ಈ ದಿನ ಯಶಸ್ವಿನಿ ಕಾರ್ಡ್ ಅಥವಾ ಆಯುಷ್ಮಾನ್ ಕಾರ್ಡ್ ಅನ್ನು ಮಾಡಿಸುವುದು ಹೇಗೆ ಹಾಗೂ ಅದನ್ನು ಮಾಡಿಸುವುದರಿಂದ ಪ್ರತಿಯೊಬ್ಬರೂ ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಹಾಗೂ ಈ ಒಂದು ಕಾರ್ಡ್ ಅನ್ನು ನಾವು ಎಲ್ಲಿ ಮಾಡಿಸಬಹುದು. ಜೊತೆಗೆ ಕಳೆದ ವರ್ಷ ಯಶಸ್ವಿನಿ ಯೋಜನೆಯಡಿ ಕಾರ್ಡ್ ಪಡೆದವರು ಮತ್ತು ಹೊಸದಾಗಿ ಯಶಸ್ವಿನಿ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಹ ಫಲಾನುಭವಿಗಳು ಕೂಡಲೇ ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಯನ್ನು ಭೇಟಿ ಮಾಡಿ ಯಶಸ್ವಿನಿ ಕಾರ್ಡ್ ನವೀಕರಣ ಮಾಡಿಕೊಳ್ಳಬವುದು ಮತ್ತು ಹೊಸದಾಗಿ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಕಂತು ಹಣ ಬಿಡುಗಡೆ.! ಮೊದಲು ಯಾವ ಜಿಲ್ಲೆಯವರಿಗೆ ಬರುತ್ತೆ ₹2000 ಹಣ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಈ ಯೋಜನೆಯಡಿ ಯಾವೆಲ್ಲ ಸೌಲಭ್ಯ ಸಿಗಲಿದೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಈ ಹಿಂದೆ ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ಯೋಜನೆಯನ್ನು 2003ರಲ್ಲಿ ಪ್ರಾರಂಭಿಸಿದ್ದು.
2003-04 ರಿಂದ 2017-18 ರವರೆಗೆ ಜಾರಿಯಲ್ಲಿದ್ದು ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡಿದ್ದು ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡಿದ್ದು, ದಿನಾಂಕ: 31-05-2018 ರಿಂದ ಈ ಯೋಜನೆಯು ಸ್ಥಗಿತಗೊಂಡಿದ್ದು, ದಿನಾಂಕ 31-06-2018 ರಿಂದ ಆರೋಗ್ಯ ಕರ್ನಾಟಕ ಯೋಜನೆಯ ಅಡಿ ವಿಲೀನ ಗೊಂಡಿರುತ್ತದೆ.
ರಾಜ್ಯದಲ್ಲೆಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022 2023ನೇ ಸಾಲಿನ ಆಯವ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರು ಜಾರಿಗೊಳಿಸಲು ತೀರ್ಮಾನಿಸಿ ರೂ 300 ಕೋಟಿಗಳ ಅವಕಾಶ ಕಲ್ಪಿಸಿ ಆಯವ್ಯಯದಲ್ಲಿ ಈ ಯೋಜನೆಯನ್ನು ಘೋಷಿಸಿತ್ತು.
ಈ ಸುದ್ದಿ ಓದಿ:- ಕನ್ಯಾ ರಾಶಿ ಫೆಬ್ರವರಿ 2024, ಕೇದಾರ ರಾಜಯೋಗ ಲೈಫ್ ಬಿಂದಾಸ್.!
ಯಶಸ್ವಿನಿ ಯೋಜನೆಯ ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಜಾರಿ ಗೊಂಡಿರುವ ಒಂದು ವಿಶೇಷ ಯೋಜನೆಯಾಗಿದ್ದು ಇದರಲ್ಲಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ 5 ಲಕ್ಷಕ್ಕೆ ನಿಗದಿಪಡಿಸಿದೆ.
ರಾಜ್ಯದ ಯಾವುದೇ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ. ಹಾಗಾದರೆ ಯಶಸ್ವಿನಿ ಕಾರ್ಡ್ ಅನ್ನು ಪಡೆದುಕೊಳ್ಳಬೇಕು ಎಂದರೆ ಎಲ್ಲಿ ಹೋಗಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ನೋಡುವುದಾದರೆ.
ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘ ಶಾಖೆಗೆ ಭೇಟಿ ಮಾಡುವುದರ ಮೂಲಕ ಅರ್ಜಿ ಸಲ್ಲಿಸಬಹುದು.!
ಅಗತ್ಯ ದಾಖಲಾತಿಗಳು :-
* ಪಡಿತರ ಚೀಟಿ ಪ್ರತಿ
* ಪ್ರತಿ ಸದಸ್ಯರ ಆಧಾರ್ ಕಾರ್ಡ್ ಮತ್ತು ಫೋಟೋ
* ಪರಿಶಿಷ್ಟ ಜಾತಿ ಪಂಗಡ ಸದಸ್ಯರ ಆರ್ ಡಿ ನಂಬರ್ ಇರುವ ಜಾತಿ
ಪ್ರಮಾಣ ಪತ್ರ.
ಅರ್ಜಿ ಶುಲ್ಕದ ವಿವರ.
* ಸಾಮಾನ್ಯ ವರ್ಗ :- ನಗರವಾಸಿ 1000 ರೂ
ಗ್ರಾಮಾಂತರ 500
* ಪರಿಶಿಷ್ಟ ಜಾತಿ ಪಂಗಡದ ಸದಸ್ಯರಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಈ ಸುದ್ದಿ ಓದಿ:- ಕಲ ಬೆರಿಕೆ ಎಣ್ಣೆಯಿಂದ ಮುಕ್ತಿ ಪಡೆಯಲು ಪ್ಯೂರ್ ಗಾಣದ ಎಣ್ಣೆಯನ್ನು ನಿಮ್ಮ ಮನೆಯಲ್ಲಿ ತಯಾರಿಸಿ ಕಡಿಮೆ ಬೆಲೆಗೆ.!
ಚಿಕಿತ್ಸೆಗಳ ವಿವರ :- ಅಂದರೆ ಯಾವುದೆಲ್ಲ ರೀತಿಯ ಚಿಕಿತ್ಸೆಗಳಿಗೆ ಈ ಒಂದು ಕಾರ್ಡ್ ಅನುಕೂಲವಾಗುತ್ತದೆ ಎನ್ನುವ ಮಾಹಿತಿ. ಸರ್ಜಿಕಲ್ ಅಂಕೋಲಾಜಿ, ನಾಯಿ ಕಡಿತ, ಶಾಸ್ತ್ರ ಚಿಕಿತ್ಸೆ, ಮೂತ್ರಪಿಂಡ ಅಥವಾ ಹೃದಯ ಸಂಬಂಧಿ ಸಮಸ್ಯೆ. ಸೌಂದರ್ಯವರ್ಧಕ ಶಾಸ್ತ್ರ ಚಿಕಿತ್ಸೆ, ಸುಟ್ಟ ಗಾಯಗಳು, ದಂತ ಚಿಕಿತ್ಸೆ, ಡಯಾಲಿಸಿಸ್, ರಸ್ತೆ ಅಪಘಾತ ಹೀಗೆ ಇನ್ನೂ ಹಲವಾರು ರೀತಿಯ ಚಿಕಿತ್ಸೆ ಗಳಿಗೆ ನೀವು ಈ ಕಾರ್ಡ್ ಮೂಲಕ ಅನುಕೂಲವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.