ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ಕೆಲಸದ ಒತ್ತಡ ಹೆಚ್ಚಾಗಿ ಇರುವುದರಿಂದ ಅವರಿಗೆ ಬಟ್ಟೆ ಒಗೆಯುವುದಕ್ಕೆ ಸಮಯವೇ ಇಲ್ಲ ದಂತೆ ಆಗಿದೆ. ಆದ ಕಾರಣ ಪ್ರತಿಯೊಬ್ಬರೂ ಕೂಡ ವಾಷಿಂಗ್ ಮಷೀನ್ ಅನ್ನು ಖರೀದಿ ಮಾಡುವುದರ ಮೂಲಕ ತಮ್ಮ ಬಟ್ಟೆಯನ್ನು ಅದರಲ್ಲಿ ಹಾಕಿ ಸ್ವಚ್ಛ ಮಾಡಿಕೊಳ್ಳುತ್ತಿರುತ್ತಾರೆ.
ಆದರೆ ನೀವು ಹೇಗೆಂದರೆ ಹಾಗೆ ಅದನ್ನು ಉಪಯೋಗಿಸುವಂತಿಲ್ಲ ಬದಲಿಗೆ ಸರಿಯಾದ ವಿಧಾನವನ್ನು ಅನುಸರಿಸುವುದರ ಮೂಲಕ ಸರಿಯಾದ ರೀತಿಯಲ್ಲಿ ಅದನ್ನು ಬಳಕೆ ಮಾಡಿಕೊಂಡರೆ ಮಾತ್ರ ನೀವು ಅದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಸರಿಯಾದ ವಿಧಾನವನ್ನು ಅನುಸರಿಸದೇ ತಪ್ಪು ತಪ್ಪಾಗಿ ನೀವು ತಿಳಿಯದೆ ಕೆಲವೊಂದು ವಿಧಾನ ಅನುಸರಿಸಿದರೆ ನೀವು ಅದರಿಂದ ಒಳ್ಳೆಯ ಕೆಲಸವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.
ಈ ಸುದ್ದಿ ಓದಿ:- ವಿಪರೀತ ಸಾಲ ಆಗಿದೆಯಾ.? ಚಿಂತೆ ಬಿಡಿ ಕೇವಲ 3 ರೂಪಾಯಿ ಇಲ್ಲಿ ಬಚ್ಚಿಡಿ ಸಾಕು 21 ದಿನದಲ್ಲೇ ಸಾಲ ತೀರುತ್ತೆ.!
ಅಂದರೆ ನೀವು ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ಹಾಕಿದರೆ ಅದು ಸಂಪೂರ್ಣವಾಗಿ ಸ್ವಚ್ಛ ಆಗುವುದಿಲ್ಲ. ಹಾಗಾದರೆ ಈ ದಿನ ವಾಷಿಂಗ್ ಮಷೀನ್ ಅನ್ನು ನಾವು ತೆಗೆದುಕೊಂಡ ಮೇಲೆ ಅದನ್ನು ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ಯಾವ ಕೆಲವು ಟ್ರಿಕ್ಸ್ ಗಳನ್ನು ನಾವು ಅನುಸರಿಸುವುದರ ಮೂಲಕ ವಾಷಿಂಗ್ ಮಷೀನ್ ಹೆಚ್ಚು ದಿನಗಳವರೆಗೆ ಬಳಕೆಗೆ ಬರುವ ಹಾಗೆ ನೋಡಿಕೊಳ್ಳಬಹುದು.
ಹಾಗೂ ಯಾವ ಸಂದರ್ಭದಲ್ಲಿ ಯಾವ ಕೆಲವು ವಿಧಾನಗಳನ್ನು ಅನು ಸರಿಸಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ. ಕೆಲವೊಂದಷ್ಟು ಜನ ಅದರಲ್ಲೂ ಕೆಲಸಕ್ಕೆ ಹೋಗುವಂತಹ ಕೆಲವು ಜನ ಬಟ್ಟೆ ಒಗೆಯುವುದಕ್ಕೆ ಎಂದೇ ವಾರದಲ್ಲಿ ಒಂದು ದಿನ ಅದಕ್ಕಾಗಿ ಮೀಸಲಿಡುತ್ತಾರೆ.
ಈ ಸುದ್ದಿ ಓದಿ:- ಸ್ತ್ರೀಯರಿಗಾಗಿ ವಿಶೇಷ ಜೂನ್ 2024 ಕರ್ಕಾಟಕ ರಾಶಿ ಮಾಸ ಭವಿಷ್ಯ.!
