ಬಟ್ಟೆ ಒಗೆಯುವುದು ಎಂದರೆ ಪ್ರತಿಯೊಬ್ಬರಿಗೂ ಕೂಡ ದೊಡ್ಡ ಕೆಲಸವೇ ಹೌದು. ಕೆಲವೊಂದಷ್ಟು ಜನ ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ಹಾಕಿ ಒಗೆಯುವುದಕ್ಕೂ ಕೂಡ ಈ ಕೆಲಸ ನನ್ನಿಂದ ಸಾಧ್ಯವಿಲ್ಲ ಎನ್ನುವಂತಹ ಮಾತುಗಳನ್ನು ಹೇಳುತ್ತಿರುತ್ತಾರೆ ಇನ್ನು ಕೈಯಿಂದ ಬಟ್ಟೆ ಒಗೆಯುವವರಿಗೆ ಇದಂತೂ ದೊಡ್ಡ ಕೆಲಸವೇ ಆಗಿರುತ್ತದೆ.
ಆದರೆ ಕೆಲವೊಂದಷ್ಟು ಜನ ವಾಷಿಂಗ್ ಮಷೀನ್ ನಲ್ಲಿ ಬಟ್ಟೆಯನ್ನು ಹಾಕಿದರೂ ಕೂಡ ಅದು ಸ್ವಚ್ಛವಾಗಿ ಹೋಗುವುದಿಲ್ಲ ಎನ್ನುವ ಕಾರಣಕ್ಕಾಗಿ ಅವರು ಕೈಯಿಂದಲೇ ಬಟ್ಟೆಯನ್ನು ಒಗೆಯುತ್ತಿರುತ್ತಾರೆ. ಆದರೆ ನಾವು ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ಒಗೆಯುವಂತಹ ಸಂದರ್ಭದಲ್ಲಿ ಕೆಲವೊಂದಷ್ಟು ವಿಷಯಗಳನ್ನು ಅಂದರೆ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಬೇಕು.
ಆಗ ಮಾತ್ರ ಬಟ್ಟೆ ಸ್ವಚ್ಛವಾಗಿ ಆಗುತ್ತದೆ ಇಲ್ಲವಾದರೆ ಬಟ್ಟೆಯಲ್ಲಿರುವ ಕೊಳೆ ಹಾಗೆ ಇರುತ್ತದೆ ಹಾಗೂ ಬಟ್ಟೆ ಬೇಗ ಹಾಳಾಗುವ ಸಾಧ್ಯತೆಗಳು ಕೂಡ ಇರುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ಹಾಕುವಂತಹ ಸಂದರ್ಭದಲ್ಲಿ ನಾವು ಯಾವ ರೀತಿಯ ಕೆಲವು ವಿಧಾನಗಳನ್ನು ಅನುಸರಿಸಿ ವಾಷಿಂಗ್ ಮಷೀನ್ ಗೆ ಬಟ್ಟೆಯನ್ನು ಹಾಕಿ ಅದರಿಂದ ಸಂಪೂರ್ಣವಾದಂತಹ ಕೊಳೆಯನ್ನು ತೆಗೆಯಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ನಾವು ವಾಷಿಂಗ್ ಮಷೀನ್ ನಲ್ಲಿ ಬಟ್ಟೆಯನ್ನು ಹಾಕಿದರೆ ಆ ಒಂದು ಬಟ್ಟೆ ಶೇಡ್ ಹೋಗುತ್ತದೆ ಎನ್ನುವಂತಹ ಮಾತನ್ನು ಪ್ರತಿಯೊಬ್ಬರೂ ಕೂಡ ಹೇಳುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ನಾವು ವಾಷಿಂಗ್ ಮಷೀನ್ ಗೆ ಬಟ್ಟೆ ಹಾಕುವಾಗ ಅದನ್ನು ಉಲ್ಟಾ ಮಾಡಿ ಹಾಕಬೇಕು.
ಈ ರೀತಿ ಹಾಕುವುದರಿಂದ ಬಟ್ಟೆಯಲ್ಲಿರುವಂತಹ ಕೊಳೆ ಸಂಪೂರ್ಣ ವಾಗಿ ಹೋಗುತ್ತದೆ ಹಾಗೂ ಬಟ್ಟೆ ಹಳೆಯದರಂತೆ ಆಗುವುದಿಲ್ಲ ಇನ್ನು ಕೆಲವೊಂದಷ್ಟು ಬಟ್ಟೆಯಲ್ಲಿ ಎಂಬ್ರಾಯಿಡರಿ ಡಿಸೈನ್ ಇರುತ್ತದೆ ಇಂತಹ ಬಟ್ಟೆಯನ್ನು ನಾವು ವಾಷಿಂಗ್ ಮಷೀನ್ ಗೆ ಹಾಕುವಾಗ ಇದನ್ನು ಸಹ ಮೇಲೆ ಹೇಳಿದಂತೆ ಉಲ್ಟಾ ಮಾಡಿ ಹಾಕಬೇಕು.
ಈ ರೀತಿ ಹಾಕುವುದರಿಂದ ಅದು ಕಿತ್ತು ಹೋಗುವ ಸಾಧ್ಯತೆ ಕಡಿಮೆ ಇರುತ್ತದೆ ಹಾಗೂ ಬಟ್ಟೆಯೂ ಕೂಡ ಹೆಚ್ಚು ಹಾಳಾಗುವುದಿಲ್ಲ ಹೊಸದರಂತೆ ಇರುತ್ತದೆ. ನಾವು ಯಾವುದೇ ಹೊಸ ಬಟ್ಟೆಯನ್ನು ಹಾಕಿಕೊಂಡು ತಕ್ಷಣವೇ ಅದನ್ನು ಹೋಗಿಯಬೇಕು ಎಂದೂ ಕೆಲವೊಂದಷ್ಟು ಜನ ವಾಷಿಂಗ್ ಮಷೀನ್ ಗೆ ಹಾಕುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಕೂಡ ಹೊಸ ಬಟ್ಟೆಯನ್ನು ಮೊದಲ ಬಾರಿಗೆ ವಾಷಿಂಗ್ ಮಷೀನ್ ಗೆ ಹಾಕಬಾರದು.
ಕೆಲವೊಂದು ಹೊಸ ಬಟ್ಟೆಗಳನ್ನು ನಾವು ಹೊಗೆಯುವಂತಹ ಸಂದರ್ಭದಲ್ಲಿ ಅದರಲ್ಲಿ ಬಣ್ಣ ಬರುವ ಸಾಧ್ಯತೆ ಇರುತ್ತದೆ ಇದರಿಂದ ಬೇರೆ ಬಟ್ಟೆಗಳಿಗೂ ಕೂಡ ಬಣ್ಣ ತಗಲಿ ಆ ಬಟ್ಟೆ ಹಾಳಾಗುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಹೊಸ ಬಟ್ಟೆಯನ್ನು ಕೂಡ ನೀವು ಮೊದಲೇ ವಾಷಿಂಗ್ ಮಷೀನ್ ಗೆ ಹಾಕಬೇಡಿ ಮೊದಲು ಕೈಯಿಂದ ವಾಶ್ ಮಾಡಿ ಎರಡರಿಂದ ಮೂರು ಬಾರಿ ಆನಂತರ ನೀವು ವಾಷಿಂಗ್ ಮಷೀನ್ ಗೆ ಹಾಕಬಹುದು.
ನೀವು ಕೆಲವೊಂದಷ್ಟು ಬ್ರಾಂಡೆಡ್ ಬಟ್ಟೆಗಳನ್ನು ತೆಗೆದುಕೊಂಡು ವಾಷಿಂಗ್ ಮಷೀನ್ ಗೆ ಹಾಕಬಹುದು ಅಥವಾ ಕೈಯಲ್ಲೇ ಒಗೆಯಬೇಕಾ ಎನ್ನುವಂತಹ ಮಾಹಿತಿಗಳನ್ನು ಕೊಟ್ಟಿರುತ್ತಾರೆ ಅದನ್ನು ಅನುಸರಿಸಿ ಆನಂತರ ಅದನ್ನು ಒಗೆಯುವುದು ಉತ್ತಮ. ಇಲ್ಲವಾದರೆ ಆ ಬಟ್ಟೆ ಹಾಳಾಗುವ ಎಲ್ಲ ಸಾಧ್ಯತೆಗಳು ಕೂಡ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.