ಬಟ್ಟೆ ವಾಶ್ ಮಾಡಬೇಕು ಎನ್ನುವುದು ಬಹಳ ತಲೆನೋವು ಎನಿಸುವ ಕೆಲಸವಾಗಿದೆ. ನಾವು ದಿನನಿತ್ಯ ಬಳಸುವ ಬಟ್ಟೆಗಳನ್ನೇ ವಾಶ್ ಮಾಡಲು ನಮಗೆ ಅಷ್ಟು ಸಮಸ್ಯೆ ಎನಿಸುತ್ತದೆ ಯಾಕೆಂದರೆ ಇದಕ್ಕೆ ಹೆಚ್ಚು ಸಮಯ ಬೇಕು.
ಈ ಕಾರಣಕ್ಕಾಗಿ ನಾವು ವಾಷಿಂಗ್ ಮಷೀನ್ ಗಳನ್ನು ಖರೀದಿಸುತ್ತೇವೆ, ಆದರೆ ವಾಷಿಂಗ್ ಮಿಷನ್ ನಲ್ಲಿ ಹಾಕಿದರು ಬಿಳಿ ಬಟ್ಟೆಗಳು ಮತ್ತು ಹೆಚ್ಚು ಕೊಳೆಯಾದ ಬಟ್ಟೆಗಳು ಇದ್ದೇ ಇದೆ. ಇದಕ್ಕಾಗಿ ಎಷ್ಟೇ ದುಬಾರಿಯ ಲಿಕ್ವಿಡ್ ತಂದು ಹಾಕಿದ್ದರು ಫಲಿತಾಂಶ ಅಷ್ಟಕಷ್ಟೇ.
ಬಿಳಿ ಬಟ್ಟೆ, ಮಕ್ಕಳ ಯೂನಿಫಾರ್ಮ್ ಇಂತಹ ಬಟ್ಟೆಗಳನ್ನು ನೀಟಾಗಿ ಕ್ಲೀನ್ ಮಾಡಲು ಮತ್ತೇನಾದರೂ ಟೆಕ್ನಿಕ್ ಸಿಗುತ್ತದೆ ಎಂದು ನಾವು ಹುಡುಕಾಡುತ್ತಲೇ ಇರುತ್ತೇವೆ. ಇದೇ ಇಷ್ಟು ಸಮಸ್ಯೆ ಆದರೂ ಇನ್ನು ಮನೆಯಲ್ಲಿ ನಾವು ಬಳಸುವ ಕರ್ಟನ್ ಗಳು, ಬೆಡ್ ಶೀಟ್ ಗಳು, ಬ್ಲಾಂಕೆಟ್ ಗಳು, ಸೋಫಾ ಕವರ್ ಗಳನ್ನು ಕ್ಲೀನ್ ಮಾಡುವುದು ಇನ್ನೆಷ್ಟು ಟೆನ್ಶನ್ ಕೊಡಬಹುದು ಅಲ್ವವೇ? ಆದರೂ ಇವುಗಳನ್ನು ನಾವು 15 ದಿನಕೊಮ್ಮೆ ಕ್ಲೀನ್ ಮಾಡಲೇಬೇಕು.
ಕೈಯಿಂದ ಕ್ಲೀನ್ ಮಾಡಲು ಹೋದರು ಕೂಡ ಇದನ್ನು ಕ್ಲೀನ್ ಮಾಡುವ ಅಷ್ಟೊತ್ತಿಗೆ ಕೈ ಸೋತು ಜ್ವರ ಬಂದ ರೀತಿ ಆಗಿರುತ್ತದೆ. ಇಂತಹ ಸಮಸ್ಯೆ ನಿಮಗೂ ಇದ್ದರೆ ಹೆಚ್ಚಿನ ಸಮಯ ಹಾಳು ಮಾಡದೆ ಕಡಿಮೆ ನೀರಲ್ಲಿ ನಿಮ್ಮ ಮನೆಯ ಬೆಡ್ ಕವರ್, ಸೋಫಾ ಕವರ್, ಬ್ಲಾಂಕೆಟ್ ಬೆಡ್ ಶೀಟ್ ಗಳನ್ನು ಮತ್ತೆ ಹೊಸದರಂತೆ ಪಳಪಳ ಮಾಡುವ ಟೆಕ್ನಿಕ್ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಒಮ್ಮೆ ನೀವು ಈ ಟೆಕ್ನಿಕ್ ನಿಂದ ನಿಮ್ಮ ಮನೆಯ ಬಟ್ಟೆಗಳನ್ನು ವಾಶ್ ಮಾಡಿ ನೋಡಿ ಫಲಿತಾಂಶ ನಿಮಗೆ ಗೊತ್ತಾಗುತ್ತದೆ ನೀವು ಏನು ಮಾಡಬೇಕು ಎಂದರೆ ಮೊದಲಿಗೆ ನಿಮ್ಮ ಬೆಡ್ ಶೀಟ್ ಗಳು, ಬ್ಲಾಂಕೆಟ್, ನೆನೆಯುವಷ್ಟು ನೀರು ತೆಗೆದುಕೊಳ್ಳಬೇಕು ಈಗ ಅದಕ್ಕೆ ಸೋಪ್ ಪೌಡರ್ ಹಾಕಿ ಚೆನ್ನಾಗಿ ತಿರುಗಿಸಿ.
ವಾಷಿಂಗ್ ಪೌಡರ್ ಹಾಕಿದ ನಂತರ ಒಂದು ಚಮಚದಷ್ಟು ವಿಮ್ ಜೆಲ್ ಹಾಕಿ, ನೀವು ವಾಷಿಂಗ್ ಪೌಡರ್ ಹಾಕಿದಷ್ಟೇ ಅಡುಗೆ ಸೋಡಾ ಕೂಡ ಹಾಕಬೇಕು ಮತ್ತು ಒಂದು ಶಾಂಪೂ ಕೂಡ ಹಾಕಿ ಈಗ ಎಲ್ಲವನ್ನು ಚೆನ್ನಾಗಿ ಮತ್ತೊಮ್ಮೆ ಮಿಕ್ಸ್ ಮಾಡಿ. ಬೇಕಿದ್ದರೆ ಇದಕ್ಕೆ ಒಂದು ಚಮಚ ಉಪ್ಪು ಕೂಡ ಹಾಕಬಹುದು, ಇದಕ್ಕೆ ಬಿಸಿ ನೀರು ತೆಗೆದುಕೊಂಡರೆ ಇನ್ನೂ ಬೆಸ್ಟ್ ರಿಸಲ್ಟ್ ಸಿಗುತ್ತದೆ.
ಎಲ್ಲವನ್ನು ಮಿಕ್ಸ್ ಮಾಡಿ ಐದು ನಿಮಿಷ ಬಿಟ್ಟು ಈಗ ನೀವು ತೆಗೆದುಕೊಂಡಿರುವ ಬಟ್ಟೆಗಳನ್ನು ಅದಕ್ಕೆ ಹಾಕಿ ನೆನೆಸಿ ಕನಿಷ್ಠ ಎರಡು ಮೂರು ತಾಸು ಆದರೂ ಅದು ಚೆನ್ನಾಗಿ ನೆನೆಯಬೇಕು ರಾತ್ರಿರೇ ನೆನೆಸಿಟ್ಟು ವಾಷ್ ಮಾಡಿದರೆ ಇನ್ನೂ ಚೆನ್ನಾಗಿ ಕ್ಲೀನ್ ಆಗುತ್ತದೆ.
ಈಗ ನೆನೆದಿರುವ ಬಟ್ಟೆಗಳನ್ನು ತೆಗೆದುಕೊಂಡು ಮತ್ತೊಂದು ಬಕೆಟ್ ಗೆ ಹಾಕಿ, ನೀವು ಕೈಯಲ್ಲಿ ಆದರೂ ವಾಷ್ ಮಾಡಿ ಅಥವಾ ವಾಷಿಂಗ್ ಮಿಷನ್ ಬೇಕಾದರೂ ಹಾಕಿ ವಾಷ್ ಮಾಡಿ ನಿಮ್ಮ ಕರ್ಟನ್ ಗಳು, ಬೆಡ್ ಶೀಟ್ ಗಳು ಚೆನ್ನಾಗಿ ಕ್ಲೀನ್ ಆಗಿರುತ್ತವೆ, ಎಲ್ಲಾ ಕಲೆಗಳು ಕೂಡ ಹೊರಟು ಹೋಗಿರುತ್ತದೆ ಮತ್ತು ಬಣ್ಣ ಕೂಡ ಡಲ್ ಆಗುವುದಿಲ್ಲ ನಿಮ್ಮ ಸಮಯ ಎನರ್ಜಿ ಎಲ್ಲವೂ ಕೂಡ ಉಳಿತಾಯವಾಗುತ್ತದೆ. ಈ ಒಂದು ಟೆಕ್ನಿಕ್ ಮಾಡಿ ಇದರ ರಿಸಲ್ಟ್ ತಿಳಿದ ಮೇಲೆ ನಿಮ್ಮ ಸ್ನೇಹಿತರು ಹಾಗೂ ಸಹೋದರಿಯರಿಗೂ ಕೂಡ ಸೂಪರ್ ಟೆಕ್ನಿಕ್ ಬಗ್ಗೆ ತಿಳಿಸಿಕೊಡಿ.