Friday, April 18, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeUseful Informationಶ್ರೀ ಕೃಷ್ಣನಲ್ಲಿ ಶಪಿಸಿದ್ದ ಗಾಂಧಾರಿ ಅಂ'ತ್ಯವಾಗಿದ್ದು ಹೇಗೆ ಗೊತ್ತಾ.?

ಶ್ರೀ ಕೃಷ್ಣನಲ್ಲಿ ಶಪಿಸಿದ್ದ ಗಾಂಧಾರಿ ಅಂ’ತ್ಯವಾಗಿದ್ದು ಹೇಗೆ ಗೊತ್ತಾ.?

 

ರಾಮಾಯಣ ಹಾಗೂ ಮಹಾಭಾರತ ಈ ಭರತ ಭೂಮಿ ಕಂಡ ಅತ್ಯಂತ ಸರ್ವಶ್ರೇಷ್ಠ ಮಹಾಕಾವ್ಯಗಳು. ಅದರಲ್ಲೂ ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಕೂಡ ಒಂದಕ್ಕಿಂತ ಒಂದು ವಿಶೇಷ ವ್ಯಕ್ತಿತ್ವದ ಪರಿಚಯ. ಯುಗ ಯುಗಗಳೇ ಕಳೆದರೂ ಆದರ್ಶವಾಗುವಂತಹ ವ್ಯಕ್ತಿತ್ವವನ್ನು ಹೊಂದಿದ್ದ ಮಹಾನ್ ಚೇತನಗಳು ಬದುಕಿದ ಕಾಲ ದ್ವಾಪರಯುಗ.

ಜೀವನದಲ್ಲಿ ವ್ಯಕ್ತಿಯೊಬ್ಬನಿಗೆ ಏನೆಲ್ಲಾ ಕಷ್ಟಗಳು ಬರಬಹುದು ಎನ್ನುವುದಕ್ಕೆ ಉದಾಹರಣೆಯನ್ನು ಮಹಾಭಾರತದಲ್ಲಿ ನಾವು ಕಾಣಬಹುದು. ಹಾಗೆ ಬದುಕಿನ ಯಾವುದೇ ದ್ವಂದ್ವಕ್ಕೆ ಉತ್ತರ ಬೇಕಿದ್ದರೆ ಭಗವದ್ಗೀತೆ ಓದಬಹುದು.

ಹೀಗೆ ಸಾರ್ವಕಾಲಿಕ ಶ್ರೇಷ್ಠವಾದ ಮಹಾಭಾರತದಲ್ಲಿ ಅರ್ಜುನ, ಶ್ರೀಕೃಷ್ಣ, ಧರ್ಮರಾಜ, ದುರ್ಯೋಧನ, ಭೀಷ್ಮ, ದೃತರಾಷ್ಟ್ರ, ಶಾಂತನ, ಶಕುನಿ, ಕರ್ಣ ಮುಂತಾದ ಮಹಾವೀರದಲ್ಲದೆ ಸತ್ಯವತೀ, ಅಂಬೆ, ಗಾಂಧಾರಿ ಕುಂತಿ ದ್ರೌಪದಿ ಭಾನುಮತಿ ಉತ್ತರೆಯಂತಹ ವೀರಯೋಧೆಯರು, ಮಹಾ ಪತಿವ್ರತೆಯರು ಮತ್ತು ಶ್ರೇಷ್ಠ ತಾಯಿಯರು ಇದ್ದರು.

ಮಹಾಭಾರತದಲ್ಲಿ ಒಳ್ಳೆಯತನದ ಉತ್ತುಂಗವು ಇದೆ ಹಾಗೆಯೇ ಕೆ’ಟ್ಟತನದ ಪರಮಾವಧಿ ಕೂಡ. ಶಕುನಿಗೆ ಸಹೋದರಿ ಗಾಂಧಾರಿ ಮೇಲಿದ್ದ ಅಪಾರವಾದ ಪ್ರೀತಿ ಕೊನೆಗೆ ಕುರುವಂಶಕ್ಕೆ ಸಂ’ಚ’ಕಾ’ರವಾಯಿತು. ದುರ್ಯೋಧನನ್ನಲ್ಲಿಯೂ ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹದ ಔದಾರ್ಯತೆ ಹಾಗೂ ಅಧಿಕಾರಕ್ಕಾಗಿ ಸಹೋದರರಾದ ಪಾಂಡವರನ್ನು ಕೊ’ಲ್ಲು’ವ, ಕು’ತಂ’ತ್ರದಿಂದ ಕಾಡಿಗಟ್ಟುವ ನೀಚತನ ಎರಡನ್ನು ನೋಡಬಹುದು.

