ಧಾರಾವಾಹಿಗಳು ಪ್ರೇಕ್ಷಕ ಮನಸ್ಸಿನಲ್ಲಿ ಅಗಾಧ ಪರಿಣಾಮವನ್ನು ಬೀರುತ್ತವೆ. ಅದರಲ್ಲೂ ಪೌರಾಣಿಕ ಧಾರಾವಾಹಿಗಳಂತೂ ನಿಜವಾಗಿಯೂ ದೇವರು ಹಾಗು ದೇವತೆಗಳು ಇದೇ ರೀತಿ ಇದ್ದರೇನೋ ಎನ್ನುವಂತೆ ಕಣ್ಣಿಗೆ ಕಟ್ಟಿದ ರೀತಿ ಇರುತ್ತವೆ. ಸಿರಿಯಲ್ ಅದ್ದೂರಿ ಸೆಟ್ ಅಥವಾ ವಿಷುವಲ್ ಎಫೆಕ್ಟ್ ಅದಕ್ಕೆ ಕಾರಣ ಇರಬಹುದು ಅಥವಾ ಪಾತ್ರಕ್ಕೆ ಜೀವ ತುಂಬಿ ಪಾತ್ರವನ್ನೇ ಪರಕಾಯ ಪ್ರವೇಶ ಮಾಡಿಕೊಂಡು ನಟಿಸಿದ ಆ ಕಲಾವಿದರೂ ಕಾರಣ ಆಗಿರಬಹುದು.
ಇಂತಹ ಧಾರಾವಾಹಿಗಳು ಅತಿಹೆಚ್ಚಿನ ಜನಮನ್ನಣೆ ಗಳಿಸಿಬಿಟ್ಟರೆ ಅದು ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳಂತೆ ಫ್ಯಾನ್ ಇಂಡಿಯಾ ಧಾರವಾಹಿಗಳಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ರೀತಿ ಹಿಂದಿ ಭಾಷೆಯಲ್ಲಿ ತಯಾರಾಗಿ ಎಲ್ಲಾ ಭಾಷೆಗಳಿಗೂ ಕೂಡ ಡಬ್ ಆಗಿ ಎಲ್ಲಾ ಭಾಷೆಯಲ್ಲಿ ಯಶಸ್ಸು ಗಳಿಸಿದ ಧಾರಾವಾಹಿ ಎಂದರೆ ಅದು ರಾಧಾಕೃಷ್ಣ ಧಾರಾವಾಹಿ.
ಈ ಧಾರವಾಹಿಯಲ್ಲಿ ಧಾರಾವಾಹಿ ಕಥೆಗಿಂತಲೂ ಹೆಚ್ಚಾಗಿ ಪ್ರೇಕ್ಷಕರಿಗೆ ಇಷ್ಟ ಆಗಿದ್ದು ಈ ಪಾತ್ರ ಮಾಡಿದ್ದ ರಾಧ ಮತ್ತು ಕೃಷ್ಣ ಪಾತ್ರದಾರಿಗಳು. ಸುಮೇರ್ ಅವರು ಕೃಷ್ಣನಾಗಿ, ಮಲ್ಲಿಕಾ ಸಿಂಗ್ ಅವರು ರಾಧೆಯಾಗಿ ಒಂದು ಅರ್ಥದಲ್ಲಿ ಇಡೀ ಭಾರತವನ್ನು ಗೆದ್ದುಬಿಟ್ಟರು ಎಂದು ಹೇಳಬಹುದು. ಯಾಕೆಂದರೆ ಭಾರತದ ಎಲ್ಲಾ ಭಾಷೆಗಳ ಕಿರುತೆರೆ ಪ್ರೇಕ್ಷಕರು ಇವರ ಪ್ರತಿಭೆಗೆ ಮನಸೋತು ಹೋಗಿದ್ದಾರೆ ಹಾಗೆ ಇಡೀ ದೇಶದ ಯುವಜನತೆ ಇವರುಗಳಿಗೆ ಅಭಿಮಾನಿಗಳಾಗಿದ್ದಾರೆ.
ಇವರು ಸಿನಿಮಾ ಸ್ಟಾರ್ ಗಳಷ್ಟೇ ದೇಶದಾದ್ಯಂತ ಫೇಮ್ ಕೂಡ ಪಡೆದರು ಎಂದು ಹೇಳಬಹುದು. ಈಗ ಧಾರಾವಾಹಿ ಮುಕ್ತಾಯವಾಗಿದ್ದು ಅಧಿಕೃತವಾಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. ಅದರಲ್ಲೂ ರಾಧೆಯಾಗಿ ಅಭಿನಯಿಸಿದ್ದ ಮಲ್ಲಿಕಾಸಿಂಗ್ ಅವರು ಕನ್ನಡ ಸಿನಿಮಾದಲ್ಲಿ ಕೂಡ ಅಭಿನಯಿಸುತ್ತಿದ್ದಾರೆ ಎನ್ನುವುದು ಕನ್ನಡಿಗರಿಗೆ ಅಪಾರ ಸಂತೋಷ ತಂದಿದೆ. ದೊಡ್ಮನೆ ಕುಟುಂಬದ ಕುಡಿ ವಿನಯ್ ರಾಜಕುಮಾರ್ ಅವರ ಅಭಿನಯದ ಸಿಂಪಲ್ ಅವರ ನಿರ್ದೇಶನದ ಮುಂದಿನ ಚಿತ್ರದಲ್ಲಿ ಮಲ್ಲಿಕಾಸಿಂಗ್ ಅವರು ನಾಯಕಿಯಾಗಿ ವಿನಯ್ ಜೊತೆ ಕಾಣಿಸಿಕೊಳ್ಳಲಿದ್ದಾರಂತೆ.
