ಈ ಬ್ರಹ್ಮಾಂಡ ಎಂಬುದು ಎಷ್ಟೊಂದು ಕುತೂಹಲ ಉಳಿಸಿಕೊಂಡಿದೆ ಎಂದರೆ ಮನುಷ್ಯ ತನ್ನ ಬುದ್ಧಿಶಕ್ತಿಯಿಂದ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅದರಲ್ಲಿ ಇನ್ನೂ ಸಹ ಮಾನವನ ದೃಷ್ಟಿಗೆ ಗೋಚರವಾಗದ, ಬುದ್ಧಿಶಕ್ತಿಗೆ ತಿಳಿಯದ ಎಷ್ಟೋ ಸತ್ಯಗಳು ಬ್ರಹ್ಮಾಂಡದಲ್ಲಿ ಅಡಗಿದೆ. ಆದರೆ ಇದನ್ನೆಲ್ಲಾ ಭೇದಿಸುವ ಸುಳಿವು ಪುರಾಣಗಳಲ್ಲಿ ಇದೆ ಅಂದರೆ ತಪ್ಪಾಗಲಾರದು.
ಇತ್ತೀಚೆಗೆ ಯಾವುದೇ ಸಂಶೋಧನೆ ಮಾಡಿದರು ಅದರ ಬುನಾದಿ ಆಗಿನ ಕಾಲದಲ್ಲಿ ಮಹರ್ಷಿಗಳು ಋಷಿಮುನಿಗಳು ಬರೆದಿಟ್ಟು ಹೋಗಿರುವ ಗ್ರಂಥಗಳ ಸುಳಿವೇ ಆಗಿದೆ. ಈ ರೀತಿ ಮಹಾಗ್ರಂಥಗಳಲ್ಲಿ ಕಾಲದ ಬಗ್ಗೆಯೂ ಉಲ್ಲೇಖಿಸಲಾಗಿದೆ. ಇದರ ಕುರಿತ ಕುತೂಹಲಕಾರಿ ವಿಷಯಗಳಲ್ಲಿ ಒಂದಾದ ಕಲ್ಕಿ ಅವತಾರ ಹಾಗೂ ಸತ್ಯ ಯುಗದ ಬಗ್ಗೆ ಈ ಅಂಕಣದಲ್ಲಿ ನಮ್ಮ ಜ್ಞಾನಕ್ಕೆ ತಿಳಿದಿರುವ ಸ್ವಲ್ಪ ಮಾಹಿತಿಯನ್ನು ತಿಳಿಸುತ್ತಿದ್ದೇವೆ
ಈ ಬ್ರಹ್ಮಾಂಡದಲ್ಲಿ ಪ್ರತಿಯೊಂದು ಕೂಡ ಚಲನೆಯಲ್ಲಿ ಇರುತ್ತದೆ. ಭೂಮಿ ಸೂರ್ಯನ ಸುತ್ತ ಸುತ್ತಿದರೆ, ಸೂರ್ಯ ಗೆಲಕ್ಸಿಯ ಸುತ್ತ ಆ ಗ್ಯಾಲಕ್ಸಿಯು ಬ್ರಹ್ಮಾಂಡದ ಇನ್ಯಾವುದೋ ಕಾಯದ ಸುತ್ತಾ ಸುತ್ತುತ್ತಿರುತ್ತದೆ. ನಮ್ಮ ದೇಹದಲ್ಲೂ ಕೂಡ ರಕ್ತ ಚಲನೆಯಲ್ಲೇ ಇರುತ್ತದೆ, ಉಸಿರಿರುವತನಕ್ಕೂ ಉಚ್ವಾಸ, ನಿಶ್ವಾಸ ನಿರಂತರವಾಗಿ ನಡೆಯುತ್ತಿರಬೇಕು.