ಅಂದರೆ ಇಡೀ ಬಟ್ಟೆಯನ್ನು ಆ ಒಂದು ದಿನದಲ್ಲಿಯೇ ಅಷ್ಟು ಬಟ್ಟೆ ಯನ್ನು ಒಟ್ಟಿಗೆ ಹಾಕುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಕೂಡ ಈ ರೀತಿಯ ತಪ್ಪುಗಳನ್ನು ಮಾಡಬಾರದು. ವಾಷಿಂಗ್ ಮಷೀನ್ ನಲ್ಲಿ ಎಷ್ಟು ಕೆಪ್ಯಾಸಿಟಿ ಇರುತ್ತದೆಯೋ ಅಂದರೆ ಎಷ್ಟು ಕೆಜಿ ಬಟ್ಟೆಯನ್ನು ಹಾಕಬೇಕು ಎಂದು ಹೇಳಿರುತ್ತಾರೊ ಅಷ್ಟನ್ನು ಮಾತ್ರ ಹಾಕಿ ನಾವು ಬಟ್ಟೆ ಒಗೆಯುವುದರಿಂದ ಹೆಚ್ಚು ದಿನಗಳವರೆಗೆ ಬಾಳಿಕೆಗೆ ಬರುವ ಹಾಗೆ ಇಟ್ಟುಕೊಳ್ಳ ಬಹುದು.
ವಾಷಿಂಗ್ ಮಷೀನ್ ನಲ್ಲಿ ನಾವು ಬಟ್ಟೆ ಹೊಗೆದ ನಂತರ ವಾಷಿಂಗ್ ಮಷೀನ್ ಅನ್ನು ನಾವು ಒಂದು ಬಟ್ಟೆಯ ಸಹಾಯದಿಂದ ಸ್ವಚ್ಛ ಮಾಡುವುದು ಒಳ್ಳೆಯದು. ಅದರಲ್ಲೂ ವಾಷಿಂಗ್ ಮಷೀನ್ ಡ್ರಮ್ ರಬ್ಬರ್ ಅನ್ನು ಒರೆಸುವುದು ಉತ್ತಮ. ಆದರೆ ಹೆಚ್ಚಿನ ಜನ ಈ ವಿಧಾನವನ್ನು ಅನುಸರಿಸುವುದೇ ಇಲ್ಲ ಬದಲಿಗೆ ಅದರಲ್ಲಿ ಹಳೆಯ ಕೊಳೆ ಯಾವುದೇ ಇದ್ದರೂ ಅದು ಮುಂದೆ ನೀವು ಬಟ್ಟೆ ಹಾಕಿದರೆ ಅದಕ್ಕೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ.
ಈ ಸುದ್ದಿ ಓದಿ:- ಈ 4 ರಾಶಿಗಳವರು ಹಣ ಗಳಿಸಲು ಹುಟ್ಟಿದ್ದಾರೆ, ಹಣ ಪಡೆಯುವ ಅದೃಷ್ಟ ಇವರಿಗಿದೆ..!!
ನೀವು ನಿಮ್ಮ ವಾಷಿಂಗ್ ಮಷೀನ್ ಗೆ ಎಷ್ಟು ಬಟ್ಟೆ ಹಾಕಿರುತ್ತೀರೋ ಅದಕ್ಕೆ ಅನುಗುಣವಾಗಿ ನೀವು ಡಿಟರ್ಜೆಂಟ್ ಪೌಡರ್ ಅನ್ನು ಬಳಸುವುದು ಉತ್ತಮ. ಹೆಚ್ಚಾದರೂ ಕೂಡ ವಾಷಿಂಗ್ ಮಷೀನ್ ಗೆ ಸಮಸ್ಯೆ ಹಾಗೂ ಕಡಿಮೆ ಹಾಕಿದರೆ ಬಟ್ಟೆಯಲ್ಲಿ ಕೊಳೆ ಹೋಗುವುದಿಲ್ಲ.
ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ಒಗೆದ ತಕ್ಷಣವೇ ಅದನ್ನು ವಾಷಿಂಗ್ ಮಷೀನ್ ನಿಂದ ಆಚೆ ತೆಗೆಯಬೇಕು. ಬದಲಿಗೆ ಬಟ್ಟೆ ಒಗೆದ್ದು ಹೆಚ್ಚು ಸಮಯ ಆದರೂ ಕೂಡ ಬಟ್ಟೆ ತೆಗೆಯದೆ ಇರುವುದರಿಂದಲೂ ಕೂಡ ವಾಷಿಂಗ್ ಮಷೀನ್ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ನಾವು ಬಟ್ಟೆಯನ್ನು ವಾಷಿಂಗ್ ಮಷೀನ್ ಗೆ ಹಾಕುವಂತಹ ಸಂದರ್ಭದಲ್ಲಿ ಯಾವ ಬಟ್ಟೆಯನ್ನು ಹಾಕಿದರೆ ಅದು ಬೇಗ ಶುಭ್ರವಾಗುತ್ತದೆ ಯಾವುದನ್ನು ಹಾಕಿದರೆ ನಿಧಾನವಾಗುತ್ತದೆ ಎನ್ನುವುದನ್ನು ತಿಳಿದು ಕೊಂಡು ಹಾಕುವುದು ಉತ್ತಮ.