ಪ್ರತಿಯೊಬ್ಬರ ಕೂಡ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಸುಳ್ಳು ಹೇಳುವ ಅವಶ್ಯಕತೆ ಇರುತ್ತದೆ. ಆದರೂ ಈ ಕಾಲದಲ್ಲಿ ಸತ್ಯವಂತರಾಗಿದ್ದರೆ ಸಮಸ್ಯೆ ಹೆಚ್ಚು ಎನ್ನುವುದು ಸತ್ಯ. ಆದರೆ ನಾವು ಹೇಳುವ ಸುಳ್ಳುಗಳು ಇನ್ನೊಬ್ಬರನ್ನು ಕಾಪಾಡುವ ಕಾರಣಕ್ಕಾಗಿ ಇರಬೇಕು ಅಥವಾ ನಾವೇ ಸಂ’ಕ’ಷ್ಟದಲ್ಲಿ ಜಾಣತನದಿಂದ ಪಾರಾಗಲು ಇನ್ನೊಬ್ಬರಿಗೆ ಬರುವ ಸಮಸ್ಯೆಯನ್ನು ತಡೆಯಲು ಈ ಕಾರಣಕ್ಕಾಗಿ ಸುಳ್ಳು ಹೇಳಿದರೆ ಪರವಾಗಿಲ್ಲ.
ಆದರೆ ಕೆಲವರು ಬಾಯಿ ಬಿಟ್ಟರೆ ಬರಿ ಬಡಾಯಿ ಕೊಚ್ಚಿಕೊಳ್ಳುತ್ತಿರುತ್ತಾರೆ ಅಥವಾ ಸುಳ್ಳು ಹೇಳುವುದನ್ನೆ ಆಯುಧ ಮಾಡಿಕೊಂಡು ಮತ್ತೊಬ್ಬರನ್ನು ಮೋಸ ಮಾಡುತ್ತಾರೆ. ಇದು ತಪ್ಪು. ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಯಾವ ಯಾವ ರಾಶಿಯವರು ಯಾವ ಕಾರಣಕ್ಕಾಗಿ ಸುಳ್ಳು ಹೇಳುತ್ತಾರೆ ಎನ್ನುವುದರ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ. ಇದರ ಅರ್ಥ ಆ ರಾಶಿಯ ಎಲ್ಲರೂ ಈ ರೀತಿ ಇರುತ್ತಾರೆ ಎಂದಲ್ಲ ಆದರೆ ಅವರ ಸ್ವಭಾವದಲ್ಲಿ ಹೀಗಿರಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದೆ ಅಷ್ಟೇ.
* ಮಿಥುನ ರಾಶಿ:- ಮಿಥುನ ರಾಶಿಯವರು ಸಹ ಕೆಲವೊಮ್ಮೆ ಸುಳ್ಳುಗಳನ್ನ ಹೇಳುತ್ತಾರೆ. ಆದರೆ ಮಿಥುನ ರಾಶಿಯವರು ತಮ್ಮ ಕುಟುಂಬದ, ಸ್ನೇಹಿತರ ಅಥವಾ ಸಂಬಂಧಿಕರ ಗೌರವ ಕಾಪಾಡುವುದಕ್ಕಾಗಿ ಸುಳ್ಳು ಹೇಳುತ್ತಾರೆ. ಇವರು ಸುಳ್ಳು ಹೇಳುವಾಗ ಬಹಳ ಭ’ಯಪಡುತ್ತಾರೆ ಮತ್ತು ಮನಸ್ಸಿನಿಂದ ಹೇಳುವುದಿಲ್ಲ. ಸುಳ್ಳು ಹೇಳುವುದಕ್ಕೆ ಇವರು ಬಹಳ ತಡವರಿಸುವುದರಿಂದ ಆಗ ಇತರರಿಗೆ ಇವರು ಹೇಳುತ್ತಿರುವುದು ಸುಳ್ಳು ಎಂದು ಗೊತ್ತಾಗುತ್ತದೆ. ಆದರೆ ಅವರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕಾಗಿ ಅದು ಸುಳ್ಳು ಎಂದು ಅರ್ಥ ಮಾಡಿಕೊಂಡು ಮತ್ತೆ ಮರಳಿ ಪ್ರಶ್ನೆ ಕೇಳದೇ ಇರುವುದು ಒಳ್ಳೆಯದು
* ಕರ್ಕಾಟಕ ರಾಶಿ:- ಸುಳ್ಳು ಹೇಳುವುದರಲ್ಲಿ ಕರ್ಕಾಟಕ ರಾಶಿಯವರು ಮುಂದೆ ಇರುತ್ತಾರೆ. ಇವರು ತಾವು ಮಾಡಿದ ತಪ್ಪುಗಳನ್ನು ಮುಚ್ಚಿ ಹಾಕುವುದಕ್ಕಾಗಿ ಸುಳ್ಳು ಹೇಳುತ್ತಾರೆ, ಇವರಿಗೆ ಯಾವುದಾದರೂ ವಿಷಯವನ್ನು ಕೇಳಿದಾಗ ನೇರವಾಗಿ ಉತ್ತರ ಕೊಡದೆ ಸುತ್ತಿ ಬಳಸಿ ಮಾತನಾಡುತ್ತಿದ್ದಾರೆ ಎಂದರೆ ಅವರು ಅದಕ್ಕೆ ಸಬೂಬು ಕೊಡಲು ಸುಳ್ಳುಗಳನ್ನು ಹುಡುಕುತ್ತಿದ್ದಾರೆ ಎಂದು ಅರ್ಥ.
* ಸಿಂಹ ರಾಶಿ:- ಸಿಂಹರಾಶಿಯವರು ಇತರರನ್ನು ಆಕರ್ಷಿಸಲು ಸುಳ್ಳು ಹೇಳುತ್ತಾರೆ. ಬೇರೆಯವರೇ ಮುಂದೆ ಯಾರಿಗೂ ಕಮ್ಮಿ ಇಲ್ಲ ಎಂದು ಜಂಭ ಕೊಚ್ಚಿಕೊಳ್ಳುವ ಸಲುವಾಗಿ ಸುಳ್ಳುಗಳನ್ನು ಹೇಳುತ್ತಾರೆ. ಇವರು ಸತ್ಯದ ತಲೆ ಮೇಲೆ ಹೊಡೆದ ರೀತಿ ಸುಳ್ಳುಗಳನ್ನ ಸೃಷ್ಟಿಸಿ ಹೇಳುತ್ತಾರೆ. ಆದರೆ ಇವರು ಸುಳ್ಳು ಹೇಳುವಾಗ ಬೇರೆಯವರ ಕಣ್ಣನ್ನು ನೋಡಿ ಮಾತನಾಡುವುದಿಲ್ಲ ಆಗ ಇವರು ಸುಳ್ಳು ಹೇಳುತ್ತಿದ್ದಾರೆ ಎಂದು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
* ತುಲಾ ರಾಶಿ:- ತುಲಾ ರಾಶಿಯವರು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾಗ ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಸುಳ್ಳನ್ನು ಹೇಳುತ್ತಾರೆ. ನಿಜವನ್ನು ಸುಳ್ಳು ಮಾಡುವ, ಸುಳ್ಳನ್ನು ನಿಜ ಎಂದು ಹೇಳುವ ಜಾಯಮಾನದವರು ಇವರಾಗಿರುತ್ತಾರೆ. ಪ್ರತಿನಿತ್ಯ ಇವರ ಜೊತೆಗೆ ಇರುವವರಿಗೆ, ಇವರ ಆತ್ಮೀಯರಿಗೆ ಮಾತ್ರ ಇವರು ಹೇಳುವ ಸುಳ್ಳು ಹಾಗೂ ನಿಜದ ವ್ಯತ್ಯಾಸ ಗೊತ್ತಾಗುತ್ತದೆ. ಹೊರಗಿನವರು ಸುಳ್ಳು ಹೇಳುತ್ತಿದ್ದಾರೆ ಎಂದು ಗುರುತಿಸುವುದು ಬಹಳ ಕಷ್ಟ.
* ವೃಶ್ಚಿಕ ರಾಶಿ:- ವೃಶ್ಚಿಕ ರಾಶಿಯವರು ಕೂಡ ಬಹಳ ಚೆನ್ನಾಗಿ ಸುಳ್ಳು ಹೇಳುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ಕೆಲಸ ಮಾಡಿಸಿಕೊಳ್ಳುವ ಸಲುವಾಗಿ ಮತ್ತು ನಮ್ಮ ಕಾರ್ಯ ಜಯಿಸಲಿ ಎನ್ನುವ ಕಾರಣಕ್ಕಾಗಿ ಎಂತಹ ಸುಳ್ಳು ಬೇಕಾದರೂ ಹೇಳುತ್ತಾರೆ. ಮತ್ತು ಸತ್ಯ ರೀತಿಯಲ್ಲಿ ಸುಳ್ಳು ಕಟ್ಟಿ ಹೇಳುವುದರಲ್ಲಿ ಇವರು ನಿಪುಣರು. ಇವರು ಸುಳ್ಳು ಹೇಳಿದ್ದಾರೆ ಎಂದು ಗೊತ್ತಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇವರು ಹೇಳುವ ಸುಳ್ಳುಗಳು ಇವರ ವ್ಯಕ್ತಿತ್ವದ ಮೇಲೆ ಹಾಗೂ ಎಂಬ ಇತರರ ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತದೆ.