ಕರ್ಪೂರವು ಹಿ೦ದೂಗಳ ಪೂಜಾ ವಿಧಾನದಲ್ಲಿ ಬಳಸುವ ಒಂದು ವಸ್ತು. ಈ ಕರ್ಪೂರವನ್ನು ಬಳಸುವುದರ ಮೂಲಕ ಅನೇಕ ಸಮಸ್ಯೆ ಗಳನ್ನು ದೂರ ಮಾಡಬಹುದು. ಪೂಜೆಯ ವಸ್ತುವಾಗಿ ಬಳಸುವ ಕರ್ಪೂರವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಪೂಜೆಯ ಹೊರತಾಗಿ ಜ್ಯೋತಿಷ್ಯದಲ್ಲಿ ಕರ್ಪೂರದ ಬಳಕೆಯು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
ಮನೆಯಲ್ಲಿ ಶಾಂತಿ ಇಲ್ಲದಿರುವುದು, ಸದಾ ಕಾಲ ಒಬ್ಬರಾದ ಮೇಲೆ ಒಬ್ಬರು ಅನಾರೋಗ್ಯಕ್ಕೆ ಒಳಗಾಗುವುದು ಯಾವುದೇ ಕೆಲಸಕ್ಕೆ ಮುಂದಾದರೂ ಅಡ್ಡಿ ಉಂಟಾಗುವುದು, ವ್ಯವಹಾರದಲ್ಲಿ ನಷ್ಟ ಹೀಗೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಕ್ರಮೇಣವಾಗಿ ಕರ್ಪೂರದ ಬಳಕೆಯಿಂದ ಕೆಲವು ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.
* ಮನೆಯ ಒಳಗೆ, ಹೊರಗೆ ಮತ್ತು ಸುತ್ತಲಿನ ವಾತಾವರಣಕ್ಕೆ ಸಕಾರಾ ತ್ಮಕ ಶಕ್ತಿಯ ರಕ್ಷೆಯನ್ನು ಪಡೆಯಲು ಕರ್ಪೂರವನ್ನು ಬೆಳಗಿಸಬೇಕು.
* ಸಾಧ್ಯವಾದರೆ ತುಪ್ಪದಲ್ಲಿ ನೆನೆಸಿರುವ ಕರ್ಪೂರವನ್ನು ಬೆಳಿಗ್ಗೆ ಮತ್ತು ಸಂಜೆ ಬೆಳಗಿಸಬೇಕು, ಇದರಿಂದ ಕುಟುಂಬದ ಜನರಿಗೆ ಪ್ರಗತಿಯ ಜೊತೆ ಮನೆಯಲ್ಲಿ ಸುಖ ಸಂತೋಷ ಸಮೃದ್ಧಿ ನೆಲೆಸುತ್ತದೆ.
* ವಾತಾವರಣದಲ್ಲಿ ಇರುವ ಬ್ಯಾಕ್ಟಿರಿಯಾ ಹಾಗೂ ಸೋಂಕುಗಳು ನಾಶವಾಗುತ್ತವೆ.
* ನಕಾರಾತ್ಮಕ ಶಕ್ತಿಯನ್ನು ದೂರಗೊಳಿಸಿ, ಋಣಾತ್ಮಕ ಶಕ್ತಿಯನ್ನು ಆಕರ್ಷಿಸುವುದು.
* ಮನೆಯಲ್ಲಿರುವ ಒತ್ತಡ, ದುಃಖ ದುಮ್ಮಾನಗಳು ದೂರವಾಗುತ್ತವೆ.
* ಮನೆಯಲ್ಲಿ ಅಥವಾ ಕಚೇರಿಯಲ್ಲಿ ವಾಸ್ತು ದೋಷಗಳು ಇರುತ್ತವೆ. ವಾಸ್ತು ದೋಷವು ಕೆಲವೊಮ್ಮೆ ಅನೇಕ ಸಮಸ್ಯೆಗಳನ್ನು ಉಂಟು ಮಾಡುವುದು.
* ಎಲ್ಲಿ ವಾಸ್ತು ದೋಷ ಇದೆಯೋ ಆ ಸ್ಥಳದಲ್ಲಿ ಎರಡು ಕರ್ಪೂರವನ್ನು ಇಡಿ. ಈ ಕ್ರಮವನ್ನು ಪದೇ ಪದೇ ಮಾಡುವುದರಿಂದ ಸಮಸ್ಯೆಯನ್ನು ನಿವಾರಿಸಬಹುದು.
* ಸ್ನಾನ ಮಾಡುವ ಮೊದಲು ನೀರಿಗೆ ಕೆಲವು ಹನಿ ಕರ್ಪೂರದ ಎಣ್ಣೆ ಯನ್ನು ಸೇರಿಸಿ ನಂತರ ಆ ನೀರಿನಿಂದ ಸ್ನಾನ ಮಾಡಿ. ಹೀಗೆ ಮಾಡುವು ದರಿಂದ ದೇಹವು ಹೊಳಪು ಹಾಗೂ ಆರೋಗ್ಯಕರವಾಗಿ ಇರುತ್ತದೆ.
