ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಕೂಡ ಅವನ ಪರಿಸ್ಥಿತಿಗೆ ಅನುಗುಣವಾಗಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತವೆ. ಕೆಲವೊಮ್ಮೆ ನಮ್ಮ ಕೆಟ್ಟ ಗ್ರಹಗತಿಗಳ ಪ್ರಭಾವದಿಂದಾಗಿ, ಕೆಲವೊಮ್ಮೆ ಹಿಂದಿನ ಜನ್ಮದ ಕರ್ಮದ ಫಲವಾಗಿ ನಾವು ಗೊತ್ತಿಲ್ಲದೆ ಮಾಡಿದ ತಪ್ಪಿನಿಂದ ಅಥವಾ ನಮ್ಮ ಮೇಲೆ ಉಂಟಾಗಿರುವ ದೃಷ್ಟಿ ದೋಷದಿಂದ ಈ ರೀತಿ ನೂರಾರು ಕಾರಣಗಳಿಂದ ನಮಗೆ ಒಂದಲ್ಲ ಒಂದು ರೀತಿಯ ಕ’ಷ್ಟಗಳು ಬರುತ್ತಿವೆ.
ಮನುಷ್ಯನಾದವನಿಗೆ ವ್ಯಾಪಾರ ವ್ಯವಹಾರ ಆರೋಗ್ಯ ಕುಟುಂಬ ಹಣಕಾಸು ಎಲ್ಲವೂ ಕೂಡ ಬಹಳ ಮುಖ್ಯ. ಇವುಗಳಲ್ಲಿ ಯಾವುದರಲ್ಲೂ ತೊಡಕಾದರೂ ಕೂಡ ನೆಮ್ಮದಿ ಇರುವುದಿಲ್ಲ. ಆದರೆ ಸಮಸ್ಯೆಯಲ್ಲಿ ಸಿಲುಕಿ ಕೊಂಡಾಗ ಅದರೊಳಗೆ ಮುಳುಗುವುದು ಬಿಟ್ಟು ಪರಿಹಾರ ಮಾರ್ಗಕ್ಕಾಗಿ ಹೊರಗೆ ಬಂದು ಯೋಚಿಸಬೇಕು.
ಅನೇಕ ಬಾರಿ ನಮ್ಮ ಮನೆಯಲ್ಲಿರುವ ಸಣ್ಣ ವಸ್ತುಗಳು ಕೂಡ ನಮಗೆ ನಮ್ಮ ಸಮಸ್ಯೆಗಳನ್ನು ಪರಿಹಾರ ಕೊಡಲು ಉತ್ತಮ ಶಕ್ತಿಯಾಗಿ ಕೆಲಸಕ್ಕೆ ಬರುತ್ತವೆ. ಮನೆಯಲ್ಲಿರುವ ಅಕ್ಕಿಯಿಂದ ನಮ್ಮ ಜಾತಕದ ಅನೇಕ ಸಮಸ್ಯೆಗಳಿಗೆ ಪರಿಹಾರ ಇದೆ ಅವುಗಳಲ್ಲಿ ಪ್ರಮುಖವಾದ ಕೆಲ ವಿಷಯಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಅಕ್ಕಿ ಎಂದರೆ ಚಂದ್ರ ಎಂದು ಸಹ ಹೇಳಲಾಗುತ್ತದೆ. ಚಂದ್ರ ಮನಸ್ಸು ಕಾರಕನಾಗಿದ್ದಾನೆ ಮಾನಸಿಕ ಒತ್ತಡಗಳು ಉಂಟಾದಾಗ ಅದಕ್ಕೆ ಸಂಬಂಧ ಪಟ್ಟ ಈ ಒಂದು ಸಣ್ಣ ಪ್ರಯೋಗ ಮಾಡಿ ನಿಮಗೆ ಪರಿಹಾರ ಸಿಗುತ್ತದೆ. ಮಾನಸಿಕ ಒತ್ತಡಗಳು ನಮ್ಮನ್ನು ವೃತ್ತಿ ಜೀವನದಲ್ಲಿ ಮುಂದೆ ಹೋಗದಂತೆ ವ್ಯವಹಾರದಲ್ಲಿ ನಾವು ಅಭಿವೃದ್ಧಿ ಹೊಂದದಂತೆ ತಡೆದು ಬಿಡುತ್ತವೆ.
ಹಾಗಾಗಿ ಯಾವುದೇ ವಿಷಯಕ್ಕಾದರೂ ಮನಸ್ಸು ಶುದ್ದವಾಗಿರಬೇಕು ಮತ್ತು ಮನಸ್ಸಿನಲ್ಲಿ ಸಂತೋಷ, ನೆಮ್ಮದಿ, ಉತ್ಸಾಹ ಇರಬೇಕು. ಮಾನಸಿಕ ಸಮಸ್ಯೆಗಳು ಇವುಗಳನ್ನು ಕುಂದಿಸುತ್ತವೆ. ಹಾಗಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿ ಸರಿ ಹೋಗಲು ಮಾನಸಿಕ ನೆಮ್ಮದಿಗಾಗಿ ಹಳದಿ ಅಕ್ಕಿಯಿಂದ ಈ ಪರಿಹಾರ ಮಾಡಿ.
ಒಂದು ಶುಭ ಶುಕ್ರವಾರದ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಹಳದಿ ಅಕ್ಕಿ ಎಂದರೆ ಅಕ್ಷತೆ ಮೊದಲಿಗೆ ಅಕ್ಷತೆ ಮಾಡಿಕೊಂಡು 21 ಅಕ್ಷತೆಯನ್ನು ಒಂದು ಕೆಂಪು ವಸ್ತ್ರದಲ್ಲಿ ಕಟ್ಟಿ ಈಗ ಅದನ್ನು ತಾಯಿ ಮಹಾಲಕ್ಷ್ಮಿಯ ಫೋಟೋ ಮುಂದೆ ಇಡಿ, ವಿಗ್ರಹ ಇದ್ದರೆ ವಿಗ್ರಹದ ಮುಂದೆ ಇಡಿ.
ಅದಕ್ಕೂ ಕೂಡ ಪೂಜೆ ಮಾಡಿ ನಂತರ ತಾಯಿ ಮಹಾಲಕ್ಷ್ಮಿಯನ್ನು ನಿಮ್ಮ ಹಣಕಾಸು ಸಮಸ್ಯೆ ಪರಿಹರಿಸುವಂತೆ ಬೇಡಿಕೊಳ್ಳಿ ಮತ್ತು ಮಾನಸಿಕವಾಗಿ ನೆಮ್ಮದಿ ಕೊಡುವಂತೆ ಕೇಳಿಕೊಳ್ಳಿ. ಈಗ ಅದನ್ನು ತೆಗೆದುಕೊಂಡು ನಿಮ್ಮ ಪರ್ಸನಲ್ಲಿಯಾದರೂ ಇಟ್ಟುಕೊಳ್ಳಿ ಅಥವಾ ಹಣ ಇಡುವ ಕಪಾಟೀನಲ್ಲಿ ಇಡಿ ನಿಮ್ಮ ಸಮಸ್ಯೆ ಆಶ್ಚರ್ಯ ಪಡುವಂತೆ ನಿವಾರಣೆ ಆಗುತ್ತದೆ.
ಹುಣ್ಣಿಮೆಯ ದಿನ ನೀರಿಗೆ ಅಕ್ಕಿಯನ್ನು ಹಾಕಿ ಚಂದ್ರನಿಗೆ ಅರ್ಘ್ಯ ಅರ್ಪಿಸುವುದರಿಂದ ಕೂಡ ಮಾನಸಿಕ ಒತ್ತಡಗಳು ಕಡಿಮೆ ಆಗುತ್ತದೆ. ಇದರ ಜೊತೆಗೆ ಒಂದು ಹಿಡಿ ಮುಕ್ಕಾಗದ ಅಕ್ಕಿಯನ್ನು ತೆಗೆದುಕೊಂಡು ಶಿವನ ದೇವಾಲಯದಲ್ಲಿ ಅರ್ಪಿಸುವುದರಿಂದ ಕೂಡ ಮಾನಸಿಕ ಚಂಚಲತೆಗಳು ದೂರಾಗುತ್ತವೆ, ಮಾನಸಿಕ ಒತ್ತಡ ಕಡಿಮೆ ಆಗುತ್ತದೆ.
ನಿಮ್ಮ ಕೈಲಾದಷ್ಟು ಅಸಹಾಯಕರಿಗೆ ಅನ್ನದಾನ ಮಾಡಿ ಇದು ಎಲ್ಲಕ್ಕಿಂತ ಶ್ರೇಷ್ಠವಾಗಿದೆ ನಿಮ್ಮ ಬದುಕಿನ ಎಷ್ಟೋ ಕ’ಷ್ಟಗಳಿಗೆ ಅನ್ನದಾನವು ಪರಿಹಾರ ಆಗಿದೆ. ಆದರೆ ಅನ್ನವನ್ನು ವ್ಯರ್ಥ ಮಾಡಬೇಡಿ ನಿಜವಾಗಿಯೂ ಆಹಾರದ ಅವಶ್ಯಕತೆ ಇರುವಂತವರಿಗೆ ಊಟ ಕೊಡಿಸಿ. ಹಸಿವು ನೀಗಿದವರು ಮನಸಾರೆಯಾಗಿ ಹರಸುವುದರಿಂದ ಅದು ಭಗವಂತನಿಗೆ ತಲುಪುತ್ತದೆ ಮತ್ತು ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ.