* ಮನೆ ಒಳಗಡೆ ಇರುವ ಫೋಟೋಗಳಿಗೆ ಹಾಗೂ ವಿಗ್ರಹಗಳಿಗೆ ಚೆಂಡು ಹೂವನ್ನು ಬಳಸಬೇಡಿ. ಇದರಿಂದ ಮನೆಯಲ್ಲಿ ವಿನಾಕಾರಣ ಕ’ಲ’ಹ, ಜ’ಗ’ಳ’ಗಳು ಹೆಚ್ಚಾಗುತ್ತವೆ. ಮನೆ ನೆಮ್ಮದಿ ಹಾಳಾಗುತ್ತದೆ . ಆದರೆ ಮನೆಯ ಹೊಸಲಿಗೆ ಚೆಂಡು ಹೂವಿನ ಹಾರ ಹಾಕುವುದರಿಂದ ನೆಗೆಟಿವ್ ಎನರ್ಜಿ ಮನೆ ಒಳಗೆ ಪ್ರವೇಶಿಸದಂತೆ ತಡೆಯುತ್ತದೆ. ಅಲಂಕಾರಕ್ಕೆ ನೀವು ಚೆಂಡು ಹೂವು ಬೆಳೆಸಬಹುದು ಆದರೆ ಮನೆ ಒಳಗೆ ಮಾಡುವ ಪೂಜೆಗಳಿಗೆ ಬಳಸಬೇಡಿ.
ಹೂವುಗಳು ಜೀವನಕ್ಕೆ ಬಹಳ ಮುಖ್ಯವಾದ ಪಾಠವನ್ನು ತಿಳಿಸುತ್ತವೆ. ಒಂದೇ ದಿನ ಬದುಕಿದ್ದರು ಅರಳಿರುವ ಅಷ್ಟು ಹೊತ್ತು ಸುಗಂಧವನ್ನು ಸೂಸಿ ಎಲ್ಲರನ್ನು ಸೆಳೆಯುತ್ತಾ ನಗುನಗುತ ತಮ್ಮ ಬದುಕು ಮುಗಿಸುತ್ತವೆ. ಅರಳುವ ಯಾವ ಹೂವಿಗೂ ಕೂಡ ತನ್ನ ಸ್ಥಾನ ಯಾವುದು ಎಂದು ಗೊತ್ತಿರುವುದಿಲ್ಲ. ತಾನು ಯಾರ ಮುಡಿ ಸೇರಿದ್ದರೂ, ಅಲಂಕಾರಕ್ಕೆ ಬಳಕೆ ಆದರೂ ಅಥವಾ ಸಮಾಧಿ ಮೇಲೆ ಇದ್ದರೂ ಪುಣ್ಯಫಲದಿಂದ ಭಗವಂತನ ಪಾದ ಸೇರಿದರೂ ನಗುತ್ತಾ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸುತ್ತದೆ.
ಆದರೆ ಇದರಲ್ಲಿ ಭಗವಂತನಿಗೆ ನಾವು ಹೂವು ಅರ್ಪಿಸುವ ವಿಚಾರದಲ್ಲಿ ಮಾತ್ರ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು ಯಾಕೆಂದರೆ ಕೆಲವು ದೇವರುಗಳಿಗೆ ಕೆಲವು ರೀತಿಯ ಹೂವುಗಳು ನಿಷಿದ್ಧ ಮತ್ತು ದೇವರಿಗೆ ಅರ್ಪಿಸುವ ಹೂಗಳು ಹೀಗೆ ಇರಬೇಕು ಎನ್ನುವ ನಿಯಮ ಇದೆ ಆ ರೀತಿ ಇದ್ದಾಗ ಮಾತ್ರ ನಮಗೆ ಆ ಪೂಜೆಯ ಫಲ ಸಿಗುವುದು ಅಂತಹ ಕೆಲ ಮುಖ್ಯ ವಿಷಯವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಗಣಪತಿಗೆ ಹಾಗೂ ಶಿವಲಿಂಗಕ್ಕೆ ಯಾವುದೇ ಕಾರಣಕ್ಕೂ ತುಳಸಿ ಅರ್ಪಿಸಬಾರದು.
* ಬಾಡಿಹೋದ ಹೂವುಗಳನ್ನು ದೇವರ ಪೂಜೆಗೆ ಬಳಸಬಾರದು
* ಸ್ನಾನ ಮಾಡದೆ ಹೂವಿನ ಗಿಡಗಳಲ್ಲಿ ಹೂವು ಕಿತ್ತುಕೊಂಡು ಬರಬಾರದು.
* ಹೊರಗಿನಿಂದ ಹೂವು ಖರೀದಿಸಿ ತಂದಾಗ ಅದಕ್ಕೆ ಮನೆಯಲ್ಲಿರುವ ಶುದ್ಧ ನೀರನ್ನು ಪ್ರೋಕ್ಷಣೆ ಮಾಡಿ ನಂತರ ದೇವರ ಪೂಜೆಗೆ ಬಳಸಬೇಕು
* ಕೆಟ್ಟ ವಾಸನೆಗಳು ಇರುವ ಹೂವುಗಳನ್ನು ಪೂಜೆಗೆ ಬಳಸಬಾರದು
* ಹೆಣ್ಣು ಮಕ್ಕಳು ತಿಂಗಳಾದಾಗ ಯಾವುದೇ ಹೂವುಗಳನ್ನು ಮುಟ್ಟಬಾರದು, ಅವರು ಕಟ್ಟಿರುವ ಹೂಗಳನ್ನು ದೇವರಿಗೆ ಮೂಡಿಸಬಾರದು
* ದೇವರಿಗೆ ಮೂಡಿಸಿದ ಹೂಗಳನ್ನು ತೆಗೆದ ಮೇಲೆ ಎಲ್ಲಿಂದರಲ್ಲಿ ಬಿಸಾಕಬಾರದು ಅದನ್ನು ನೀರಿನಲ್ಲಿ ಅದ್ದಿ ಗಿಡಗಳ ಬುಡಕ್ಕೆ ಹಾಕಬೇಕು ಯಾರು ಅದನ್ನು ತುಳಿಯಬಾರದು.
* ಕೆಲವು ಹೂಗಳು ಪೂಜೆಗೆ ನಿಷಿದ್ಧ ಎಂದು ಹೇಳಲಾಗಿದೆ ಅಂತಹವುಗಳನ್ನು ಪೂಜೆಗೆ ಬಳಸಬಾರದು. ಇದು ಹಿರಿಯರಿಗೆ ಚೆನ್ನಾಗಿ ತಿಳಿದಿರುತ್ತದೆ ಅವರು ಹೇಳಿದರು ನೋಡುವುದಕ್ಕೆ ಚೆನ್ನಾಗಿದೆ ಎಂದು ಅಂತಹ ಹೂಗಳನ್ನು ಪೂಜೆಗೆ ಬಳಸಬೇಡಿ ಇದರಿಂದ ನಿಮಗೆ ದೋಷ ಉಂಟಾಗುತ್ತದೆ.
* ಹೆಣ್ಣು ಮಕ್ಕಳು ದೇವರಿಗೆ ಪೂಜೆ ಮಾಡುವಾಗ ಕೂದಲನ್ನು ಕೆದರಿಕೊಂಡಿರಬಾರದು. ಕೆದರಿಕೊಂಡ ಕೂದಲಿನಿಂದ ನೀರು ಹೂವಿನ ಮೇಲೆ ಬಿದ್ದರೆ ಅಥವಾ ಕೂದಲುಗಳು ಹೂವಿನ ಮೇಲೆ ಬಿದ್ದರೆ ಅಂತಹ ಹೂವುಗಳನ್ನು ಮತ್ತೆ ದೇವರಿಗೆ ಮುಡಿಸಬಾರದು.
* ದೇವರ ಫೋಟೋ ಅಥವಾ ವಿಗ್ರಹಗಳಿಗೆ ಹಾಕಿದ್ದ ಹೂವನ್ನು ನಂತರ ಪ್ರಸಾದವೆಂದು ಮುಡಿದುಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ನೀವು ಮುಡಿದು ನೋಡಿರುವ, ತಲೆಗೆ ಸೋಕಿಸಿರುವ ಹೂವುಗಳನ್ನು ನಂತರ ದೇವರಿಗೆ ಹಾಕಬೇಡಿ ಅದಕ್ಕಿಂತ ಪಾಪ ಮತ್ತೊಂದಿಲ್ಲ
* ಸಾಧ್ಯವಷ್ಟು ದೇವರಿಗೆ ಪೂಜೆ ಮಾಡುವುದಕ್ಕೆ ಬೇಕಾದಷ್ಟು ಹೂವುಗಳನ್ನು ನೀವೇ ನಿಮ್ಮ ಕೈ ತೋಟದಲ್ಲಿ ಮನೆಯ ಪುಟ್ಟ ಪಾಠಗಳಲ್ಲಿ ಬೆಳೆದರೆ ಬಹಳ ಪುಣ್ಯ ಫಲ ಸಿಗುತ್ತದೆ.
* ಹೂವು ಖರೀದಿಸಲು ಹೋದಾಗ ವ್ಯಾಪಾರ ಮಾಡಿ ನಂತರ ಬೇಡ ಎಂದು ಎಂದಿಗೂ ಬರಬೇಡಿ
* ನಿಮ್ಮ ಮನೆಯ ಮುಂದೆ ಹೂವು ಮಾರುವವರು ಬಂದು ಹೂ ಬೇಕಾ ಎಂದು ಕೇಳಿದಾಗ ಬೇಡ ಎಂದು ಹೇಳಬೇಡಿ ಬೇಕಿದ್ದರೆ ಖರೀದಿಸಿ, ಇಲ್ಲವಾದರೆ ನಾಳೆ ಖರೀದಿಸುತ್ತೇನೆ ಎಂದು ಹೇಳಿ ಕಳುಹಿಸಿ ಹೂವನ್ನು ಬೇಡ ಎಂದು ಹೇಳಬಾರದು.