ಕಳೆದ ಎರಡು ದಿನಗಳಿಂದಲೂ ಕೂಡ ಭಾರತ್ ಅಕ್ಕಿ ಎನ್ನುವಂತಹ ಸುದ್ದಿಯನ್ನು ನೀವು ಮಾಧ್ಯಮಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿರಬಹುದು. ಆದರೆ ಯಾರಿಗೆಲ್ಲ ಈ ಭಾರತ್ ಅಕ್ಕಿ ಯೋಜನೆಯ ವಿತರಣೆ ಸಿಗುತ್ತದೆ ಹಾಗೂ ಇದನ್ನು ಪಡೆದುಕೊಳ್ಳುವುದಕ್ಕೆ ಯಾರು ಅರ್ಹರು ಹಾಗೂ ಇದನ್ನು ಪಡೆದುಕೊಳ್ಳಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು.
ಹಾಗೂ ಎಷ್ಟು ಕೆಜಿ ಅಕ್ಕಿಯನ್ನು ಕೊಂಡುಕೊಳ್ಳಬಹುದು ಹಾಗೂ ನೀವು ನಿಮ್ಮ ಸುತ್ತಮುತ್ತ ಇರುವಂತಹ ಯಾವ ಸ್ಥಳದಲ್ಲಿ ಈ ಅಕ್ಕಿಯನ್ನು ಖರೀದಿ ಮಾಡಬಹುದು ಹೀಗೆ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಮೊದಲನೆಯದಾಗಿ ಈ ಭಾರತ್ ಅಕ್ಕಿ ಎಂದರೆ ಏನು ಎಂದು ತಿಳಿದು ಕೊಳ್ಳೋಣ. ಇದು ಒಂದು ರೀತಿಯ ಕಂಪನಿ ಎಂದೇ ಹೇಳಬಹುದು ಅಂದರೆ ಉದಾಹರಣೆಗೆ ಬುಲೆಟ್ ರಾಜ್ಮುಡಿ ಹೀಗೆ ಇದು ಕೂಡ ಒಂದು ರೀತಿಯ ಕಂಪನಿಯಾಗಿದೆ. ಇದು ಯಾವುದೇ ರೀತಿಯ ಪ್ರೈವೇಟ್ ಕಂಪನಿಗಳ ಜೊತೆ ಸೇರಿಲ್ಲ. ಬದಲಿಗೆ ತನ್ನದೇ ಆದಂತಹ ಒಂದು ಕಂಪನಿಯ ಹೆಸರು ಅಂದರೆ ಭಾರತ್ ಅಕ್ಕಿ ಎನ್ನುವಂತಹ ಟ್ರೇಡ್ ಮಾರ್ಕ್ ಅನ್ನು ಇದು ಹೊಂದಿದೆ.
ಈ ಸುದ್ದಿ ಓದಿ :- ಹಣ್ಣುಗಳಲ್ಲಿದೆ ಆರೋಗ್ಯದ ಗುಟ್ಟು.! ಯಾವ ಹಣ್ಣು ತಿಂದರೆ ಏನು ಉಪಯೋಗ ನೋಡಿ.!
ಇದು ನಮ್ಮ ಸರ್ಕಾರದ ಒಂದು ಹೆಸರನ್ನು ಹೊಂದಿರುವಂಥದ್ದು. ಈ ಒಂದು ಯೋಜನೆಯ ಉದ್ದೇಶ ಏನು ಎಂದರೆ ನಮ್ಮ ಭಾರತದಲ್ಲಿ ಯಾರೆಲ್ಲಾ ಬಡವರು ಇದ್ದಾರೋ ಅವರಿಗೆ ಅನುಕೂಲವಾಗುವಂತೆ ಅವರು ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ಖರೀದಿಸುವುದಕ್ಕೆ ಈ ಒಂದು ಯೋಜನೆ ಹುಟ್ಟಿದ್ದು ಇದು ಒಂದು ಉತ್ತಮವಾದಂತಹ ನಿರ್ಧಾರ ಎಂದೇ ಹೇಳಬಹುದು.
ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳಿ ಇವರುಗಳ ಕಡೆಯಿಂದ ನಮ್ಮ ದೇಶದ ಜನರಿಗೆ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ವಿತರಣೆ ಮಾಡುವಂತಹ ಒಂದು ಕೆಲಸ ನಡೆಯುತ್ತದೆ. ಹಾಗಾದರೆ ಈ ಒಂದು ಯೋಜನೆಯನ್ನು ಯಾವ ಒಂದು ಕಾರಣಕ್ಕಾಗಿ ಬಿಡುಗಡೆ ಮಾಡಿದ್ದಾರೆ ಎಂದು ನೋಡುವುದಾದರೆ ಇತ್ತೀಚಿಗೆ ಗಮನಿಸಿರ ಬಹುದು ಮಾರುಕಟ್ಟೆಗಳಲ್ಲಿ ಸಿಗುವಂತಹ ಪ್ರತಿಯೊಂದು ಅಕ್ಕಿಯ ಬೆಲೆಯು ಕೂಡ ಏರಿಕೆಯಾಗಿದೆ ಆದರೆ ಸಾಮಾನ್ಯ ಜನರು ಬಡವರ್ಗದ ಜನರು ಅದನ್ನು ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಈ ವಿಧಾನವನ್ನು ಪ್ರಾರಂಭಿಸಿದ್ದಾರೆ.
