ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಅಡುಗೆಮನೆಯನ್ನು ಸ್ವಚ್ಛ ಮಾಡುವುದು ಒಂದು ದೊಡ್ಡ ಕೆಲಸವೇ ಆಗಿರುತ್ತದೆ. ಆದ್ದರಿಂದ ಹೆಚ್ಚಿನವರು ಅಡುಗೆಮನೆಯನ್ನು ತಕ್ಷಣ ಅಂದರೆ ಪದೇ ಪದೇ ಸ್ವಚ್ಛ ಮಾಡಲು ಹೋಗುವುದಿಲ್ಲ. ಏಕೆಂದರೆ ಹೆಚ್ಚಿನ ಸಮಯ ತೆಗೆದುಕೊಳ್ಳು ತ್ತದೆ ಎನ್ನುವ ಉದ್ದೇಶದಿಂದ ಯಾರು ಕೂಡ ವಾರಕ್ಕೆ 15 ದಿನಕ್ಕೆ ಸ್ವಚ್ಛ ಮಾಡಲು ಹೋಗುವುದಿಲ್ಲ.
ಏನಾದರೂ ಹಬ್ಬ ಹರಿದಿನಗಳಲ್ಲಿ ಅಥವಾ ಏನಾದರೂ ಬೇರೆ ಕೆಲಸ ಕಾರ್ಯಗಳು ಇಲ್ಲದೆ ಇರುವಂತಹ ಸಮಯ ದಲ್ಲಿ ಅಡುಗೆಮನೆಯನ್ನು ಸ್ವಚ್ಛ ಮಾಡಲು ಮುಂದಾಗುತ್ತಾರೆ. ಅದರ ಲ್ಲಂತೂ ಕೆಲಸಕ್ಕೆ ಹೋಗುವಂತಹ ಮಹಿಳೆಯರು ಅಡುಗೆಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಕ್ಕೆ ಸಮಯವೇ ಇರುವುದಿಲ್ಲ. ಹಾಗಾದರೆ ಈ ದಿನ ಅಡುಗೆ ಮನೆಯಲ್ಲಿ ಇರುವಂತಹ ಕಿಟಕಿಯ ಕೊಳೆಗಳನ್ನು.
ಅಂದರೆ ಕಿಟಕಿಯ ಮೇಲೆ ಇರುವಂತಹ ಕೊಳೆ ಧೂಳು ಹಾಗೂ ಎಣ್ಣೆಯ ಕಲೆಗಳನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುವುದು ಹೇಗೆ ಹಾಗೂ ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮಪಡದೆ ಸ್ವಚ್ಛ ಮಾಡುವುದು ಹೇಗೆ ಎನ್ನುವುದನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಸಾಮಾನ್ಯ ವಾಗಿ ಮಹಿಳೆಯರು ಪ್ರತಿಯೊಂದನ್ನು ಸ್ವಚ್ಛ ಮಾಡುವುದಕ್ಕೆ ಸುಲಭ ವಾದ ಮಾರ್ಗಗಳು ಯಾವುದಾದರು ಸಿಗುತ್ತದೆಯಾ ಎನ್ನುವುದನ್ನು ಆಲೋಚನೆ ಮಾಡುತ್ತಿರುತ್ತಾರೆ. ಆದರೆ ಈ ಮಾಹಿತಿ ಕೆಲವೊಂದಷ್ಟು ಮಹಿಳೆಯರಿಗೆ ತಿಳಿಯುತ್ತದೆ. ಕೆಲವೊಂದಷ್ಟು ಮಹಿಳೆಯರಿಗೆ ತಿಳಿಯುವುದಿಲ್ಲ. ಆದರೆ ಈ ರೀತಿ ಕೆಲಸ ಮಾಡುವುದರಿಂದ ಅವರಿಗೆ ಹೆಚ್ಚು ಶ್ರಮ ಬೇಕಾಗುತ್ತದೆ ಹಾಗೂ ಹೆಚ್ಚು ಸಮಯವೂ ಕೂಡ ತೆಗೆದುಕೊಳ್ಳುತ್ತದೆ.
ಆದ್ದರಿಂದ ಕೆಲವೊಂದು ಮಹಿಳೆಯರು ಈ ಕೆಲಸ ಕಷ್ಟದ ಕೆಲಸ ಎನ್ನುವ ಅರ್ಥದಲ್ಲಿ ಹೇಳುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಟಿಪ್ಸ್ ನಿಮಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹೌದು ನಿಮ್ಮ ಅಡುಗೆ ಮನೆಯಲ್ಲಿಯೇ ಸುಲಭವಾಗಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡು ನಿಮ್ಮ ಅಡುಗೆ ಮನೆಯ ಕಿಟಕಿಯ ಮೇಲೆ ಇರುವಂತಹ ಎಣ್ಣೆ ಜಿಡ್ಡು ಕೊಳೆ ಎಲ್ಲವನ್ನು ಸಹ ಸಂಪೂರ್ಣವಾಗಿ ತೆಗೆದು ಹಾಕಬಹುದು.
ಹೌದು ಇದನ್ನು ಮಾಡುವುದಕ್ಕೆ ಅಂದರೆ ಈ ಒಂದು ಅದ್ಭುತವಾದಂತಹ ಚಮತ್ಕಾರಿ ಪೇಸ್ಟ್ ಅನ್ನು ತಯಾರಿಸುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
• ನಿಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಪೇಸ್ಟ್
• ಹಾಗೆಯೇ ಉಪ್ಪು ಎರಡರಿಂದ ಮೂರು ಚಮಚ
• ಹಾಗೂ ಎರಡು ರಿಂದ ಮೂರು ಚಮಚ ವಿನೀಗರ್.
ವಿನೀಗರ್ ಇಲ್ಲದೆ ಇರುವವರು ನಿಂಬೆಹಣ್ಣಿನ ರಸವನ್ನು ಸಹ ಉಪಯೋಗಿಸಿಕೊಳ್ಳ ಬಹುದು.
ಹಾಗಾದರೆ ಇದನ್ನು ಹೇಗೆ ತಯಾರಿಸುವುದು ಎಂದು ನೋಡುವುದಾದರೆ ಇಷ್ಟನ್ನು ಒಂದು ಚಿಕ್ಕ ಬೌಲ್ ನಲ್ಲಿ ಹಾಕಿ ಅಷ್ಟನ್ನು ಚೆನ್ನಾಗಿ ಕಲಸಿಕೊಳ್ಳ ಬೇಕು. ಅದು ಒಂದು ಪೇಸ್ಟ್ ಹದದಲ್ಲಿ ತಯಾರಾಗುತ್ತದೆ ಹೆಚ್ಚು ತೆಳ್ಳನೆ ಮಾಡಿಕೊಳ್ಳಬಾರದು. ಒಂದು ಹದದಲ್ಲಿ ತಯಾರಿಸಿದಂತಹ ಈ ಒಂದು ಮಿಶ್ರಣವನ್ನು ನಿಮ್ಮ ಕಿಟಕಿಯ ಕೊಳೆ ಇರುವಂತಹ ಜಾಗಗಳಿಗೆ ಹಾಕಿ 5 ರಿಂದ 10 ನಿಮಿಷ ಬಿಟ್ಟು ಆನಂತರ ಯಾವುದಾದರೂ ಬ್ರಷ್ ಸಹಾಯದಿಂದ ಅದನ್ನು ಒಂದು ಕಡೆಯಿಂದ ಉಜ್ಜಿದರೆ ಸಾಕು.
ಹೆಚ್ಚು ಶ್ರಮ ಇಲ್ಲದೆ ಒಮ್ಮೆಯೇ ಕಿಟಕಿಯ ಮೇಲೆ ಇರುವಂತಹ ಸಂಪೂರ್ಣ ವಾದ ಎಣ್ಣೆ ಜಿಡ್ಡು ಕೊಳೆ ಧೂಳು ಎಲ್ಲವೂ ಸಹ ತೆಗೆದುಹಾಕುತ್ತದೆ. ಈ ಒಂದು ವಿಧಾನ ಸುಲಭವಾಗಿದ್ದು 15 ದಿನಕ್ಕೆ ತಿಂಗಳಿಗೆ ಈ ರೀತಿ ಮಾಡಿಕೊಂಡರೆ ನಿಮಗೆ ಹೆಚ್ಚು ಶ್ರಮಪಡುವ ಅವಶ್ಯಕತೆ ಬರುವುದಿಲ್ಲ. ಆದ್ದರಿಂದ ಮಹಿಳೆಯರಿಗೆ ಈ ಒಂದು ವಿಧಾನ ತುಂಬಾ ಅನುಕೂಲವಾಗಲಿದ್ದು ಇದನ್ನು ಅನುಸರಿಸುವುದು ಕೂಡ ಬಹಳ ಮುಖ್ಯವಾಗಿರುತ್ತದೆ.