ದಿಯಾ ಹೆಗ್ಡೆ
ಈಗ ಮಾಧ್ಯಮಗಳಷ್ಟೇ ಸಾಮಾಜಿಕ ಮಾಧ್ಯಮಗಳು ಕೂಡ ವಿಷಯವನ್ನು ತಲುಪಿಸುವಲ್ಲಿ ಮಾಧ್ಯಮಗಳಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತವೆ. ಯಾವುದೇ ವಿಷಯ ಆಗಲಿ ಮಾಧ್ಯಮದಲ್ಲಿ ಪ್ರಚಾರ ಪಡೆಯುವುದಕ್ಕಿಂತ ಹೆಚ್ಚು ವೇಗವಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಡುತ್ತವೆ.
ಅಲ್ಲದೆ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಷಯಗಳನ್ನು ಇಟ್ಟುಕೊಂಡು ಮಾಧ್ಯಮಗಳು ಟಿ ಆರ್ ಪಿ ಪಡೆದುಕೊಳ್ಳುತ್ತವೆ. ಒಟ್ಟಿನಲ್ಲಿ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮದ ನಡುವೆ ಒಂದು ಅವಿನಾಭಾವ ಸಂಬಂಧ ಖಂಡಿತಾ ಇದೆ. ಹೀಗೆ ಟಿವಿ ಮಾಧ್ಯಮದಲ್ಲಿ ಕಾಣಿಸಿಕೊಂಡು ಈಗ ಸೋಶಿಯಲ್ ಯದಲ್ಲಿ ವೈರಲ್ ಗಾಯಕಿ ಎಂದೇ ಫೇಮಸ್ ಆಗಿರುವ ದಿಯಾ ಹೆಗ್ಡೆ ಬಗ್ಗೆ ಮತ್ತು ಅವರು ಹಾಡಿರುವ ಒಂದು ಹಾಡಿನ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ.
ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 19ರ ಕಂಟೆಸ್ಟೆಂಟ್ ಆಗಿರುವ ದಿಯಾ ಹೆಗ್ಡೆ ಅವರು ತಮ್ಮ ಮೊದಲ ಎಪಿಸೋಡಿನಲ್ಲಿಯೇ ವಿಶೇಷವಾದ ಹಾಡು, ಹಾಡಿಗೆ ತಕ್ಕ ಹಾವಾಭಾವ ಮತ್ತು ತಮ್ಮ ಅದ್ಭುತವಾದ ಧ್ವನಿಯಿಂದ ಎಲ್ಲರ ಗಮನ ಸೆಳೆದು ಬಿಟ್ಟಿದ್ದಾರೆ. ಆ ದಿನ ಕಾರ್ಯಕ್ರಮ ನೋಡಿದವರು ಹಾಗೂ ಮೆಚ್ಚಿಕೊಂಡವರು ಎಲ್ಲರೂ ಸೇರಿ ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಹೆಚ್ಚು ಶೇರ್ ಮತ್ತು ಲೈಕ್ ಮಾಡುತ್ತಿರುವುದರಿಂದ ಕರ್ನಾಟಕದ ಮೂಲೆ ಮೂಲೆಗೂ ಕೂಡ ಕಾರ್ಯಕ್ರಮ ನೋಡದವರಿಗೂ ಈಗ ಈಕೆ ಪರಿಚಿತಳಾಗಿದ್ದಾಳೆ.
ದಿಯಾ ಹೆಗ್ಡೆ ಎನ್ನುವ ಈಕೆ ಮೂಲತಃ ಸಾಗರದ ಕಡೆಯವರು, ಈಗಿನ್ನು ಕೇವಲ ಹತ್ತು ವರ್ಷದ ಹುಡುಗಿ ಆಗಿದ್ದರೂ ಕೂಡ ಈಕೆಗೆ ವಯಸ್ಸಿಗೂ ಮೀರಿದ ಟ್ಯಾಲೆಂಟ್ ಇದೆ. ಅದೀಗ ವೇದಿಕೆ ಮೇಲೆ ಸಾಬೀತು ಆಗಿದ್ದು ಸೋಶಿಯಲ್ ಮೀಡಿಯಾದಿಂದ ಎಲ್ಲೆಡೆ ಪ್ರಚಾರ ಪಡೆಯುತ್ತಿದೆ. ಮೊದಲ ಎಪಿಸೋಡ್ ನಲ್ಲೇ ಈಕೆ ಹಾಡಿದ ನಾ ಮುದುಕಿ ಆದರೆ ಏನಂತೆ ಇನ್ನೂ ಇರಾಕಿ ಎನ್ನುವ ಹಾಡು ಹಾಡಿನ ಶೈಲಿ ಆ ಜನಪದ ಗೀತೆಗೆ ಅವರು ಅಲ್ಲಿನ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಅವರನ್ನು ಸೇರಿಸಿದ ಬಗೆ.
ಈ ರೀತಿ ಹಾಡು ಕಟ್ಟಿ ಹಾಡಿಗೆ ತಕ್ಕ ಹಾಗೆ ಅಭಿನಯವನ್ನು ಮಾಡಿ ಧ್ವನಿಯಲ್ಲಿ ಮಾಡುಲೇಶನ್ ಮಾಡಿರುವ ರೀತಿ ಸಖತ್ ಆಗಿದೆ. ಈಗ ಕಾರ್ಯಕ್ರಮದ ಮೋಸ್ಟ್ ಅಟ್ರಾಕ್ಷನ್ ಕಂಟೆಸ್ಟೆಂಟ್ ಕೂಡ ದಿಯಾ ಅವರೇ ಆಗಿದ್ದಾರೆ. ಹಾಡು ಹಾಡುವ ಜೊತೆಗೆ ವಿಶೇಷವಾದ ಮತ್ತೊಂದು ಚಟುವಟಿಕೆಯನ್ನು ಕೂಡ ಮಾಡಿ ಅಲ್ಲಿರುವ ಜ್ಯೂರಿ ಮೆಂಬರ್ ಮತ್ತು ಪ್ರೇಕ್ಷಕರನ್ನು ರಂಜಿಸುವ ಈಕೆಯ ಸಂಭಾವನೆ ಇವರ ಮುದುಕಿ ಹಾಡು ಫೇಮಸ್ ಆದ ನಂತರ ಇನ್ನಷ್ಟು ಹೆಚ್ಚಾಗಿದೆಯಂತೆ.
ಈಗ ದಿಯಾ ಹೆಗ್ಡೆ ಅವರು ಒಂದು ವಾರದ ಸಂಭಾವನೆ ಆಗಿ ಬರೋಬ್ಬರಿ 20,000 ಗಳನ್ನು ಪಡೆಯುತ್ತಿದ್ದಾರಂತೆ. ಈ ವಾರ ಶಿವಣ್ಣ ಅತಿಥಿ ಆಗಿ ಬಂದಿದ್ದರು ಮತ್ತು ಶಿವಣ್ಣನ ಹಾಡುಗಳದ್ದೇ ರೌಂಡ್ ಆಗಿತ್ತು. ಎಲ್ಲ ಸ್ಪರ್ಧಿಗಳು ಶಿವಣ್ಣನ ಹಾಡುಗಳನ್ನು ಹಾಡಿ ರಂಜಿಸಿದರು ಜೊತೆಗೆ ದಿಯಾ ಹೆಗ್ಡೆ ಶಿವಣ್ಣನ ಬಗ್ಗೆ ಹಾಡು ಹಾಡಿರುವುದಲ್ಲದೆ ಶಿವಣ್ಣನ ಕುರಿತೆ ಹಾಡು ಬರೆದು ಹಾಡಿದ್ದಾರೆ ಎನ್ನುವುದು ಬಹಳ ವಿಶೇಷ.
ಅಚ್ಚುಮೆಚ್ಚಿನ ಅಣ್ಣಾವ್ರು ಕನ್ನಡ ಚಿತ್ರರಂಗದಲ್ಲಿ ಎನ್ನುವ ಹಾಡನ್ನು ಹಾಡಿದ್ದಾರೆ. ಈ ವಾರದ ಹಾಡು ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದೆ. ಈಕೆಯನ್ನು ನೋಡಿದ ಎಲ್ಲರೂ ಕೂಡ ವಂಶಿಕ ಆನಂದ್ ಅವರ ಸಮಕ್ಕೆ ಈಕೆ ಕೂಡ ಬೆಳೆಯುತ್ತಾಳೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ.