ಏಳು ಅಶ್ವ ಇರುವ ರಥ ಏರಿ ಸೂರ್ಯದೇವನು ಬರುತ್ತಾನೆ. ಹಾಗಾಗಿ ಏಳು ಅಶ್ವ ಎನ್ನುವುದು ಸೂರ್ಯನಂತೆ ಸಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ವ್ಯಾಪಾರ ವ್ಯವಹಾರ ಅಭಿವೃದ್ಧಿಯಾಗಲು, ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆ ಮಾಡಲು, ವಿದ್ಯಾರ್ಥಿಗಳಿಗೆ ಆಸಕ್ತಿ ಹೆಚ್ಚಾಗಲು.
ಹೀಗೆ ಜೀವನದಲ್ಲಿ ಮುಂದೆ ಬರಲು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಅಥವಾ ವ್ಯಾಪಾರಸ್ಥಳಗಳಲ್ಲಿ ಈ ರೀತಿ ಏಳು ಕುದುರೆ ಇರುವ ಫೋಟೋ ಹಾಕುತ್ತಾರೆ. ಇದನ್ನು ವಾಸ್ತು ಶಾಸ್ತ್ರದ ಪ್ರಕಾರ ಹೇಗೆ ಹಾಕಬೇಕು ಎಂದು ನಿಯಮ ಇದೆ. ಒಂದು ವೇಳೆ ತಪ್ಪಾಗಿ ಹಾಕಿದರೆ ಕಷ್ಟಗಳು ತಪ್ಪಿದ್ದಲ್ಲ ಹಾಗಾಗಿ ಏಳು ಅಶ್ವಗಳನ್ನು ಇರುವ ಫೋಟೋ ಹಾಕುವ ವಿಧಾನದ ಬಗ್ಗೆ ಈ ಅಂಕಣದಲ್ಲಿ ಕೆಲ ಮಾಹಿತಿ ತಿಳಿಸುತ್ತಿದ್ದೇವೆ
* ನೀವು ಹಾಕುವ ಚಿತ್ರದಲ್ಲಿ ಇರುವ ಕುದುರೆಗೆ ಲಗಾಮನ್ನು ಹಾಕಿರಬಾರದು ಮತ್ತು ಆ ಅಶ್ವಗಳ ಮುಖದಲ್ಲಿ ಆಕ್ರೋಶವಿಲ್ಲದೇ ಮಂದಹಾಸವಿರುವ ಫೋಟೋ ಆಗಿರಬೇಕು. ಹಾಗಾಗಿ ಖರೀದಿ ಮಾಡುವಾಗಲೇ ಇದರ ಬಗ್ಗೆ ಗಮನ ಕೊಡಬೇಕು.
* ಈ ಏಳು ಕುದುರೆ ಫೋಟೋವನ್ನು ಮನೆಯ ಗೋಡೆಯ ದಕ್ಷಿಣ ದಿಕ್ಕಿನಲ್ಲಿ ಹಾಕಬೇಕು. ಕುದುರೆಗಳ ಮುಖ ಉತ್ತರ ದಿಕ್ಕನ್ನು ನೋಡುತ್ತಿರಬೇಕು.
* ವ್ಯಾಪಾರ ಸ್ಥಳದಲ್ಲಿ ಹಾಕುವುದಾದರೇ ಮುಖ್ಯಗೋಡೆಯ ಮೇಲೆ ಹೊರಗಿನಿಂದ ಒಳಗೆ ಬರುವ ರೀತಿ ಕುದುರೆಯ ಫೋಟೋವನ್ನು ಹಾಕಬೇಕು, ಅಲ್ಲಿಯೂ ಕೂಡ ಈ ಕುದುರೆಗಳು ಉತ್ತರ ದಿಕ್ಕನ್ನೇ ನೋಡುತ್ತಿರುವ ರೀತಿ ಇರಬೇಕು.
* ಮನೆಯಲ್ಲಿ ಈ ಚಿತ್ರ ಹಾಕುವುದಿದ್ದರೆ ವಾಸ್ತುತಜ್ಞರ ಸಲಹೆಯನ್ನು ಕೇಳಿ ಸಲಹೆ ಪಡೆದು ಹಾಕುವುದು ಒಳ್ಳೆಯದು. ಸಾಮಾನ್ಯವಾಗಿ ಮನೆಯಲ್ಲಿ ಈ ಪೋಟೋವನ್ನು ಪೂರ್ವದ ಗೋಡೆಯ ಮೇಲೆ ಇಡುವುದರಿಂದ ವೃತ್ತಿ ಬೆಳವಣಿಗೆಯನ್ನು ಬಯಸುತ್ತಿರುವವರಿಗೆ ಒಳ್ಳೆಯದಾಗುತ್ತದೆ.
* ಓಡುವ ಭಂಗಿಯಲ್ಲಿರುವ ಕುದುರೆಯ ಫೋಟೋವನ್ನು ಇಡುವುದಕ್ಕೆ ಮನೆಯ ಹಾಲ್ ಸೂಕ್ತ ಸ್ಥಳವಾಗಿದೆ. ಓಡುವಂತಹ ಕುದುರೆಗಳ ಫೋಟೋ ಖರೀದಿಸುವುದಾದರೆ ಅವು ಯಾವುದೇ ಅಡೆತಡೆ ಇಲ್ಲದೆ ತೆರೆದ ನೆಲದ ಮೇಲೆ ಓಡುವಂತೆ ಚಿತ್ರಿಸಿರಬೇಕು.