ಪುರಾಣದ ಕಥೆಗಳನ್ನು ಕೇಳುವಾಗ ಎಲ್ಲರಿಗೂ ರಾಧೆಯ ಬಗ್ಗೆ ಯಾವ ರೀತಿ ಚಿತ್ರಣ ಮೂಡುತಿತ್ತೋ ಗೊತ್ತಿಲ್ಲ, ಆದರೆ ರಾಧಾಕೃಷ್ಣ ಅಭಿನಯದಲ್ಲಿ ಮಲ್ಲಿಕಾ ಸಿಂಗ್ ಅವರು ತೋರುತ್ತಿದ್ದ ಮುಂಗೋಪ, ಆಡುತ್ತಿದ್ದ ಮಾತುಗಳು, ಕೃಷ್ಣನನ್ನು ಕಾಡುತ್ತಿದ್ದ ಪರಿ, ಆಕೆ ಕಣ್ಣೋಟ, ಕಣ್ಣೀರು, ಚೆಲುವು, ಮುಗ್ಧತೆ, ಸೌಂದರ್ಯ ಇದೆಲ್ಲವನ್ನು ನೋಡಿದ ಮೇಲೆ ನಿಜವಾಗಿಯೂ ಇನ್ನು ಮುಂದೆ ಎಲ್ಲರಿಗೂ ಕೂಡ ರಾಧೆ ಎಂದ ತಕ್ಷಣ ಇವರೇ ನೆನಪಾಗುತ್ತಾರೆ.
ಧಾರಾವಾಹಿಯಲ್ಲಿ ಈ ಬಗೆಯ ಆಕ್ಟಿಂಗ್ ಮಾಡಿ ಗೆದ್ದಿದ್ದ ಈಕೆ ಬೆಳ್ಳಿತೆರೆಗೆ ಬಂದಮೇಲೆ ಆ ಸಿನಿಮಾ ಪಾತ್ರಕ್ಕೆ ನ್ಯಾಯ ದಕ್ಕಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇಂತಹ ಒಂದು ಅವಕಾಶ ಸಿಕ್ಕಿದ್ದಕ್ಕಾಗಿ ಮಲ್ಲಿಕಾಸಿಂಗ್ ಅವರಿಗೂ ಕೂಡ ಬಹಳ ಕೃತಜ್ಞತೆ ಇದೆ. ಈ ಹಿಂದೆ ವಿನಯ್ ರಾಜಕುಮಾರ್ ಹಾಗೂ ಸುನಿ ಕಾಂಬಿನೇಷನ್ ಸಿನಿಮಾಗೆ ತಮಿಳುನಾಡು ವಿಕ್ರಂ ಚಿತ್ರದಲ್ಲಿ ನಾಯಕಿಯಾಗಿದ್ದ ಸ್ವಾದಿಷ್ಠ ಕೃಷ್ಣನ್ ಅವರು ಇರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿತ್ತು.
ಇದೇ ಬೆನ್ನಲ್ಲೇ ಮತ್ತೊಬ್ಬ ನಾಯಕಿ ಎಂಟ್ರಿ ಆಗಿರುವುದರಿಂದ ಸಿನಿಮಾ ಟ್ರಯಾಂಗಲ್ ಲವ್ ಸ್ಟೋರಿ ಯ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಸ್ವಾದಿಷ್ಠ ಕೃಷ್ಣನ್ ಅವರು ಸಿನಿಮಾದಲ್ಲಿ ಪತ್ರಕರ್ತೆ ಪಾತ್ರ ಮಾಡುತ್ತಿದ್ದರೆ, ಮಲ್ಲಿಕಾಸಿಂಗ್ ಕಾಶ್ಮೀರಿ ಹುಡುಗಿಯಾಗಿ ಕಾಣಿಸಿಕೊಳ್ಳದಿದ್ದಾರಂತೆ. ವಿನಯ್ ರಾಜಕುಮಾರ್ ಅವರ ಬಹುನಿರೀಕ್ಷಿತ ಚಿತ್ರಗಳ ಪಟ್ಟಿ ದೊಡ್ಡದಾಗುತ್ತಿತ್ತು, ಈಗಾಗಲೇ ಪೋಸ್ಟರ್ ಇಂದ ಪೆಪೆ ಕುತೂಹಲ ಕೆರಳಿಸಿದೆ. ಗ್ರಾಮಾಯಣ ರಿಲೀಸ್ ಗೆ ರೆಡಿಯಾಗಿದೆ, ಅಂದೊಂದಿತ್ತು ಕಾಲ ಸಿನಿಮಾ ಅಪ್ಡೇಟ್ ಗಾಗಿ ಜನ ಕಾಯುತ್ತಿದ್ದಾರೆ, ಅಷ್ಟರಲ್ಲಿ ಈ ಸಿನಿಮಾ ಸುದ್ದಿ ಕೂಡ ಸಖತ್ ಸೌಂಡ್ ಮಾಡುತ್ತಿದೆ.