* ಸ್ನಾನದ ನೀರಿಗೆ ಕೆಲವು ಹನಿ ಕರ್ಪೂರದ ಎಣ್ಣೆಯ ಜೊತೆ, ಮಲ್ಲಿಗೆ ಹೂವಿನ ಎಣ್ಣೆಯನ್ನು ಸೇರಿಸಿ ಸ್ನಾನ ಮಾಡಿದರೆ ರಾಹು, ಕೇತು, ಶನಿಯಿಂದ ಉಂಟಾಗುವ ತೊಂದರೆಯನ್ನು ತಡೆಯಬಹುದು.
* ಈ ಕ್ರಮವನ್ನು ವಿಶೇಷವಾಗಿ ಶನಿವಾರ ಮಾತ್ರ ಮಾಡಬೇಕು ಆಗ ಅಧಿಕ ಫಲ ದೊರೆಯುತ್ತದೆ ಎನ್ನುವ ನಂಬಿಕೆ.
* ಮನೆಯಲ್ಲಿರುವ ಕಷ್ಟ ಹಾಗೂ ಆರ್ಥಿಕ ಸಂಕಷ್ಟವನ್ನು ತೊಡೆದು ಹಾಕಲು ಕರ್ಪೂರವನ್ನು ಬೆಳಗಿಸಬೇಕು.
* ಬಡತನ ಹಾಗೂ ಉದ್ಯೋಗದಲ್ಲಿ ವೃದ್ಧಿಯನ್ನು ಕಾಣಲು, ರಾತ್ರಿ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತರ ಬೆಳ್ಳಿಯ ಪಾತ್ರೆ ಅಥವಾ ಬೆಳ್ಳಿ ಬಟ್ಟಲಿನಲ್ಲಿ ಕರ್ಪೂರ ಮತ್ತು ಲವಂಗವನ್ನು ಸೇರಿಸಿ ಬೆಳಗಬೇಕು.
* ಹೀಗೆ ನಿತ್ಯವೂ ಮಾಡುವುದರಿಂದ ಬಡತನವು ಬಹುಬೇಗ ದೂರವಾ ಗುವುದು. ಜೊತೆಗೆ ಉದ್ಯೋಗದಲ್ಲಿ ಲಾಭ ಹಾಗೂ ಸುಧಾರಿತ ಜೀವನ ಕಾಣಬಹುದು.
* ಕುಂಡಲಿಯಲ್ಲಿ ಪಿತೃ ದೋಷ, ಕಾಳಸರ್ಪ ದೋಷ ಇದ್ದರೆ, ತುಪ್ಪದಲ್ಲಿ ನೆನೆಸಿರುವ ಕರ್ಪೂರವನ್ನು ತಪ್ಪದೆ ಬೆಳಿಗ್ಗೆ ಮತ್ತು ಸಂಜೆ ಬೆಳಗಬೇಕು.
* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುಲಾಬಿ ಹೂವಿನ ಜೊತೆ ಕರ್ಪೂರ ವನ್ನು ಸೇರಿಸಿ ಇಡಬೇಕು ನಂತರ ಸಂಜೆ ಅದನ್ನು ಬೆಳಗಿ ದುರ್ಗಾದೇವಿಗೆ ಅರ್ಪಿಸಬೇಕು ಇದರಿಂದ ಬರಬೇಕಾದ ಹಣವು ಬಹುಬೇಗ ಹಿಂತಿರುಗುತ್ತದೆ ಆರ್ಥಿಕ ಸಂಕಷ್ಟಗಳು ಕ್ರಮೇಣವಾಗಿ ನಿವಾರಣೆಯಾಗುತ್ತದೆ ಆದರೆ ಕನಿಷ್ಠ 43 ದಿನಗಳ ಕಾಲ ಈ ಕೆಲಸವನ್ನು ಮಾಡಬೇಕು.
* ಬೆಳಗ್ಗೆ ಮತ್ತು ಸಂಜೆ ಪೂಜೆಯ ಸಮಯದಲ್ಲಿ ಕರ್ಪೂರವನ್ನು ಬೆಳ ಗಿಸುವುದರಿಂದ ಮನೆಯಲ್ಲಿ ಸಂತೋಷ ಸಮೃದ್ಧಿಯು ನೆಲೆಸುತ್ತದೆ.
ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ಕರ್ಪೂರವನ್ನು ಹಚ್ಚು ವುದರಿಂದ ಯಾವ ರೀತಿಯ ಪ್ರಯೋಜನ ಎಂದು ತಿಳಿದುಕೊಂಡೆವು ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಸಮಯದಲ್ಲಿ ಕರ್ಪೂರವನ್ನು ನಿಮ್ಮ ಮನೆಯಲ್ಲಿ ಹಚ್ಚುವುದು ತುಂಬಾ ಒಳ್ಳೆಯದು.