* ಕಿಟಕಿ ಮತ್ತು ಮನೆಯ ಮುಖ್ಯದ್ವಾರದ ಬಳಿ ಈ ಫೋಟೋ ಇಡಬಾರದು. ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆ, ದೇವಸ್ಥಾನ, ಪೂಜಾ ಕೊಠಡಿ, ವಾಶ್ ರೂಂ ಗೆ ಎದುರಾಗಿರುವ ಯಾವುದೇ ಗೋಡೆಗಳ ಮೇಲೆ ಅಥವಾ ಅವುಗಳ ಬಾಗಿಲುಗಳ ಮೇಲೆ ಏಳು ಕುದುರೆಗಳ ಫೋಟೋವನ್ನು ಹಾಕುವುದು ಅಷ್ಟೊಂದು ಸರಿ ಬರುವುದಿಲ್ಲ.
* ಕುದುರೆಗಳು ನೀರಿನ ಮೇಲೆ ಓಡುತ್ತಿರುವ ಚಿತ್ರ ಅಷ್ಟೊಂದು ಶುಭಕರವಲ್ಲ ಅವುಗಳನ್ನು ಖರೀದಿಸಬಾರದು ಒಂದು ವೇಳೆ ಏಳು ಅಶ್ವಗಳು ಇರುವ ಭಾವಚಿತ್ರ ಸಿಗದೇ ಇದ್ದರೆ ಬೆಸಸಂಖ್ಯೆಯಲ್ಲಿ ಇರುವ ಕುದುರೆಯನ್ನ ಚಿತ್ರವನ್ನು ಆಯ್ಕೆ ಮಾಡುವುದು ಸೂಕ್ತ.
* ಕೆಂದು ಬಣ್ಣದಲ್ಲಿರುವ ಏಳು ಕುದುರೆಗಳ ಚಿತ್ರವು ಮಂಗಳಗ್ರಹದ ಪ್ರಭಾವವನ್ನು ಹೊಂದಿರುತ್ತದೆ. ಇದು ವ್ಯಕ್ತಿಯ ಸ್ವಾಭಿಮಾನವನ್ನು ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ.
* ನೀಲಿ ಹಿನ್ನೆಲೆ ಬಣ್ಣದಲ್ಲಿ ಚಿತ್ರಿಸಿದ ಏಳು ಕುದುರೆಗಳು ಶನಿಗ್ರಹವನ್ನು ಪ್ರತಿನಿಧಿಸುತ್ತದೆ. ಇದು ಸಾಮರಸ್ಯ ಮತ್ತು ಶಾಂತಿಯನ್ನು ಆಹ್ವಾನಿಸುತ್ತದೆ.
* ವಾಸ್ತುಶಾಸ್ತ್ರದ ಪ್ರಕಾರ ಏಳು ಬಿಳಿಕುದುರೆಯ ವರ್ಣಚಿತ್ರವನ್ನೇ ಆಯ್ಕೆ ಮಾಡುವುದು ಶ್ರೇಷ್ಠ. ಯಾಕೆಂದರೆ ಬಿಳಿ ಬಣ್ಣವು ಶಾಂತಿ ಮತ್ತು ಪರಿಶುದ್ಧತೆಯನ್ನು ಸೂಚಿಸುತ್ತದೆ. ಹಾಗೆಯೇ ಧನಾತ್ಮಕ ಭಾವನೆಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.
* ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿನಲ್ಲಿ ಕುದುರೆಯ ಫೋಟೋಗಳನ್ನು ಇಟ್ಟರೇ ವೃತ್ತಿ ಜೀವನದ ಸಮಸ್ಯೆಗಳು ಬಗೆಹರಿಯುತ್ತವೆ. ಇದರಿಂದ ಅದೃಷ್ಠವು ಒಲಿದು ಬರುತ್ತದೆ.
* ಎರಡು ಜೋಡಿ ಕುದುರೆಯ ಫೋಟೋಗಳನ್ನು ಬೆಡ್ ರೂಂ ನಲ್ಲಿ ಇಟ್ಟುಕೊಂಡರೆ ದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚಾಗುತ್ತದೆ.
* ಒಂದೇ ಕುದುರೆ ಓಡುವ ಫೋಟೋವನ್ನು ಹಾಕುವುದು ಕೂಡ ಒಳ್ಳೆಯದಲ್ಲ, ಇದು ದುರಾದೃಷ್ಠವನ್ನು ತರುತ್ತದೆ.
* ಫೋಟೋದಲ್ಲಿ ಕುದುರೆಗಳ ಮೇಲೆ ಹಗ್ಗವಿರಬೇಕು ಆದರೇ ಆ ಏಳು ಕುದುರೆಗಳನ್ನು ಹಗ್ಗದಿಂದ ಬಂಧಿಸಿರುವ ಚಿತ್ರ ಇರಬಾರದು. ಇದು ಅಭಿವೃದ್ಧಿಯನ್ನು ತಡೆಯುತ್ತದೆ. ಪೇಟಿಂಗ್ ನಲ್ಲಿ ಕುದುರೆಯ ಪೂರ್ತಿ ಚಿತ್ರ ಕಾಣುವಂತಿರಬೇಕು. ಕುದುರೆಗಳ ಮುಖದಲ್ಲಿ ಸಂತೋಷ, ಧೈರ್ಯ ಎದ್ದು ಕಾಣುವಂತೆ ಇರಬೇಕು. ಇಂತಹ ಫೋಟೋ ಹಾಕುವುದರಿಂದ ಪಾಸಿಟಿವ್ ವೈಬ್ರೇಶನ್ ಕ್ರಿಯೇಟ್ ಆಗುತ್ತದೆ.