ಇನ್ಮುಂದೆ ದೇವರ ಸಮಾನು ಕ್ಲೀನ್ ಮಾಡಲು ಕಷ್ಟ ಪಡಬೇಕಿಲ್ಲ ಈ ಪೇಸ್ಟ್ ಬಳಸಿದ್ರೆ ಸಾಕು ನಿಮಿಷದೊಳಗೆ ದೇವರ ಸಾಮಾಗ್ರಿಗಳು ಪಳಪಳನೆ ಹೊಳೆಯುತ್ತದೆ.!

 

ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ದೇವರ ಮನೆಯ ಪೂಜಾ ಸಾಮಗ್ರಿಗಳನ್ನು ಕ್ಲೀನ್ ಮಾಡುವುದಕ್ಕೆ ಹೆಚ್ಚಿನ ಶ್ರಮ ಪಡುತ್ತಿರುತ್ತಾರೆ. ಹೌದು ಅದನ್ನು ವಾರಕ್ಕೆ ಒಮ್ಮೆ ಕ್ಲೀನ್ ಮಾಡುವುದರಿಂದ ಅದರ ಮೇಲೆ ಕಪ್ಪು ಕಲೆ ಅಥವಾ ಹೊಗೆ, ಎಣ್ಣೆ ಕಲೆ, ಈ ರೀತಿಯಾಗಿ ಹಲವಾರು ಕೊಳೆಗಳು ಇರುತ್ತದೆ. ಅವುಗಳನ್ನು ಸ್ವಚ್ಛ ಮಾಡಲು ಪ್ರತಿಯೊಬ್ಬರೂ ಕೂಡ ಹೆಚ್ಚಿನ ಶ್ರಮ ಪಡುತ್ತಿರುತ್ತಾರೆ.

ಆದರೆ ಈ ದಿನ ನಾವು ಹೇಳುವಂತಹ ಈ ಟಿಪ್ಸ್ ನಿಮಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹೌದು ಕಡಿಮೆ ಖರ್ಚಿನಲ್ಲಿ ಅದರಲ್ಲೂ ಹತ್ತು ರೂಪಾಯಿ ಖರ್ಚಿನ ಒಳಗೆ ಈಗ ನಾವು ಹೇಳುವಂತಹ ಈ ಒಂದು ಪೌಡರ್ ಅಂದರೆ ಪೇಸ್ಟ್ ಅನ್ನು ತಯಾರಿಸಬಹುದು. ಇದನ್ನು ನೀವು ನಿಮ್ಮ ದೇವರ ಮನೆಯ ಪಾತ್ರೆಯನ್ನು ತೊಳೆಯುವಂತಹ ಸಮಯದಲ್ಲಿ ಉಪಯೋಗಿಸಬಹುದು.

ಹೌದು ಇದನ್ನು ನೀವು ನಿಮ್ಮ ದೇವರಮನೆಯ ಪಾತ್ರೆಗೆ ಹಚ್ಚಿ ಉಜ್ಜಿ ತಿಕ್ಕಿ ತೊಳೆಯುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಅದನ್ನು ಹಚ್ಚಿ ಎರಡು ನಿಮಿಷ ಬಿಟ್ಟರೆ ಸಾಕು ದೇವರ ಮನೆಯ ಸಾಮಗ್ರಿ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಹೊರಗಡೆ ಮಾರುಕಟ್ಟೆಯಲ್ಲಿ ಸಿಗುವಂತಹ ಪೌಡರ್ ಗಳನ್ನು ತಂದು ನೀವು ದೇವರ ಸಾಮಾನುಗಳನ್ನು ಹಚ್ಚಿ ಚೆನ್ನಾಗಿ ಉಜ್ಜಿದರೆ ಮಾತ್ರ ಸ್ವಚ್ಛವಾಗುತ್ತದೆ.

