ಜೂನ್ ತಿಂಗಳಲ್ಲಿ ಕರ್ಕಾಟಕ ರಾಶಿಯವರ ಗ್ರಹ ಸ್ಥಿತಿ ಯಾವ ರೀತಿಯ ಇರುತ್ತದೆ ಎಂದು ನೋಡುವುದಾದರೆ. ಜೂನ್ ತಿಂಗಳಲ್ಲಿ ಪ್ರಧಾನವಾಗಿ 12 ನೆ ತಾರೀಕು ಮಿಥುನ ರಾಶಿಗೆ ಶುಕ್ರ ಗ್ರಹ ಬರುತ್ತಾನೆ ಹಾಗೂ 14ನೇ ತಾರೀಕು 12ನೇ ಮನೆಗೆ ಬುಧ ಹಾಗೂ ರವಿಗ್ರಹ ಬರುತ್ತಾನೆ. ಆದ್ದರಿಂದ ಇವುಗಳ ಸಂಚಾರದಿಂದ ಕರ್ಕಾಟಕ ರಾಶಿಯವರಿಗೆ ಯಾವ ರೀತಿಯಾದ ಒಳ್ಳೆಯ ಫಲಗಳು ಬರುತ್ತದೆ ಹಾಗೂ ಯಾವ ರೀತಿಯ ಅಶುಭ ಫಲಗಳು ಬರುತ್ತದೆ ಏನೆಲ್ಲಾ ಇವರ ಜೀವನದಲ್ಲಿ ನಡೆಯುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿಯೋಣ.
* ಕರ್ಕಾಟಕ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಚಿನ್ನಭರಣಗಳನ್ನು ಖರೀದಿಸುವಂತಹ ಯೋಗ ಹೆಚ್ಚಾಗಿದೆ. ಆದರೆ ಇದರಲ್ಲಿ ಸಮಸ್ಯೆ ಏನು ಬರುತ್ತದೆ ಎಂದರೆ ಚಿನ್ನಾಭರಣಗಳನ್ನು ಖರೀದಿಸುತ್ತೀರಿ ಆದರೆ ಅದಕ್ಕೆ ಹಣ ಸರಿಯಾದ ರೀತಿಯಲ್ಲಿ ಹೊಂದದೆ ಬೇರೆಯವರಿಂದ ಸಾಲ ಮಾಡುವುದರ ಮೂಲಕ ನೀವು ಚಿನ್ನಾಭರಣ ಗಳನ್ನು ಖರೀದಿಸುತ್ತಿರಿ. ಇದು ಒಂದು ರೀತಿಯ ಸಮಸ್ಯೆಯಾಗಿ ನಿಮಗೆ ಪರಿಣಮಿಸುತ್ತದೆ.
* ಇದರ ಜೊತೆ ಇನ್ನೂ ಕೆಲವೊಂದಷ್ಟು ಜನ ಇರುವಂತಹ ಚಿನ್ನವನ್ನು ಅಡ ಇಟ್ಟು ಅದರಿಂದ ಹಣ ಪಡೆದುಕೊಳ್ಳುವಂತಹ ಸನ್ನಿವೇಶಗಳು ಕೂಡ ಉಂಟಾಗುತ್ತದೆ. ಆ ಒಂದು ಹಣವನ್ನು ನೀವು ದುಂದು ವೆಚ್ಚ ಮಾಡದೆ ಅದನ್ನು ಬೇರೆ ಕೆಲಸ ಕಾರ್ಯಗಳಿಗೆ ಉಪಯೋಗಿಸಿಕೊಳ್ಳು ತ್ತೀರಿ ಈ ರೀತಿಯಾದಂತಹ ಸನ್ನಿವೇಶಗಳು ಜೂನ್ ತಿಂಗಳಿನಲ್ಲಿ ಕರ್ಕಾಟಕ ರಾಶಿಯವರ ಜೀವನದಲ್ಲಿ ನಡೆಯುತ್ತದೆ.
ಆದರೆ ಪ್ರತಿ ಯೊಬ್ಬರೂ ಕೂಡ ನೆನಪಿಟ್ಟುಕೊಳ್ಳಬೇಕಾಗಿರುವಂತಹ ವಿಷಯ ಏನು ಎಂದರೆ ಚಿನ್ನಭರಣಗಳನ್ನು ಅಡವಿಟ್ಟು ಹಣವನ್ನು ಪಡೆಯುವುದರಿಂದ ನಿಮಗೆ ಸಹಾಯವಾಗಬಹುದು. ಆದರೆ ಇದು ತಪ್ಪು ಎಂದು ಶಾಸ್ತ್ರಗಳು ತಿಳಿಸುತ್ತದೆ ಇದು ನಿಮಗೆ ಮುಂದಿನ ದಿನದಲ್ಲಿ ದಾರಿದ್ರ್ಯವನ್ನು ಸಹ ಉಂಟುಮಾಡುವ ಸಾಧ್ಯತೆ ಇದೆ.
* ಇನ್ನು ನಿಮ್ಮ ಆರೋಗ್ಯದ ವಿಷಯದಲ್ಲಿ ನೋಡುವುದಾದರೆ 14ನೇ ತಾರೀಖಿನ ತನಕ ನಿಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಆದರೆ 14ನೇ ತಾರೀಖಿನ ನಂತರ ನಿಮ್ಮ ಆರೋಗ್ಯ ದಲ್ಲಿ ಕೆಲವೊಂದು ಸಮಸ್ಯೆಗಳು ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ.
ನಿಮ್ಮ ಕೆಲಸದಲ್ಲಿ ಅತಿಯಾದ ಒತ್ತಡ ಇರುವುದರಿಂದ ನಿಮ್ಮ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಯಾವುದೇ ಕೆಲಸ ಕಾರ್ಯ ಆಗಿರಬಹುದು ಅದರಲ್ಲಿ ಹೆಚ್ಚು ಆಲೋಚನೆ ಮಾಡದೆ ಅದನ್ನು ಹೇಗೆ ಸರಿಪಡಿಸಬಹುದು ಎನ್ನುವುದನ್ನು ಸಮಾಧಾನಕರ ರೀತಿ ಯಲ್ಲಿ ತಿಳಿದು ಕೊಂಡು ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ.
* ಇನ್ನು ಅವಿವಾಹಿತರಿಗೆ ಜೂನ್ ತಿಂಗಳಿನಲ್ಲಿ ಕರ್ಕಾಟಕ ರಾಶಿಯ ಸ್ತ್ರೀಯರಿಗೆ ಗುರುಬಲ ಚೆನ್ನಾಗಿ ಇದೆ. ಆದ್ದರಿಂದ ವಿವಾಹದ ವಿಚಾರ ವಾಗಿ ಕೆಲವೊಂದಷ್ಟು ತೀರ್ಮಾನಗಳನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು. ಆದರೆ ಶುಕ್ರ ಗ್ರಹ ವಿವಾಹ ಕಾರಕ ಹದಿನಾಲ್ಕನೇ ತಾರೀಖಿನ ನಂತರ 12ನೇ ಮನೆಗೆ ಅಂದರೆ ವ್ಯಯ ಸ್ಥಿತಿಗೆ ಬರುತ್ತಾನೆ.
ಇದರಿಂದ ಜೂನ್ ತಿಂಗಳ ಮೊದಲ ಎರಡು ವಾರಗಳಲ್ಲಿ ಮಾಡುವ ಪ್ರಯತ್ನಗಳಲ್ಲಿ ನೀವು ಜಯವನ್ನು ಕಾಣುತ್ತೀರಿ. ಆದರೆ ಮುಂದಿನ ದಿನಗಳಲ್ಲಿ ನೀವು ಎಷ್ಟೇ ಪ್ರಯತ್ನ ಪಟ್ಟರು ಕೂಡ ಅದರಲ್ಲಿ ಕೆಲವೊಂದ ಷ್ಟು ವೈಫಲ್ಯಗಳನ್ನು ಅಂದರೆ ವಿಫಲಗಳನ್ನು ನೀವು ಎದುರಿಸಬೇಕಾಗುತ್ತದೆ.
ಅದೇ ರೀತಿಯಾಗಿ ಈಗಾಗಲೇ ವಿವಾಹ ಆಗಿರುವಂತಹ ಕರ್ಕಾಟಕ ರಾಶಿಯ ಸ್ತ್ರೀಯರ ವೈವಾಹಿಕ ಜೀವನದಲ್ಲಿ 14ನೇ ತಾರೀಖಿನ ನಂತರ ಗಂಡ ಹೆಂಡತಿ ಇಬ್ಬರ ನಡುವೆ ಕೆಲವೊಂದಷ್ಟು ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.