Home Useful Information ಹಣ್ಣುಗಳಲ್ಲಿದೆ ಆರೋಗ್ಯದ ಗುಟ್ಟು.! ಯಾವ ಹಣ್ಣು ತಿಂದರೆ ಏನು ಉಪಯೋಗ ನೋಡಿ.!

ಹಣ್ಣುಗಳಲ್ಲಿದೆ ಆರೋಗ್ಯದ ಗುಟ್ಟು.! ಯಾವ ಹಣ್ಣು ತಿಂದರೆ ಏನು ಉಪಯೋಗ ನೋಡಿ.!

0
ಹಣ್ಣುಗಳಲ್ಲಿದೆ ಆರೋಗ್ಯದ ಗುಟ್ಟು.! ಯಾವ ಹಣ್ಣು ತಿಂದರೆ ಏನು ಉಪಯೋಗ ನೋಡಿ.!

* ಅನಾನಸು :- ಅನಾನಸ್‌ ಹಣ್ಣಿನಲ್ಲಿರುವ ಎಂಜೆಮ್ ನಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಈ ಅನಾನಸ್ ಹಣ್ಣು ತಿನ್ನುವುದರಿಂದ ತುಂಬಾ ಒಳ್ಳೆಯದು. ಅನಾನಸ್‌ ಹಣ್ಣು ಸುವಾಸನೆ ಎಷ್ಟೋ ಅಷ್ಟೇ ಮಧುರ ವಾಗಿ ಇರುತ್ತದೆ. ಸಿಹಿ ಹಾಗೂ ಹುಳಿಯಿಂದ ಕೂಡಿದ ಈ ಹಣ್ಣನ್ನು ತಿನ್ನುವುದಕ್ಕೆ ಇಷ್ಟಪಡುತ್ತಾರೆ ಈ ಹಣ್ಣು ಮಲಬದ್ಧತೆ ನಿವಾರಣೆಯ ಕೆಲಸ ಮಾಡುತ್ತದೆ. ಇದರಲ್ಲಿ ಪೋಟ್ಯಾಸಿಯಂ ಹೇರಳವಾಗಿ ಇರುತ್ತದೆ.

ಇದು ಕಿಡ್ನಿ ಸ್ಟೋನ್ ಸಮಸ್ಯೆ ಇದ್ದವರಿಗೆ ತುಂಬಾ ಒಳ್ಳೆಯದು ಈ ಹಣ್ಣಿನಲ್ಲಿ ಸಕ್ಕರೆ ಬದಲು ಉಪ್ಪು ಹಾಕಿಕೊಂಡು ಸ್ವಲ್ಪ ಮೆಣಸು ಪುಡಿ ಸಹ ಹಾಕಿಕೊಂಡು ತಿಂದರೆ ಜ್ವರ, ಕತ್ತುನೋವು ಕಡಿಮೆಯಾಗುತ್ತದೆ. ಬೆಳೆಯುವ ಮಕ್ಕಳಿಗೆ ಈ ಹಣ್ಣನ್ನು ತಿನ್ನಿಸಿದರೆ ತುಂಬಾ ಒಳ್ಳೆಯದು.

* ಕಲ್ಲಂಗಡಿ ಹಣ್ಣು :- ಕಲ್ಲಂಗಡಿ ಹಣ್ಣು ಕೆಂಪಗೆ, ತಣ್ಣಗೆ ಇರುವ ಲೋಳೆರಸದಿಂದ ಕೂಡಿರುತ್ತದೆ ಇದರಲ್ಲಿರುವ ಹೆಚ್ಚಿನ ಭಾಗ ನೀರು. ಅತೀ ಬಾಯಾರಿಕೆಯನ್ನು ತೀರಿಸುತ್ತದೆ. ಯೂರಿನ್ ಸಮಸ್ಯೆ ಇರುವವರು ತಿಂದರೆ ಮೂತ್ರಕೋಶದಲ್ಲಿ ಚಿಕ್ಕ ಕಲ್ಲುಗಳನ್ನು ಕರಗಿಸುತ್ತದೆ. ಕಲ್ಲಂಗಡಿ ರಸದಲ್ಲಿ ಜೇನುತುಪ್ಪ ಬೆರೆಸಿ ಕೊಂಡು ತಿಂದರೆ ರೋಗಗಳು ಕಡಿಮೆಯಾಗುತ್ತವೆ.