ಅದರಲ್ಲಂತೂ ಹಬ್ಬದ ದಿನಗಳಲ್ಲಿ ಹೆಚ್ಚಿನ ಕೆಲಸ ಇದ್ದಂತಹ ಸಮಯದಲ್ಲಿ ಈಗ ನಾವು ಹೇಳುವಂತಹ ಈ ಒಂದು ಟ್ರಿಕ್ಸ್ ಬಳಸಿದರೆ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ದೇವರಮನೆಯ ಸಾಮಗ್ರಿಗಳನ್ನು ಸ್ವಚ್ಛ ಮಾಡಬಹುದಾಗಿದೆ. ಹಾಗಾದರೆ ಅದನ್ನು ಮಾಡುವುದು ಹೇಗೆ? ಅದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಮೊದಲೇ ಹೇಳಿದಂತೆ ದೇವರ ಮನೆಯ ಸಾಮಗ್ರಿಗಳಲ್ಲಿ ಅತಿ ಹೆಚ್ಚಿನ ಕೊಳೆ ಅಂಶ ಇರುತ್ತದೆ ಎಂದು ಹೇಳಬಹುದು. ಏಕೆ ಎಂದರೆ ನಾವು ದೇವರ ಮನೆಯಲ್ಲಿ ತಾಮ್ರ ಹಿತ್ತಾಳೆ ಪಾತ್ರೆಗಳನ್ನು ಉಪಯೋಗಿಸುತ್ತಿರು ತ್ತೇವೆ ಆದರೆ ಅವುಗಳನ್ನು ಪ್ರತಿದಿನ ತೊಳೆಯಲು ಸಾಧ್ಯವಾಗುವುದಿಲ್ಲ ವಾರದ ದಿನಗಳಲ್ಲಿ ಅಂದರೆ ಆ ಮನೆಯ ದೇವರ ವಾರದ ದಿನಗಳಲ್ಲಿ ಅವುಗಳನ್ನು ಸ್ವಚ್ಛ ಮಾಡಿ ಆನಂತರ ಪೂಜೆ ಮಾಡುತ್ತಾರೆ.

ಅಂತಹ ಸಮಯದಲ್ಲಿ ಕೆಲವೊಂದಷ್ಟು ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗುವ ಸಂದರ್ಭ ಇದ್ದಂತಹ ಸಮಯದಲ್ಲಿ ಅವುಗಳನ್ನು ಉಜ್ಜಿ ತಿಕ್ಕಿ ತೊಳೆಯಲು ಸಮಯ ಇರುವುದಿಲ್ಲ ಅಂತಹವರು ಉಪಯೋಗಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಅದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥ ಬೇಕಾಗು ತ್ತದೆ ಎಂದು ನೋಡುವುದಾದರೆ.

* ಸ್ವಲ್ಪ ಪ್ರಮಾಣದ ಇಟ್ಟಿಗೆ ಪುಡಿ ಹೌದು ಇಟ್ಟಿಗೆಯನ್ನು ತಂದು ಚೆನ್ನಾಗಿ ಕುಟ್ಟಿ ಅದನ್ನು ಪುಡಿ ಮಾಡಿ ಕೊಳ್ಳಬೇಕು. ಆನಂತರ ಅದಕ್ಕೆ ಸ್ವಲ್ಪ ಪ್ರಮಾಣದ ನಿಂಬೆ ಉಪ್ಪನ್ನು ಮಿಶ್ರಣ ಮಾಡಿ ಸ್ವಲ್ಪ ನೀರನ್ನು ಹಾಕಿ ಕಲಸಿಟ್ಟು ಕೊಳ್ಳಬೇಕು.

ನಿಂಬೆ ಉಪ್ಪು ಇಲ್ಲದೆ ಇರುವವರು ಇಟ್ಟಿಗೆ ಪುಡಿಗೆ ನಿಂಬೆಹಣ್ಣಿನ ರಸ ವನ್ನು ಹಾಕಿದರೆ ಸಾಕು ನೀರನ್ನು ಹಾಕುವ ಅವಶ್ಯಕತೆ ಇರುವುದಿಲ್ಲ. ಈ ರೀತಿ ತಯಾರಾದ ಪೇಸ್ಟ್ ಅನ್ನು ನಿಮ್ಮ ದೇವರ ಮನೆಯ ಸಾಮಗ್ರಿಗಳ ಮೇಲೆ ಹಚ್ಚಿ ಒಮ್ಮೆ ಉಜ್ಜಿದರೆ ಸಾಕು ದೇವರಮನೆಯ ಎಲ್ಲಾ ಪಾತ್ರೆಗಳನ್ನು ಸುಲಭವಾಗಿ ಕಡಿಮೆ ಸಮಯದಲ್ಲಿ, ಕಡಿಮೆ ಖರ್ಚಿನಲ್ಲಿ, ಸ್ವಚ್ಛ ಮಾಡಬಹುದು. ಈ ಒಂದು ಟ್ರಿಕ್ಸ್ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುತ್ತದೆ ಎಂದೇ ಹೇಳಬಹುದು.

Leave a Comment