ಯಾವಾಗಲೂ ಹಿತ್ತಾಳೆ ಕಿವಿ ಇಟ್ಟುಕೊಳ್ಳಬೇಡಿ ಅವನು ಯಾರೊಂದಿಗೂ ಈ ರೀತಿ ಹೇಳಿದ ಅದಕ್ಕೆ ನಾನು ಅವನ ಜೊತೆ ಮಾತನಾಡುವುದಿಲ್ಲ, ಇವರು ಈ ರೀತಿ ಹೇಳಿದ್ದಾರೆ ಹಾಗಾಗಿ ನಾನು ಮಾತು ಬಿಟ್ಟಿದ್ದೇನೆ ಇದೆಲ್ಲ ಬೇಡ.
ಯಾಕೆಂದರೆ ಒಂದು ದಿನ ನೀವು ಮಾತನಾಡಬೇಕು ಎಂದುಕೊಂಡರೆ ಆ ದಿನ ಅವರು ಇರದೇ ಹೋಗಬಹುದು. ಬೆಳಿಗ್ಗೆ ಇದ್ದವರು ಈಗ ಸಂಜೆ ಇರುತ್ತಾರೆ ಎನ್ನುವ ಯಾವ ಗ್ಯಾರೆಂಟಿಯು ಇಲ್ಲ. ಅದಕ್ಕೆ ನಾನೇ ಸಾಕ್ಷಿ ಈಗ ನನ್ನ ಅಣ್ಣನೊಂದಿಗೆ ನನಗೆ ಸಾಕಷ್ಟು ಮಾತನಾಡಬೇಕು ಅನಿಸುತ್ತಿದೆ ಆದರೂ ಅವನ ಜೊತೆ ಮಾತನಾಡಲಾಗುತ್ತಿಲ್ಲ. ಆ ದುಃಖ ಏನು ಎಂದು ನನಗೆ ಗೊತ್ತು ಹಾಗಾಗಿ ಎಲ್ಲರಿಗೂ ಹೇಳುತ್ತಿದ್ದೇನೆ ಪರಸ್ಪರ ಸಂಬಂಧಗಳಿಗೆ ಬೆಲೆ ಕೊಡಿ ಒಬ್ಬರಿಗೊಬ್ಬರು ಸಮಯ ಕೊಟ್ಟು ಸ್ಪಂದಿಸಿ.
ಟಿವಿ, ಫೋನು, ಲ್ಯಾಪ್ಟಾಪ್ ಈ ರೀತಿ ಗೆಜೆಟ್ ಗಳೊಂದಿಗೆ ಯಾವಾಗ ಬೇಕಾದರೂ ಮಾತನಾಡಬಹುದು. ಆದರೆ ನಮ್ಮವರೊಂದಿಗೆ ಮಾತನಾಡಲು ಅವಕಾಶ ಯಾವಾಗಲೂ ಇರುವುದಿಲ್ಲ. ಹಾಗಾಗಿ ಮೊದಲು ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳಿ. ಅದರಲ್ಲಿರುವ ನೆಮ್ಮದಿ ಸಂತೋಷ ಮತ್ತೆಲ್ಲೂ ಇಲ್ಲ ಎಂದು ಅಲ್ಲಿದ್ದವರಿಗೆ ಮನವಿ ಮಾಡಿದ್ದಾರೆ. ರಿವೇಷನ್ ಶಿಪ್ ಗೆ ಬೆಲೆ ಕೊಡಿ. ಈಗಾಗಲೇ ನಿಮ್ಮಲ್ಲಿ ಹಲವು ಸಮಸ್ಯೆ ಇದ್ದರೂ ಮಾತನಾಡಿ ಬಗ್ಗೆ ಹರಿಸಿಕೊಳ್ಳಿ, ಮನಸ್ತಾಪಗಳಿಗೆ ಎಡೆ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ಇದರ ಜೊತೆಗೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹೀರೋ ಇರ್ತಾರೆ ಆ ಹೀರೋ ನಿಮ್ಮ ಮನೆಯವರೇ ಆಗಿರುತ್ತಾರೆ. ಮೊದಲು ಅವರನ್ನು ಪ್ರೀತಿಸಿ, ನಂತರ ತೆರೆ ಮೇಲೆ ಬರುವ ನಮ್ಮಂತ ಹೀರೋಗಳಿಗೂ ಬೆಂಬಲ ಕೊಡಿ ಎಂದು ಮಾತನಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ನಟ ದ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಅವರು ಸಹೋದರರಾಗಿದ್ದರು ಯಾವುದೇ ಆತ್ಮೀಯ ಗೆಳೆಯರಿಗಿಂತ ಹೆಚ್ಚಾಗಿ ಆತ್ಮೀಯರಾಗಿದ್ದರು. ಸರ್ಜಾ ಕುಟುಂಬದವರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಶೇರ್ ಮಾಡುತ್ತಿದ್ದ ಫೋಟೋಗಳನ್ನು ನೋಡುತ್ತಿದ್ದರೆ ಅವರೆಲ್ಲ ನಡುವಿನ ಬಾಂಧವ್ಯ, ಆತ್ಮೀಯತೆ ಎಷ್ಟಿತ್ತು ಎನ್ನುವುದು ತಿಳಿಯುತ್ತದೆ.
ಆದರೆ ಯಾರ ಕೆಟ್ಟ ದೃಷ್ಟಿ ತಾಗಿತ್ತೋ ಏನೋ ಈ ಕುಟುಂಬದ ಒಂದು ಕುಡಿ ಬೆಳೆಯುವ ಮೊದಲೇ ವಿಧಿ ಆಟಕ್ಕೆ ಸಿಲುಕಿ ಚಿವುಟಿ ಹೋಗಿದೆ. ಇದಾಗಿ ಹತ್ತಿರ ಮೂರು ವರ್ಷಗಳು ಕಳೆದಿದ್ದರೂ ಇನ್ನು ಸರ್ಜಾ ಕುಟುಂಬ ಸಂಪೂರ್ಣವಾಗಿ ಆ ನೋವಿನಿಂದ ಹೊರಬಂದಿಲ್ಲ ಎಂದೇ ಹೇಳಬಹುದು. ಆ ಸಮಯದಲ್ಲಿ ಗರ್ಭಿಣಿ ಆಗಿದ್ದ ಚಿರಂಜೀವಿ ಪತ್ನಿ ನಟಿ ಮೇಘನಾ ರಾಜ್ ಅವರು ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ಕನ್ನಡಿಗರು ಅವರಲ್ಲೇ ಮತ್ತೊಮ್ಮೆ ಚಿರಂಜೀವಿ ಅವರನ್ನು ಕಾಣಬೇಕಾಗಿದೆ.