ಈ ಸುದ್ದಿ ನೋಡಿ:- ರಾಜ್ಯದ ಎಲ್ಲಾ ರೇಷನ್ ಕಾರ್ಡ್ ರದ್ದು.! ಹೊಸ ರೂಲ್ಸ್ ಜಾರಿ.!

ಯಾವ ರೀತಿ ಜ್ವರ ಬಂದವರಾದರೂ, ಕಾಯಿಯ ರಸದಲ್ಲಿ ಜೇನುತುಪ್ಪ ಬೆರೆಸಿಕೊಂಡು ತಿಂದರೆ ಆಯಾಸ ಕಡಿಮೆಯಾಗುತ್ತದೆ. ಶರೀರಕ್ಕೆ ಶಕ್ತಿಯು ಸಹ ಮಲಬದ್ಧತೆ ಇರುವವರು ಬೇಸಿಗೆಯಲ್ಲಿ ಈ ಹಣ್ಣು ತಿನ್ನುವುದು ಒಳ್ಳೆಯದು. ಒಂದು ಲೋಟ ರಸದಲ್ಲಿ ಸ್ವಲ್ಪ ಮಜ್ಜಿಗೆ, ಉಪ್ಪು ಬೆರೆಸಿ ಕುಡಿದರೆ ಬಾಯಿಯು ಒಣಗುವುದಿಲ್ಲ. ಬೇಸಿಗೆಯಲ್ಲಿ ಯೂರಿನ್ ಮಾಡುವಾಗ ಬರುವ ಉರಿ, ತಲೆನೋವು, ಈ ಹಣ್ಣನ್ನು ತಿಂದರೆ ಕಡಿಮೆಯಾಗುತ್ತದೆ.

* ಸಪೋಟಾ ಹಣ್ಣು :- ಸಪೋಟಾ ಈ ಹಣ್ಣು ಸಿಹಿಯಾಗಿರುತ್ತದೆ ಸಪೋಟಾವನ್ನು ತಿಂದರೆ ಆಯಾಸ ಕಡಿಮೆ ಮಾಡುವುದಲ್ಲದೇ ರಕ್ತದ ಬೆಳವಣಿಗೆಯಲ್ಲಿ ಸಹಕರಿಸುತ್ತದೆ. ಒಂದು ದಿನಕ್ಕೆ ಕೇವಲ ಎರಡು, ಮೂರು ಸಪೋಟ ಹಣ್ಣುಗಳನ್ನು ತಿಂದರೆ ಮಕ್ಕಳಿಗೆ, ದೊಡ್ಡವರಿಗೆ ಎಲ್ಲರಿಗೂ ಎಷ್ಟೋ ಪೋಷಕಾಂಶಗಳನ್ನು ಕೊಡುತ್ತದೆ.

* ದಾಳಿಂಬೆ ಹಣ್ಣು :- ದಾಳಿಂಬೆ ಹಣ್ಣು ಬಾಯಾರಿಕೆಯನ್ನು ತೇವವನ್ನು ಕಳೆಯುತ್ತದೆ. ದಾಳಿಂಬೆ ರಸವನ್ನು ಸೇವಿಸಿದರೆ ಮೂತ್ರ ಪಿಂಡಕ್ಕೆ ಒಳ್ಳೆಯದು. ಜ್ವರವನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ಕಾಯಿಗಳನ್ನು ಅರೆದು ದೇಹಕ್ಕೆ ಹಚ್ಚಿದರೆ ಅಧಿಕವಾಗಿ ಬರುವ ಬೆವರು ಕಡಿಮೆಯಾಗುತ್ತದೆ.

ಈ ಸುದ್ದಿ ನೋಡಿ:- ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಕಿಡ್ನಿ ಹಾಳಾಗಿದೆ ಎಂದರ್ಥ ಎಚ್ಚರ.!