ಅಣುವಿನ ಒಳಗಿನ ನ್ಯುಟ್ರಾನ್, ಪ್ರೋಟಾನ್, ಎಲೆಕ್ಟ್ರಾನ್ಗಳು ಕೂಡ ಸತತ ಚಲನೆಯಲ್ಲಿ ಇರುತ್ತವೆ. ಹೀಗೆ ಕಾಲಚಕ್ರ ಕೂಡ ಚಲನೆಯಲ್ಲಿರುತ್ತದೆ ಸಮಯ ಉರುಳುತ್ತಲೇ ಇರುತ್ತದೆ. ಹೇಗೆ ಸೆಕೆಂಡ್, ನಿಮಿಷ , ಗಂಟೆ, ದಿನ, ಪಕ್ಷ, ತಿಂಗಳು, ವರ್ಷ ಸಂವತ್ಸರ, ಮನ್ವಂತರ ಹೀಗೆ ಹಲವು ಮನ್ವಂತರಗಳು ಕಳೆದ ನಂತರ ಹೊಸ ಯುಗ.
ಆ ಪ್ರಕಾರವಾಗಿ ಈಗ ನಾವು ಸತ್ಯಯುಗ, ತೇತ್ರಾಯುಗ, ದ್ವಾಪರ ಯುಗ ಕಳೆದು ಕಲಿಯುಗದಲ್ಲಿ ಇದ್ದೇವೆ. ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಮರಣ ಹೊಂದಿದ ನಂತರ ಕಲಿಯುಗ ಶುರುವಾಯಿತು. ಕಲಿಯುಗದಲ್ಲಿ ಏನೆಲ್ಲ ಆಗುತ್ತದೆ ಮನುಷ್ಯ ಯಾವ ರೀತಿ ಇರುತ್ತಾನೆ? ಯಾವ ರೀತಿ ಜೀವಿಸುತ್ತಾನೆ? ಎನ್ನುವುದನ್ನು ಶ್ರೀ ಕೃಷ್ಣ ಪರಮಾತ್ಮ ಆಗಲೇ ಅರ್ಜುನನಿಗೆ ತಿಳಿಸಿದ್ದರು.
ಕಲಿಯುಗದಲ್ಲಿ ಧರ್ಮ ಒಂದು ಕಾಲಿದಲ್ಲಿ ನಿಂತಿರುತ್ತದೆ, ಎಲ್ಲಿಡೆ ಅ’ನ್ಯಾ’ಯ, ಅಕ್ರಮ, ಅನಾಚಾರಗಳು ತಾಂಡವವಾಡುತ್ತವೆ. ಇದು ಮಿತಿಮೀರಿದಾಗ ಮತ್ತೆ ಧರ್ಮ ಸ್ಥಾಪನೆಗಾಗಿ ನಾನು ಕಲ್ಕಿ ಅವತಾರದಲ್ಲಿ ಬರುತ್ತೇನೆ ಎಂದು ಕೂಡ ಹೇಳಿದ್ದರು. ಆ ಪ್ರಕಾರವಾಗಿ ನಾವು ಪ್ರಪಂಚದಲ್ಲಿ ಇದುವರೆಗೂ ನೋಡಿರುವ ಅನಾಚಾರಗಳಲ್ಲ ಕಂಡರೆ ಕಲಿಯುಗ ಅಂತ್ಯಕ್ಕೆ ಬರುತ್ತಿದೆಯಾ ಎನಿಸುತ್ತದೆ.
21 ಡಿಸೆಂಬರ್, 2023 ಕ್ಕೆ ಪ್ರಳಯವಾಗಿ ಪ್ರಪಂಚ ನಾ’ಶವಾಗುತ್ತವೆ ಎನ್ನುವುದನ್ನು ಪ್ರಪಂಚದ 100ರಲ್ಲಿ 90% ಜನ ಬಲವಾಗಿ ನಂಬಿದ್ದರು. ಆ ರೀತಿ ಆಗದೆ ಇದ್ದರೂ ಈಗ ಆಗುತ್ತಿರುವ ಜಲಪ್ರಳಯ, ಭೂಕಂಪ ಯುದ್ಧಗಳನ್ನು ನೋಡುತ್ತಿದ್ದರೆ ಕಲಿಯುಗ ಅಂತ್ಯವಾಗುತ್ತಿದೆಯಾ ಎನಿಸುತ್ತದೆ. ಹಾಗಾದರೆ ಈ ಕಲಿಯುಗದ ಮುಗಿದ ಮೇಲೆ ಏನಾಗುತ್ತದೆ ಎನ್ನುವ ಕುತೂಹಲ ಇದರೊಂದಿಗೆ ಹುಟ್ಟುತ್ತದೆ. ಕಲಿಯುಗ ಅಂತ್ಯವಾದ ಮೇಲೆ ಮತ್ತೆ ಸತ್ಯಯುಗ ಆರಂಭವಾಗುತ್ತದೆ.
ಸತ್ಯಯುಗದಲ್ಲಿ ಧರ್ಮ ನಾಲ್ಕು ಕಾಲಿನಲ್ಲಿ ನಿಂತಿರುತ್ತದೆ, ಈ ಯುಗದಲ್ಲಿ ಮನುಷ್ಯನ ಜೀವಿತಾವಧಿ ಹೆಚ್ಚಿಗೆ ಇರುತ್ತದೆ ಹಾಗೂ ಆತನ ಎತ್ತರವು ಹೆಚ್ಚಿಗೆ ಇರುತ್ತದೆ. ಯಾವುದೇ ರೋಗ ರುಜಿನಗಳು ಇರುವುದಿಲ್ಲ, ಬಂದರೂ ದೇಹದ ರೋಗ ನಿರೋಧಕ ಶಕ್ತಿಯು ಅವರನ್ನು ರಕ್ಷಿಸುತ್ತದೆ, ಯಾವುದೇ ಕಾಯಿಲೆ ಕಸಾಯಿ ಇಲ್ಲದೆ ಜ’ಗ’ಳವಿಲ್ಲದೆ ಜನ ಪ್ರೀತಿಯಿಂದ ಅನ್ಯೋನ್ಯವಾಗಿ ಸಂತೋಷವಾಗಿ ಬದುಕುತ್ತಾರೆ.
ಜನ ಎಲ್ಲರೊಡನೆ ಬೆರೆತು ಪ್ರೀತಿಯಿಂದ ಬದುಕುತ್ತಾರೆ. ಪ್ರಾಣಿ ಪಕ್ಷಿ ಮರ ಗಿಡ ಎಲ್ಲವನ್ನು ಪ್ರೀತಿಸುತ್ತಾರೆ, ರಕ್ಷಿಸುತ್ತಾರೆ. ಗುರು ಹಿರಿಯರನ್ನು ಗೌರವಿಸುತ್ತಾರೆ, ಯಾರು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದಿಲ್ಲ, ಕೆಟ್ಟ ಶಬ್ದಗಳನ್ನು ಬಳಸುವುದಿಲ್ಲ. ಅನ್ನ ಆಹಾರಕ್ಕೆ ಕ’ಷ್ಟ ಇರುವುದಿಲ್ಲ. ಮನುಷ್ಯ ಕೃಷಿ ಮಾಡದಿದ್ದರೂ ಪ್ರಕೃತಿಯೇ ಹಣ್ಣು ಹಂಪಲನ್ನು ಬೆಳೆದು ಮನುಷ್ಯನಿಗೆ ಸಮೃದ್ಧಿ ಆಗುವಷ್ಟು ಕೊಡುತ್ತದೆ. ಕೇಳುತ್ತಿದ್ದರೆ ಇದೇ ಮೈ ರೋಮಾಂಚನಗೊಳಿಸುತ್ತದೆ, ಇದಕ್ಕಿಂತಲೂ ನೂರು ಪಟ್ಟು ಚೆನ್ನಾಗಿರುತ್ತದೆ ಆ ಸತ್ಯಯುಗ.
ಹಾಗಾದರೆ ನಾವೆಲ್ಲ ಆ ಸತ್ಯಯುಗ ನೋಡಬಹುದು ಎಂದರೆ ಯಾರು ಕಲಿಯುಗದಲ್ಲಿ ತಮಗೆಷ್ಟೇ ಕ’ಷ್ಟ ಬಂದರೂ ಧರ್ಮ ರಕ್ಷಣೆಗೆ ನಿಲ್ಲುತ್ತಾರೆ. ಹೊರಗೆ ಪ್ರಪಂಚ ಹೇಗಿದ್ದರೂ ತಾವು ಭಗವಂತನನ್ನು ಧ್ಯಾನಿಸುತ್ತಾ ನ್ಯಾಯಮಾರ್ಗದಲ್ಲಿ ಜೀವಿಸುತ್ತಾರೆ, ಯಾರು ಕಲಿಯುಗದಲ್ಲಿ ಸತ್ಯಯುಗದ ಮನುಷ್ಯರಂತೆ ಒಳ್ಳೆಯತನದಿಂದ ಬದುಕುತ್ತಾರೆ, ಎಲ್ಲರ ಮೇಲೆ ದಯೆ ಹೊಂದಿದ್ದಾರೆ, ಅಂತಹ ಜನರು ಸತ್ಯಯುಗ ಕಾಣಬಹುದಾಗಿದೆ.