ಇಂತಹ ನೂರು ಗಂಡು ಮಕ್ಕಳನ್ನು ಪಡೆದಿದ್ದ ಕುರು ವಂಶದ ಮಹಾಮತೆ ಗಾಂಧಾರಿಯ ಬಗ್ಗೆ ಕೂಡ ಇದೇ ರೀತಿಯ ಭಾವನೆ ಬರುತ್ತದೆ. ಹುಟ್ಟಿದ ಮನೆ ಹಾಗೂ ಮೆಟ್ಟಿದ ಮನೆಯನ್ನು ಬೆಳಗಬೇಕು. ಆರ್ಯವರ್ತದಲ್ಲಿಯೇ ಹಿರಿಯ ವಂಶಕ್ಕೆ ತಾನು ಬೆಳಕಾಗಬೇಕು ಎಂದು ಬಾಲದಿಂದ ಕನಸು ಕಂಡವಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಣ್ಣೆದುರಿಗೆ ನಡೆಯುತ್ತಿದ್ದ ದುಷ್ಟತೆಯನ್ನು ತಡೆಯಲಾರದೆ.

ಅಸಹಾಯಕಳಾಗಿ ಕೊನೆಗೆ ಯುಗಾಂತ್ಯಕ್ಕಾಗಿ ನಡೆದ ಮಹಾಪರ್ವಕ್ಕೆ ಕಾರಣಕರ್ತನಾದ ಸೂತ್ರಧಾರಿ ಶ್ರೀ ಕೃಷ್ಣನಿಗೆ ನಿನ್ನ ಕಣ್ಣೆದುರಿಗೆ ನಿನ್ನ ಯದುವಂಶ ಹಾಳಾಗಲಿ, ಮೃಗಗಳಂತೆ ಯದುವಂಶದ ಪುರುಷರು ಒಬ್ಬರು ಮತ್ತೊಬ್ಬರ ರಕ್ತ ಕುಡಿಯುತ್ತಾರೆ, ಆಗ ಕರುಗಳಂತೆ ಎಲ್ಲಾ ಯಾದವ ಕುಲದ ಮಕ್ಕಳು ರೋಧಿಸುವರು, ಅದನ್ನು ತಡೆಯಲು ಯಾರಿಗೂ ಸಾಧ್ಯವಾಗದಿರಲಿ.

ನೀನೇ ಕಟ್ಟಿದ ನಿನ್ನ ದ್ವಾರಕೆ ನಗರ ನಿನ್ನ ಕಣ್ಣಿಗೆ ನೀರು ಪಾಲಾಗುತ್ತದೆ, ನೀನು ಅಸಹಾಯಕನಾಗಿ ಅದನ್ನು ಕಾಪಾಡಲಾಗದೆ ಕಾಡು ಪಾಲಾಗು, ನಿನಗೆ ಒಬ್ಬ ಯೋಧನಿಗೆ ಯುದ್ಧ ಭೂಮಿಯಲ್ಲಿ ದೊರಕುವ ವೀ’ರ’ಮ’ರ’ಣ ಸಿಗದಂತಾಗಲಿ ಎಂಬಿತ್ಯಾದಿಯಾಗಿ ಶಪಿಸುವಂತಾಗುತ್ತದೆ.

ಈ ರೀತಿ ವೀರಯೋಧೆಯೊಬ್ಬಳು, ಶಿವನಿಂದ 100 ಗಂಡು ಮಕ್ಕಳ ವರ ಪಡೆದ ಮಹಾತಾಯಿಯ, ಪತಿಯು ಕುರುಡನೆಂದು ತಿಳಿದ ತಕ್ಷಣ ತಾನು ಈ ಪ್ರಪಂಚವನ್ನು ನೋಡಲಾರೆ ಎಂದು ಕಣ್ಣು ಕಟ್ಟಿಕೊಂಡು ಪತಿ ಧರ್ಮ ಪಾಲಿಸಿದಂತಹ ಆದರ್ಶ ಪತ್ನಿಯು ದು’ರಂ’ತ ಅಂ’ತ್ಯ ಕಂಡ ಕಥೆ ಬಗ್ಗೆ ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.

ಗಾಂಧಾರ ದೇಶದ ರಾಜನ ಮಗಳಾದ ಗಾಂಧಾರಿಗೆ ಹಲವು ಹೆಸರಿತ್ತು ಆದರೆ ಗಾಂಧಾರಿ ಎನ್ನುವುದೇ ಹೆಚ್ಚು ಪ್ರಚಲಿತದಲ್ಲಿದೆ. ಬಾಲ್ಯದಿಂದಲೂ ಅರಮನೆಯಲ್ಲಿ ಬೆಳೆದ ಕಣ್ಮಣಿ ವಿದ್ಯೆ, ಬುದ್ಧಿ, ಧೈರ್ಯ, ನೀತಿ, ಧರ್ಮ, ಚತುರತೆ, ಸೌಂದರ್ಯ, ಸದ್ಗುಣದಿಂದ ತುಂಬಿದ್ದಳು.

ಶಿವನಿಂದ ನೂರು ಗಂಡು ಮಕ್ಕಳ ವರವನ್ನು ಕೂಡ ಪಡೆದಿದ್ದ ಈಕೆಯ ವಿಚಾರ ತಿಳಿದ ಭೀಷ್ಮನು ಕುರು ವಂಶಕ್ಕೆ ತಕ್ಕ ಹೆಣ್ಣು ಎಂದು ಧೃತರಾಷ್ಟ್ರದೊಂದಿಗೆ ಮದುವೆ ಮಾಡಿಸಿದಳು ಪ್ರಸ್ತಾಪವಿಟ್ಟಾಗ ಅಂಬಿಕೆ, ಅಂಬಾಲಿಕೆ ಹಾಗೂ ಅಂಬಾಳ ಕಥೆ ಕೇಳಿದ್ದ ಗಾಂಧಾರಿ ತಂದೆ ಕಲ್ಯಾಣಕ್ಕೆ ಒಪ್ಪದಿದ್ದರೆ ತನ್ನನ್ನು ಯುದ್ಧ ಮಾಡಿ ಕರೆದೊಯ್ಯಬಹುದು, ತನ್ನಿಂದ ಕುಲಕ್ಕೆ ಕ’ಳಂ’ಕ ಬರಬಾರದು ಎಂದು ಹೆದರಿ ತಾನೇ ಮದುವೆಯಾಗಲು ಒಪ್ಪುತ್ತಾಳೆ.

ಹುಟ್ಟಿನಿಂದಲೂ ಕೂಡ ತಾನೊಬ್ಬ ಮಹಾರಾಜನ ಪತಿ ಆಗಬೇಕು ಎಂದುಕೊಂಡವರಿಗೆ ಧೈರ್ಯ ಶೌರ್ಯದಲ್ಲಿ ಯಾರಿಗೂ ಕಡಿಮೆ ಇಲ್ಲದ ಧೃತರಾಷ್ಟ್ರ ವರನಾಗಿದ್ದರೂ ಆತ ಹುಟ್ಟು ಕುರುಡನಾಗಿದ್ದು ಆಕೆಯ ಬಾಳನ್ನು ಅಂಧಕಾರಕ್ಕೆ ತಳ್ಳುತ್ತದೆ. ಸ್ವ ಇಚ್ಛೆಯಿಂದ ಕಣ್ಣು ಕಟ್ಟಿಕೊಂಡ ಈಕೆ ಮದುವೆಯ ನಂತರ ಆ ಪಟ್ಟಿಯನ್ನು ಬಿಚ್ಚಿದ್ದು ಒಂದೇ ಬಾರಿ ಅದು ಕುರುಕ್ಷೇತ್ರ ಯುದ್ಧದಲ್ಲಿ 99 ಮಕ್ಕಳು ಮ’ಡಿದು ದುರ್ಯೋಧನನೊಬ್ಬ ಬದುಕಿದ್ದಾಗ.

ಆತನನ್ನಾದರೂ ಉಳಿಸಿಕೊಳ್ಳುವ ಯೋಚನೆಯಿಂದ ಆತನ ದೇಹವನ್ನು ವಜ್ರಕಾಯ ಮಾಡುವ ಶಕ್ತಿ ಆಕೆಯ ಮುಚ್ಚಿದ ಇಕ್ಷುಗಳಿಗೆ ಇದೆ ಎಂದು ತಿಳಿದಾಗ ವಿವಸ್ತ್ರನಾಗಿ ಮಗನಿಗೆ ಕಣ್ಣೆದುರು ನಿಲ್ಲಲು ಹೇಳುತ್ತಾರೆ. ತಯಾರಾಗಿ ಹೋಗುತ್ತಿದ್ದ ದುರ್ಯೋಧನವನ್ನು ಕಂಡ ಶ್ರೀ ಕೃಷ್ಣ ನಕ್ಕು ದುರ್ಯೋಧನನ್ನು ನಾಚಿಕೆ ಪಡಿಸಿ ಆತ ಸೊಂಟದಿಂದ ತೊಡೆಯ ತನಕ ವಸ್ತ ಸುತ್ತಿಕೊಂಡು ಹೋಗುವ ಹಾಗೆ ಮಾಡಿದ್ದ ಮತ್ತು ಆ ಭಾಗದಿಂದ ಮಾತ್ರ.

ಆತನಿಗೆ ಸಾ’ವು ಬರುತ್ತದೆ ಎನ್ನುವುದನ್ನು ಅರಿತಿದ್ದ ಶ್ರೀ ಕೃಷ್ಣನು ಭೀಮ ಹಾಗೂ ದುರ್ಯೋಧನ ನಡುವೆ ಗದಾಯುದ್ಧ ನಡೆದಾಗ ಭೀಮನಿಗೆ ತೊಡೆತಟ್ಟಿ ತೋರಿಸಿ ದುರ್ಯೋಧನನನ್ನು ತೊಡೆ ಮುರಿದು ಸಂ’ಹ’ರಿಸುವಂತೆ ಸನ್ನೆ ಮಾಡಿದ್ದು ಗಾಂಧರಿಯ ಮನಸ್ಸಿನಲ್ಲಿ ಶ್ರೀಕೃಷ್ಣನೇ ತನ್ನ ಸಂತತಿಯ ಹಾಗೂ ನೂರು ಮಕ್ಕಳ ಸಾವಿಗೆ ಕಾರಣ ಎಂದು ನಾಟುತ್ತದೆ.

ಹೀಗಾಗಿ ಕುರುಕ್ಷೇತ್ರದ ಅಂತ್ಯದಲ್ಲಿ ನೂರು ಮಕ್ಕಳನ್ನು ಕಳೆದುಕೊಂಡ ನೋ’ವು ಇಟ್ಟುಕೊಂಡ ಆಕೆ ಆ ಕೋ’ಪ ಕಡಿಮೆಯಾಗಲು ನಿನ್ನನ್ನು ಕ್ಷಮಿಸದೆ ಬೇರೆ ದಾರಿ ಇಲ್ಲ ಎಂದು ಹೇಳಿ ಶ್ರೀ ಕೃಷ್ಣನಿಗೆ ಮನಸ್ಸೋ ಇಚ್ಛೆ ಶಾ’ಪ ಕೊಡುತ್ತಾರೆ. ಆನಂತರ ಕುಂತಿ ಹಾಗೂ ಪತಿ ಧೃತರಾಷ್ಟ್ರದೊಡನೆ ವಾನಪ್ರಸ್ತಾಶ್ರಮಕ್ಕೆ ಹೋಗುತ್ತಾರೆ. ಅಲ್ಲಿ ಅವರಿದ್ದ ಅರಣ್ಯಕ್ಕೆ ಕಾಡ್ಗಿಚ್ಚು ಹಬ್ಬಿದಾಗ ತಾನೇ ಅಗ್ನಿಗೆ ತನ್ನನ್ನು ಅರ್ಪಿಸಿಕೊಳ್ಳುತ್ತಾರೆ. ಅಲ್ಲಿ‌ಗೆ ಒಬ್ಬ ಮಹಾತಾಯಿಯ ಯುಗ ಅಂತ್ಯವಾಗುತ್ತದೆ.