* ಟೊಮ್ಯಾಟೋ ಹಣ್ಣು :- ಎಲ್ಲರಿಗೂ ಸಿಗುವ ಟೊಮ್ಯಾಟೋ ಈ ಹಣ್ಣಿನಲ್ಲಿ ವಿಟಮಿನ್ A, ಸಮೃದ್ಧಿಯಾಗಿರುತ್ತದೆ. ಈ ಹಣ್ಣುಗಳಲ್ಲಿ ಆಮ್ಲಗಳನ್ನು ಜೀರ್ಣಕೋಶ ರೋಗಗಳನ್ನು ಓಡಿಸಿ ಬಿಟ್ಟು ಜೀರ್ಣಕೋಶದಲ್ಲಿ ಅಧಿಕವಾಗಿ ತಯಾರಾಗುವ ಯಾಸಿಡ್ಸ್ ಕಡಿಮೆ ಮಾಡುತ್ತದೆ. ಟೊಮ್ಯಾಟೋ ಹಣ್ಣು ತಿಂದರೆ ಆಯಾಸ ಬರುವುದಿಲ್ಲ.

ಟೊಮೆಟೊ ಹಣ್ಣಿಗೆ ಸಕ್ಕರೆ ಬೆರೆಸಿ ಜ್ಯೂಸು ತಯಾರು ಮಾಡಿ ಐಸ್ ಬೆರೆಸಿ ಕುಡಿಯಬಹುವುದು ಟಮೋಟ ಜ್ಯೂಸ್ ಕುಡಿಯುವುದರಿಂದ ಮೊಡವೆಗಳು ಹೋಗಿ ಶರೀರವು ಕಾಂತಿಯುತವಾಗಿ ಕಾಣುವುದು.
* ದ್ರಾಕ್ಷಿ ಹಣ್ಣು :- ದ್ರಾಕ್ಷಿ ಹಣ್ಣು ಸಿಹಿ ಹಾಗೂ ಹುಳಿ ರುಚಿಗಳಿಂದ ಕೂಡಿರುತ್ತದೆ. ಜೀರ್ಣಕ್ರಿಯೆಯನ್ನು ಸಹಕರಿಸುತ್ತವೆ.

* ಪಪ್ಪಾಯ ಹಣ್ಣು :- ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಸಿ, ಇ, ಯು ಪೊಟ್ಯಾಶಿಯಂ ಹೆಚ್ಚಾಗಿ ಇರುತ್ತದೆ. ಈ ಹಣ್ಣು ಎಲ್ಲಾ ಕಾಲಗಳಲ್ಲೂ ಸಿಗುತ್ತದೆ ಇದು ಮಲಬದ್ಧತೆಯನ್ನು ತಗ್ಗಿಸುತ್ತದೆ. ಕಣ್ಣುಗಳು ತುಂಬಾ ನೀರು ಸೋರುವುದು, ಕಣ್ಣುಗಳು ಎಳೆಯುವುದು, ಮಸುಕು ಮಸುಕಾಗಿ ಅನಿಸುವುದು ಹೀಗೆ ಸಮಸ್ಯೆ ಬಂದವರು ಪಪ್ಪಾಯಿ ಹಣ್ಣನ್ನು ತಿಂದರೆ ಗುಣಮುಖರಾಗುತ್ತಾರೆ. ಹೀಗೆ ಇಂತಹ ಹಣ್ಣುಗಳನ್ನು ತಿನ್ನುವುದರಿಂದ ನೀವು ಇಷ್ಟೆಲ್ಲಾ ರೀತಿಯ ಪೋಷಕಾಂಶ ಗಳನ್ನು ಪಡೆದು ಕೊಳ್ಳಬಹುದು ಅದರಲ್ಲೂ ವಯಸ್ಸಾದವರು ಇಂತಹ ಹಣ್ಣುಗಳನ್ನು ತಿನ್ನುವುದು ತುಂಬಾ ಒಳ್ಳೆಯದು.

LEAVE A REPLY

Please enter your comment!
Please enter your name here