ನಾವು ನಮ್ಮ ಸಂಬಂಧಿಕರು ಹಾಗೂ ಸ್ನೇಹಿತರ ಮನೆಗೆ ಯಾವುದಾದರೂ ಕಾರಣಕ್ಕಾಗಿ ಹೋಗುತ್ತಲೇ ಇರುತ್ತೇವೆ. ಕೆಲವರ ಮನೆ ನೋಡಿದ ವಾವ್ ಎಂದು ಮನಸ್ಸು ಅರಳುತ್ತದೆ ಮತ್ತು ತಕ್ಷಣ ನಾವು ಇದೇ ರೀತಿ ಅಚ್ಚುಕಟ್ಟಾಗಿ ಮನೆಯನ್ನು ಇಟ್ಟುಕೊಳ್ಳಬೇಕು ಎಂದು ಮೆಚ್ಚಿಕೊಂಡಿರುತ್ತೇವೆ.
ಇನ್ನು ಕೆಲವರ ಮನೆ ನೋಡಿ ಮನೆಗೆ ಬಂದ ಮೇಲೆ ಮನೆಯವರ ಜೊತೆ ನಾವೇ ಅವರ ಮನೆಯನ್ನು ಆಡಿಕೊಂಡು ಹೇಳುತ್ತಿರುತ್ತೇವೆ. ವಾಸ್ತು ಪ್ರಕಾರವಾಗಿ ಕೂಡ ಮನೆಯನ್ನು ಈ ರೀತಿ ಚೆಲ್ಲಾಪಿಲ್ಲಿಯಾಗಿ ಇಟ್ಟುಕೊಳ್ಳುವುದು ಮನೆಗೆ ದೋಷ ಉಂಟು ಮಾಡುತ್ತದೆ ಈ ರೀತಿ ಮನೆಯಲ್ಲಿ ವಸ್ತುಗಳು ಎದ್ವಾತದ್ವವಾಗಿ ಅಸ್ತವ್ಯಸ್ತವಾಗಿ ಇದ್ದರೆ ಆ ಮನೆಗೆ ನಕರಾತ್ಮಕ ಪ್ರಭಾವ ಉಂಟುಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ
ಅದೇ ರೀತಿಯಾಗಿ ಅಚ್ಚುಕಟ್ಟುತನ ಮತ್ತು ಸ್ವಚ್ಛತೆ ಇದ್ದ ಕಡೆ ಮಾತ್ರ ತಾಯಿ ಮಹಾಲಕ್ಷ್ಮಿ ನೆಲೆ ನಿಲ್ಲುವುದು ಎನ್ನುವುದನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದಿಷ್ಟೇ ಅಲ್ಲದೆ ಮನೆಯ ವಾತಾವರಣ ಕೂಡ ನಮ್ಮ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀಳುತ್ತದೆ ಎನ್ನುವುದು ಕೂಡ ಒಪ್ಪಲೇ ಬೇಕಾದ ವಿಷಯ.
ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಹೋದಾಗ ವೈದ್ಯರು ಫುಡ್ ಇನ್ಫೆಕ್ಷನ್ ಅಥವಾ ಸ್ಕಿನ್ ಅಲರ್ಜಿಗೆ ಕಾರಣಗಳನ್ನು ಹೇಳುವಾಗ ಮನೆ ಬಗ್ಗೆ ಪ್ರಶ್ನೆ ಮಾಡಿದ್ದನ್ನು ಈಗ ನೀವು ನೆನೆಸಿಕೊಳ್ಳಬಹುದು ಇದೆಲ್ಲದರ ಜೊತೆಗೆ ಇನ್ನು ಇನ್ನೂ ಒಂದು ಮುಖ್ಯವಾದ ಸಂಗತಿ ಏನೆಂದರೆ, ಮನೆ ವಾತಾವರಣ ಮನೋರೋಗಕ್ಕೂ ಕೂಡ ಮದ್ದಾಗುತ್ತದೆ ಎನ್ನುವುದು.
ಈ ಸುದ್ದಿ ಓದಿ:- ಯುಗಾದಿ ಹಬ್ಬದ ದಿನದಂದು ಸಿಂಪಲ್ಲಾಗಿ ದೇವರ ಮುಂದೆ ಕೈಮುಗಿದು ಹೀಗೆ ಕೇಳಿದರೆ ಸಾಕು, ಈ ವರ್ಷವೆಲ್ಲಾ ಮುಟ್ಟಿದ್ದು ಬಂಗಾರವಾಗುತ್ತದೆ.!
ಮನಸ್ಸು ಮನೆಯ ಪ್ರತಿಬಿಂಬವಾಗಿರುತ್ತದೆ. ಹೇಗೆಂದರೆ ಮನೆಯ ವಾತಾವರಣ ಸಕಾರಾತ್ಮಕವಾಗಿ ಇದ್ದರೆ ಮತ್ತು ಮನೆಯು ನೋಡುವುದಕ್ಕೆ ಅಚ್ಚುಕಟ್ಟಾಗಿ ಶುದ್ಧವಾಗಿ ವ್ಯವಸ್ಥಿತವಾಗಿ ಇದ್ದರೆ ನಮಗೆ ಎಷ್ಟೇ ಟೆನ್ಶನ್ ಇದ್ದರೂ ಒಂದು ಮಟ್ಟಿಗೆ ತಾಳ್ಮೆ ಇರುತ್ತದೆ ಆದರೆ ಒಮ್ಮೊಮ್ಮೆ ನಾವು ಯಾವುದೋ ಕಾರಣಕ್ಕೆ ನಮಗೆ ಬೇ’ಸ’ರ ಆಗಿರುವುದನ್ನು ನೋ’ವಾಗಿರುವುದನ್ನು ಬಹಳ ಮನಸ್ಸಿಗೆ ತೆಗೆದುಕೊಂಡು ಆ ಡಿಪ್ರೆಶನ್ ನಲ್ಲಿ ಮನೆ ಬಗ್ಗೆ ಕೂಡ ಕಾಳಜಿ ಮಾಡುವುದಿಲ್ಲ.
ಇದು ನಮ್ಮನ್ನು ನೋವಿನಿಂದ ಪಾರು ಮಾಡುವ ಬದಲು ನಮ್ಮ ಬೇಸರಗಳನ್ನು ಇನ್ನಷ್ಟು ಹೆಚ್ಚಾಗುವ ರೀತಿ ಮಾಡುತ್ತದೆ. ಅದರ ಬದಲು ನಿಮಗೆ ಯಾವುದಾದರೂ ಕ’ಷ್ಟದ ಸಂಗತಿ ಅಥವಾ ನೋ’ವಿನ ಸಂಗತಿ, ಬೇ’ಸ’ರದ ಸಂಗತಿ ಇದ್ದಾಗ ಅದನ್ನು ಮರೆಯಲು ನೀವು ಇನ್ನು ಮುಂದೆ ಮನೆ ಸ್ವಚ್ಛ ಮಾಡುವ ಕಾರ್ಯದಲ್ಲಿ ಪಾಲ್ಕೊಳ್ಳಿ ನಿಧಾನವಾಗಿ ಅದು ನಿಮ್ಮ ಮನಸ್ಸಿನ ಕೊಳೆಯನ್ನು ಕೂಡ ತೆಗೆದು ಹಾಕುತ್ತದೆ.
ಈ ಸುದ್ದಿ ಓದಿ:- ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!
ಇದು ನಿಮ್ಮ ಸಮಯ ಹಣ ಆರೋಗ್ಯ ಎಲ್ಲವನ್ನು ಕೂಡ ಉಳಿತಾಯ ಮಾಡುತ್ತದೆ. ನೀವು ಬೇಕಾದರೆ ಒಮ್ಮೆ ಇದನ್ನು ಪ್ರಯೋಗ ಮಾಡಿ ನೋಡಿ ನಂತರ ಆಗುವ ನಿಮ್ಮ ಬದಲಾವಣೆ ಮೇಲೆ ನಿಮಗೆ ನಂಬಿಕೆ ಹುಟ್ಟಿ ಸಂತೋಷವಾಗಿ ನೀವೇ ಹತ್ತು ಜನಕ್ಕೆ ಹೇಳುತ್ತೀರಾ ಆ ರೀತಿಯಾಗಿ ನೀವು ಬದಲಾಗುತ್ತೀರಾ ಹಾಗಾಗಿ ಎಂದಿಗೂ ಕೂಡ ಮನೆಗೆ ಆದಷ್ಟು ಶಾಂತವಾಗಿ ಇರಬೇಕು ಮತ್ತು ಮನೆಯಲ್ಲಿ ಲವಲವಿಕೆಯನ್ನು ಹೆಚ್ಚಿಸುವ ಮನಸ್ಸಿಗೆ ಮುದ ಕೊಡುವ ವಸ್ತುಗಳಿಗೆ ಜಾಗ ಇರಬೇಕು.
ಸಾಧ್ಯವಾದಷ್ಟು ಮನೆಯಲ್ಲಿ ವಸ್ತುಗಳು ಕಡಿಮೆ ಇರಬೇಕು, ಹಳೆಯ ವಸ್ತುಗಳನ್ನು ಮತ್ತು ಬೇಡದ ವಸ್ತುಗಳನ್ನು ಮನೆಯಲ್ಲಿ ರಾಶಿ ಹಾಕಿಕೊಳ್ಳಬಾರದು. ಮನೆಯಲ್ಲಿ ಯಾವ ವಸ್ತು ಎಲ್ಲಿ ಇದೆ ಎನ್ನುವುದು ನಿಮಗೆ ಸರಿಯಾಗಿ ಗೊತ್ತಿರುವ ರೀತಿ ನೀವು ಮನೆ ನಿಭಾಯಿಸಬೇಕು, ಈ ರೀತಿಯಾಗಿ ದಿನದಿಂದ ದಿನಕ್ಕೆ ಸಿದ್ಧತೆ ಆಗುತ್ತಾ ಬನ್ನಿ ಮನಸ್ಸಿನ ಆರೋಗ್ಯದ ಜೊತೆಗೆ ನಿಮ್ಮ ಬದುಕು ಕೂಡ ಉತ್ತಮ ದಿಕ್ಕಿನಲ್ಲಿ ಬದಲಾಗುತ್ತ ಹೋಗುತ್ತದೆ ಇದೆಲ್ಲವೂ ಜೀವನದ ಅಡಿಪಾಯ, ಅದಕ್ಕಾಗಿ ಮನೆಯನ್ನು ಮೊದಲ ಪಾಠಶಾಲೆ ಎನ್ನುವುದು.