* ಈ ಒಂದು ಅಕ್ಕಿ ಯೋಜನೆಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಯೋಜನೆಯಾಗಿದೆ ಈ ಅಕ್ಕಿಯನ್ನು ಕೇವಲ ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಹೊಂದಿರುವ ಸದಸ್ಯರು ಕೊಂಡುಕೊಳ್ಳಬೇಕು ಎನ್ನುವ ಅವಶ್ಯಕತೆ ಇಲ್ಲ ಬದಲಿಗೆ ಪ್ರತಿಯೊಬ್ಬ ಸದಸ್ಯನೂ ಕೂಡ ತಮ್ಮ ಹತ್ತಿರವೇ ಇರುವಂತಹ ಅಂಗಡಿಗಳಿಗೆ ಹೋಗಿ ಇಂತಹ ಅಕ್ಕಿಯನ್ನು ಸುಲಭವಾಗಿ ಕೊಂಡು ಕೊಳ್ಳಬಹುದು.
ಈ ಸುದ್ದಿ ಓದಿ :- ಮಹಿಳೆಯರು ಒಮ್ಮೆ ನೋಡಿ.! ನಿಮಗಾಗಿ ಸೂಪರ್ ಕಿಚನ್ ಟಿಪ್ಸ್.!
* ಇನ್ನು ಈ ಅಕ್ಕಿ 1 ಕೆಜಿಗೆ 29 ಇರುತ್ತದೆ. ಕೆಲವೊಂದಷ್ಟು ಜನ ಅಕ್ಕಿಯ ಬೆಲೆ ಕಡಿಮೆ ಇರುತ್ತದೆ ಇದರ ಗುಣಮಟ್ಟವೂ ಕೂಡ ಕಡಿಮೆ ಇರುತ್ತದೆ ಎಂದು ಹೇಳುತ್ತಾರೆ. ಆದರೆ ಗುಣಮಟ್ಟದ ಅಕ್ಕಿಯನ್ನು ನೀವು ಕಡಿಮೆ ಬೆಲೆಯಲ್ಲಿಯೇ ಕೊಂಡುಕೊಳ್ಳಬಹುದು.
* ನೀವು ಇದನ್ನು 5 ಕೆಜಿ ಅಥವಾ 10 ಕೆಜಿ ಪ್ಯಾಕೆಟ್ ಕೊಂಡುಕೊಳ್ಳುವುದರ ಮೂಲಕ ಪಡೆಯಬಹುದಾಗಿದೆ.
ಇನ್ನು ಈ ಅಕ್ಕಿಯನ್ನು ನೀವು ಎಲ್ಲೆಲ್ಲಿ ಕೊಂಡುಕೊಳ್ಳಬಹುದು ಎಂದು ನೋಡುವುದಾದರೆ ಬೆಂಗಳೂರಿನಲ್ಲಿ ನಾಫೆಡ್ ಮಳಿಗೆಗಳು ಇರುತ್ತದೆ ಇಲ್ಲಿ ನೀವು ಕೊಂಡುಕೊಳ್ಳಬಹುದು. ಆದರೆ ಪ್ರತಿಯೊಬ್ಬರೂ ಕೂಡ ಬೆಂಗಳೂರಿಗೆ ಹೋಗಿ ಕೊಂಡುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕೇಂದ್ರ ಸರ್ಕಾರ ಮೊಬೈಲ್ ವಾಹನ ಎನ್ನುವುದನ್ನು ಪ್ರಾರಂಭಿಸಿದ್ದಾರೆ.
ಇವುಗಳ ಮುಖಾಂತರ ಒಂದೊಂದು ವಾಹನಗಳನ್ನು ಒಂದೊಂದು ವಲಯಕ್ಕೆ ಸಂಚಾರಕ್ಕೆ ಬಿಟ್ಟಿದ್ದಾರೆ ಅವುಗಳನ್ನು ನೀವು ಗಮನದಲ್ಲಿಟ್ಟುಕೊಂಡು ನಿಮ್ಮ ವಲಯಕ್ಕೆ ಬಂದಾಗ ನೀವು ಅದನ್ನು ಖರೀದಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.