ಈ ಪ್ರಪಂಚದಲ್ಲಿ ಸಾ’ವಿ’ಲ್ಲ’ದ ಮನೆ ಇಲ್ಲ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಕೂಡ ಸಾ’ಯ’ಲೇ’ಬೇಕು. ಹೀಗೆ ನಮ್ಮ ಮನೆಯಲ್ಲಿ ಮ’ರ’ಣ ಹೊಂದಿರುವ ನಮ್ಮ ಹಿರಿಯರ ನೆನಪಿಗಾಗಿ ಅವರ ಮೇಲಿರುವ ಪ್ರೀತಿಯಿಂದ ಕೆಲ ಫೋಟೋಗಳನ್ನು ನಾವು ಇಟ್ಟುಕೊಂಡಿರುತ್ತೇವೆ.
ಪೂಜೆ ಮಾಡುವ ಉದ್ದೇಶದಿಂದಲೂ ಕೂಡ ಫೋಟೋ ಹಾಕಿರುತ್ತೇವೆ ಆದರೆ ವಾಸ್ತು ಶಾಸ್ತ್ರದಲ್ಲಿ ಈ ರೀತಿ ಮ’ರ’ಣ ಹೊಂದಿರುವವರ ಫೋಟೋ ಹಾಕುವುದಕ್ಕೆ ಒಂದು ನಿಯಮ ಇದೆ. ಒಂದು ವೇಳೆ ತಪ್ಪಾದ ದಿಕ್ಕಿನಲ್ಲಿ ನಾವು ಗತಿಸಿದ ಹಿರಿಯರ ಫೋಟೋಗಳನ್ನು ಹಾಕುವುದರಿಂದ ಅದರ ದುಷ್ಪರಿಣಾಮಗಳು ಮನೆಯ ಇತರ ಸದಸ್ಯರ ಮೇಲೆ ಬೀಳುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾದರೆ ಯಾವ ದಿಕ್ಕಿನಲ್ಲಿ ಹಿರಿಯರ ಫೋಟೋ ಹಾಕಬೇಕು ಗೊತ್ತಾ?…
* ಯಾವುದೇ ಕಾರಣಕ್ಕೂ ದೇವರ ಫೋಟೋಗಳ ಪಕ್ಕ ದೇವರ ಫೋಟೋಗಳ ಜೊತೆಗೆ ಪೂರ್ವಜರ ಫೋಟೋಗಳನ್ನು ಮತ್ತು ಮರಣ ಹೊಂದಿರುವ ನಿಮ್ಮ ಕುಟುಂಬದ ಸದಸ್ಯರ ಫೋಟೋಗಳನ್ನು ಮಿಕ್ಸ್ ಮಾಡಿ ಹಾಕಲೇಬಾರದು. ಇದರಿಂದ ಪಿತೃಗಳ ಆಶೀರ್ವಾದ ನಿಮಗೆ ಸಿಗುವುದಿಲ್ಲ. ಇದು ತಪ್ಪಾದ ಕ್ರಮ ಆಗಿರುವುದರಿಂದ ಅನೇಕ ದೊಡ್ಡ ದೊಡ್ಡ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ.
* ಮನೆಯಲ್ಲಿ ಎಲ್ಲೆಂದರಲ್ಲಿ ಪೂರ್ವಜರ ಫೋಟೋಗಳನ್ನು ಹಾಕಬಾರದು. ಹೀಗೆ ಗತಿಸಿದವರ ಫೋಟೋವನ್ನು ಎಲ್ಲಾ ಗೋಡೆಗೂ ಹಾಕುವುದರಿಂದ ಮನೆಯ ವಾತಾವರಣ ಉ’ದ್ವಿ’ಗ್ನವಾಗುತ್ತದೆ.
* ಒಬ್ಬರ ಒಂದಕ್ಕಿಂತ ಹೆಚ್ಚಿನ ಫೋಟೋಗಳನ್ನು ಹಾಕಬಾರದು
* ಒಂದು ತಲೆಮಾರಿನ ಫೋಟೋಗಳನ್ನು ಮಾತ್ರ ಹಾಕಬೇಕು, ಅಂದರೆ ನಿಮ್ಮ ತಾತ, ನಿಮ್ಮ ತಂದೆ ನೀವು ಒಂದು ಕುಟುಂಬದಲ್ಲಿ ಬದುಕುತ್ತಿದ್ದರೆ ನಿಮ್ಮ ತಾತನ ತಂದೆ ತಾಯಿ ಅಣ್ಣ-ತಮ್ಮಂದಿರ ಫೋಟೋಗಳನ್ನು ಹಾಕಬಹುದು. ಅದಾದ ನಂತರ ನಿಮ್ಮ ತಂದೆ ಹಾಗೂ ನೀವು ಜೀವಿಸುತ್ತಿರುವಾಗ ನಿಮ್ಮ ತಂದೆಯ ತಂದೆ-ತಾಯಿ ಮತ್ತು ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರ ಫೋಟೋಗಳನ್ನು ಹಾಕಬಹುದು. ಆದರೆ ನಿಮ್ಮ ವಂಶದಲ್ಲಿ ಯಾರಾದರೂ ಪ್ರಭಾವಿ ವ್ಯಕ್ತಿಗಳಾಗಿದ್ದು ಆ ಫೋಟೋ ಹಾಕುವುದರಿಂದ ನಿಮ್ಮ ಮನೆ ಮಕ್ಕಳಿಗೆ ಪ್ರೇರಣೆ ಸಿಗುತ್ತದೆ ಎಂದರೆ ಅಂತಹವರ ಫೋಟೋಗಳನ್ನು ಹಾಕಬಹುದು.