ಇದೇ ರೀತಿ ಕಲಿಯುಗ ಅಂತ್ಯವಾಗುವ ಸತ್ಯಯುಗ ಆರಂಭವಾಗುವ ಮುನ್ನ ಮಧ್ಯೆ ಸ್ವಲ್ಪ ವರ್ಷ ಸುವರ್ಣ ಸಮಯ ಬರುತ್ತದೆ ಎಂದು ಕೂಡ ಶ್ರೀ ಕೃಷ್ಣ ತಿಳಿಸಿದ್ದರು. ಆ ಸಮಯದಲ್ಲಿ ದೇವರ ಮೇಲೆ ಭಕ್ತಿ ಹೆಚ್ಚಾಗುತ್ತದೆ, ಎಲ್ಲರೂ ದೇವತಾ ಕಾರ್ಯಗಳಲ್ಲಿ ತೊಡಗುತ್ತಾರೆ, ದೇವಸ್ಥಾನಗಳಿಗೆ ಹೆಚ್ಚು ಹೋಗುತ್ತಾರೆ ಅವರು ಅಂದುಕೊಂಡದ್ದನ್ನು ಪಡೆಯಬಹುದು ಮೂರು ಯುಗದಲ್ಲೂ ಪಡೆಯಲಾಗದ ಸೌಕರ್ಯಗಳನ್ನು ಆ ಕಾಲದವರು ಪಡುತ್ತಾರೆ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ನಾವು ಈಗ ಅಂತಹದೇ ಸುವರ್ಣ ಸಮಯದಲ್ಲಿ ಬದುಕುತ್ತೇವೆ ಎಂದು ಎನ್ನುವ ಭಾವನೆಯು ಒಮ್ಮೊಮ್ಮೆ ಬರುತ್ತದೆ. ಯಾಕೆಂದರೆ ಈಗ ನಾವು ವಿದೇಶದಲ್ಲಿ ಇದ್ದವರನ್ನು ಕೂಡ ವಿಡಿಯೋ ಕಾಲ್ ಮಾಡಿ ಮುಖ ನೋಡಿ ಮಾತನಾಡಬಹುದು, ಹೊಟ್ಟೆ ಹಸಿದಿದ್ದಾಗ ಆರ್ಡರ್ ಮಾಡಿ ಅರ್ಧ ಗಂಟೆಯಲ್ಲಿ ಮನೆ ಬಾಗಿಲಿಗೆ ಊಟ ತರಿಸಿಕೊಳ್ಳಬಹುದು, ಅಂಗೈಯಲ್ಲಿ ಮೊಬೈಲ್ ಹಿಡಿದು ಪ್ರಪಂಚದ ಯಾವುದೇ ಮೂಲೆಯ ಮಾಹಿತಿ ತಿಳಿದುಕೊಳ್ಳಬಹುದು,
ಆಕಾಶದ ಎತ್ತರಕ್ಕೆ ವಿಮಾನದಲ್ಲಿ ಹಾರಬಹುದು ಭೂಮಿ ಆಳಕ್ಕೂ ಇಳಿದು ನಮ್ಮ ಕುತೂಹಲ ತಣಿಸಿಕೊಳ್ಳಬಹುದು ಇಂತಹ ಸಮಯದಲ್ಲಿ ಬದುಕುತ್ತಿರುವ ನಾವು ಕೂಡ ಧನ್ಯರು. ಆದರೆ ಎಲ್ಲ ಕಾಲದಲ್ಲೂ ಧರ್ಮಪ್ರಜ್ಞೆ ಇರಬೇಕು. ನಮಗೆ ಯಾವುದೇ ಸವಲತ್ತು ಸಿಕ್ಕಿದರೂ ಅದನ್ನು ನಾವು ನ್ಯಾಯವಾಗಿ ಪಡೆಯಬೇಕು ಮತ್ತು ಅದನ್ನು ಒಳ್ಳೆಯ ಕಾರ್ಯಕ್ಕಾಗಿ ಬಳಸಬೇಕು.