* ತೀರಿ ಹೋದವರ ಫೋಟೋಗಳ ಜೊತೆ ಜೀವಂತವಾಗಿರುವವರ ಫೋಟೋಗಳನ್ನು ಹಾಕಬೇಡಿ. ವಾಸ್ತುಶಾಸ್ತ್ರ ಹೇಳುವ ಪ್ರಕಾರ ಇದು ಬಹಳ ದೊಡ್ಡ ತಪ್ಪು, ಇದರಿಂದ ಆ ವ್ಯಕ್ತಿಗೆ ದೋಷಗಳು ಉಂಟಾಗುತ್ತದೆ, ಸಮಸ್ಯೆಗಳು ಬರುತ್ತವೆ,
* ಯಾವುದೇ ಕಾರಣಕ್ಕೂ ಪೂರ್ವ ದಿಕ್ಕಿನ ಗೋಡೆಯಲ್ಲಿ ಮತ್ತು ಪಶ್ಚಿಮ ಹಾಗೂ ದಕ್ಷಿಣದ ದಿಕ್ಕಿನಲ್ಲಿ ಕೂಡ ಹಿರಿಯರ ಫೋಟೋಗಳನ್ನು ಹಾಕಬಾರದು.
* ಅಡುಗೆ ಮನೆ, ಹಾಲ್ ಹಾಗೂ ಬೆಡ್ರೂಮ್ ನಲ್ಲೂ ಕೂಡ ಗತಿಸಿ ಹೋದ ಹಿರಿಯರ ಫೋಟೋಗಳನ್ನು ಹಾಕಬಾರದು, ಈ ರೀತಿ ಹಾಕುವುದರಿಂದ ಕುಟುಂಬದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ.
* ಮನೆಯಿಂದ ಹೊರಗೆ ಹೊರಡುವಾಗ ಹಾಗೂ ಮನೆ ಒಳಗಡೆ ಬರುವಾಗ ಪಿತೃಗಳ ಫೋಟೋ ಎದುರಿಗೆ ಕಾಣಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
* ಮನೆಯ ಮುಖ್ಯದ್ವಾರದ ಮೇಲೆ ಯಾವುದೇ ಕಾರಣಕ್ಕೂ ಮ’ರ’ಣ ಹೊಂದಿರುವವರ ಫೋಟೋಗಳನ್ನು ಹಾಕಬಾರದು
* ಫೋಟೋಗಳು ಗೋಡೆಯ ಮೇಲೆ ನೇತಾಡುವಂತೆ ಹಾಕಬಾರದು, ಫೋಟೋಗಳನ್ನು ಹಾಕಿದ ಮೇಲೆ ಪದೇಪದೇ ಹಿಂದೆ ಮುಂದೆ ಅಲುಗಾಡಬಾರದು ಮತ್ತು ಆಗಾಗ ಆ ಫೋಟೋ ಸ್ಥಾನವನ್ನು ಬದಲಾಯಿಸಬಾರದು. ಇದು ಅವರಿಗೆ ಅಪಮಾನ ಮಾಡಿದಂತೆ. ಇದರಿಂದ ಹಿರಿಯರ ಆಶೀರ್ವಾದ ಸಿಗದೆ ನಮ್ಮ ಬದುಕು ಕೂಡ ಇದೇ ರೀತಿ ತೊಯ್ದಾಡುತ್ತಿರುತ್ತದೆ.
* ಫೋಟೋಗಳನ್ನು ಯಾವಾಗಲೂ ಕಟ್ಟಿಗೆಯ ಸ್ಟ್ಯಾಂಡ್ ಮೇಲೆ ಭದ್ರವಾಗಿ ಗೋಡೆಗೆ ಕೂರುವಂತೆ ಹಾಕಬೇಕು.
* ಮನೆಯಲ್ಲಿ ಒಂದು ಕೂಡ ಹಿರಿಯರ ಫೋಟೋಗಳು ಇರದೇ ಇರುವುದು ಕೂಡ ಮನೆಗೆ ಲಕ್ಷಣವಲ್ಲ. ಹಿರಿಯರಿಗೆ ಗೌರವ ಕೊಡುವ ಸಲುವಾಗಿ ಮತ್ತು ಕಿರಿಯರಿಗೆ ಕುಟುಂಬದ ಇತಿಹಾಸ ಪರಿಚಯಿಸುವ ಸಲುವಾಗಿ ಮತ್ತು ನಮ್ಮ ಪಿತೃ ಋಣ ತೀರಿಸುವ ಸಲುವಾಗಿ ನಾವು ಮನೆಯಲ್ಲಿ ಹಿರಿಯರ ಫೋಟೋಗಳನ್ನು ಇಟ್ಟು ಗೌರವಿಸಬೇಕು.